ಸುದ್ದಿ

ಮಂಗಳೂರಿನಲ್ಲಿಂದು ರಾಜ್ಯದಲ್ಲೇ ಬೃಹತ್‌ ವಕ್ಫ್‌ ಪ್ರತಿಭಟನೆ

ಪೊಲೀಸರಿಂದ ಸರ್ಪಗಾವಲು; ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಇಂದು ಮುಸ್ಲಿಮರ ಬೃಹತ್‌ ಪ್ರತಿಭಟನೆ ನಡೆಯಲಿದೆ. ಕರ್ನಾಟಕದಲ್ಲೇ ಅತಿದೊಡ್ಡ ಪ್ರತಿಭಟನೆಗೆ ಉಲೇಮಾ ಸಮನ್ವಯ ಸಮಿತಿ ಕರೆ ನೀಡಿದೆ. ನಗರದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಝಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಉಲೇಮಾಗಳು ಭಾಗವಹಿಸಲಿದ್ದಾರೆ. ದಕ್ಷಿಣ […]

ಮಂಗಳೂರಿನಲ್ಲಿಂದು ರಾಜ್ಯದಲ್ಲೇ ಬೃಹತ್‌ ವಕ್ಫ್‌ ಪ್ರತಿಭಟನೆ Read More »

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ

ಸಹಾಯ ಕೇಳಿದವಳ ಮೇಲೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿದ ರಿಕ್ಷಾ ಚಾಲಕ ಮತ್ತವನ ಸ್ನೇಹಿತರು ಉಳ್ಳಾಲ: ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳದ ಯುವತಿಯೊಬ್ಬಳ ಮೇಲೆ ರಿಕ್ಷಾ ಚಾಲಕ ಹಾಗೂ ಅವನ ಇಬ್ಬರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ಬುಧವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣೆ ಸಮೀಪ ಈ ಘಟನೆ ನಡೆದಿದ್ದು, ಮಧ್ಯಾರಾತ್ರಿ 1.30 ಸುಮಾರಿಗೆ 112ಕ್ಕೆ ಕರೆ ಮಾಡಿ

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ Read More »

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು  9ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.18 ಶುಕ್ರವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ Read More »

ಮರದ ಗೆಲ್ಲು ಬಿದ್ದು ಗಾಯ

ಪುತ್ತೂರು: ಚಲಿಸುತ್ತಿರುವಾಗ ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರನಿಗೆ ಗಾಯಗಳಾಗಿರುವ ಘಟನೆ ಸಾಲ್ಮರ ಜಂಕ್ಷನ್ ಬಳಿ ನಡೆದಿದೆ. ಮಾವಿನ ಮರದ ಗೆಲ್ಲು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ತನ್ನೀರ್ ತಾರಿಗುಡ್ಡೆ ಎಂಬವರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಮರದ ಗೆಲ್ಲು ಬಿದ್ದು ಗಾಯ Read More »

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ  ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ನಿಪುನ್ ಪರೀಕ್ಷೆಗೆ ಅಗತ್ಯವಾಗಿ ಏಪ್ರಿಲ್ 8 ರಂದು ಪಂಜದಲ್ಲಿರುವ ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿಗೆ ಭೇಟಿ ಮಾಡಲಾಯಿತು.  ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿ  ಮಾಲೀಕರಾದ ಮಧು ಎಂಬವರು ಫ್ಯಾಕ್ಟರಿಯಲ್ಲಿ ತಯಾರಾಗುವ ಸಿಮೆಂಟ್ ಹಂಚುಗಳು, ಕಬ್ಬಿಣದ ವಿವಿಧ ಬಗೆಯ ಉಪಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಒಟ್ಟು 11 ವಿದ್ಯಾರ್ಥಿಗಳು ಕೈಗಾರಿಕಾ ಭೇಟಿಯಲ್ಲಿ ಭಾಗಿಯಾಗಿದ್ದು ರೇಂಜರ್ ಲೀಡರ್ ಅಶ್ವಿನಿ ಎಸ್ ಎನ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಳೆದ ಎಂಟು ದಿನಗಳಿಂದ ವೈಭವದಿಂದ ನಡೆಯುತ್ತಿದ್ದು, ಇಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು, ಬಳಿಕ ಶ್ರೀ ದೇವರು ರಥಬೀದಿಗೆ ಬರುವರು. ಆನಂತರ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾಗುವರು. ಈ ಹೊತ್ತಿನಲ್ಲಿ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆದ ಬಳಿಕ ಸಾವಿರಾರು ಭಕ್ತಾದಿಗಳ ಕೈಗಳ ಜಯಘೋಷಗಳೊಂದಿಗೆ ಬ್ರಹ್ಮರಥವನ್ನು ಎಳೆಯುತ್ತಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ Read More »

ಏ.24ರಂದು ಕು.ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ರಿಂದ  ಭರತನಾಟ್ಯ ರಂಗ ಪ್ರವೇಶವು

ಪೆರ್ನಾಜೆ: ಸುಮ್ಮನೆ ಕುಳಿತವರು ಹೆಜ್ಜೆ ಗುರುತನ್ನು ಮೂಡಿಸಲಾರರು ಹೆಜ್ಜೆ ಗುರುತು  ಮೂಡಿಸಬೇಕೆಂದರೆ ಎದ್ದು ನಡೆಯಲೇಬೇಕು ಕಲಾತ್ಮಕ ಅರ್ಥಪೂರ್ಣವಾದ ಹೆಜ್ಜೆ ಗೆಜ್ಜೆಯ ಸದ್ದಿಗೆ ಅದ್ಭುತ ಭರತನಾಟ್ಯದ ರಂಗಪ್ರವೇಶವು ಏ 24ರಂದು ನಾಟ್ಯ ಸಿಂಚನ ಲಕ್ಷ್ಮಿ ಕೊಡಂದೂರ್ ರವರು ವಿಟ್ಲ ಗಾರ್ಡನ್ ಆಡಿಟೋರಿಯಂ ನಲ್ಲಿ  ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಲಿದ್ದಾರೆ.  ಕಿರು ಪರಿಚಯ:- ಕರ್ನಾಟಕ ರಾಜ್ಯ ಡಾ .ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರ್ ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ ಪರೀಕ್ಷೆಯ ಅಂತಿಮ

ಏ.24ರಂದು ಕು.ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ರಿಂದ  ಭರತನಾಟ್ಯ ರಂಗ ಪ್ರವೇಶವು Read More »

ಖಾಸಗಿ ಶಾಲೆಗಳ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ತಡೆ

ಶಾಲೆ ದಾಖಲಾತಿಗಾಗಿ ಹೊಸ ನಿಯಮ ರಚಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಈಗ ಶಾಲೆ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶಾತಿ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲೇ ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿ ಮೊದಲಿದ್ದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದೆ. ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕಿರುಕುಳ ಕೊಡುವುದು, ಮಕ್ಕಳ ದಾಖಲಾತಿಗೆ ಪೋಷಕರಿಗೆ ಪರೀಕ್ಷೆ ಇಡುವುದು ಹಾಗೂ ದುಬಾರಿ ಶುಲ್ಕ ವಸೂಲು ಮಾಡುವುದು ಇತ್ಯಾದಿಗಳಿಗೆ ಕಡಿವಾಣ ಹಾಕಲಾಗಿದೆ. ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ

ಖಾಸಗಿ ಶಾಲೆಗಳ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ತಡೆ Read More »

ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ

ಪುತ್ತೂರು: ಅಕ್ಷಯ    ಕಾಲೇಜಿನಲ್ಲಿ   ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು  ಒಳಗೊಂಡ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ರ ಸಮಾರೋಪ ಸಮಾರಂಭದ  ಉದ್ಘಾಟನೆ ಯನ್ನು  ಶ್ರೀ  ಅರುಣ್ ನಾಗೇ ಗೌಡ  ಡಿ.ವೈ.ಎಸ್. ಪಿ  ಪುತ್ತೂರು  ವಿಭಾಗ  ಇವರು  ನಿರ್ವಹಿಸಿ  ವಿದ್ಯಾರ್ಥಿ ಜೀವನದ ಕರ್ತವ್ಯ ವನ್ನು ಸಮರ್ಪಕವಾಗಿ  ನಿಭಾಯಿಸಿ ತಮ್ಮ  ಪೋಷಕರಿಗೆ, ತಮಗೆ  ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿಯನ್ನು ತರಬೇಕು. ಕಲಿಕೆ ಮತ್ತು ಕ್ರಮ ಬದ್ಧವಾದ  ಜೀವನ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ  ಮಾತ್ರವಲ್ಲ  ಸಮಾಜದಲ್ಲಿ

ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ Read More »

ತಮಿಳು ನಟ-ರಾಜಕಾರಣಿ ವಿಜಯ್‌ ವಿರುದ್ಧ ಜಾರಿಯಾಯಿತು ಫತ್ವಾ

ಇಫ್ತಾರ್‌ ಕೂಟಕ್ಕೆ ಕುಡುಕರನ್ನು ಆಹ್ವಾನಿಸಿದ್ದಕ್ಕೆ ಫತ್ವಾ ಚೆನ್ನೈ: ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿರುವ ತಮಿಳಿನ ಖ್ಯಾತ ಹೀರೊ ವಿಜಯ್‌ ವಿರುದ್ಧ ಉತ್ತರ ಪ್ರದೇಶದ ಬರೇಲಿಯ ಸುನ್ನಿ ಮುಸ್ಲಿಮ್‌ ಮಂಡಳಿ ಫತ್ವಾ ಜಾರಿಗೊಳಿಸಿದೆ. ಅಖಿಲ ಭಾರತ ಮುಸ್ಲಿಮ್‌ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚಶ್ಮೆ ದಾರೂಲ್‌ ಇಫ್ತಾದ ಮುಖ್ಯ ಮುಫ್ತಿ ಆಗಿರುವ ಮೌಲಾನ ಶಹಾಬುದ್ದೀನ್‌ ರಝ್ವಿ ಬರೇಲಿ ಅವರು ನಟ ವಿಜಯ್‌ ವಿರುದ್ಧ ಫತ್ವಾ ಜಾರಿಗೊಳಿಸಿದ್ದಾರೆ. ರಮ್ಜಾನ್‌ ಉಪವಾಸ ವ್ರತದ ಸಂದರ್ಭದಲ್ಲಿ ಆಯೋಜಿಸಿದ ಇಫ್ತಾರ್‌ ಕೂಟಕ್ಕೆ ಮದ್ಯ ಸೇವಿಸುವವರನ್ನು ಮತ್ತು

ತಮಿಳು ನಟ-ರಾಜಕಾರಣಿ ವಿಜಯ್‌ ವಿರುದ್ಧ ಜಾರಿಯಾಯಿತು ಫತ್ವಾ Read More »

error: Content is protected !!
Scroll to Top