ಸುದ್ದಿ

ಮುಡಾ ಹಗರಣ : ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಸಿದ್ದರಾಮಯ್ಯ ಮೇಲ್ಮನವಿ

ನ.23ರಂದು ವಿಚಾರಣೆಗೆ ದಿನ ನಿಗದಿ ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳು ತುರ್ತು ವಿಚಾರಣೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದಾಗ ತುರ್ತು ಅವಶ್ಯಕತೆ ಸೃಷ್ಟಿಯಾಗಿದೆ ನವೆಂಬರ್ 23ಕ್ಕೆ ವಿಚಾರಣೆ ನಡೆಸಬೇಕೆಂದು ಮುಖ್ಯಮಂತ್ರಿ ಪರ ವಕೀಲ ಅಭಿಷೇಕ್ ಸಿಂಘ್ವಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮನವಿ ಆಲಿಸಿ ವಿಚಾರಣೆಯನ್ನು ನವೆಂಬರ್ 23ಕ್ಕೆ ಹೈಕೋರ್ಟ್​ ವಿಭಾಗೀಯಪೀಠ ನಿಗದಿಪಡಿಸಿದೆ. ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು […]

ಮುಡಾ ಹಗರಣ : ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಸಿದ್ದರಾಮಯ್ಯ ಮೇಲ್ಮನವಿ Read More »

ಸಿದ್ದಿಕಿ ಸಾವನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆ ಎದುರೇ ಕಾದು ಕುಳಿತಿದ್ದ ಹಂತಕ

ಕೊಲೆ ಮಾಡಿ ಬಟ್ಟೆ ಬದಲಾಯಿಸಿ ಮರಳಿ ಅಲ್ಲಿಗೆ ಬಂದಿದ್ದ ಶೂಟರ್‌ ಮುಂಬಯಿ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್‌ ಗೌತಮ್‌ ಎಂಬಾತನನ್ನು ಮುಂಬಯಿ ಪೊಲೀಸರು ಇತ್ತೀಚೆಗೆ ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ. ಈತನ ವಿಚಾರಣೆಯಿಂದ ಕೊಲೆಯ ಸಂಚಿನ ರಹಸ್ಯಗಳು ಬಯಲಾಗುತ್ತಿವೆ. ಸಿದ್ದಿಕಿಗೆ ಗುಂಡಿಕ್ಕಿದ ಬಳಿಕ ಈತ ಅವರು ಸತ್ತಿರುವುದನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಆಸ್ಪತ್ರೆ ಎದುರು ಅರ್ಧ ತಾಸಿಗೂ ಹೆಚ್ಚು ಹೊತ್ತು ಕಾದು ಕುಳಿತಿದ್ದನಂತೆ.ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಮಾಡಿದ ಈ ಹತ್ಯೆ

ಸಿದ್ದಿಕಿ ಸಾವನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆ ಎದುರೇ ಕಾದು ಕುಳಿತಿದ್ದ ಹಂತಕ Read More »

ಟಿಪ್ಪುವಿನ ಖಡ್ಗ 3.4 ಕೋ.ರೂ.ಗೆ ಏಲಂ

ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದ ಖಡ್ಗ ಹೊಸದಿಲ್ಲಿ: ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಈ ಖಡ್ಗ ಟಿಪ್ಪು ಸುಲ್ತಾನ್‌ನ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿತ್ತು.ಬೋನ್‌ಹ್ಯಾಮ್‌ ಹರಾಜು ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಟಿಪ್ಪು 1799ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಆತನ ಖಡ್ಗವನ್ನು ಆಗಿನ ಬ್ರಿಟಿಷ್‌ ಸೇನೆಯ ಕ್ಯಾಪ್ಟನ್‌ ಜೇಮ್ಸ್‌ ಆಂಡ್ರ್ಯೂ ಡಿಕ್‌ ಎಂಬಾತನಿಗೆ ಉಡುಗೊರೆಯಾಗಿ ನೀಡಿದ್ದ.ಈ ಖಡ್ಗದ ಮೂಲವನ್ನು ಸೆರಿಂಗಪಟ್ಟಂ ಕದನದಲ್ಲಿ ಗುರುತಿಸಬಹುದು. ‘ಸ್ಟೀಲ್ ತಲ್ವಾರ್’ ಮೈಸೂರಿನ ವಿಶಿಷ್ಟ ಲಕ್ಷಣವಾದ

ಟಿಪ್ಪುವಿನ ಖಡ್ಗ 3.4 ಕೋ.ರೂ.ಗೆ ಏಲಂ Read More »

ನಾಳೆ ತೆರೆಯಲಿದೆ ಶಬರಿಮಲೆ ಸನ್ನಿಧಾನದ ಬಾಗಿಲು | ಶನಿವಾರದಿಂದ ಮಂಡಲ ಯಾತ್ರೆ ಶುರು

ಶಬರಿಮಲೆ : ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ನ.15ರಂದು ತೆರೆಯಲಾಗುವುದು. ನ.16ರಿಂದ ಭಕ್ತರಿಗೆ ಅಯ್ಯಪ್ಪನ ದರ್ಶನ ಲಭ್ಯವಾಗಲಿದೆ. ಈ ಋತುವಿನ ಯಾತ್ರೆಗಾಗಿ ಅನೇಕ ಬದಲಾವಣೆಗಳೊಂದಿಗೆ ಕೇರಳ ಸರಕಾರ ಸರ್ವ ಸಿದ್ಧತೆಗಳನ್ನು ನಡೆಸಿದೆ.ನಾಳೆ ಸಂಜೆ 4 ಗಂಟೆಗೆ ಮುಖ್ಯಮೇಲ್‌ಶಾಂತಿ ಪಿ.ಎನ್‌.ಮಹೇಶ್‌ ನಂಬೂದಿರಿಯವರು ಶಬರಿಮಲೆ ಗರ್ಭಗೃಹದ ಬಾಗಿಲು ತೆರೆದು ಪೂಜೆ ನೆರವೇರಿಸುವುದರೊಂದಿಗೆ ಈ ವರ್ಷದ ಯಾತ್ರೆ ವಿದ್ಯುಕ್ತವಾಗಿ ಆರಂಭವಾಗಲಿದ್ದು ನಂತರ 62 ದಿನ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಲಿದ್ದಾರೆ.ಶನಿವಾರ ನಸುಕಿನ

ನಾಳೆ ತೆರೆಯಲಿದೆ ಶಬರಿಮಲೆ ಸನ್ನಿಧಾನದ ಬಾಗಿಲು | ಶನಿವಾರದಿಂದ ಮಂಡಲ ಯಾತ್ರೆ ಶುರು Read More »

ಪಶ್ಚಿಮ ಘಟ್ಟ ನದಿಗಳ ನೀರಿನ ಮೇಲೆ ಸೆಸ್‌! | ಅರಣ್ಯ ಸಂರಕ್ಷಣೆಗೆ ಹಣ ಸಂಗ್ರಹಿಸಲು ನೀರಿನ ಮೇಲೆ ಮೇಲ್ತೆರಿಗೆ ವಿಧಿಸಲು ಮುಂದಾದ ಸರಕಾರ

ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳ ನೀರು ಪೂರೈಕೆಯಾಗುವ ನಗರ, ಪಟ್ಟಣಗಳ ಜನರು ಬಳಸುವ ನೀರಿನ ಮೇಲೆ ಮೇಲ್ತೆರಿಗೆ (ಸೆಸ್‌) ಹಾಕಲು ಸರಕಾರ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರೇ ಆದೇಶ ಹೊರಡಿಸಿದ್ದಾರೆ.ಪಶ್ಚಿಮ ಘಟ್ಟ ಸಂರಕ್ಷಣೆಗೆ ʻಕಾಪುನಿಧಿʼ ಸಂಗ್ರಹ ಗುರಿ ಹೊಂದಿದ್ದು, ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರಕಟಣೆ ನೀಡಿದ್ದಾರೆ. ಪಶ್ಚಿಮ ಘಟ್ಟ ತುಂಗಾ,

ಪಶ್ಚಿಮ ಘಟ್ಟ ನದಿಗಳ ನೀರಿನ ಮೇಲೆ ಸೆಸ್‌! | ಅರಣ್ಯ ಸಂರಕ್ಷಣೆಗೆ ಹಣ ಸಂಗ್ರಹಿಸಲು ನೀರಿನ ಮೇಲೆ ಮೇಲ್ತೆರಿಗೆ ವಿಧಿಸಲು ಮುಂದಾದ ಸರಕಾರ Read More »

ಸಚಿವ ಜಮೀರ್‌ಗೆ ಜೀವ ಬೆದರಿಕೆ : ಪುನೀತ್‌ ಕೆರೆಹಳ್ಳಿ ಬಂಧನ

ಕರಿಯ ಎಂದರೆ ಹಾಸನ, ಮಂಡ್ಯ ಗಡಿ ದಾಟಲು ಬಿಡುವುದಿಲ್ಲ ಎಂದು ಧಮಕಿ ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಪುನೀತ್‌ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾದೀಶರ ಮುಂದೆ ಹಾಜರು ಪಡಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ

ಸಚಿವ ಜಮೀರ್‌ಗೆ ಜೀವ ಬೆದರಿಕೆ : ಪುನೀತ್‌ ಕೆರೆಹಳ್ಳಿ ಬಂಧನ Read More »

ಕಡಬ : ಮನೆ ಕೆಡವಿದ ಅಧಿಕಾರಿಗಳು; ದಯಾಮರಣ ಯಾಚಿಸಿದ ವೃದ್ಧ ದಂಪತಿ

ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ದಿಢೀರ್‌ ತೆರವುಗೊಳಿಸಿದ ಕಾರಣ ವೃದ್ಧರು ಅತಂತ್ರ ಮಂಗಳೂರು : ಅಧಿಕಾರಿಗಳು ದಿಢೀರ್‌ ಎಂದು ಮನೆಯನ್ನು ಧ್ವಂಸ ಮಾಡಿದ ಕಾರಣ ಅತಂತ್ರವಾಗೊರುವ ವೃದ್ಧ ದಂಪತಿ ಮನೆ ನಿರ್ಮಿಸಕೊಡಿ ಅಥವಾ ಸಾಯಲು ಅನುಮತಿ ಕೊಡಿ ಎಂದು ಯಾಚಿಸಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕಡಬದಲ್ಲಿ ಸಂಭವಿಸಿದೆ.ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಮನೆಯನ್ನು ಇಂದು ಏಕಾಏಕಿ ಧ್ವಂಸಗೊಳಿಸಲಾಗಿದೆ. ಇದರಿಂದ ಕಂಗಾಲು ಆಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ದಂಪತಿ

ಕಡಬ : ಮನೆ ಕೆಡವಿದ ಅಧಿಕಾರಿಗಳು; ದಯಾಮರಣ ಯಾಚಿಸಿದ ವೃದ್ಧ ದಂಪತಿ Read More »

ನಕ್ಸಲರಿಗೆ ಅಸ್ತ್ರವಾಗಿ ಸಿಕ್ಕಿದ ಕಸ್ತೂರಿ ರಂಗನ್‌ ವರದಿ ಜಾರಿ ವಿಷಯ

ಮುಂಡಗಾರು ಲತಾ ನೇAತೃತ್ವದ ನಕ್ಸಲ್‌ ತಂಡ ಸಕ್ರಿಯ ಕಾರ್ಕಳ : ಪಶ್ಚಿಮ ಘಟ್ಟದ ಕಾಡಿನಂಚಿನಲ್ಲಿ ಕೊಂಚ ಸಮಯ ತಣ್ಣಗಾಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಜೀವ ಪಡೆದುಕೊಂಡಿರುವುದು ಕಳೆದ ಒಂದು ವಾರದ ಬೆಳವಣಿಗೆಯಿಂದ ದೃಢಪಟ್ಟಿದೆ. ಹೋರಾಡಲು ಗಟ್ಟಿಯಾದ ವಿಷಯ ಇಲ್ಲದೆ ಮತ್ತು ನಿರಂತರವಾದ ಪ್ರತಿರೋಧದಿಂದಾಗಿ ಕಳೆದ ಕೆಲ ವರ್ಷಗಳಿಂದ ಪಶ್ಚಿಮ ಘಟ್ಟದ ಅಂಚಿನ ಪ್ರದೇಶಗಳಲ್ಲಿ ನಕ್ಸಲರು ಹೆಚ್ಚು ಚಟುವಟಿಕೆ ನಡೆಸುತ್ತಿರಲಿಲ್ಲ. ಆದರೆ ಯಾವಾಗ ಸರಕಾರ ಕುದುರೆಮುಖ ರಾಷ್ಟ್ರೀಯ ಅರಣ್ಯದ ಒತುವರಿ ತೆರವಿಗೆ ಆದೇಶಿಸಿತೋ ಆಗಲೇ ಎದ್ದು ಕುಳಿತ ನಕ್ಸಲರು

ನಕ್ಸಲರಿಗೆ ಅಸ್ತ್ರವಾಗಿ ಸಿಕ್ಕಿದ ಕಸ್ತೂರಿ ರಂಗನ್‌ ವರದಿ ಜಾರಿ ವಿಷಯ Read More »

ಮುಂದಿನ ತಿಂಗಳು ಸಂಪುಟಕ್ಕೆ ಸರ್ಜರಿ?

ಸರಕಾರದ ಇಮೇಜ್‌ ಸುಧಾರಣೆಗೆ 7-8 ಸಚಿವರನ್ನು ಕೈಬಿಡಲು ಚಿಂತನೆ ಬೆಂಗಳೂರು : ಉಪಚುನಾವಣೆ ಮುಗಿದ ಬಳಿಕ ಸಂಪುಟಕ್ಕೆ ಮೇಜರ್‌ ಸರ್ಜರಿ ಮಾಡಿ ಸರಕಾರದ ಇಮೇಜ್‌ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡಲಾರಂಭಿಸಿದೆ. ಬರೀ ಒಂದೂವರೆ ವರ್ಷದ ಆಡಳಿತದಲ್ಲಿ ಕಾಂಗ್ರೆಸ್‌ ಸರಕಾರ ಇನ್ನಿಲ್ಲದ ಹಿನ್ನಡೆಯನ್ನು ಅನುಭವಿಸಿದೆ. ಭ್ರಷ್ಟಾಚಾರದ ಕಳಂಕ ಸರಕಾರಕ್ಕೆ ಮೆತ್ತಿಕೊಂಡಿದ್ದು, ಹಲವು ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ನಿಷ್ಕ್ರಿಯ ಮತ್ತು ಆರೋಪ ಹೊತ್ತಿರುವ ಸಚಿವರನ್ನು ಬದಲಾಯಿಸಿ ಆಡಳಿತವನ್ನು ಚುರುಕುಗೊಳಿಸಲು

ಮುಂದಿನ ತಿಂಗಳು ಸಂಪುಟಕ್ಕೆ ಸರ್ಜರಿ? Read More »

ಸಂಪುಟದಿಂದ ಜಮೀರ್‌ ಖಾನ್‌ರನ್ನು ಕಿತ್ತು ಹಾಕಲು ಒಕ್ಕಲಿಗರ ಸಂಘ ಒತ್ತಾಯ

ಕುಮಾರಸ್ವಾಮಿಯವರನ್ನು ಕರಿಯ ಎಂದು ಹೀಯಾಳಿಸಿದ್ದ ಜಮೀರ್‌ ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿಯವರ ಮೈಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘ ಹಾಗೂ ಸಭಾದ ಪದಾಧಿಕಾರಿಗಳು, ಕುಮಾರಸ್ವಾಮಿ ಅವರ ಮೈಬಣ್ಣದ ಬಗ್ಗೆ ಜಮೀರ್‌ ಆಡಿರುವ ಮಾತು ಅದು ಇಡೀ ಒಕ್ಕಲಿಗ ಜನಾಂಗಕ್ಕೆ ಮಾಡಿರುವ ಅವಹೇಳನ. ಇಂತಹ ಮಾತುಗಳು ಸಚಿವರಾದವರಿಗೆ

ಸಂಪುಟದಿಂದ ಜಮೀರ್‌ ಖಾನ್‌ರನ್ನು ಕಿತ್ತು ಹಾಕಲು ಒಕ್ಕಲಿಗರ ಸಂಘ ಒತ್ತಾಯ Read More »

error: Content is protected !!
Scroll to Top