ಸುದ್ದಿ

ಕೊನೆಗೂ ಸಿಕ್ಕಿತು ಹನಿಟ್ರ್ಯಾಪ್‌ ಸೂತ್ರಧಾರನ ಸುಳಿವು : ಕಾಂಗ್ರೆಸ್‌ನಲ್ಲಿ ನಡುಕ

ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಹನಿಟ್ರ್ಯಾಪ್‌ ಕೃತ್ಯ ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನಿನ್ನೆ ಹನಿಟ್ರ್ಯಾಪ್‌ ಕುರಿತು ಜೋರು ಚರ್ಚೆ ನಡೆದ ಬೆನ್ನಿಗೆ ಹನಿಟ್ರ್ಯಾಪ್‌ನ ರೂವಾರಿ ಯಾರು ಮತ್ತು ಯಾರಿಗೆಲ್ಲ ಹನಿಟ್ರ್ಯಾಪ್‌ ಬಲೆ ಹೆಣೆಯಲಾಗಿತ್ತು ಎಂಬ ಮಾಹಿತಿಗಳು ಹೊರಬರತೊಡಗಿವೆ. ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ತನ್ನನ್ನೂ ಸೇರಿಸಿ ರಾಜ್ಯ ಮತ್ತು ಕೇಂದ್ರದ 48 ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಶಾಸಕ ಸುನಿಲ್‌ ಕುಮಾರ್‌ ಕೂಡ ಹನಿಟ್ರ್ಯಾಪ್‌ ಕುರಿತಂತೆ ಸರಕಾರದ ಮೇಲೆ […]

ಕೊನೆಗೂ ಸಿಕ್ಕಿತು ಹನಿಟ್ರ್ಯಾಪ್‌ ಸೂತ್ರಧಾರನ ಸುಳಿವು : ಕಾಂಗ್ರೆಸ್‌ನಲ್ಲಿ ನಡುಕ Read More »

ಹಿರಿಯ ನಿರ್ದೆಶಕ ಎ.ಟಿ.ರಘು ನಿಧನ

ಅಂಬರೀಷ್‌, ರಜನಿಕಾಂತ್‌ ಚಿತ್ರಗಳನ್ನು ನಿರ್ದೆಶಿಸಿದ್ದ ನಿರ್ದೇಶಕ ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಎ.ಟಿ.ರಘು (76) ಗುರುವಾರ ರಾತ್ರಿ ನೀಧನರಾಗಿದ್ದಾರೆ. ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶನ ಮಾಡಿದ್ದರು. ಹಿಂದಿ ಮತ್ತು ಮಳಯಾಲಂ ಚಿತ್ರಗಳಲ್ಲೂ ಕೆಲಸ ಮಾಡಿದ್ದರು. ಅವರ ನಿಧನ ವಾರ್ತೆ ತಿಳಿದು ಚಿತ್ರರಂಗದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.ಅಂಬರೀಷ್‌ ನಾಯಕನಾಗಿ ನಟಿಸಿದ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ ಎ.ಟಿ.ರಘು ಅವರಿಗಿದೆ. ತೀವ್ರ ಅನಾರೋಗ್ಯದಿಂದ ರಘು ಬಳಲುತ್ತಾ ಇದ್ದರು. ನಿರಂತರವಾಗಿ

ಹಿರಿಯ ನಿರ್ದೆಶಕ ಎ.ಟಿ.ರಘು ನಿಧನ Read More »

ಮಾ.22-23 : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮೋತ್ಸವ

ಪುತ್ತೂರು : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮ ಮಾ.22 ಶನಿವಾರದಿಂದ ಮಾ. 23 ಭಾನುವಾರದವರೆಗೆ ನಡೆಯಲಿದೆ.ಮಾ.22 ರಂದು ಶನಿವಾರ ಬೆಳಗ್ಗೆ 4ಗಂಟೆಗೆ ಶ್ರೀ ರಣಮಂಗಲ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಿಂದ ದೈವಗಲ ಭಂಡಾರ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಆಗಮಿಸಲಿದೆ. ರಾತ್ರಿ 7ಗಂಟೆಗೆ ಶ್ರೀ ಕ್ಷೇತ್ರದಲ್ಲಿ ದೈವಗಳ ತಂಬಿಲ, ರಾತ್ರಿ 8ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ರಾತ್ರಿ 9ಗಂಟೆಗೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರ ಬಾಲ್ಯೊಟ್ಟು ಮನೆಗೆ ಬರಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಾ,23

ಮಾ.22-23 : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮೋತ್ಸವ Read More »

ಒಂದು ತಿಂಗಳು ಪೂರೈಸಿದ ಸಿನಿಮಾ – ಭಾವ ತೀರ ಯಾನ | 21ರಂದು ಸಂಜೆ 4 ಗಂಟೆಯ ಪ್ರದರ್ಶನದಲ್ಲಿ ಸಂಭ್ರಮಾಚರಣೆ| ಚಿತ್ರ ತಂಡದ ನಟ-ನಟಿಯರ ಉಪಸ್ಥಿತಿ-ಸಂವಾದ

ಪುತ್ತೂರು : ಫೆಬ್ರುವರಿ 21ರಂದು ರಾಜ್ಯಾದ್ಯಂತ ತೆರೆ ಕಂಡು ಪ್ರೇಕ್ಷಕರ ಮನಗೆದ್ದ ಇದೀಗ 30 ದಿನಗಳ ಯಶಸ್ವೀ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ಭಾವ ತೀರ ಯಾನ ಚಿತ್ರ ಮಾರ್ಚ್ 21ರಂದು ತಿಂಗಳ ಸಂಭ್ರಮಾಚರಣೆ ನಡೆಸಲಿದೆ. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ಪುತ್ತೂರಿನ GL ONE ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ‘ಭಾವ ತೀರ ಯಾನ’ ತೆರೆ ಕಂಡಿತ್ತು. ಮಾರ್ಚ್ 21ರಂದು  ಸಂಜೆ 4ಕ್ಕೆ ನಡೆಯುವ ಪ್ರದರ್ಶನದಲ್ಲಿ ಚಿತ್ರತಂಡದ ತಾರೆಯರು ಮತ್ತು ನಿರ್ಮಾಪಕ, ನಿರ್ದೇಶಕರು ಭಾಗವಹಿಸಲಿದ್ದಾರೆ. ಇದೇ

ಒಂದು ತಿಂಗಳು ಪೂರೈಸಿದ ಸಿನಿಮಾ – ಭಾವ ತೀರ ಯಾನ | 21ರಂದು ಸಂಜೆ 4 ಗಂಟೆಯ ಪ್ರದರ್ಶನದಲ್ಲಿ ಸಂಭ್ರಮಾಚರಣೆ| ಚಿತ್ರ ತಂಡದ ನಟ-ನಟಿಯರ ಉಪಸ್ಥಿತಿ-ಸಂವಾದ Read More »

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ ನಡೆದಿದೆ . ಮೃತಪಟ್ಟ ಮಹಿಳೆಯನ್ನು ರೇವತಿ (51) ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು Read More »

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ತಗುಲಿದ ಬೆಂಕಿ

ಕಾಸರಗೋಡು: ಮನೆಯೊಂದಕ್ಕೆ ಬೆಂಕಿ ತಗುಲಿದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳದ ಶಾಫಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ. ಬೆಂಕಿ ತಗುಲಿದ ಹಿನ್ನಲೆ ಮನೆ ಅಪಾರ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಡುಗೆ ಕೋಣೆ ಸಂಪೂರ್ಣ ಅಗ್ನಿಗಾಹುತಿಯಾಗಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ತಗುಲಿದ ಬೆಂಕಿ Read More »

ಪ್ರಭು ಚರುಂಬುರಿ ಮಾಲಕ ನೇಣುಬಿಗಿದು ಆತ್ಮಹತ್ಯೆ

ಪುತ್ತೂರು: ಕೆಮ್ಮಾಯಿ ದಾರಂದಕುಕ್ಕು ನಿವಾಸಿ ಸುಧಾಕರ ಪ್ರಭು (42.ವ.) ಇಂದು ಬೆಳಿಗ್ಗೆ 11 ಗಂಟೆ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಯಲ್ಲಿ ಮುಂದಿನ ವಾರ ನೇಮೋತ್ಸವ ನಡೆಯಲಿದ್ದು, ಅದರ ಪೂರ್ವ ತಯಾರಿಯಲ್ಲಿ ದ್ದರು. ಆದರೆ ಇವತ್ತು  ಮನೆಯಲ್ಲಿ ಯಾರು ಇಲ್ಲಾದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುತ್ತೂರು ಆಸುಪಾಸಿನಲ್ಲಿ ಪ್ರಭು ಚರುಂಬುರಿ ಮೂಲಕ ಪುತ್ತೂರಿನ ಜನರ ಮನ ಗೆದ್ದಿದ್ದಾರೆ. ಇದೀಗ ಇವರ ಈ ದುಡುಕಿನ ನಿರ್ಧಾರ ಕುಟುಂಬದಲ್ಲಿ ಹಾಗೂ  ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಆತ್ಮಹತ್ಯೆಗೆ ಕಾರಣ

ಪ್ರಭು ಚರುಂಬುರಿ ಮಾಲಕ ನೇಣುಬಿಗಿದು ಆತ್ಮಹತ್ಯೆ Read More »

ವಿದ್ಯುತ್‍ ಕಂಬಕ್ಕೆ ಬೈಕ್‍ ಡಿಕ್ಕಿಯಾಗಿ ಯುವಕರಿಬ್ಬರ ದುರ್ಮರಣ

ಮಂಗಳೂರು:  ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರು ಸಾವನ್ನಪ್ಪಿರುವ ಘಟನೆ ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ನಡೆದಿದೆ. ಧಾರವಾಡದ ಕಲ್ಲೂರು ನಿವಾಸಿ ಆತ್ಮಾನಂದ ಅಂಬಿಗರ (27) ಹಾಗೂ ನವೀನ್ ಹೂಗಾರ (26) ಮೃತ ದುರ್ದೈವಿಗಳು. ಅತೀ ವೇಗವಾಗಿ ಬಂದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಆತ್ಮಾನಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನವೀನ್ ಹೂಗಾರ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‍ ಕಂಬಕ್ಕೆ ಬೈಕ್‍ ಡಿಕ್ಕಿಯಾಗಿ ಯುವಕರಿಬ್ಬರ ದುರ್ಮರಣ Read More »

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ

ಯೂನಿಟ್‌ಗೆ 36 ಪೈಸೆಯಂತೆ ಹೆಚ್ಚಿಸಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಬೆಂಗಳೂರು : ಈಗಾಗಲೇ ಎಲ್ಲ ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಸರಕಾರ ಮತ್ತೆ ವಿದ್ಯುತ್‌ ದರ ಏರಿಕೆಯ ಶಾಕ್‌ ಕೊಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹೆಚ್ಚಳದ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲು ಕೆಇಆರ್​ಸಿ ಮುಂದಾರುವುದರ ಪರಿಣಾಮವಾಗಿ

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ Read More »

ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಭೇಟಿ ನೀಡಿದ  ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು

ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಮರ್ದಾಳ ದಲ್ಲಿರುವ ಜೀವನ್ ಜ್ಯೋತಿ ವಿಶೇಷ  ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲಿಯ ವಿದ್ಯಾರ್ಥಿಗಳಿಗೆ ಮನರಂಜನ ಸ್ಪರ್ಧೆಗಳನ್ನು ನಡೆಸಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹುಮ್ಮಿಸಿ, ಲವಲವಿಕೆಯಿಂದ ಸ್ಪರ್ಧೆಗಳಲ್ಲಿ ತೊಡಗಿಕೊಂಡರು. ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಆರತಿ ಕೆ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರಾದ ಶೈಲಾ  ಅವರು ಸಂಸ್ಥೆಯ ಉದ್ದೇಶವನ್ನು  ಹಾಗೂ ವಿದ್ಯಾರ್ಥಿಗಳು ನ್ಯೂನತೆಯನ್ನು ಹೊಂದಿದ್ದರು

ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಭೇಟಿ ನೀಡಿದ  ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು Read More »

error: Content is protected !!
Scroll to Top