ಸುದ್ದಿ

ಬಿಲ್‌ ಪಾಸ್‌ ಮಾಡಿ ಇಲ್ಲವೇ ದಯಾಮರಣ ಕರುಣಿಸಿ : ಗುತ್ತಿಗೆದಾರನಿಂದ ಸಿಎಂಗೆ ಪತ್ರ

ಒಂದು ವರ್ಷದಿಂದ ಬಿಲ್‌ಗಾಗಿ ಅಲೆದಾಡುತ್ತಿರುವ ಗುತ್ತಿಗೆದಾರ ಬೆಂಗಳೂರು: ಬಿಲ್‌ ಪಾಸ್‌ ಆಗದೆ ಕಂಗಾಲಾಗಿರುವ ಸರಕಾರಿ ಗುತ್ತಿಗೆದಾರರೊಬ್ಬರು ಒಂದೋ ಬಿಲ್‌ ಪಾಸ್‌ ಮಾಡಿಸಿ ಇಲ್ಲವೇ ದಯಾಮರಣವನ್ನಾದರೂ ಕರುಣಿಸಿ ಎಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮನವರಿಗೆ ಪತ್ರ ಬರೆದಿದ್ದಾರೆ. ಬಿಟ್ಟಿ ಭಾಗ್ಯಗಳಿಂದ ರಾಜ್ಯ ದಿವಾಳಿಯಾಗಿದ್ದು, ಕಾಮಗಾರಿ ಮಾಡಲು ಸರಕಾರದ ಬಳಿ ಹಣ ಇಲ್ಲ ಎಂಬ ಕೂಗು ಕೇಳಿಸುತ್ತಿರುವಾಗಲೇ ನಡೆದಿರುವ ಈ ಬೆಳವಣಿಗೆ ವಿಪಕ್ಷದ ಕೈಗೆ ಇನ್ನೊಂದು ಅಸ್ತ್ರವಾಗಿ ಸಿಕ್ಕಿದೆ.ದಾವಣಗೆರೆ ಜಿಲ್ಲೆಯ ಹರಿಹರದ ಕ್ಲಾಸ್‌ ಒನ್‌ ಗುತ್ತಿಗೆದಾರ ಮೊಹಮ್ಮದ್‌ ಮಝರ್‌ ಎಂಬವರು ಈ […]

ಬಿಲ್‌ ಪಾಸ್‌ ಮಾಡಿ ಇಲ್ಲವೇ ದಯಾಮರಣ ಕರುಣಿಸಿ : ಗುತ್ತಿಗೆದಾರನಿಂದ ಸಿಎಂಗೆ ಪತ್ರ Read More »

ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಯಿಂದ 30 ಲ.ರೂ. ದರೋಡೆ

ವಿಟ್ಲ: ಜಾರಿ ನಿರ್ದೇಶನಾಲಯದ ಅಧಿಕಾರಿಗಳಂತೆ ಸೋಗು ಹಾಕಿ ವಿಟ್ಲದ ಬೀಡಿ ಉದ್ಯಮಿಯೊಬ್ಬರ ಮನೆಯಿಂದ 30 ಲ.ರೂ. ದರೋಡೆ ಮಾಡಿದ ಘಟನೆ ಸಂಭವಿಸಿದೆ. ಬಂಟ್ವಾಳ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ತಮ್ಮನ್ನು ಇ.ಡಿ.ಅಧಿಕಾರಿಗಳೆಂದು ಪರಿಚಯಿಸಿಕೊಂಡಿದೆ. ಬಳಿಕ ಮನೆಯಲ್ಲಿ ಸುಮಾರು ಎರಡು ತಾಸು ಶೋಧ ನಡೆಸುವ ನಾಟಕವಾಡಿದೆ.

ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಯಿಂದ 30 ಲ.ರೂ. ದರೋಡೆ Read More »

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ

ಹೊಸವರ್ಷದ ಗ್ರೀಟಿಂಗ್‌ ಜೊತೆಗೆ ವಿಷಪೂರಿತ ಸಿಹಿತಿಂಡಿ ರವಾನಿಸಿದ ದುಷ್ಕರ್ಮಿಗಳು ಶಿವಮೊಗ್ಗ: ಹೊಸ ವರ್ಷಾಚರಣೆಯಂದು ಬಿಜೆಪಿ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ವಿಷಪೂರಿತ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಮೂವರಿಗೆ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಹಿತಿಂಡಿಗಳ ಬಾಕ್ಸ್‌ ಸ್ವೀಕರಿಸಿದ ಮೂವರಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್ ಎನ್ ನಾಗರಾಜ್ ಸಹ ಒಬ್ಬರಾಗಿದ್ದಾರೆ. ಜನವರಿ 1ರಂದು ಅಜ್ಞಾತ ವ್ಯಕ್ತಿಗಳು ಡಾ. ಸರ್ಜಿ ಅವರ ಹೆಸರನ್ನು ಬಳಸಿಕೊಂಡು, ಡಿಟಿಡಿಸಿ ಕೊರಿಯರ್ ಮೂಲಕ

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ Read More »

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಶೀತ ಜ್ವರದ ಚಿಕಿತ್ಸೆ ಪಡೆಯಲು ಸಲಹೆ ಹೊಸದಿಲ್ಲಿ : ಚೀನದಲ್ಲಿ ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ. ಎಲ್ಲ ಉಸಿರಾಟದ ಸೋಂಕುಗಳ ವಿರುದ್ಧ ತೆಗೆದುಕೊಳ್ಳುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಹೇಳಿದೆ. ನಾವು ದೇಶದಲ್ಲಿ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ Read More »

ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿ ವೈರಸ್‌

ಆಸ್ಪತ್ರೆ, ಸ್ಮಶಾನಗಳು ತುಂಬಿ ತುಳುಕುತ್ತಿರುವ ವೀಡಿಯೊಗಳು ವೈರಲ್‌ ಬೀಜಿಂಗ್‌ : ಇಡೀ ಜಗತ್ತಿಗೆ ಕೊರೊನ ವೈರಸ್‌ ಹರಡಿ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲಿ ಐದು ವರ್ಷಗಳ ಬಳಿಕ ಇದೇ ಮಾದರಿಯ ಇನ್ನೊಂದು ವೈರಸ್‌ ಕಾಣಿಸಿಕೊಂಡಿದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಎಕ್ಸ್‌, ಫೇಸ್‌ಬುಕ್‌, ವಾಟ್ಸಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್‌ ಮೀಡಿಯಾಗಳಲ್ಲಿ ಈ ವೈರಸ್‌ ಕುರಿತು ಚರ್ಚೆಯಾಗುತ್ತಿದೆ. ಕೆಲವರು ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ, ಸ್ಮಶಾನಗಳಲ್ಲಿ ಸಾಲಾಗಿ ಹೆಣಗಳನ್ನು ಇಟ್ಟಿರುವ ವೀಡಿಯೊಗಳನ್ನು ಹಂಚಿಕೊಂಡು ಇದು ಕೊರೊನ

ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿ ವೈರಸ್‌ Read More »

ಶ್ರೀ ರಾಮ ಭಜನಾ ತಂಡದ ಭಜನಾ ಕೀರ್ತನ ಸಂಭ್ರಮ | ಭಕ್ತಿ-ಭಾವ ಕುಣಿತದ ಸಮ್ಮಿಲನ

ಪುತ್ತೂರು : ಶ್ರೀ ರಾಮ ಭಜನಾ ತಂಡ ಆನಡ್ಕ, ಪುತ್ತೂರು ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಭಜನಾ ಕೀರ್ತನ ಸಂಭ್ರಮ, ಭಕ್ತಿ-ಭಾವ- ಕುಣಿತದ ಸಮ್ಮಿಲನವು ಜ.5 ರಂದು ಆನಡ್ಕದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮ ಸಂಜೆ 7ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಡ್ಕದ ಶ್ರೀ ರಾಮ ಭಜನಾ ತಂಡ ಅಧ್ಯಕ್ಷ ಗುರುಪ್ರಸಾದ್‍ ವಾಲ್ತಾಜೆ, ಮುಖ್ಯ ಅತಿಥಿಯಾಗಿ ಪುತ್ತೂರು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್‍ ಕೊಡಂಕಿರಿ, ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‍

ಶ್ರೀ ರಾಮ ಭಜನಾ ತಂಡದ ಭಜನಾ ಕೀರ್ತನ ಸಂಭ್ರಮ | ಭಕ್ತಿ-ಭಾವ ಕುಣಿತದ ಸಮ್ಮಿಲನ Read More »

ದೂರು ನೀಡಲು ಬಂದ ಮಹಿಳೆ ಜೊತೆ ಡಿವೈಎಸ್‌ಪಿ ಅಸಭ್ಯ ವರ್ತನೆ

ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಡೆದ ಘಟನೆ ತುಮಕೂರು : ದೂರು ನೀಡಲು ಕಚೇರಿಗೆ ಬಂದ ಮಹಿಳೆಯ ಜೊತೆ ಡಿವೈಎಸ್‌ಪಿ ದರ್ಜೆಯ ಪೊಲೀಸ್‌ ಅಧಿಕಾರಿಯೇ ಅಸಭ್ಯವಾಗಿ ವರ್ತಿಸಿದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪೊಲೀಸ್‌ ಇಲಾಖೆ ತಲೆ ತಗ್ಗಿಸುವಂತಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್‌ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. ಮಧುಗಿರಿ ಉಪವಿಭಾಗದ ಡಿವೈಎಸ್​​ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದು, ವೀಡಿಯೊ ವೈರಲ್‌ ಆದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ. ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು

ದೂರು ನೀಡಲು ಬಂದ ಮಹಿಳೆ ಜೊತೆ ಡಿವೈಎಸ್‌ಪಿ ಅಸಭ್ಯ ವರ್ತನೆ Read More »

ಮಹಿಳೆಯರಿಗೆ ಸಿಗಲಿದೆ ಶಕ್ತಿ ಸ್ಮಾರ್ಟ್‌ಕಾರ್ಡ್‌

ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ದಾಖಲೆಯಾಗಿ ಸ್ಮಾರ್ಟ್‌ಕಾರ್ಡ್‌ ಬಳಕೆ ಬೆಂಗಳೂರು: ಶಕ್ತಿ ಯೋಜನೆಯಡಿ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಪ್ರತಿಸಲ ಆಧಾರ್‌ ಕಾರ್ಡ್‌ ಒಯ್ದು ನಿರ್ವಾಹಕರಿಗೆ ತೋರಿಸುವ ಕಷ್ಟವನ್ನು ತಪ್ಪಿಸುವ ಸಲುವಾಗಿ ಸರಕಾರ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಿದೆ. ಶಕ್ತಿ ಯೋಜನೆಯನ್ನು ಸರಳೀಕರಿಸುವ ಪ್ರಕ್ರಿಯೆಯಂಗವಾಗಿ ಶೀಘ್ರದಲ್ಲೇ ಎಲ್ಲ ಫಲಾನುಭವಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಪ್ರತಿ ಸಲ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರು ತಮ್ಮ ಆಧಾರ್‌ ಕಾರ್ಡ್‌ ತೋರಿಸಬೇಕಾಗುತ್ತದೆ.

ಮಹಿಳೆಯರಿಗೆ ಸಿಗಲಿದೆ ಶಕ್ತಿ ಸ್ಮಾರ್ಟ್‌ಕಾರ್ಡ್‌ Read More »

ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ಡಿನ್ನರ್‌ ಮೀಟಿಂಗ್‌

ಡಿಕೆಶಿ ವಿದೇಶದಲ್ಲಿರುವಾಗ ಆಪ್ತರೊಂದಿಗೆ ಗೂಢಾಲೋಚನೆ ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಗುಸುಗುಸು ಪ್ರಾರಂಭವಾಗಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಆಪ್ತ ಸಚಿವರ ಜೊತೆ ನಡೆಸಿದ ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಜೊತೆಗೆ ಸಂಪುಟ ಪುನರ್‌ ರಚನೆಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯದ ಪಡಸಾಲೆಯಲ್ಲಿ ಈ ಡಿನ್ನರ್‌ ಮೀಟಿಂಗ್‌ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿದೇಶ ಪ್ರವಾಸದಲ್ಲಿರುವಾಗಲೇ ಸಿದ್ದರಾಮಯ್ಯ ಆಪ್ತರ

ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ಡಿನ್ನರ್‌ ಮೀಟಿಂಗ್‌ Read More »

ಪ್ರೀತಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ | ಆರೋಪಿ ಮೇಲೆ ಪೋಕ್ಸೋ, ಅಟ್ರಾಸಿಟಿ ಪ್ರಕರಣ ದಾಖಲು

ಕಡಬ : ಕಾಲೇಜ್ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಅದನ್ನು ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ ಮೇಲ್‍ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಒಂಕಲ್ ನಿವಾಸಿ ಪ್ರವೀಣ್ ಪೂಜಾರಿ ಬಂಧಿತ ಆರೋಪಿ. ಸಂತ್ರಸ್ತೆಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು ಆಕೆಯನ್ನು ಪ್ರವೀಣ್ ಪ್ರೀತಿಯ ಬಲೆಗೆ ಬೀಳಿಸಿದ ಬಳಿಕ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಬಂದು ಲೈಂಗಿಕವಾಗಿ ಬಳಸಿಕೊಂಡಿದ್ದ. ಅಲ್ಲದೆ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‍ ಮೇಲ್‍ ಮಾಡುತ್ತಿದ್ದ ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ

ಪ್ರೀತಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ | ಆರೋಪಿ ಮೇಲೆ ಪೋಕ್ಸೋ, ಅಟ್ರಾಸಿಟಿ ಪ್ರಕರಣ ದಾಖಲು Read More »

error: Content is protected !!
Scroll to Top