ಸುದ್ದಿ

ಐದು ಹುಲಿಗಳ ಸಾವು : ಐವರು ಶಂಕಿತರ ವಶ

ಗ್ರಾಮಸ್ಥರ ವಿಚಾರಣೆ; ಗೋವಿನ ಮಾಲೀಕನ ಹುಡುಕಾಟ ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ. ಹುಲಿಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದ್ದು, ವರದಿ ಕೈಸೇರಿದ ಬಳಿಕ ಸಾವಿಗೆ

ಐದು ಹುಲಿಗಳ ಸಾವು : ಐವರು ಶಂಕಿತರ ವಶ Read More »

ಭಾರಿ ಮಳೆಗೆ ಕುಸಿದ ಕಟ್ಟಡ : ಮೂವರು ಕಾರ್ಮಿಕರು ಸಾವು

ಇಬ್ಬರಿಗೆ ಗಂಭೀರ ಗಾಯ; 12 ಮಂದಿ ಪಾರು ತೃಶ್ಶೂರು: ಕೇರಳದ ತೃಶ್ಶೂರ್ ಜಿಲ್ಲೆಯ ಕೊಡಕರ ಪಟ್ಟಣದಲ್ಲಿ 40 ವರ್ಷ ಹಳೆಯ ಎರಡು ಅಂತಸ್ತಿನ ಕಟ್ಟಡ ಕುಸಿದು ಮೂವರು ವಲಸೆ ಕಾರ್ಮಿಕರು ದುರ್ಮರಣ ಹೊಂದಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ರೂಪೆಲ್, ರಾಹುಲ್ ಮತ್ತು ಅಲಿಮ್ ಎಂದು ಗುರುತಿಸಲಾಗಿದೆ. ಅವಶೇಷಗಳಿಂದ ಅವರ ಶವಗಳನ್ನು ಹೊರತೆಗೆದುಕೊಳ್ಳಲಾಗಿದೆ. ಕಟ್ಟಡವು ಕೆಂಪುಕಲ್ಲಿನಿಂದ ನಿರ್ಮಿತವಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಪೂರ್ಣವಾಗಿ ಕುಸಿದಿದೆ. ಈ ಕಟ್ಟಡದಲ್ಲಿ

ಭಾರಿ ಮಳೆಗೆ ಕುಸಿದ ಕಟ್ಟಡ : ಮೂವರು ಕಾರ್ಮಿಕರು ಸಾವು Read More »

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್‌ ಮತ್ತೆ ಮುನ್ನೆಲೆಗೆ

ಒಳಗಿಂದೊಳಗೆ ನಡೆಯುತ್ತಿದೆ ಹಲವು ಮಸಲತ್ತು ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್‌ ಮತ್ತೆ ಮುನ್ನೆಲೆಗೆ ಬಂದಿದೆ. ಶಾಸಕರು ಒಬ್ಬೊಬ್ಬರಾಗಿ ಅಸಮಾಧಾನ ವ್ಯಕ್ತಪಡಿಸಲು ಶುರುಮಾಡಿದ್ದು, ಕೈಯೊಳಗಿನ ತಳಮಳ ಬೀದಿಗೆ ಬರುತ್ತಿದೆ. ಬಿ.ಆರ್‌.ಪಾಟೀಲ್‌, ರಾಜು ಕಾಗೆ ಸಹಿತ ಹಲವು ಕಾಂಗ್ರೆಸ್‌ ಶಾಸಕರು ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಿಗೆ ಇನ್ನೂ ಕೆಲವು ಶಾಸಕರು ಅತೃಪ್ತಿ ತೋಡಿಕೊಳ್ಳತೊಡಗಿದ್ದಾರೆ. ಹೈಕಮಾಂಡ್‌ ಎಷ್ಟೇ ಖಡಕ್‌ ವಾರ್ನಿಂಗ್‌ ನೀಡಿದರೂ ಕಾಂಗ್ರೆಸ್‌ನೊಳಗಿನ ಬೇಗುದಿ ಪೂರ್ಣವಾಗಿ ಶಮನವಾಗುತ್ತಿಲ್ಲ. ಇದಕ್ಕೆಲ್ಲ ಮುಖ್ಯಮಂತ್ರಿ ಬದಲಾವಣೆಯ ವಿಚಾರವೇ ಮೂಲ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್‌ ಮತ್ತೆ ಮುನ್ನೆಲೆಗೆ Read More »

ಗಾಯಾಳುಗಳಿಗೆ ಬಸ್‌ ಮಾಲೀಕನಿಂದ ಪರಿಹಾರ ಕೊಡಿಸಿದ್ದ ಹಿಂದೂ ಮುಖಂಡ ಸೆರೆ

8 ತಿಂಗಳ ಹಿಂದೆ ಇತ್ಯರ್ಥವಾಗಿದ್ದ ಅಪಘಾತ ವಿವಾದ ಸಂಬಂಧ ಈಗ ಕ್ರಮ ಮಂಗಳೂರು: ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಬಸ್ಸು ಮಾಲೀಕನಿಂದ ಗಾಯಾಳುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡಿಸುವಲ್ಲಿ ಮುಂಚೂಣಿಯಲ್ಲಿ ಇದ್ದು ಹೋರಾಟ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡನನ್ನು ಮೂಡುಬಿದಿರೆ ಪೊಲೀಸರು ಘಟನೆ ನಡೆದ 8 ತಿಂಗಳ ಬಳಿಕ ಬಂಧಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ಬಂಧಿತ. ಕಾರ್ಕಳ ಅನಂತಶಯನ ದೇವಳ ರಸ್ತೆಯ ವ್ಯಾಪಾರ ಸಂಕೀರ್ಣವೊಂದರಲ್ಲಿ ಮೂಡುಬಿದಿರೆ ಪೊಲೀಸರ ತಂಡ ಗುರುವಾರ ಸಮಿತ್‌ರಾಜ್‌ ಅವರನ್ನು

ಗಾಯಾಳುಗಳಿಗೆ ಬಸ್‌ ಮಾಲೀಕನಿಂದ ಪರಿಹಾರ ಕೊಡಿಸಿದ್ದ ಹಿಂದೂ ಮುಖಂಡ ಸೆರೆ Read More »

ಮಲೆಮಹದೇಶ್ವರ ವನ್ಯಧಾಮದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳ ಸಾವು

ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಮಾನವೀಯ ಘಟನೆ ಬೆಂಗಳೂರು: ಚಾಮರಾಜನಗರದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಹುಲಿಗಳ ಸಂರಕ್ಷಣೆಯಲ್ಲಿ ದೇಶದಲ್ಲೇ ಎರಡಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಒಂದೇ ಸಲ ಐದು ಹುಲಿಗಳು ಸಾವಿಗೀಡಾಗಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ದಿನಗಳಲ್ಲಿ ಐದು ಹುಲಿಗಳನ್ನು ವಿಷವಿಕ್ಕಿ ಕೊಂದಿರುವುದು ಆಘಾತವುಂಟುಮಾಡಿದೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿಗಳು ನಿನ್ನೆ ಅಸಹಜ ರೀತಿಯಲ್ಲಿ ಸಾವಿಗೀಡಾಗಿರುವುದು ಕಂಡುಬಂದಿತ್ತುಯ. ಹೂಗ್ಯಂ ಅರಣ್ಯ ವಲಯದ ಮೀಣ್ಯಂ

ಮಲೆಮಹದೇಶ್ವರ ವನ್ಯಧಾಮದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳ ಸಾವು Read More »

ತಾಯಿಯನ್ನು ಜೀವಂತ ದಹಿಸಿ ಕೊಂದ ಮಗ ಬೈಂದೂರಿನಲ್ಲಿ ಸೆರೆ | ಸೋದರತ್ತೆಯನ್ನೂ ದಹಿಸಿ ಕೊಲ್ಲಲು ಯತ್ನಿಸಿದ್ದ ಆರೋಪಿ

ಮಂಗಳೂರು : ಮಂಜೇಶ್ವರ ಸಮೀಪ ವರ್ಕಾಡಿಯಲ್ಲಿ ಹೆತ್ತ ತಾಯಿಯನ್ನು ಬೆಂಕಿಹಚ್ಚಿ ಕೊಂದ ಕಟುಕ ಪುತ್ರನನ್ನು ಪೊಲೀಸರು ಉಡುಪಿಯ ಬೈಂದೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಮಗ ಮೆಲ್ವಿನ್ ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಬಳಿಕ ಕಾಡಿನೊಳಗೆ ಎಳೆದೊಯ್ದು ಬೆಂಕಿ ಹಚ್ಚಿ ಸುಟ್ಟಾಕ್ಕಿದ್ದ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಆತ ಪಕ್ಕದ ಮನೆಯಲ್ಲಿದ್ದ ಅತ್ತೆಯನ್ನು ಕರೆದು ಕೊಲೆ ಮಾಡಲು ಯತ್ನಿಸಿದ್ದ. ಮೆಲ್ವಿನ್ ಮೊಂತೇರೊ ತಾಯಿಯ ವರ್ಕಾಡಿಯಲ್ಲಿ ತಾಯಿ 60 ವರ್ಷದ ಹಿಲ್ಡಾ ಜೊತೆ ಈ ವಾಸವಿದ್ದ. ತಂದೆ

ತಾಯಿಯನ್ನು ಜೀವಂತ ದಹಿಸಿ ಕೊಂದ ಮಗ ಬೈಂದೂರಿನಲ್ಲಿ ಸೆರೆ | ಸೋದರತ್ತೆಯನ್ನೂ ದಹಿಸಿ ಕೊಲ್ಲಲು ಯತ್ನಿಸಿದ್ದ ಆರೋಪಿ Read More »

ಛತ್ತೀಸ್‍ಘಡ್‌ದಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಯಮಪುರಕ್ಕಟ್ಟಿದ ಭದ್ರತಾ ಪಡೆಗಳು

ಛತ್ತೀಸ್‍ಘಡ್: ನಾರಾಯಣಪುರದಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲ್ ಮಹಿಳೆಯರು ಮೃತಪಟ್ಟಿದ್ದಾಗಿ ‌ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆ ಅಭುಜ್‌ಮಾದ್ ಪ್ರದೇಶದ ಕೊಹ್ಕಮೆಟಾ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನಕ್ಸಲರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆ ಈ ಕಾರ್ಯಾಚರಣೆಯನ್ನು ಜಂಟಿಯಾಗಿ ನಡೆಸಿರುವುದಾಗಿದೆ. ನಾರಾಯಣಪುರ ಮತ್ತು ಕೊಂಡಗಾಂವ್‌ಗಳಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಜಿಲ್ಲೆಗಳ ಡಿಆರ್‌ಜಿ ಸಿಬ್ಬಂದಿ ಸಹ

ಛತ್ತೀಸ್‍ಘಡ್‌ದಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಯಮಪುರಕ್ಕಟ್ಟಿದ ಭದ್ರತಾ ಪಡೆಗಳು Read More »

ಹೆತ್ತ ತಾಯಿಯನ್ನೇ ಬೆಂಕಿಹಚ್ಚಿ ಜೀವಂತ ದಹಿಸಿದ ಮಗ

ಮಂಜೇಶ್ವರ ಸಮೀಪ ವರ್ಕಾಡಿಯಲ್ಲಿ ಅಮಾನವೀಯ ಕೃತ್ಯ ಕಾಸರಗೋಡು: ಮಗನೇ ಹೆತ್ತ ತಾಯಿಯನ್ನು ಬೆಂಕಿ ಹಚ್ಚಿ ಜೀವಂತ ದಹಿಸಿ ಕೋಮದ ಅಮಾನವೀಯ ಘಟನೆ ಮಂಜೇಶ್ವರ ಸಮೀಪ ವರ್ಕಾಡಿ ಎಂಬಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ವರ್ಕಾಡಿ ನಲ್ಲಂಗಿಯ ದಿ.ಲೂಯಿಸ್ ಮೊಂತೆರೋ ಎಂಬವರ ಪತ್ನಿ ಹಿಲ್ಡಾ (60) ಕೊಲೆಗೀಡಾದವರು. ಪುತ್ರ ಮೆಲ್ವಿನ್ ಈ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ನೆರೆಮನೆಯ ಲೋಲಿಟಾ (30) ಎಂಬವರು ಗಂಭೀರ ಸುಟ್ಟ ಗಾಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲಗಿದ್ದ ಮಹಿಳೆಗೆ ಬೆಂಕಿ ಹಚ್ಚಿದ್ದು, ಬಳಿಕ ತಾಯಿಗೆ ಹುಷಾರಿಲ್ಲ

ಹೆತ್ತ ತಾಯಿಯನ್ನೇ ಬೆಂಕಿಹಚ್ಚಿ ಜೀವಂತ ದಹಿಸಿದ ಮಗ Read More »

ಆಪರೇಷನ್‌ ಸಿಂದೂರ : ಇನ್ನೋರ್ವ ಪಾಕ್‌ ಗೂಢಚಾರ ಸೆರೆ

ನೌಕಾ ನೆಲೆಯ ಮಾಹಿತಿ ರವಾನಿಸಿದ್ದ ಪಾಕ್‌ ಏಜೆಂಟ್‌ ನವದೆಹಲಿ: ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗ ಬಂಧಿಸಿದೆ. ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ ವಿಶಾಲ್ ಯಾದವ್ ಸೆರೆಯಾದ ಪಾಕ್‌ ಏಜೆಂಟ್‌. ಈತ ನೌಕಾಪಡೆ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಡಾಕ್‌ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ ವಿಶಾಲ್‌ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಶರ್ಮಾ ಎಂಬಾಕೆಯ ಜೊತೆ ಸಂಪರ್ಕದಲ್ಲಿದ್ದ.

ಆಪರೇಷನ್‌ ಸಿಂದೂರ : ಇನ್ನೋರ್ವ ಪಾಕ್‌ ಗೂಢಚಾರ ಸೆರೆ Read More »

error: Content is protected !!
Scroll to Top