ಸುದ್ದಿ

ಕಲಾವಿದೆಯ ಬದುಕು

ತುಳುನಾಡಿನ ರಂಗಭೂಮಿ ಕಂಡ ರಂಗನಾಯಕಿ ಜ್ಯೋತಿ ಕುಲಾಲ್ ಪುತ್ತೂರು. ರಂಗಭೂಮಿಯಲ್ಲಿ ಹೆಣ್ಣು ಕಲಾವಿದಯೊಬ್ಬಳು ಕಲಾವಿದೆಯಾಗಿ ಹೆಸರು ಮಾಡಬೇಕಾದರೆ ಸುಲಭದ ಕೆಲಸವಲ್ಲ ಬಿಡಿ. ಅದೆಷ್ಟು ಸಮಾಜದ ಮಾತುಗಳನ್ನು ಕೇಳಿ ಎಷ್ಟು ಕಲಾವಿದೆಯರು ತಮ್ಮ ಕಲಾ ಸೇವೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಎಷ್ಟೋ ಉದಾಹರಣೆಗಳಿವೆ. ಆದರೆ ಈ ಕಲಾವಿದೆಯೊಬ್ಬರು ರಂಗಭೂಮಿಯಲ್ಲಿ ಸಾಧನೆ ಮಾಡಿ ಹೇಗೆ ಸಮಾಜಕ್ಕೆ ಉತ್ತರ ನೀಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರೇ ರಂಗನಾಯಕಿ ನಮ್ಮ ಪುತ್ತೂರಿನ ಕಲಾವಿದೆ ಜ್ಯೋತಿ ಕುಲಾಲ್‍. ಹೆಚ್ಚಾಗಿ ಜ್ಯೋತಿ ಅಕ್ಕ ನಮಗೆ ಕಾನ ಸಿಗುವುದು ಹಾಸ್ಯ […]

ಕಲಾವಿದೆಯ ಬದುಕು Read More »

ಗೇರುಕಟ್ಟೆ ಕ್ಷೀರಸಂಗಮ ಸಭಾಭವನದಲ್ಲಿ ಭಾರತ ಮಾತಾ ಪೂಜನ ಮತ್ತು ಮಕ್ಕಳ ಚೈತನ್ಯ ಶಿಬಿರದ ಸಮಾರೋಪ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಕಳಿಯ ಶಾಖೆಯ ವತಿಯಿಂದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗಿದ 15 ದಿನಗಳ ಮಕ್ಕಳ  ವಸಂತ ಚೈತನ್ಯ ಶಿಬಿರದ ಸಮಾರೋಪವು ಭಾರತ ಮಾತಾ ಪೂಜನದೊಂದಿಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ತನ್ಮಯಕೃಷ್ಣ ವಹಿಸಿದ್ದರು. ಮುಖ್ಯ ಮಾತುಗಾರರಾಗಿದ್ದ ಯೋಗ ಬಂಧು ತುಕರಾಮ ಶಿಬಿರದಲ್ಲಿ ಪಡೆದ ಅನುಭವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಆದ್ಯವಿ, ಸನ್ನಿಧಿ, ಅರ್ಜುನ ಮತ್ತು ಪೋಷಕರಾದ ಮಾಜಿಯೋಧ ವಿಕ್ರಮ,

ಗೇರುಕಟ್ಟೆ ಕ್ಷೀರಸಂಗಮ ಸಭಾಭವನದಲ್ಲಿ ಭಾರತ ಮಾತಾ ಪೂಜನ ಮತ್ತು ಮಕ್ಕಳ ಚೈತನ್ಯ ಶಿಬಿರದ ಸಮಾರೋಪ Read More »

ಸರಕಾರ ಮಂಡಿಸಿದ್ದು ಜಾತಿ ಸಮೀಕ್ಷೆಯ ನಕಲಿ ವರದಿ : ಆರ್‌. ಅಶೋಕ್‌

ರಕ್ತ ಕಣ್ಣೀರು ಸಿನಿಮಾದಂತಿದೆ ಸರಕಾರದ ವರದಿ ಎಂದು ಲೇವಡಿ ಬೆಂಗಳೂರು: ಜಾತಿ ಗಣತಿ ವರದಿಯ ಮೂಲಪ್ರತಿ ಇಲ್ಲ ಎಂದು ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಹೀಗಾಗಿ ಸರ್ಕಾರ ಬಹಿರಂಗಗೊಳಿಸಿರುವ ಜಾತಿ ಗಣತಿ ವರದಿ ನಕಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಈಗ ಮಂಡನೆಯಾದ ದತ್ತಾಂಶಗಳ ವರದಿ ನಕಲಿ ಎಂಬುದಕ್ಕೆ ಪುರಾವೆಯಿದೆ. ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರು 2021, ಅಕ್ಟೋಬರ್‌ 5ರಂದು ಸರ್ಕಾರಕ್ಕೆ

ಸರಕಾರ ಮಂಡಿಸಿದ್ದು ಜಾತಿ ಸಮೀಕ್ಷೆಯ ನಕಲಿ ವರದಿ : ಆರ್‌. ಅಶೋಕ್‌ Read More »

ಸ್ವಾಮೀಜಿಯನ್ನೇ 26 ದಿನ ಡಿಜಿಟಲ್‌ ಅರೆಸ್ಟ್‌ ಮಾಡಿ 2.5 ಕೋಟಿ ರೂ. ಲಪಟಾಯಿಸಿದ ಖದೀಮರು

ಸೈಬರ್‌ ವಂಚಕರ ಮೋಸದಿಂದ ಮಠದ ಹಣವೆಲ್ಲ ಮಂಗಮಾಯ ಭೋಪಾಲ : ಸೈಬರ್‌ ಖದೀಮರು ಮಠದ ಸ್ವಾಮೀಜಿಯನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 2.5 ಕೋ. ರೂ. ಲಪಟಾಯಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ ನಗರದಲ್ಲಿರುವ ರಾಮಕೃಷ್ಣ ಮಿಶನ್‌ ಆಶ್ರಮದ ಕಾರ್ಯದರ್ಶಿ ಸುಪ್ರದೀಪ್ತಾನಂದ ಸ್ವಾಮೀಜಿ ಬರೋಬ್ಬರಿ 26 ದಿನ ಡಿಜಿಟಲ್‌ ಅರೆಸ್ಟ್‌ ಆಗಿ 2.5 ಕೋ. ರೂ. ಕಳೆದುಕೊಂಡಿದ್ದಾರೆ. ಮಾ.15ರಂದು ಸ್ವಾಮೀಜಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನನ್ನು ಇ.ಡಿ. ಅಧಿಕಾರಿ ಎಂದು ಪರಿಚಯಿಸಿಕೊಂಡು 20 ಕೋ. ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ

ಸ್ವಾಮೀಜಿಯನ್ನೇ 26 ದಿನ ಡಿಜಿಟಲ್‌ ಅರೆಸ್ಟ್‌ ಮಾಡಿ 2.5 ಕೋಟಿ ರೂ. ಲಪಟಾಯಿಸಿದ ಖದೀಮರು Read More »

ಪತ್ನಿ, ಮಗಳಿಂದಲೇ ರಾಜ್ಯದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಭೀಕರ ಹತ್ಯೆ

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ನಿವೃತ್ತ ಪೊಲೀಸ್‌ ಉನ್ನತಾಧಿಕಾರಿಯ ಕೊಲೆ ಬೆಂಗಳೂರು : ರಾಜ್ಯದ ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ (68) ಹತ್ಯೆ ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಹತ್ಯೆ ಸಂಬಂಧ ಅವರ ಪತ್ನಿ ಹಾಗೂ ಮಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ತನಿಖಾಧಿಕಾರಿಗಳ ಎದುರು ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರು ಅನೇಕ ಸ್ಫೋಟಕ ಅಂಶಗಳನ್ನು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ಸದ್ಯ ಪೊಲೀಸರ

ಪತ್ನಿ, ಮಗಳಿಂದಲೇ ರಾಜ್ಯದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಭೀಕರ ಹತ್ಯೆ Read More »

ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ!

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೊ ಟ್ರಾವೆಲ್ಲರ್ ಡಿಕ್ಕಿ ಹೊಡೆದ ಘಟನೆ ಶನಿವಾರ ಸಂಜೆ ನಡೆದಿದೆ. ಇಂಜಿನ್ ಸಮಸ್ಯೆಯಿಂದ ಏರ್‌ಪೋರ್ಟ್‌ ಒಳಭಾಗದ ಅಲ್ಪಾ ಪಾರ್ಕಿಂಗ್ ಬೇ-71ರಲ್ಲಿ ಕೆಲವು ದಿನಗಳಿಂದ ವಿಮಾನವನ್ನು ನಿಲ್ಲಿಸಲಾಗಿತ್ತು. ಇದೇ ವಿಮಾನಕ್ಕೆ ಮುಂಭಾಗದ ಮೂತಿ ಬಳಿ ಟೆಂಪೊ ಟ್ರಾವೆಲ್ಲರ್ ಡಿಕ್ಕಿಯಾಗಿದೆ. ಟೆಂಪೊ ಟ್ರಾವೆಲ್ಲರ್ ವಿಮಾನದ ಮೂತಿ ಭಾಗದ ಕೆಳಗೆ ಸಿಲುಕಿಕೊಂಡು ಟಾಪ್ ಜಖಂ ಆಗಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರನ್‌ವೇಗೆ ಸಿಬ್ಬಂದಿಯನ್ನು ಬಿಟ್ಟು ಬರುತ್ತಿದ್ದ

ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ! Read More »

ಪುನೀತ್‌ ಕೆರೆಹಳ್ಳಿಯನ್ನು ತಡೆದ ತಿಮರೋಡಿ ಬೆಂಬಲಿಗರ ಮೇಲೆ ಕೇಸ್‌

ಸೋಷಿಯಲ್‌ ಮೀಡಿಯಾದಲ್ಲಿ ನಡೆದ ಜಟಾಪಟಿಯ ಪರಿಣಾಮ ಬೆಳ್ತಂಗಡಿ: ಶನಿವಾರ ರಾಮೋತ್ಸವದಲ್ಲಿ ಭಾಗವಹಿಸಲು ಉಜಿರೆಗೆ ಆಗಮಿಸಿದ್ದ ಹಿಂದು ಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿ ಅವರನ್ನು ತಡೆದು ನಿಲ್ಲಿಸಿ ವಾಪಸು ಹೋಗಲು ಹೇಳಿದ ಘಟನೆಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಜಿರೆ ನಿವಾಸಿಗಳಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ, ಪ್ರಭಾಕರ, ಗಣೇಶ್ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್‌ಐ ಮುರಳೀಧರ ನಾಯ್ಕ್ ಕೆ.ಜಿ. ಅವರ

ಪುನೀತ್‌ ಕೆರೆಹಳ್ಳಿಯನ್ನು ತಡೆದ ತಿಮರೋಡಿ ಬೆಂಬಲಿಗರ ಮೇಲೆ ಕೇಸ್‌ Read More »

ಮಂಗಳೂರು ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕಳ್ಳ ಸಾಗಾಟದ ಚಿನ್ನದ ಲಾಭ ಹಂಚಿಕೊಳ್ಳುವ ತಕರಾರಿನ ಹಿನ್ನೆಲೆಯಲ್ಲಿ ಮಾಡಿದ್ದ ಹತ್ಯೆ ಮಂಗಳೂರು: ವಿದೇಶದಿಂದ ಕಳ್ಳ ಮಾರ್ಗದಲ್ಲಿ ತಂದ ಚಿನ್ನದ ಲಾಭವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಉಂಟಾದ ತಕರಾರಿನ ನಗರದ ಅತ್ತಾವರದಲ್ಲಿ 2014ರಲ್ಲಿ ಸಂಭವಿಸಿದ್ದ ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳ ಕಾಸರಗೋಡಿನ ಚೆರ್ಕಳ ಎಂಬಲ್ಲಿನ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಇರ್ಷಾದ್ (24) ಹಾಗೂ ಸಫ್ವಾನ್ (24)

ಮಂಗಳೂರು ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ Read More »

ಪ್ರತಿಭಟನೆಕಾರರನ್ನು ಸಾಗಿಸಿಲ್ಲ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ ವೀಡಿಯೊ : ಪೊಲೀಸ್‌ ಕಮಿಷನರ್‌ ಸ್ಪಷ್ಟನೆ

ವಕ್ಫ್‌ ಕಾನೂನು ವಿರುದ್ಧ ನಡೆದ ಪ್ರತಿಭಟನೆ ವೇಳೆ ವೈರಲ್‌ ಆದ ವೀಡಿಯೊ ಮಂಗಳೂರು: ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ವಾಹನದಲ್ಲೇ ಪ್ರತಿಭಟನೆಕಾರರಿಗೆ ಡ್ರಾಪ್‌ ಕೊಡಲಾಗಿತ್ತು ಎಂಬ ವೀಡಿಯೊ ವೈರಲ್‌ ಆಗಿತ್ತು. ಹೆದ್ದಾರಿ ಬಂದ್ ಮಾಡಿದ ಪ್ರತಿಭಟನೆಕಾರರನ್ನು ಎಸಿಪಿ ವಾಹನದಲ್ಲೇ ಕರೆದೊಯ್ದಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆರೋಪಿಸಲಾಗಿತ್ತು. ಆದರೆ ಇದು ಪ್ರತಿಭಟನೆಕಾರರಿಗೆ ಡ್ರಾಪ್‌ ಕೊಟ್ಟದ್ದಲ್ಲ, ಗಾಯಗೊಂಡ ಓರ್ವ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೀಡಿಯೊ ಎಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಕಾರ್ಯಕ್ರಮ

ಪ್ರತಿಭಟನೆಕಾರರನ್ನು ಸಾಗಿಸಿಲ್ಲ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ ವೀಡಿಯೊ : ಪೊಲೀಸ್‌ ಕಮಿಷನರ್‌ ಸ್ಪಷ್ಟನೆ Read More »

ನಾಳೆ ಏ.20 : ಪುತ್ತೂರು ಮುಳಿಯಕ್ಕೆ ರಮೇಶ್ ಅರವಿಂದ್

ಪುತ್ತೂರಿನ ಚಿನ್ನಾಭರಣಗಳ ಶೋರೂಮ್ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಇಂದು ಅನಾವರಣಗೊಳ್ಳಲು ಭಾರತದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಉದ್ಘಾಟನೆ ಮಾಡುವರು.  ನಾಳೆ ಬೆಳಿಗ್ಗೆ 9.30 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು, ಆನಂತರ ದೇವರ ದೀಪದೊಂದಿಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಶೋರೂಮ್ ಗೆ ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಶ್ರೀ ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ , ಕೋರ್ಟು ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ ಶೋರೂಮಿಗೆ ಕರೆತರಲಾಗುವುದು.

ನಾಳೆ ಏ.20 : ಪುತ್ತೂರು ಮುಳಿಯಕ್ಕೆ ರಮೇಶ್ ಅರವಿಂದ್ Read More »

error: Content is protected !!
Scroll to Top