ಸುದ್ದಿ

ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ | ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ : ಪಟ್ರಮೆಯ ಪಟ್ಟೂರು ಸಮೀಪ ತಿರುವಿನಲ್ಲಿ ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ | ಪ್ರಾಣಾಪಾಯದಿಂದ ಪಾರು Read More »

ಲಾಹೋರ್‌ನಲ್ಲಿ ಹಗಲೇ ಭಾರಿ ಸ್ಫೋಟ : ಬೆಚ್ಚಿಬಿದ್ದ ಜನತೆ

ಪಾಕಿಸ್ಥಾನದ ಸೇನಾ ನೆಲೆಯ ಪಕ್ಕದಲ್ಲೇ ಸ್ಫೋಟ ಲಾಹೋರ್‌: ಭಾರತ ಆಪರೇಷನ್ ಸಿಂದೂರ್ ನಡೆಸಿದ ಮರುದಿನವೇ ಪಾಕಿಸ್ಥಾನದ ಪ್ರಮುಖ ನಗರ ಲಾಹೋರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಜನರು ಭೀತಿಯಿಂದ ಹೊರಗೋಡಿ ಬಂದಿದ್ದಾರೆ. ಲಾಹೋರ್‌ನ ವಿಮಾನ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದೆ. ಇಲ್ಲಿಯೇ ಸಮೀಪ ಲಷ್ಕರ್‌ ಇ ತೈಬಾದ ಮುಖಂಡ ಹಾಫಿಜ್‌ ಸಯೀದ್‌ನ ಮನೆಯಿದೆ ಎಂದು ಕೆಲದಿನಗಳ ಹಿಂದೆ ವರದಿಯಾಗಿತ್ತು. ಇಂದು ಬೆಳಗ್ಗೆ ಪಾಕಿಸ್ಥಾನದ ಲಾಹೋರ್‌ನಲ್ಲಿ ದೊಡ್ಡ ಸ್ಫೋಟಗಳು ನಡೆದಿವೆ. ದೂರದವರೆಗೆ ಸ್ಫೋಟದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಅಲರ್ಟ್

ಲಾಹೋರ್‌ನಲ್ಲಿ ಹಗಲೇ ಭಾರಿ ಸ್ಫೋಟ : ಬೆಚ್ಚಿಬಿದ್ದ ಜನತೆ Read More »

ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ | ವ್ಯಕ್ತಿಯೋರ್ವನಿಗೆ ಗಂಭೀರ ಗಾಯ

ಪುತ್ತೂರು : ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾದ ಘಟನೆ ನಿನ್ನೆ ಬೊಳ್ವಾರಿನಲ್ಲಿ ನಡೆದಿದೆ. ಘಟನೆ ಪರಿಣಾಮ ಆಕ್ಟಿವಾ ಮತ್ತು ಡಿಯೋ ವಾಹನಕ್ಕೆ ಹಾನಿಯಾಗಿದ್ದು ಅಕ್ಟಿವಾ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ | ವ್ಯಕ್ತಿಯೋರ್ವನಿಗೆ ಗಂಭೀರ ಗಾಯ Read More »

ರಕ್ತದ ಪ್ರತಿ ಹನಿಗೂ ಸೇಡು ತೀರಿಸುತ್ತೇವೆ: ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಿಂದ ಕಂಗೆಟ್ಟುಹೋದ ಪಾಕಿಸ್ಥಾನಕ್ಕೆ ಸೇಡಿನ ತವಕ ಇಸ್ಲಾಮಾಬಾದ್‌: ತನ್ನ ನೆಲದಲ್ಲಿರುವ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಿಂದ ಕಂಗೆಟ್ಟು ಹೋಗಿರುವ ಪಾಕಿಸ್ಥಾನ ಈಗ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದೆ. ಪಾಕಿಸ್ಥಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ತನ್ನ ದೇಶವಾಸಿಗಳಿಗೆ ಭರವಸೆ ನೀಡಿದ್ದಾರೆ. ಬುಧವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಷರೀಫ್‌, ಹಿಂದುಸ್ಥಾನ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಅವರು ಮಾಡಿದ ತಪ್ಪಿಗೆ ಭಾರಿ ಬೆಲೆ ತೆರಬೇಕಾಗುತ್ತದೆ. ಪ್ರತಿ

ರಕ್ತದ ಪ್ರತಿ ಹನಿಗೂ ಸೇಡು ತೀರಿಸುತ್ತೇವೆ: ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ Read More »

ಐಇಡಿ ಸ್ಫೋಟದಿಂದ ಪಾಕ್‌ ಸೇನಾ ವಾಹನ ಛಿದ್ರ : 12 ಯೋಧರು ಸಾವು

ಸ್ಫೋಟದ ಬಿರುಸಿಗೆ ಹಲವು ಮೀಟರ್‌ ದೂರ ಹಾರಿದ ಸೈನಿಕರ ದೇಹಗಳು ಇಸ್ಲಾಮಾಬಾದ್‌ : ಭಾರತ ಆಪರೇಷನ್‌ ಸಿಂದೂರ್ ಮೂಲಕ ಪಾಕಿಸ್ಥಾನಕ್ಕೆ ಎಂದೂ ಮರೆಯಲಾಗದ ಏಟು ಕೊಟ್ಟಿದ್ದರೆ ಇನ್ನೊಂದೆಡೆಯಿಂದ ಬಲೂಚಿಸ್ಥಾನ ಸ್ವಾತಂತ್ರ್ಯ ಹೋರಾಟಗಾರರು ಪಾಕಿಸ್ಥಾನವನ್ನು ಇನ್ನಿಲ್ಲದಂತೆ ಕಾಡಲು ತೊಡಗಿದ್ದಾರೆ. ಪಾಕಿಸ್ಥಾನದ ಸೇನಾ ವಾಹನದ ಮೇಲೆ ಬಲೂಚಿಸ್ಥಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿಯಲ್ಲಿ ಕನಿಷ್ಠ 12 ಮಂದಿ ಪಾಕ್‌ ಯೋಧರು ಮೃತಪಟ್ಟಿದ್ದಾರೆ. ಐಇಡಿ ಮೂಲಕ ಪಾಕ್ ಸೇನಾ ವಾಹನವನ್ನು ಸ್ಫೋಟಿಸಿರುವುದಾಗಿ ಬಲೂಚಿಸ್ಥಾನ ಸೇನೆ ಹೇಳಿಕೊಂಡಿದೆ. ಈ ಘಟನೆ ಬಲೂಚಿಸ್ಥಾನದ

ಐಇಡಿ ಸ್ಫೋಟದಿಂದ ಪಾಕ್‌ ಸೇನಾ ವಾಹನ ಛಿದ್ರ : 12 ಯೋಧರು ಸಾವು Read More »

ಆಪರೇಷನ್‌ ಸಿಂದೂರ್‌ ಬಳಿಕ ಕರಾವಳಿಯಲ್ಲಿ ಕಟ್ಟೆಚ್ಚರ

ಆಳ ಸಮುದ್ರ ಮೀನುಗಾರಿಕೆಗೆ ನಿರ್ಬಂಧ; ಬೋಟ್‌ಗಳ ತೀವ್ರ ತಪಾಸಣೆ ಮಂಗಳೂರು : ಪಾಕಿಸ್ಥಾನದ ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ನಡೆಸಿದ ಬಳಿಕ ರಾಜ್ಯದ ಕರಾವಳಿ ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಕಾರವಾರದಲ್ಲಿ ಕದಂಬ ನೌಕಾ ನೆಲೆ ಹಾಗೂ ಬಂದರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕರಾವಳಿ ಕಾವಲುಪಡೆ, ಭಾರತೀಯ ತಟರಕ್ಷಕ ದಳದಿಂದ ತಪಾಸಣೆ ಹೆಚ್ಚಿಸಲಾಗಿದೆ. ಕಾರವಾರದ ಬಂದರಿಗೆ ಬರುವ ಅನ್ಯ ದೇಶದ ಹಡುಗುಗಳಲ್ಲಿ ಚೀನಾ, ಪಾಕಿಸ್ತಾನದ ಸಿಬ್ಬಂದಿಯಿದ್ದರೂ ನಿರ್ಬಂಧ ವಿಧಿಸಲಾಗಿದೆ. ಬಂದರಿಗೆ ಬಂದ

ಆಪರೇಷನ್‌ ಸಿಂದೂರ್‌ ಬಳಿಕ ಕರಾವಳಿಯಲ್ಲಿ ಕಟ್ಟೆಚ್ಚರ Read More »

ಪಾಕ್‌ ಶೆಲ್‌ ದಾಳಿಯಲ್ಲಿ ಯೋಧ ಹುತಾತ್ಮ

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ದಾಳಿ ಮಾಡುತ್ತಿರುವ ಪಾಕ್‌ ಸೇನೆ ನವದೆಹಲಿ: ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ಬಳಿಕ ಹತಾಶಗೊಂಡಿರುವ ಪಾಕಿಸ್ಥಾನ ಗಡಿಯುದ್ದಕ್ಕೂ ನಿರಂತರ ದಾಳಿ ನಡೆಸುತ್ತಿದ್ದು, ನಿನ್ನೆ ರಾತ್ರಿ ನಡೆಸಿದ ಭಾರಿ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಹುತಾತ್ಮರಾಗಿದ್ದಾರೆ. 32 ವರ್ಷದ ಜವಾನ್ ದಿನೇಶ್ ಕುಮಾರ್ ಶರ್ಮಾ, ಹರಿಯಾಣದ ಪಲ್ವಾಲ್‌ನ ಮೊಹಮ್ಮದ್‌ಪುರ ಗ್ರಾಮದವರು. ಅವರು ಪಾಕಿಸ್ತಾನದ ಆಕ್ರಮಣಕ್ಕೆ ಆಗಾಗ್ಗೆ ಸಿಲುಕುತ್ತಿರುವ ಹೈಟೆನ್ಶನ್ ಪ್ರದೇಶವಾದ ಎಲ್‌ಒಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲದಿನಗಳಿಂದ

ಪಾಕ್‌ ಶೆಲ್‌ ದಾಳಿಯಲ್ಲಿ ಯೋಧ ಹುತಾತ್ಮ Read More »

ರೋಹಿತ್‌ ಶರ್ಮಾ ಟೆಸ್ಟ್‌ನಿಂದ hurt and retired?

ದಿಢೀರ್‌ ವಿದಾಯ ಹೇಳಿದ ಹಿಂದೆ ನಾನಾ ಅನುಮಾನ ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ನಿನ್ನೆ ರಾತ್ರಿ ದಿಢೀರ್‌ ಎಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿಯುಂಟು ಮಾಡಿದ್ದಾರೆ. ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಎರಡೆರಡು ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ದೀರ್ಘ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಇದು ರೋಹಿತ್‌ ಶರ್ಮಾ ಇಷ್ಟಪಟ್ಟು ಹೇಳಿದ ಗುಡ್‌ಬೈ ಅಲ್ಲ, ಅವರು hurt

ರೋಹಿತ್‌ ಶರ್ಮಾ ಟೆಸ್ಟ್‌ನಿಂದ hurt and retired? Read More »

ಗಣೇಶ್ ರೇಡಿಯೊ ಹೌಸ್ ನ ಮಾಲಕ ಪ್ರೇಮಾನಂದ ಡಿ. ನಿಧನ

ಪುತ್ತೂರು: ಏಳ್ಮುಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣೇಶ್ ರೇಡಿಯೊ ಹೌಸ್ ನ ಮಾಲಕ ಪ್ರೇಮಾನಂದ ಡಿ (56)ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ. 07 ರಂದು ನಿಧನರಾದರು. ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ, ಮಗಳು, ಅಳಿಯ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ

ಗಣೇಶ್ ರೇಡಿಯೊ ಹೌಸ್ ನ ಮಾಲಕ ಪ್ರೇಮಾನಂದ ಡಿ. ನಿಧನ Read More »

ಮರ ಬಿದ್ದು ತಂತಿಗೆ  ಹಾನಿ | ಅದೃಷ್ಟವಶಾತ್ ವಾಹನ ಅಪಾಯದಿಂದ ಪಾರು

ಪುತ್ತೂರು: ಮರ ಬಿದ್ದು ವಿದ್ಯುತ್ ತಂತಿಗೆ ಗೆ ಹಾನಿಯಾದ ಘಟನೆ ಪುತ್ತೂರಿನ ಕಲ್ಲರ್ಪೆ ಬಳಿ ನಡೆದಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ವಾಹನವೊಂದು ಕೂದಲೆಲೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಮರ ಬಿದ್ದು ತಂತಿಗೆ  ಹಾನಿ | ಅದೃಷ್ಟವಶಾತ್ ವಾಹನ ಅಪಾಯದಿಂದ ಪಾರು Read More »

error: Content is protected !!
Scroll to Top