ಸುದ್ದಿ

7ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.8 ಮಂಗಳವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

7ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

ಸವಣೂರು ಗ್ರಾಮ ಬೂತ್ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಸವಣೂರು : ಸುಳ್ಯ ಮಂಡಲ, ಕುಟ್ರುಪ್ಪಾಡಿ ಮಹಾಶಕ್ತಿ ಶಕ್ತಿ ಕೇಂದ್ರದ, ಸವಣೂರು ಗ್ರಾಮ ಬೂತ್ ಸಂಖ್ಯೆ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಬೂತ್ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿಯವರ ಮನೆಯಲ್ಲಿ ಆಚರಿಸಲಾಗಿದೆ. ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಸವಣೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಗ್ರಾಮಪಂಚಾಯಿತಿ ಸದಸ್ಯರಾದ ರಾಜೀವಿ ವಿ ಶೆಟ್ಟಿ, ಇಂದಿರಾ ಬೇರಿಕೆ,

ಸವಣೂರು ಗ್ರಾಮ ಬೂತ್ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ Read More »

ಜೀವನ್ ತಾವ್ರೊ ಆತ್ಮಹತ್ಯೆ ಪ್ರಕರಣ | ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಅಮ್ಮಾಡಿ ತನಿಯಮನೆ ನಿವಾಸಿ ಜೀವನ್ ತಾವೊ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ. ಕುರಿಯಾಳ ಮೂಲದ ಪ್ರವೀಣ್ ಡೆಸಾ ಮತ್ತು ರೋಹನ್ ಪಿಂಟೊ ಈ ಆರೋಪದಲ್ಲಿ ಬಂಧಿಸಲ್ಪಟ್ಟವರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜೀವನ್ ತಾವ್ರೊ ಆತ್ಮಹತ್ಯೆ ಪ್ರಕರಣ | ಇಬ್ಬರು ಆರೋಪಿಗಳ ಬಂಧನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದಿಂದ ಸಂಘದ ಸದಸ್ಯೆಯ ಸಾಲ ಮನ್ನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದ ಕೆಮ್ಮಿಂಜೆ ಒಕ್ಕೂಟದ  ಕೊರಗಜ್ಜ ಸ್ವಸಹಾಯ ಸಂಘದ  ಸದಸ್ಯರಾದ ಲಲಿತರವರು ಟೋಟಲ್ ಸಂಘದಿಂದ 4 ಲಕ್ಷ ಸಾಲವನ್ನು ಪಡೆದಿದ್ದು . 3ಲಕ್ಷ ,82 ಸಾವಿರ ಸಾಲದ ಮೊತ್ತ ಬಾಕಿ ಇದ್ದು. ಇವರ ಸಾಲವನ್ನು ಮನ್ನ ಮಾಡಲಾಗಿದೆ. ಇದರ ಮಂಜೂರಾತಿ ಪತ್ರವನ್ನು  ಕೆಮ್ಮಿಂಜೆ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ರಾಮಶೆಟ್ಟಿ ಹಾಗೂ ಸಮಿತಿಯ ಕಾರ್ಯದರ್ಶಿಯಾವರಾದ ಶೇಖರ್ ಆಚಾರ್ಯ. ಹಾಗೂ ಒಕ್ಕೂಟದ ಅಧ್ಯಕ್ಷರಾದ ಚೇತನ್ ಇವರು ಲಲಿತ ಇವರಿಗೆ ಮಂಜೂರಾತಿ ಪತ್ರವನ್ನು  ವಿತರಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದಿಂದ ಸಂಘದ ಸದಸ್ಯೆಯ ಸಾಲ ಮನ್ನ Read More »

ಷೇರು ಮಾರುಕಟ್ಟೆ ಭಾರಿ ಕುಸಿತ : 19 ಲಕ್ಷ ಕೋಟಿ ರೂಪಾಯಿ ನಷ್ಟ

ಹೂಡಿಕೆದಾರ ಪಾಲಿಗೆ ಇಂದು ಬ್ಲ್ಯಾಕ್‌ ಮಂಡೆ ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಗಳ ಪಾಲಿಗೆ ಇಂದಿನ ದಿನ ಅಕ್ಷರಶಃ ಬ್ಲ್ಯಾಕ್‌ ಮಂಡೆಯಾಗಿ ಪರಿಣಮಸಿದೆ. ಮುಂಬಯಿ ಷೇರು ಮಾರುಕಟ್ಟೆಯೂ ಸೇರಿದಂತೆ ಎಲ್ಲ ಮಾರುಕಟ್ಟೆಗಳ ಸೂಚ್ಯಂಕ ಪಾತಾಳಕ್ಕಿಳಿದು ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತದೋಕುಳಿ ಆಗುತ್ತಿದೆ. ಯದ್ವಾತದ್ವಾ ಕರಡಿ ಕುಣಿತದಿಂದ ಹೂಡಿಕೆದಾರರು ಲಕ್ಷ ಕೋಟಿಗಳಲ್ಲಿ ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.ಭಾರತದಲ್ಲಿ 23,000 ಗಡಿದಾಟಿ ಮುನ್ನುಗ್ಗುವ ಸೂಚನೆ ನೀಡಿದ್ದ ಷೇರು ಗೂಳಿ ಈಗ ಪ್ರಪಾತಕ್ಕೆ ಬೀಳುತ್ತಿದೆ. ಸೆನ್ಸೆಕ್ಸ್​ನಲ್ಲೂ ಕೂಡ

ಷೇರು ಮಾರುಕಟ್ಟೆ ಭಾರಿ ಕುಸಿತ : 19 ಲಕ್ಷ ಕೋಟಿ ರೂಪಾಯಿ ನಷ್ಟ Read More »

ಕಾರು – ರಿಕ್ಷಾ ನಡುವೆ ಡಿಕ್ಕಿ | ನಾಲ್ವರಿಗೆ ಗಾಯ  

ಮೂಲ್ಕಿ: ಮಂಗಳೂರಿನಿಂದ ಮೂಲ್ಕಿ ಕಾರ್ನಾಡು ಕಡೆಗೆ ಬರುತ್ತಿದ್ದ ರಿಕ್ಷಾ ಒಂದಕ್ಕೆ ಕಾರೊಂದು ಹಿಂಬದಿಯಿಂದ ಢಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಚಾಲಕ ಸೇರಿ ನಾಲ್ವರು ಗಾಯಗೊಂಡ ಘಟನೆ ಮೂಲ್ಕಿಯ ಕೊಲ್ಲಾಡು ಹೆದ್ದಾರಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ರಿಕ್ಷಾ ಚಾಲಕ ಅಬ್ದುಲ್ ಬಶೀರ್ (35), ಪ್ರಯಾಣಿಕರಾದ ಮರಕಡದ ಶೋಭಾ (55), ಕುಂಜತ್ತಬೈಲ್‌ನ ಭವಾನಿ (65) ಮತ್ತು ಪಣಂಬೂರಿನ ವಸಂತಿ (72) ಎನ್ನಲಾಗಿದೆ. ಕಾರು ಹತೋಟಿ ಕಳೆದುಕೊಂಡು ನಿಧಾನವಾಗಿ ಮೂಲ್ಕಿಯತ್ತ ಹೋಗುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ರಿಕ್ಷಾ ಚಾಲಕ ಒಂದಷ್ಟು

ಕಾರು – ರಿಕ್ಷಾ ನಡುವೆ ಡಿಕ್ಕಿ | ನಾಲ್ವರಿಗೆ ಗಾಯ   Read More »

ಗೇರುಕಟ್ಟೆಯಲ್ಲಿ 12 ದಿನಗಳ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕಕೇಂದ್ರ ಕಛೇರಿ ತುಮಕೂರು ನೇತ್ರಾವತಿ ವಲಯ ಬೆಳ್ತಂಗಡಿ ತಾಲೂಕು ಕಳಿಯ ಶಾಖೆಯ ವತಿಯಿಂದ  ಕ್ಷೀರಸಂಗಮ ಸಭಾ ಭವನದಲ್ಲಿ 12 ದಿನಗಳ ಮಕ್ಕಳ ಚೈತನ್ಯ ಶಿಬಿರವ ಶ್ರೀ ರಾಮನವಮಿಯಂದು ಪ್ರಾರಂಭವಾಯಿತು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೇರುಕಟ್ಟೆ ಕ್ಷೀರಸಂಗಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದು,  ಶಿಬಿರದಲ್ಲಿ ಭಾಗವಹಿಸಿ  ತರಬೇತಿಯನ್ನು ಪಡೆದು  ಮಕ್ಕಳು ಸಂಸ್ಕಾರವಂತರಾಗಿ ಸಮಾಜದಲ್ಲಿ

ಗೇರುಕಟ್ಟೆಯಲ್ಲಿ 12 ದಿನಗಳ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ Read More »

ಕಾರಿನಲ್ಲಿ ಹುಚ್ಚಾಟ ಮೆರೆದ ಯುವಕರು | ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್‍

ಸುಳ್ಯ: ಸಂಪಾಜೆ ಬಳಿ ಕಾರಿನಲ್ಲಿ ಹುಚ್ಚಾಟ ಮೆರೆದ ಪ್ರಕರಣದಲ್ಲಿ ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ತಲೆಮರೆಸಿಕೊಂಡಿದ್ದಾರೆ. ಭಟ್ಕಳ ಮೂಲದ ಯುವಕರು ಕಾರಿನಲ್ಲಿ ಹುಚ್ಚಾಟ ಮೆರೆದಿರುವ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ BNS ಆಕ್ಟ್ 281 IMV ಆಕ್ಟ್ ನ 184 ಸೆಕ್ಷನ್ ಅಡಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿ ಯುವಕರು ಎಸ್ಕೆಪ್ ಆಗಿದ್ದಾರೆ. ಸಂಪಾಜೆ-ಸುಳ್ಯ ರಸ್ತೆಯಲ್ಲಿ KA09MG5880 ನಂಬರ್‌ನ ಕಾರಿನಲ್ಲಿ ಒಟ್ಟು ಏಳು ಮಂದಿ

ಕಾರಿನಲ್ಲಿ ಹುಚ್ಚಾಟ ಮೆರೆದ ಯುವಕರು | ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್‍ Read More »

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆ ಪೊಲೀಸ್‌ ಕೇಸ್‌

ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ ಎಂದು ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಹೀಗಿದ್ದರೂ ರಾಜ್ಯದ ಕೆಲ ಶಾಲೆಗಳಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಮ್ಮೆ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆ ಪೊಲೀಸ್‌ ಕೇಸ್‌ Read More »

ಈ ವಾರವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) 2025ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಈ ವಾರವೇ ಪ್ರಕಟಸುವ ನಿರೀಕ್ಷೆ ಇದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 21ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ಪತ್ರಿಕಾಗೋಷ್ಠಿ ಮೂಲಕ ಕೆಎಸ್​​ಸಿಎಬಿ ಫಲಿತಾಂಶ ಪ್ರಕಟಿಸಲಿದೆ. ಆ ನಂತರ ಆನ್​ಲೈನ್ ಮೂಲಕ ಫಲಿತಾಂಶ ವೀಕ್ಷಿಸಬಹುದು. ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶವಿದೆ. karresults.nic.in ಮತ್ತು kseab.karnataka.gov.in ಈ ಎರಡು ವೆಬ್​ಸೈಟ್​ಗಳಲ್ಲಿ ದ್ವಿತೀಯ

ಈ ವಾರವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ Read More »

error: Content is protected !!
Scroll to Top