ಸುದ್ದಿ

ರಕ್ತ ಬ್ಯಾಂಕ್‌ನಿಂದ ತಂದುಕೊಟ್ಟ ರಕ್ತದಿಂದಾಗಿ ಐವರು ಮಕ್ಕಳಿಗೆ ಎಚ್‌ಐವಿ ಸೋಂಕು

ಮಧ್ಯ ಪ್ರದೇಶ ಸರ್ಕಾರಿ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ಮಕ್ಕಳ ಜೀವನ ಸಂಕಷ್ಟ ಭೋಪಾಲ್‌ : ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ರಕ್ತದಾನ ಪಡೆದ 6 ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಭಾರಿ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ. ಥಲಸ್ಸೆಮಿಯಾದಿಂದ ಬಳಲುತ್ತಿದ್ದ 15 ವರ್ಷದೊಳಗಿನ 6 ಮಕ್ಕಳಿಗೆ ರಕ್ತ ಕೊಡುವಾಗ ವೈದ್ಯರು ಎಡವಟ್ಟು […]

ರಕ್ತ ಬ್ಯಾಂಕ್‌ನಿಂದ ತಂದುಕೊಟ್ಟ ರಕ್ತದಿಂದಾಗಿ ಐವರು ಮಕ್ಕಳಿಗೆ ಎಚ್‌ಐವಿ ಸೋಂಕು Read More »

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಪಂದ್ಯ ಆಡಿಸಲು 17 ಷರತ್ತು

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದ ಬಳಿಕ ರದ್ದಾಗಿರುವ ಅಂತಾರಾಷ್ಟ್ರೀಯ ಪಂದ್ಯಗಳು ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಗ್ರೀನ್ ಸಿಗ್ನಲ್ ದೊರೆತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಬೆಂಗಳೂರು ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಪಂದ್ಯ ಆಡಿಸಲು 17 ಷರತ್ತು Read More »

ಇನ್‌ಸ್ಟಾಗ್ರಾಂನಲ್ಲಿ ಪೊಲೀಸರ ಅವಹೇಳನ ಮಾಡಿದ ಆರೋಪಿ ಸೆರೆ

ಮಂಗಳೂರು : ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ಹಾಗೂ ಬಜಪೆ ಪೊಲೀಸರನ್ನು ಅವಹೇಳನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು, ಕಾಟಿಪಾಳ್ಳ ನಿವಾಸಿ ಅಭಿಷೇಕ್ ಎಂ(23) ಬಂಧಿತ ಆರೋಪಿ. mr_a_titude ಎಂಬ ಇನ್‌ಸ್ಟಾಗ್ರಾಮ್ ಪೇಜ್ ಮುಖಾಂತರ ಹೋಟೆಲ್ ನಿಸರ್ಗ ಎಂಬ ಫೋಟೋವನ್ನು ಹಾಕಿ ಅದರ ಮೇಲೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜಪೆ ಪೊಲೀಸರಿಂದ ರಾಜಾತಿಥ್ಯ, ದಿನಾಲೂ ನಿಸರ್ಗ ಹೋಟೆಲ್‌ನಿಂದ ಬೀಫ್ ಊಟವನ್ನು ನೀಡುತ್ತಿದ್ದಾರೆ. ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್

ಇನ್‌ಸ್ಟಾಗ್ರಾಂನಲ್ಲಿ ಪೊಲೀಸರ ಅವಹೇಳನ ಮಾಡಿದ ಆರೋಪಿ ಸೆರೆ Read More »

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ವಿದ್ಯಾರ್ಥಿ ನಾಯಕನ ಸಾವಿಗೆ ಪ್ರತಿಭಟನೆ

ಭಾರತ ವಿರೋಧಿ ಘೋಷಣೆ, ಪತ್ರಿಕಾ ಕಚೇರಿಗಳಿಗೆ ಬೆಂಕಿ ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೊಂದು ಸುತ್ತಿನ ಹಿಂಸಾಚಾರ ಶುರುವಾಗಿದೆ. ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಸಾವು ಮತ್ತೆ ಹಿಂಸಾಚಾರಕ್ಕೆ ಕಾರಣವಾಗಿದೆ. ರಾಜಧಾನಿ ಢಾಕಾದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಎಲ್ಲೆಡೆ ವಿನಾಶಕಾರಿ ಸಂಘರ್ಷ ಕಂಡುಬರುತ್ತಿದೆ. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತದ ವಿರುದ್ಧ ಚಳವಳಿಯಲ್ಲಿ ಹಾಗೂ ಭಾರತದ ವಿರೋಧಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದ ಇಂಕ್ವಿಲಾಬ್ ಮಂಚ್ ಸಂಚಾಲಕ ಷರೀಫ್‌ ಉಸ್ಮಾನ್‌ ಹದಿ ಸಿಂಗಾಪುರದಲ್ಲಿ ಸಾವನ್ನಪ್ಪಿದ್ದಾರೆ. ಹದಿ

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ವಿದ್ಯಾರ್ಥಿ ನಾಯಕನ ಸಾವಿಗೆ ಪ್ರತಿಭಟನೆ Read More »

ಕೆಎಸ್‌ಆರ್‌ಟಿಸಿ ಬಸ್ಸಿನಿಂದ 55 ಲ.ರೂ. ಕಳವು

ನಿಲ್ಲಿಸಿದ್ದ ಬಸ್‌ನಿಂದ ರಾಜಾರೋಷವಾಗಿ ಹಣ ಎತ್ತಿಕೊಂಡು ಹೋದ ಕಳ್ಳ ಬೆಂಗಳೂರು: ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ನಗದನ್ನು ಕದ್ದು ಕಳ್ಳರು ಎಸ್ಕೇಪ್​​ ಆಗಿದ್ದಾರೆ. ಕಳವಾದ ಹಣ ಉದ್ಯಮಿಯೋರ್ವರಿಗೆ ಸೇರಿದ್ದು ಎನ್ನಲಾಗಿದೆ. ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಟಿದ್ದ ಕೆಎಸ್​​ಆರ್​ಟಿಸಿ ಬಸ್ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ನಿಂತಿತ್ತು. ಊಟ ಮಾಡಿ ಬರುವಷ್ಟರಲ್ಲಿ ಸೀಟ್​​ನಲ್ಲಿ ಇಟ್ಟಿದ್ದ ಹಣದ ಬ್ಯಾಗ್​​ ನಾಪತ್ತೆಯಾಗಿದೆ. ಕಳವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ

ಕೆಎಸ್‌ಆರ್‌ಟಿಸಿ ಬಸ್ಸಿನಿಂದ 55 ಲ.ರೂ. ಕಳವು Read More »

ಮೊಟ್ಟೆಯಲ್ಲಿಲ್ಲ ಕ್ಯಾನ್ಸರ್‌ಕಾರಕ ಅಂಶ : ತಿನ್ನಲು ಸಂಪೂರ್ಣ ಸುರಕ್ಷಿತ

ಮೊಟ್ಟೆ ತಿಂದರೆ ಕ್ಯಾನ್ಸರ್‌ ಬರಬಹುದು ಎಂಬುದೆಲ್ಲ ಸುಳ್ಳು ಸುದ್ದಿ ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವದಂತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೆರೆ ಎಳೆದಿದ್ದಾರೆ. ಯಾವುದೇ ಕ್ಯಾನ್ಸರ್ ಕಾರಕ ಅಂಶವಿಲ್ಲ. ಮೊಟ್ಟೆಯ ಬಗ್ಗೆ ಯಾರೂ ಆತಂಕಪಡಬೇಕಿಲ್ಲ, ತಿನ್ನಲು ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಮೊಟ್ಟೆಯ ಬಗ್ಗೆ ಕೆಲವೊಂದು ಮಾಹಿತಿಗಳು ಕೇಳಿಬರುತ್ತಿವೆ. ಈ ಬಗ್ಗೆ ಆರೋಗ್ಯ ಸಚಿವರು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.

ಮೊಟ್ಟೆಯಲ್ಲಿಲ್ಲ ಕ್ಯಾನ್ಸರ್‌ಕಾರಕ ಅಂಶ : ತಿನ್ನಲು ಸಂಪೂರ್ಣ ಸುರಕ್ಷಿತ Read More »

ಇಂದು ಅಹಮದಾಬಾದ್‌ನಲ್ಲಿ ಕೊನೆಯ ಟಿ20 ಪಂದ್ಯ

ಸರಣಿ ಗೆಲುವಿಗೆ ಟೀಮ್‌ ಇಂಡಿಯಾ ಪ್ರಯತ್ನ ; ಸಮಬಲಗೊಳಿಸುವ ತವಕದಲ್ಲಿ ದಕ್ಷಿಣ ಆಫ್ರಿಕಾ ಅಹಮದಾಬಾದ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ಸರಣಿ ಗೆಲ್ಲುವ ತವಕದಲ್ಲಿದೆ. ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಗೊಳಿಸಲು ಯತ್ನಿಸಲಿದೆ. ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಲಖನೌ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪ್ರಸ್ತುತ ಸರಣಿಯ 4ನೇ ಪಂದ್ಯವು ಭಾರಿ ಮಂಜಿನಿಂದಾಗಿ

ಇಂದು ಅಹಮದಾಬಾದ್‌ನಲ್ಲಿ ಕೊನೆಯ ಟಿ20 ಪಂದ್ಯ Read More »

ಬಿಪಿಎಲ್‌ ಕಾರ್ಡ್‌ ಆದಾಯ ಮಿತಿ ಹೆಚ್ಚಳಕ್ಕೆ ಚಿಂತನೆ

ಈಗಿರುವ 1.20 ಲ.ರೂ.ನಿಂದ ಹೆಚ್ಚಿಸುವ ಕುರಿತು ಸಚಿವರಿಂದ ಮಾಹಿತಿ ಬೆಳಗಾವಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಆಹಾರ ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್​​ದಾರರ ಆದಾಯವನ್ನು 1.20ಲಕ್ಷ ರೂ.ಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ದೊರೆಯುತ್ತದೆ. ಇದರ ಆಧಾರದಲ್ಲಿ ಅವರ ಆದಾಯವೂ ವರ್ಷಕ್ಕೆ 1.80 ಲಕ್ಷ ರೂ.ಗಿಂತ

ಬಿಪಿಎಲ್‌ ಕಾರ್ಡ್‌ ಆದಾಯ ಮಿತಿ ಹೆಚ್ಚಳಕ್ಕೆ ಚಿಂತನೆ Read More »

ಪಾಕ್ ಪರ ಘೋಷಣೆ ಆರೋಪದ ಕೇಸುಗಳ ಬಗ್ಗೆ ಗೃಹಸಚಿವರು ಹೇಳಿದ್ದೇನು ಗೊತ್ತಾ?

ಬೆಳಗಾವಿ: ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪಾಕ್ ಪರ ಘೋಷಣೆ ಕೂಡಿರುವ ಆರೋಪದಲ್ಲಿ 12 ಪ್ರಕರಣಗಳು ದಾಖಲಾಗಿವೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ವಿಧಾನ ಸಭಾ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2023 ರಿಂದ 2025 ಅವಧಿಯಲ್ಲಿ 12 ಕೇಸ್ ಪಾಕಿಸ್ತಾನ ಜಿಂದಾಬಾದ್ ಕೂಗಿದ ಸಂಬಂಧ ಸ್ವಯಂ ಪ್ರೇರಿತ ದೂರು ಮತ್ತು ದೂರಿನ ಆಧಾರದಲ್ಲಿ ಕೇಸ್ ದಾಖಲು ಮಾಡಲಾಗಿದೆ. 12 ಕೇಸ್ ನಲ್ಲಿ 5 ಕೇಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. 2

ಪಾಕ್ ಪರ ಘೋಷಣೆ ಆರೋಪದ ಕೇಸುಗಳ ಬಗ್ಗೆ ಗೃಹಸಚಿವರು ಹೇಳಿದ್ದೇನು ಗೊತ್ತಾ? Read More »

ಶಾಸಕ ಅಶೋಕ್ ರೈ ‌ಗೆ ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಬ್ಯಾನರ್ ಛಿದ್ರ: ದೂರು ದಾಖಲು

ಪುತ್ತೂರು: ಶಾಸಕ‌ ಅಶೋಕ್ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ಹರಿದು ಹಾಕಲಾಗಿದ್ದು, ಈ ಸಂಬಂಧ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿಯವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ನಡುವಾಲ್‌ ಎಂಬಲ್ಲಿಗೆ ರಸ್ತೆ ಸಂಪರ್ಕ ಇರಲಿಲ್ಲ. ಅಶೋಕ್‌ ರೈ ಅವರು ಸ್ಥಳೀಯರ ಜೊತೆ ಮಾತುಕತೆ ನಡೆಸಿ ಪುರುಷರ ಕಟ್ಟೆ – ಶಿಬರ – ನಡುವಾಲ್‌ಗೆ ರಸ್ತೆ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಇದಕ್ಕಾಗಿ 5 ಲಕ್ಷ ರೂ. ಅನುದಾನ ಸಹ

ಶಾಸಕ ಅಶೋಕ್ ರೈ ‌ಗೆ ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಬ್ಯಾನರ್ ಛಿದ್ರ: ದೂರು ದಾಖಲು Read More »

error: Content is protected !!
Scroll to Top