ತಸ್ಲೀಮ್ ಮೃತದೇಹ ಮೇಲೆತ್ತಿದ ಈಶ್ವರ್ ಮಲ್ಪೆ | ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಮತ್ತೊಂದು ಸೇವಾ ಕಾರ್ಯ
ಪುತ್ತೂರು: ಡಾ. ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಪ್ರಶಸ್ತಿಯನ್ನು ಸ್ವೀಕರಿಸಿ ಇನ್ನೂ ಗಂಟೆ ಸರಿದಿರಲಿಲ್ಲ. ಅಷ್ಟರಲ್ಲೇ ಆಪದ್ಭಾಂಧವ ಈಶ್ವರ್ ಮಲ್ಪೆ ಅವರ ಮೊಬೈಲ್’ಗೆ ಕರೆ ಬಂದಾಗಿತ್ತು. ಪುತ್ತೂರು ತಾಲೂಕಿನ ಮಾಡಾವು ಸಮೀಪದ ಗೌರಿ ಹೊಳೆಯಲ್ಲಿ 17 ವರ್ಷದ ನವತರುಣ ತಸ್ಲೀಮ್ ಎಂಬ ಯುವಕ ನಾಪತ್ತೆಯಾಗಿದ್ದಾನೆ. ಗೆಳೆಯರ ಜೊತೆ ಈಜಲು ತೆರಳಿದ್ದು, ಇದುವರೆಗೆ ಮರಳಿ ಬಂದಿಲ್ಲ. ನೀರಿನ ಸೆಳೆತ ಹೆಚ್ಚಿರುವುದರಿಂದ ಅಪಾಯ ಸಂಭವಿಸಿರುವ ಸಾಧ್ಯತೆಯೇ ಅಧಿಕ. ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ ಎಂಬ ಸಂದೇಶ ಬಂದಾಗಿತ್ತು. ಬೆಂಗಳೂರಿನಲ್ಲಿ ಪ್ರಶಸ್ತಿ […]