ಸುದ್ದಿ

ಫೆ.17ರಿಂದ ಹೊಸ ರೂಪದಲ್ಲಿ ಮತ್ಸ್ಯಗಂಧ ರೈಲು : ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ ಅಳವಡಿಕೆ

ಶಬ್ದ ಕಡಿಮೆ, ಅಪಘಾತವಾದರೂ ಪ್ರಯಾಣಿಕರಿಗೆ ಹಾನಿಯಿಲ್ಲ ಮಾ.1ರಿಂದ ಮಂಗಳೂರು ಎಕ್ಸ್‌ಪ್ರೆಸ್‌ ರೈಲಿಗೂ ಅತ್ಯಾಧುನಿಕ ಕೋಚ್‌ ಅಳವಡಿಕೆ ಉಡುಪಿ : ಕರಾವಳಿ ಕರ್ನಾಟಕ ಮತ್ತು ಮುಂಬಯಿ ನಡುವಿನ ಸಂಪರ್ಕ ಕೊಂಡಿಯಾಗಿರುವ ಮತ್ಸ್ಯಗಂಧ ರೈಲಿಗೆ ಫೆ.17ರಿಂದ ಹೊಸ ರೂಪ ಪಡೆದು ಓಡಲಿದೆ. ಜನರ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್ ಅಳವಡಿಸಲಿದೆ. ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಪ್ರಯಾಣಿಕರು ಯಾವುದೇ ಹಾನಿ ಸಂಭವಿಸದೆ ಸುರಕ್ಷಿತರಾಗಿರುತ್ತಾರೆ. ಎಷ್ಟೇ ತೀವ್ರ […]

ಫೆ.17ರಿಂದ ಹೊಸ ರೂಪದಲ್ಲಿ ಮತ್ಸ್ಯಗಂಧ ರೈಲು : ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ ಅಳವಡಿಕೆ Read More »

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಣ : ಎಸ್‌ಐಟಿಯಿಂದ ನಾಲ್ವರ ಬಂಧನ

ಪ್ರಸಿದ್ಧ ಡೈರಿಗಳ ಮಾಲೀಕರನ್ನು ಬಂಧಿಸಿ ವಿಚಾರಣೆ ತಿರುಪತಿ: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲದಲ್ಲಿ ನಡೆದಿದೆ ಎನ್ನಲಾದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಣ : ಎಸ್‌ಐಟಿಯಿಂದ ನಾಲ್ವರ ಬಂಧನ Read More »

ಭದ್ರತಾ ಪಡೆ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ

ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 12 ನಕ್ಸಲರು ಹತರಾಗಿದ್ದಾರೆ. ಇದರೊಂದಿಗೆ ನಕ್ಸಲ್‌ ನಿಗ್ರಹ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ಮತ್ತೊಂದು ಜಯ ಲಭಿಸಿದೆ. ಕಳೆದ ವಾರವಷ್ಟೇ ಎಂಟು ನಕ್ಸಲರು ಗುಂಡಿಗೆ ಬಲಿಯಾದ ಬೆನ್ನಿಗೆ ಈ ಎನ್‌ಕೌಂಟರ್ ನಡೆದಿದೆ. ಜನವರಿ 31 ರಂದು ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದು ಎಂಟು ಮಾವೋವಾದಿಗಳು ಸಾವನ್ನಪ್ಪಿದ್ದರು.ಪಶ್ಚಿಮ ಬಸ್ತಾರ್​ನಲ್ಲಿ ನಕ್ಸಲರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಶುಕ್ರವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾ

ಭದ್ರತಾ ಪಡೆ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ Read More »

ಕೋಳಿ ಸಾಗಿಸುತ್ತಿದ್ದ ವಾಹನ ಪಲ್ಟಿ

ಬದುಕುಳಿದ ಕೋಳಿಗಳನ್ನು ಎತ್ತಿಕೊಂಡು ಹೋದ ಸ್ಥಳೀಯರು ಬಂಟ್ವಾಳ : ತಾಲೂಕಿನ ಕಾಲೆಜಿಮಲೆ ಮೀಸಲು ಅರಣ್ಯದ ಒಳರಸ್ತೆಯಲ್ಲಿ ಕೋಳಿ ಸಾಗಾಟದ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕಿಸುವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.ತಮಿಳುನಾಡು ನೋಂದಣಿಯ ಪಿಕಪ್ ವಾಹನ ಕನ್ಯಾನ ಜಂಕ್ಷನ್‌ನಿಂದ ಹೊರಟು ಕಾಲೆಜಿಮಲೆ ಮೀಸಲು ಅರಣ್ಯದ ಮೂಲಕ ಕಡಿದಾದ ಗುಡ್ಡಗಾಡು ರಸ್ತೆಯಲ್ಲಿ ಚಲಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಿಕಪ್ ರಸ್ತೆ ಬದಿ ಪಲ್ಟಿಯಾಗಿದೆ.ಅಪಘಾತದಲ್ಲಿ

ಕೋಳಿ ಸಾಗಿಸುತ್ತಿದ್ದ ವಾಹನ ಪಲ್ಟಿ Read More »

ನಾಳೆಯಿಂದ ಬೆಂಗಳೂರಿನಲ್ಲಿ ಏರ್‌ಶೋ

ರೋಮಾಂಚನಕಾರಿ ವೈಮಾನಿಕ ಪ್ರದರ್ಶನ ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ 15ನೇ ಆವೃತ್ತಿಯ ಏರೋ ಇಂಡಿಯಾ ಶೋ ಆರಂಭವಾಗಲಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನಿರೀಕ್ಷೆಗಳನ್ನು ಹುಟ್ಟಿಸಿದೆ.ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಧ್ಯೇಯದೊಂದಿಗೆ 5 ದಿನ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. ಫೆಬ್ರವರಿ 10ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ. ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ

ನಾಳೆಯಿಂದ ಬೆಂಗಳೂರಿನಲ್ಲಿ ಏರ್‌ಶೋ Read More »

ಮಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ವಿವಿ ಸ್ಥಾಪನೆ : ವೀರಪ್ಪ ಮೊಯ್ಲಿ ಒತ್ತಾಯ

ಬಜೆಟ್‌ನಲ್ಲಿ ಘೋಷಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಬೆಂಗಳೂರು: ರಾಜ್ಯದ ಎರಡನೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮೊಯ್ಲಿ, ಬೆಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕಾನೂನು ಶಾಲೆ ಎನ್‌ಎಲ್‌ಎಸ್‌ಐಯು ಸ್ಥಾಪಿಸಲು ಕ್ರಮಗಳ ಕೈಗೊಂಡಿದ್ದೆ. ಇದು ಅತ್ಯಂತ ಯಶಸ್ವಿ ಪ್ರಯೋಗವಾಗಿದ್ದು, ಇಂದು ಭಾರತದಲ್ಲಿ 27 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿವೆ. ಕೆಲವು ರಾಜ್ಯಗಳು ಒಂದಕ್ಕಿಂತ ಹೆಚ್ಚು ರಾಷ್ಟ್ರೀಯ ಕಾನೂನು

ಮಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ವಿವಿ ಸ್ಥಾಪನೆ : ವೀರಪ್ಪ ಮೊಯ್ಲಿ ಒತ್ತಾಯ Read More »

ಯಕ್ಷಗಾನ ಸ್ತ್ರೀ ವೇಷಧಾರಿಯ ಹನಿಟ್ರ್ಯಾಪ್‌ ಬಲೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಅರ್ಚಕ

ರಾತೋರಾತ್ರಿ ಕಲಾವಿದನನ್ನು ಬಂಧಿಸಿ ಕರೆದೊಯ್ದ ಕಾಸರಗೋಡು ಪೊಲೀಸರು ಮಂಗಳೂರು: ಯಕ್ಷಗಾನದ ಪ್ರಸಿದ್ಧ ಸ್ತ್ರೀ ವೇಷಧಾರಿಯೊಬ್ಬರು ಕಾಸರಗೋಡಿನ ಸಮೀಪದ ಅರ್ಚಕರೊಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ 10 ಲಕ್ಷಕ್ಕೂ ಅಧಿಕ ಹಣ ವಸೂಲು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ. ಪ್ರಸಿದ್ಧ ಮೇಳಗಳಲ್ಲಿ ಸ್ತ್ರೀ ಪಾತ್ರ ನಿರ್ವಹಣೆ ಮಾಡುತ್ತಿದ್ದ ಅಶ್ವಥ್‌ ಆಚಾರ್ಯ ಆರೋಪಿ ಎನ್ನಲಾಗಿದೆ.ಯಕ್ಷಗಾನ ಕಲಾವಿದನೊಬ್ಬ ಎಸಗಿರುವ ಈ ಕೃತ್ಯದಿಂದ ಇಡೀ ಯಕ್ಷಗಾನ ಲೋಕವೇ ತಲೆತಗ್ಗಿಸುವಂತೆ ಆಗಿದೆ ಎಂದು ಅನೇಕರು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.ಅಶ್ವಥ್‌ ಆಚಾರ್ಯ ಫೇಸ್‌ಬುಕ್‌ನಲ್ಲಿ ಕಾಸರಗೋಡು ಸಮೀಪದ

ಯಕ್ಷಗಾನ ಸ್ತ್ರೀ ವೇಷಧಾರಿಯ ಹನಿಟ್ರ್ಯಾಪ್‌ ಬಲೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಅರ್ಚಕ Read More »

ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ

ಬೆಳ್ತಂಗಡಿ : ಉಜಿರೆಯ ಎಸ್.ಡಿ.ಯಂ ಮಹಾವಿದ್ಯಾಲಯದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ| ಹಾಮಾನಾ ಸಂಶೋಧನಾ ಕೇಂದ್ರದ ಅಭ್ಯರ್ಥಿ ಸುವೀರ್ ಜೈನ್ ಅವರಿಗೆ ಪಿಎಚ್.ಡಿ ಪದವಿ ದೊರೆತಿದೆ. ಇವರು ಡಾ.ಎ.ಜಯಕುಮಾರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಮತ್ತು ಅಭಿವೃದ್ಧಿ- ರುಡ್‍ ಸೆಟ್‍ ನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಮಹಾಪ್ರಬಂಧ ರಚಿಸಿ ವಿಶ್ವವಿದ್ಯಾಲಯಕ್ಕೆ ಮಂಡನೆ ಮಾಡಿದ್ದರು. ಪ್ರಸ್ತುತ ಇವರು ಎಸ್.ಡಿ.ಯಂ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ B.voc ವಿಭಾಗದ

ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ Read More »

ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ : ಇಂಡಿ ಮೈತ್ರಿಕೂಟಕ್ಕೆ ಓಮರ್‌ ಅಬ್ದುಲ್ಲ ಲೇವಡಿ

ಸೋಲು-ಗೆಲುವಿನ ನಡುವೆ ಹೊಯ್ದಾಡುತ್ತಿರುವ ಅರವಿಂದ ಕೇಜ್ರಿವಾಲ್‌ ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಪರಾಭವ ಬಹುತೇಕ ನಿಶ್ಚಿತಗೊಂಡಿರುವಂತೆ ಕಾಂಗ್ರೆಸ್‌ ಮತ್ತು ಆಪ್‌ ವಿರುದ್ಧ ಇಂಡಿ ಮೈತ್ರಿಕೂಟದ ಮಿತ್ರಪಕ್ಷಗಳು ಕೆಂಡ ಕಾರತೊಡಗಿವೆ. ಇಂಡಿ ಭಾಗವಾಗಿರುವ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲ ಆಪ್‌ ಮೇಲೆ ಸೋಲಿನ ಕರಿಮೋಡ ಕವಿಯುತ್ತಿರುವಂತೆಯೇ ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ ಎಂದು ಲೇವಡಿ ಮಾಡಿದ್ದಾರೆ.ದಿಲ್ಲಿ ಚುನಾವಣೆಯಲ್ಲಿ ಇಂಡಿ ಮಿತ್ರಪಕ್ಷಗಳಾದ ಕಾಂಗ್ರೆಸ್‌ ಮತ್ತು ಆಪ್‌ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮಾತ್ರವಲ್ಲದೆ ಪ್ರಚಾರದ ವೇಳೆ ಸಾಕಷ್ಟು ಕಿತ್ತಾಡಿಕೊಂಡಿದ್ದವು. ಈ

ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ : ಇಂಡಿ ಮೈತ್ರಿಕೂಟಕ್ಕೆ ಓಮರ್‌ ಅಬ್ದುಲ್ಲ ಲೇವಡಿ Read More »

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ

ಸುಳ್ಯ : ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರು, ಹಾಗೂ ಎನ್ನೆಂಸಿಯ ಉಪನ್ಯಾಸಕರೂ  ಆದ  ಡಾ. ಅನುರಾಧಾ ಕುರುಂಜಿ ಯವರು ಕರ್ನಾಟಕ‌ ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಎನ್ ಎಸ್ ಎಸ್ ಕೋಶ ಮತ್ತು ಮಂಗಳೂರಿನ ಯೇನೆಪೋಯ ಡೀಮ್ಡ್ ವಿಶ್ವ‌ವಿದ್ಯಾಲಯದ ಸಹಯೋಗದಲ್ಲಿ  ಫೆ 3 ರಿಂದ 7 ರವರೆಗೆ ಏನೇಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ  ರಾಜ್ಯದ  ವಿವಿಧ ಪದವಿ, ಮೆಡಿಕಲ್ , ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಪದವಿ

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ Read More »

error: Content is protected !!
Scroll to Top