ನಿಧನ

ಅನಾರೋಗ್ಯಕ್ಕೀಡಾಗಿ ರಾದೀಪ್ ಪೂಜಾರಿ ಮೃತ್ಯು

ವಿಟ್ಲ: ಅನಾರೋಗ್ಯಕ್ಕೀಡಾಗಿ ಮೂಡಂಬೈಲು ಬೊಳಂತಿಮೊಗೇರು ನಿವಾಸಿ, ರಾದೀಪ್‌ ಪೂಜಾರಿ (38) ಇಂದು ನಿಧನರಾದರು. ಕೃಷಿ ಮತ್ತು ಕೋಳಿ ಫಾರ್ಮ್ ನಡೆಸುತ್ತಿದ್ದ ರಾದೀಪ್‌ ಪೂಜಾರಿ ಅವರು ಕ್ರೀಡೆಯಲ್ಲಿಯೂ ಗುರುತಿಸಿಕೊಂಡಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಮೃತರು ಪತ್ನಿ, ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅನಾರೋಗ್ಯಕ್ಕೀಡಾಗಿ ರಾದೀಪ್ ಪೂಜಾರಿ ಮೃತ್ಯು Read More »

ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ ಬಪ್ಪಳಿಗೆ ನಿಧನ

ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಬಪ್ಪಳಿಗೆ ಅನಾರೋಗ್ಯಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಕ್ರಿಕೆಟ್ ಪಟುವಾಗಿ ಗುರಿತಿಸಿಕೊಂಡಿದ್ದ ಅವರು, ನಿನ್ನೆ ಅಸೌಖ್ಯಕ್ಕೊಳಗಾಗಿದ್ದರು. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ತಂದೆ ಹಾಗೂ ಇಬ್ಬರು ಸಹೋದರರನ್ನ ಅಗಲಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ ಬಪ್ಪಳಿಗೆ ನಿಧನ Read More »

ಅನಾರೋಗ್ಯಕ್ಕೀಡಾಗಿ ಬಾಲಕಿ ಮೃತ್ಯು

ಬೆಳ್ತಂಗಡಿ : ಅನಾರೋಗ್ಯದಿಂದಾಗಿ ಬಾಲಕಿ ಸಾವನ್ನಪ್ಪಿದ ಘಟನೆ ಶಿಶಿಲ ಗ್ರಾಮದ ಪೆರಿಕೆ ಎಂಬಲ್ಲಿ ನಡೆದಿದೆ. ಕೃಷ್ಣಪ್ಪ ಮಲೆಕುಡಿಯ ಮತ್ತು ಸುನಂದಾ ದಂಪತಿಯ ಪುತ್ರಿ ಸುಪ್ರೀತಾ (16) ಮೃತ ಬಾಲಕಿ. ಸುಪ್ರೀತಾ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು.  ಜು. 9 ರಂದು ಆಕೆಯ ಆರೋಗ್ಯ ತೀವ್ರ ಹದಗೆಟ್ಟಿದ್ದು, ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಮನೆಗೆ ಹಿಂದಿರುಗುವ ಮಾರ್ಗ ಮಧ್ಯೆ ಆಕೆ ಪ್ರಜ್ಞಾಹೀನಳಾಗಿದ್ದಳು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು

ಅನಾರೋಗ್ಯಕ್ಕೀಡಾಗಿ ಬಾಲಕಿ ಮೃತ್ಯು Read More »

ಯಕ್ಷಗಾನ ಕಲಾವಿದ ಶ್ರೀಧರ ರಾವ್ ನಿಧನ

ಪುತ್ತೂರು : ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತಕ್ಕೀಡಾಗಿ ಜುಲೈ 5ರಂದು ನಿಧನರಾಗಿದ್ದಾರೆ. 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕುಂಬ್ಳೆ ಶ್ರೀಧರ ರಾವ್ ಪರಿಚಯ: 1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ ರಾವ್ ರವರು 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ

ಯಕ್ಷಗಾನ ಕಲಾವಿದ ಶ್ರೀಧರ ರಾವ್ ನಿಧನ Read More »

ನಿವೃತ್ತ ಭಾರತೀಯ ನೌಕಾಪಡೆ ಉದ್ಯೋಗಿ ಬಾಲಕೃಷ್ಣ ನಾಯ್ಕ ನಿಧನ

ಪುತ್ತೂರು: ನಿವೃತ್ತ ಭಾರತೀಯ ನೌಕಾಪಡೆಯ ಉದ್ಯೋಗಿ, ಕಲ್ಲಾರೆ ನಿವಾಸಿ ಬಾಲಕೃಷ್ಣ ನಾಯ್ಕ  (68) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಭಾರತೀಯ ನೌಕಾಪಡೆಯು ಸಬ್‍ ಮೆಷಿನರಿಯಲ್ಲಿ ಉದ್ಯೋಗಿಯಾಗಿದ್ದ ಅವರು ನಿವೃತ್ತರಾಗಿ 16 ವರ್ಷಗಳು ಕಳೆದಿದ್ದವು. ಇಂದು ಮಧ್ಯಾಹ್ನ ಮನೆಯಲ್ಲಿ ಹಠಾತ್ತನೇ ಕುಸಿದು ಬಿದ್ದು ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

ನಿವೃತ್ತ ಭಾರತೀಯ ನೌಕಾಪಡೆ ಉದ್ಯೋಗಿ ಬಾಲಕೃಷ್ಣ ನಾಯ್ಕ ನಿಧನ Read More »

ಡೆಂಗ್ಯೂ: 13 ವರ್ಷದ ಬಾಲಕಿ ಮೃತ್ಯು

ಹಾಸನ: ತಾಲೂಕಿನ ಬೊಮ್ಮನಾಯಕಹಳ್ಳಿ ಗ್ರಾಮದ 13 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ. ಅಕ್ಷತಾ (13) ಮೃತ ಬಾಲಕಿ, ಕೂಲಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿ ಪುತ್ರಿ ಅಕ್ಷತಾ, ಹಾಸನದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದರು. ಕಳೆದ ಬುಧವಾರ ಜ್ವರಕ್ಕೆ ತುತ್ತಾಗಿದ್ದ ಈಕೆಗೆ ಬೊಮ್ಮನಾಯಕಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಬಾಲಕಿ ಗುಣಮುಖಳಾಗದೇ ಇದ್ದ ಕಾರಣ ಪೋಷಕರು ಆಕೆಯನ್ನ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಅಕ್ಷತಾ

ಡೆಂಗ್ಯೂ: 13 ವರ್ಷದ ಬಾಲಕಿ ಮೃತ್ಯು Read More »

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ,ಮಾಜಿ, ಸಚಿವ  ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಕೋಟತಟ್ಟು ಬಾರಿಕೆರೆ ನಿವಾಸಿ ಲಚ್ಚಿ ಪೂಜಾರಿ (97) ಭಾನುವಾರ ನಿಧನ ಹೊಂದಿದರು. ಇವರು ಉತ್ತಮ ಕೃಷಿಕರಾಗಿದ್ದರು .ಪೂಜಾರಿ ಅವರು ತನ್ನ ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಪ್ರತಿ ಸಂದರ್ಭ ತಾಯಿ ವಾಸವಿರುವ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಚುನಾವಣೆಯಲ್ಲೂ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಸಹಿತ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಂದಾಪುರ ಶಾಸಕ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃವಿಯೋಗ Read More »

ಮಧುರಾ ಬೀಡಿ ಉದ್ಯಮಿ ಡಿ.ಎ.ಅಬ್ದುಲ್ ಖಾದರ್ ನಿಧನ

ಪುತ್ತೂರು: ಮಧುರಾ ಬೀಡಿ ಉದ್ಯಮಿ, ಮರಿಲ್ ನಿವಾಸಿ ಡಿ.ಎ ಅಬ್ದುಲ್ ಖಾದರ್ (81) ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರಳದಿದ್ದಾರೆ. ಮಧುರಾ ಗ್ರೂಪ್ ನ ಸ್ಥಾಪಕರಾಗಿರುವ ಡಿ ಎ ಅಬ್ದುಲ್ ಖಾದರ್ ಮಧುರಾ ಎಜ್ಯುಕೇಶನಲ್ ಟ್ರಸ್ಟ್ ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕೂರ್ನಡ್ಕ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ,ಪುತ್ರಿಯರು, ಇಬ್ಬರು ಗಂಡು

ಮಧುರಾ ಬೀಡಿ ಉದ್ಯಮಿ ಡಿ.ಎ.ಅಬ್ದುಲ್ ಖಾದರ್ ನಿಧನ Read More »

ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ ನಿಧನ

ಬೆಂಗಳೂರು: ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ (48) ಬೆಂಗಳೂರಿನಲ್ಲಿ ಇಂದು ನಿಧನರಾದರು. ಹಂಸ ಮೊಯ್ಲಿ ಅವರು ಭರತನಾಟ್ಯ, ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಅವರು ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ಶೃಂಗಾರಂನಲ್ಲಿ ನಟಿಸಿದ್ದರು. ಪುತ್ರಿಯ ನಿಧನದ ಸುದ್ದಿ ತಿಳಿದಂತ ಮಾಜಿ ಸಿಎಂ ವೀರಪ್ಪ ಮೊಯ್ಲಿ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಮಯಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಒರ್ವ ಅದ್ಭುತ ಕಲಾವಿದೆಯನ್ನು

ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ ನಿಧನ Read More »

ಸಾಮಾಜಿಕ ಧುರೀಣ, ಮಾಜಿ ಕ್ಯಾಂಪ್ಕೋ ಅಧ್ಯಕ್ಷ ಎಲ್‍.ಎನ್‍.ಕುಡೂರು ನಿಧನ

ವಿಟ್ಲ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಎಲ್.ಎನ್.ಕೂಡೂರು (67) ಇಂದು ಮುಂಜಾನೆ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಎಲ್‍.ಎನ್‍.ಕುಡೂರು ಅವರು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ದೇಗುಲದ ಬ್ರಹ್ಮಕಲಶ ಸಂಭ್ರಮದ ರೂವಾರಿಯಾಗಿ ಜನಪ್ರಿಯ ಪಡೆದಿದ್ದರು. ಕ್ಯಾಂಪೊ ಅಧ್ಯಕ್ಷರಾಗಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ವಿಟ್ಲ ಬಸವನಗುಡಿ ವಿಟ್ಟಲ್ ಜೇಸೀಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ, ವಿಟ್ಟಲ ವಿದ್ಯಾ ಸಂಘದ ಸಂಚಾಲಕರಾಗಿ

ಸಾಮಾಜಿಕ ಧುರೀಣ, ಮಾಜಿ ಕ್ಯಾಂಪ್ಕೋ ಅಧ್ಯಕ್ಷ ಎಲ್‍.ಎನ್‍.ಕುಡೂರು ನಿಧನ Read More »

error: Content is protected !!
Scroll to Top