ನಿಧನ

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು

ಸುಳ್ಯ : ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಹೋಟೆಲ್ ವೊಂದರಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ರಾತ್ರಿ ಮಲಗಿದಲ್ಲೇ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಶಬರಿಮಲೆಯ ಪಂದಳದಿಂದ ಬಂದು ಕಲ್ಲುಗುಂಡಿಯ ಹೋಟೆಲ್ ನಲ್ಲಿ ಕೆಲಸ ನಿರತನಾಗಿದ್ದ ವಿಶ್ವನಾಥ ಎಂಬ ವ್ಯಕ್ತಿ ಸಾವಿಗೀಡಾಗಿರುವ ನತದೃಷ್ಟ. ಈತ ರಾತ್ರಿ ಹೋಟೆಲ್ ನಲ್ಲಿ ಚೆನ್ನಾಗಿಯೇ ಕೆಲಸ ಮಾಡಿಕೊಂಡು ಇದ್ದ. ಆದರೆ ಊಟ ಮಾಡಿ ಮಲಗಿದವ ಬೆಳಗ್ಗಿನ ಸಮಯದಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ […]

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು Read More »

ಅನಾರೋಗ್ಯದಿಂದ ಯುವಕ ನಿಧನ

ಬಂಟ್ವಾಳ : ಯುವಕನೋರ್ವ ಅನಾರೋಗ್ಯದಿಂದ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಕುತ್ತಾರು ಎಂಬಲ್ಲಿ ನಡೆದಿದೆ. ಬಾಯಾರು ನಿವಾಸಿ ಮೌನೇಶ್ ಜೋಗಿ (24) ಮೃತಪಟ್ಟ ಯುವಕ. ನೇಮಕ್ಕೆ ಹೋಗಿ ಬಂದು ಕುತ್ತಾರು ಬಾಡಿಗೆ ಮನೆಯಲ್ಲಿ ಮಲಗಿದ್ದ ಮೌನೇಶ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅನಾರೋಗ್ಯದಿಂದ ಯುವಕ ನಿಧನ Read More »

ಕ್ರಿಕೆಟ್ ಪಂದ್ಯಾಟದ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್‍ : ಯುವಕ ಆರಿಫ್ ಮೃತ್ಯು

ಕೊಡಗು: ಕ್ರಿಕೆಟ್ ಪಂದ್ಯಾಟದ ಬ್ಯಾನ‌ರ್ ಕಟ್ಟುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಕೊಡಗಿನ ಮೂರ್ನಾಡು ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೂರ್ನಾಡು ನಿವಾಸಿ ಆರಿಫ್ (34) ವಿದ್ಯುತ್ ಶಾಕ್‍ ನಿಂದ ಮೃತಪಟ್ಟ ಯುವಕ. ಮೂರ್ನಾಡಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾಟಕ್ಕೆಂದು ಯುವಕರ ತಂಡ ಶುಕ್ರವಾರ ರಾತ್ರಿ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಬ್ಯಾನ‌ರ್ ಕಟ್ಟುತ್ತಿದ್ದ ವೇಳೆ ಆರಿಫ್ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ವೇಳೆ

ಕ್ರಿಕೆಟ್ ಪಂದ್ಯಾಟದ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್‍ : ಯುವಕ ಆರಿಫ್ ಮೃತ್ಯು Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆ ಸೇವಾ ವಾದಕ ಆನಂದ ದೇವಾಡಿಗ ನಿಧನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆವಾದಕ, ಆಲಂಕಾರು ನಿವಾಸಿ ಆನಂದ ದೇವಾಡಿಗ (50) ಶುಕ್ರವಾರ ರಾತ್ರಿ ನಿಧನರಾದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 28 ವರ್ಷಗಳಿಂದ ಚೆಂಡೆ ಸೇವಾ ವಾದಕರಾಗಿದ್ದ ಅವರು, ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆ ಸೇವಾ ವಾದಕ ಆನಂದ ದೇವಾಡಿಗ ನಿಧನ Read More »

ಆಟೋ ರಿಕ್ಷಾ ಡಿಕ್ಕಿ : ಪಾದಚಾರಿ ಸೂರ್ಯನಾರಾಯಣ ಕಾರಂತ್ ಮೃತ್ಯು

ಪುತ್ತೂರು : ಪುತ್ತೂರು ಸಂಪ್ಯದಲ್ಲಿ  ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ ಮೇ 9 ರಂದು ನಡೆದಿದೆ. ನಿವೃತ್ತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಭಟ್ (80 ವ)  ಅವರು ಪುತ್ತೂರು ಸಂಪ್ಯದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಗರ್ಬಿಣಿಯೊಬ್ವರನ್ನು ತಿಂಗಳ ಪರೀಕ್ಷೆಗೆಂದು ಕರೆದು ಕೊಂಡು ಬರುತ್ತಿದ್ದ ಆಟೋ ರಿಕ್ಷಾವೊಂದು ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸೂರ್ಯನಾರಾಯಣ ಅವರು ರಸ್ತೆಗೆ

ಆಟೋ ರಿಕ್ಷಾ ಡಿಕ್ಕಿ : ಪಾದಚಾರಿ ಸೂರ್ಯನಾರಾಯಣ ಕಾರಂತ್ ಮೃತ್ಯು Read More »

ಸ್ವಚ್ಛ ಮಾಡಲು ಬಾವಿಗೆ ಇಳಿದ ಇಬ್ಬರು ಕೂಲಿ ಕಾರ್ಮಿಕರು | ಓರ್ವ ಮೃತ್ಯು, ಇನ್ನೋರ್ವನ ರಕ್ಷಣೆ

ಉಡುಪಿ: ಸ್ವಚ್ಚಗೊಳಿಸಲು ಬಾವಿಗೆ ಇಳಿದಿದ್ದ ಇಬ್ಬರ ಪೈಕಿ ಓರ್ವ ಮೃತಪಟ್ಟ ಘಟನೆ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ನಡೆದಿದೆ. ದುರ್ಗೇಶ್‍ (34) ಮೃತಪಟ್ಟಿದ್ದು, ಅಡಿವೆಪ್ಪ ಕುರಿ (50) ಅವರನ್ನು ರಕ್ಷಣೆ ಮಾಡಲಾಗಿದೆ. ಕೆಸರು ತೆಗೆದು ಸ್ವಚ್ಚ ಮಾಡಲೆಂದು ಬಾವಿಗೆ ಇಳಿದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಸಾವನ್ನಪ್ಪಿದ್ಯು ಮತ್ತೋರ್ವನನ್ನು ಅಗ್ನಿಶಾಮಕ ದಳದ ಸಿಬ್ಬಂದಿ  ರಕ್ಷಿಸಿದ್ದಾರೆ. ಇಬ್ಬರು ಕೂಡ ಕೊಪ್ಪಳ ಜಿಲ್ಲೆಯವರಾಗಿದ್ದು, ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. 35 ಅಡಿ ಆಳದ ಬಾವಿಯಲ್ಲಿ ಕೆಸರು

ಸ್ವಚ್ಛ ಮಾಡಲು ಬಾವಿಗೆ ಇಳಿದ ಇಬ್ಬರು ಕೂಲಿ ಕಾರ್ಮಿಕರು | ಓರ್ವ ಮೃತ್ಯು, ಇನ್ನೋರ್ವನ ರಕ್ಷಣೆ Read More »

ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು : ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೀಬಿ ಅಲಾಬಿ ರಸ್ತೆ ಬಳಿ ನಡೆದಿದೆ. ನಿತೇಶ್ ರಾವ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹಿಂದುಳಿದ ವರ್ಗಗಳ ಸರಕಾರಿ ಹಾಸ್ಟೆಲ್ನಲ್ಲಿ ವಾಸವಿದ್ದ ನಿತೇಶ್ 2ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯವರಾದ ನಿತೇಶ್ ಕಳೆದ ಎರಡು ವರ್ಷಗಳಿಂದ ಮಂಗಳೂರಿನಲ್ಲಿ ಓದುತ್ತಿದ್ದರು. ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ನಿತೇಶ್

ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಪ್ರಭಾವಿ ನಾಯಕ, ಮಾಜಿ ಶಾಸಕ ವಸಂತ ಬಂಗೇರ ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕ, ಕಾಂಗ್ರೆಸ್ ಮುಖಂಡ ಬೆಳ್ತಂಗಡಿಯ ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ (79) ಮೇ 8 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದಾರೆ. ಮೇ 9ರಂದು ಮುಂಜಾನೆ ಪಾರ್ಥಿವ ಶರೀರ

ಪ್ರಭಾವಿ ನಾಯಕ, ಮಾಜಿ ಶಾಸಕ ವಸಂತ ಬಂಗೇರ ನಿಧನ Read More »

ಕೆದಂಬಾಡಿ ಗ್ರಾ.ಪಂ. ಸದಸ್ಯ ಭಾಸ್ಕರ ರೈ ಮಿತ್ರಂಪಾಡಿ ನಿಧನ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಭಾಸ್ಕರ ರೈ ಮಿತ್ರಂಪಾಡಿಯವರು ನಿಧನರಾದರು. ಬಂಟ್ವಾಳ ಅರ್ಕುಳದಲ್ಲಿರುವ ತನ್ನ ಅತ್ತೆ ಮನೆಯಲ್ಲಿ ಮೇ.7 ರಂದು ರಾತ್ರಿ ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕೆದಂಬಾಡಿ ಗ್ರಾ.ಪಂ. ಸದಸ್ಯ ಭಾಸ್ಕರ ರೈ ಮಿತ್ರಂಪಾಡಿ ನಿಧನ Read More »

ಹಿರಿಯ ವಿದ್ವಾಂಸ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ, ಹಿರಿಯ ಜಾನಪದ ವಿದ್ವಾಂಸ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಇಂದು ನಿಧನರಾದರು. ಪೆರುವಾಜೆಯಲ್ಲಿ ಮಗಳ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು ಸಂಜೆ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ಮೃತರು ಪತ್ನಿ ಸುಮಾ ಆರ್.ಆಚಾರ್, ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸ್ಟರ್ ಆಗಿರುವ ಪುತ್ರ ಹರ್ಷವರ್ಧನ, ಪುತ್ರಿಯರಾದ ಕಿರಣ ಪಿ.ಆರ್., ಬೆಳ್ಳಾರೆ ಡಾ|ಶಿವರಾಮ ಕಾರಂತ ಪ.ಪೂ.ಕಾಲೇಜಿನಲ್ಲಿ

ಹಿರಿಯ ವಿದ್ವಾಂಸ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ Read More »

error: Content is protected !!
Scroll to Top