ನಿಧನ

ಪುತ್ರಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

ಕೋಲಾರ: ಮಗಳನ್ನು ಕೊಂದ ತಂದೆಯೊಬ್ಬ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ನಡೆದಿದೆ. ಐದು ವರ್ಷದ ಪುತ್ರಿ ನಿಹಾರಿಕಾಳನ್ನು ಕೊಂದು ತಂದೆ ಲೋಕೇಶ್ (37) ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಕೌಟುಂಬಿಕ ಕಲಹದಿಂದ ಲೋಕೇಶ್ ಅವರ ಪತ್ನಿ ಮನೆ ಬಿಟ್ಟು ನಾಪತ್ತೆಯಾಗಿದ್ದರು‌. ಇದರಿಂದ ನೊಂದ ಲೋಕೇಶ್ ಪುತ್ರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆ ಬಳಿಕ ಶವವನ್ನು ಕಾರಿನಲ್ಲಿಟ್ಟು ಲೋಕೇಶ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮುಳಬಾಗಿಲು ಗ್ರಾಮಾಂತರ […]

ಪುತ್ರಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ Read More »

ನೇತ್ರಾವತಿ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸರಪಾಡಿಯಲ್ಲಿ ನಡೆದಿದೆ. ಮೃತರನ್ನು ಅಲ್ಲಿಪಾದೆಯ ಉಜಿರಾಡಿ ನಿವಾಸಿ ಮೀನಾಕ್ಷಿ ಪೂಜಾರಿ (70) ಎಂದು ಗುರುತಿಸಲಾಗಿದೆ. ಸರಪಾಡಿಯ ಅಂಗಡಿಯೊಂದಕ್ಕೆ ಹೋಗಿ ಬಂದ ಮೀನಾಕ್ಷಿ ಅವರು, ಅಲ್ಲಿಂದ ನೇರವಾಗಿ ನೇತ್ರಾವತಿ ನದಿ ಸಮೀಪ ಬಂದಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲೇ ಸಮೀಪದಲ್ಲಿ ಮರಳು ತೆಗೆಯುತ್ತಿದ್ದ ಕಾರ್ಮಿಕರು ನದಿಗೆ ಹಾರಿ ಅವರನ್ನು ಬದುಕಿಸಲು ಪ್ರಯತ್ನ ನಡೆಸಿದರಾದರೂ, ಆ ಪ್ರಯತ್ನ ವಿಫಲವಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ನೇತ್ರಾವತಿ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ Read More »

ಯಕ್ಷ ಕಲಾವಿದ ಸುಜನಾ ಸುಳ್ಯ ನಿಧನ

ಸುಳ್ಯ: ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್‌ ಸುಳ್ಯ ಅವರ ತಂದೆ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಸುಳ್ಯ ರಂಗ ಮನೆಯ ಸುಜನಾ ಸುಳ್ಯ ಅವರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸುಳ್ಯದ ಜಯರಾಮ ನಾವೂರು ಅವರು ಸುಜನಾ ಸುಳ್ಯ ಎಂದೇ ಪ್ರಸಿದ್ಧರಾಗಿದ್ದವರು. ವಯೋಸಹಜ ಅನಾರೋಗ್ಯದ ಹಿನ್ನೆಲೆ ಅವರು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು, ಯಕ್ಷಗಾನ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು.ಶ್ರೀಯುತರ ನಿಧನಕ್ಕೆ

ಯಕ್ಷ ಕಲಾವಿದ ಸುಜನಾ ಸುಳ್ಯ ನಿಧನ Read More »

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಶಿಕ್ಷಕಿ ಸಾವು

ಬಹಳ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ನೃತ್ಯ ಶಿಕ್ಷಕಿ ಸುಳ್ಯ : ವಿರಳ ಹಾಗೂ ತೀರ ಅಪರೂಪದ ಕಾಯಿಲೆ Hyper IGE Mediated Mast cell activation syndromeನಿಂದ (ಹೈಪರ್-IgE ಸಿಂಡ್ರೋಮ್‌) ಬಳಲುತ್ತಿದ್ದ ಗಾಂಧಿನಗರ ನಿವಾಸಿ ಚಾಂದಿನಿ ಜೀವನ್ಮರಣ ಹೋರಾಟ ಕೊನೆಗೂ ಫಲಿಸಿಲ್ಲ. ಕಳೆದ ಕೆಲವು ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಇವರಿಗಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಬಹಳ ಸಮಯ ಹಿಡಿದಿತ್ತು. ಅಂತಿಮವಾಗಿ ಇವರಿಗೆ ಇದ್ದಿದ್ದು

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಶಿಕ್ಷಕಿ ಸಾವು Read More »

ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್‌ ಅಮ್ಮಣ್ಣಾಯ ಇನ್ನಿಲ್ಲ

ಪೌರಾಣಿಕ, ತುಳು ಪ್ರಸಂಗಗಳ ಅಮೋಘ ಭಾಗವತಿಕೆಯ ಪರಂಪರೆ ಕೊನೆಯ ಕೊಂಡಿ ಮಂಗಳೂರು : ರಸರಾಗ ಚಕ್ರವರ್ತಿ ಎಂದು ಅರಿಯಲ್ಪಡುತ್ತಿದ್ದ ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್‌ ಅಮ್ಮಣ್ಣಾಯ ಗುರುವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿ ಯಕ್ಷಗಾನ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಿದ್ದರು. ಯಕ್ಷಗಾನ ಕ್ಷೇತ್ರದ ಹಿರಿಯ

ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್‌ ಅಮ್ಮಣ್ಣಾಯ ಇನ್ನಿಲ್ಲ Read More »

ಅನಾರೋಗ್ಯ, ಚಿಕಿತ್ಸೆ ಫಲಿಸದೆ ಮೃತಪಟ್ಟ ಬಾಲಕಿ

ಬೆಳ್ತಂಗಡಿ: ಅನಾರೋಗ್ಯದ ಕಾರಣಕ್ಕೆ ಕೆಲ ಸಮಯದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಸಾನ್ವಿ ಶೆಟ್ಟಿ ಎಂಬಾಕೆಯೇ ‌ಮೃತ ದುರ್ದೈವಿ. ಸಾನ್ವಿ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಯಶೋಧರ ಶೆಟ್ಟಿ ಅವರ ಪುತ್ರಿ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಕೆಲ ಸಮಯದ ಹಿಂದೆ ಈಕೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾಳೆ.

ಅನಾರೋಗ್ಯ, ಚಿಕಿತ್ಸೆ ಫಲಿಸದೆ ಮೃತಪಟ್ಟ ಬಾಲಕಿ Read More »

ಸುಳ್ಯದ ಯುವಕ ಮಾರಿಷಸ್‌ನಲ್ಲಿ ಮೃತ್ಯು: ಜಲಪಾತ ವೀಕ್ಷಣೆಗೆ ತೆರಳಿದ್ದಾಗ ಕಾಲು ಜಾರಿ ಅವಘಡ

ಸುಳ್ಯ: ಮಾರಿಷಸ್‌ನಲ್ಲಿ ವಿದ್ಯಾರ್ಥಿ ವಿಸಾದಲ್ಲಿದ್ದ ಸುಳ್ಯದ ಯುವಕನೊಬ್ಬ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ನಂದನ್ ಎಸ್. ಭಟ್(25) ಎಂದು ಗುರುತಿಸಲಾಗಿದೆ. ಅವರು ಮಾರಿಷಸ್‌ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಟೂರಿಸಂ ಅಧ್ಯಯನ ಮಾಡುತ್ತಿದ್ದರು. ನಿನ್ನೆ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿನ ಸರ್ಕಾರ ಮತ್ತು ಭಾರತ‌ ಸರ್ಕಾರದ ಸಹಾಯದಿಂದ ಸ್ವಗ್ರಾಮಕ್ಕೆ ತರಲು ಅನುಕೂಲ

ಸುಳ್ಯದ ಯುವಕ ಮಾರಿಷಸ್‌ನಲ್ಲಿ ಮೃತ್ಯು: ಜಲಪಾತ ವೀಕ್ಷಣೆಗೆ ತೆರಳಿದ್ದಾಗ ಕಾಲು ಜಾರಿ ಅವಘಡ Read More »

ಹೆಬ್ಬಾರಬೈಲು ತಾರನಾಥ್ ಹೆಚ್. ಹೃದಯಾಘಾತದಿಂದ ನಿಧನ

ಪುತ್ತೂರು: ಪುತ್ತೂರಿನ ಹೆಬ್ಬಾರಬೈಲು ನಿವಾಸಿ ಹಾಗೂ ಹಿರಿಯ ಜವುಳಿ ವ್ಯಾಪಾರಿ ಹೆಚ್. ನಾರಾಯಣ ಅವರ ಪುತ್ರ ತಾರನಾಥ್ ಹೆಚ್. (49) ರವರು ಅಕ್ಟೋಬ‌ರ್ 13ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಂದೆ ಹಾಗೂ ಸಹೋದರರೊಂದಿಗೆ ಹೆಚ್. ನಾರಾಯಣ ಅಂಡ್ ಸನ್ಸ್‌ ಜವುಳಿ ಮಳಿಗೆಯಲ್ಲಿ ವ್ಯವಹಾರ ನಿರ್ವಹಿಸುತ್ತಿದ್ದ ಅವರು ಇತ್ತೀಚಿನ ಕೆಲ ವರ್ಷಗಳಿಂದ ಪಿಗ್ನಿ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 13ರ ಸಂಜೆ ಎಂದಿನಂತೆ ಪಿಗ್ನಿ ಸಂಗ್ರಹಣೆಯ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ

ಹೆಬ್ಬಾರಬೈಲು ತಾರನಾಥ್ ಹೆಚ್. ಹೃದಯಾಘಾತದಿಂದ ನಿಧನ Read More »

ಖ್ಯಾತ ಸಾಹಿತಿ, ಚಿಂತಕ ಮೊಗಳ್ಳಿ ಗಣೇಶ್‌ ನಿಧನ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ, ಚಿಂತಕ ಡಾ.ಮೊಗಳ್ಳಿ ಗಣೇಶ್(62) ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. 1963ರ ಜುಲೈ 1ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿಯಲ್ಲಿ ಜನಿಸಿದ ಡಾ.ಮೊಗಳ್ಳಿ ಗಣೇಶ್ ಕನ್ನಡದ ಪ್ರಮುಖ ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಮತ್ತು ವೈಚಾರಿಕ ಚಿಂತಕರಾಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಜಾನಪದ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ಮೊಗಳ್ಳಿ ಕಥೆಗಳು, ದೇವರ

ಖ್ಯಾತ ಸಾಹಿತಿ, ಚಿಂತಕ ಮೊಗಳ್ಳಿ ಗಣೇಶ್‌ ನಿಧನ Read More »

ಕನ್ನಡ ಸಿನಿ ಪಯಣಕ್ಕೆ ವಿದಾಯ ಹೇಳಿದ ಯಶವಂತ ಸರದೇಶಪಾಂಡೆ

ಕನ್ನಡ ಚಿತ್ರರಂಗದ ಖ್ಯಾತ ನಟ, ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇಂದು ಹೃದಯಾಘಾತದಿಂದ ನಿಧನರಾದರು. ಅವರ ಆಲ್ ದಿ ಬೆಸ್ಟ್ ನಾಟಕ ಅತ್ಯುತ್ತಮ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ

ಕನ್ನಡ ಸಿನಿ ಪಯಣಕ್ಕೆ ವಿದಾಯ ಹೇಳಿದ ಯಶವಂತ ಸರದೇಶಪಾಂಡೆ Read More »

error: Content is protected !!
Scroll to Top