ಯೋಗಾಸನ ಸ್ಪರ್ಧೆ : ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಸಿದ್ಧಾಪುರ ಸರಸ್ವತಿ ವಿದ್ಯಾಲಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ತರುಣರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದ ಸಾತ್ವಿಕ್ ಮತ್ತು ಲಿಖಿತ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಆಂಧ್ರಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಆಗಿದ್ದಾರೆ. ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.

ಯೋಗಾಸನ ಸ್ಪರ್ಧೆ : ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಡಿಜೆ ವಾಹನಕ್ಕೆ ತಗುಲಿದ ಹೈಟೆನ್ಷನ್ ತಂತಿ | 9 ಮಂದಿ ಮೃತ್ಯು, ಹಲವಾರು ಮಂದಿಗೆ ಗಾಯ

ಬಿಹಾರ : ಡಿಜೆ ವಾಹನಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್‍ ನಿಂದ 9 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸುಲ್ತಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ವೇಳೆ ಡಿಜೆ ವಾಹನ ಸಂಚರಿಸುವಾಗ ಹೈಟೆನ್ಸನ್ ತಂತ್ತಿಗೆ ಸಿಲುಕಿದೆ. ಪರಿಣಾಮ ಸಾವು-ನೋವು ಸಂಭವಿಸಿದೆ. ಡಿಜೆ ವಾಹನವು ತುಂಬಾ ಎತ್ತರವಾಗಿತ್ತು. ರಾತ್ರಿ ವೇಳೆ ಹೈಟೆನ್ಷನ್ ತಂತಿ ಅಡ್ಡಲಾಗಿ ಹಾದು ಹೋಗಿದ್ದು ಕಾಣಿಸಿಲ್ಲ. ತಂತಿ ತಾಗಿದೊಡನೆ 9 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಡಿಜೆ ವಾಹನಕ್ಕೆ ತಗುಲಿದ ಹೈಟೆನ್ಷನ್ ತಂತಿ | 9 ಮಂದಿ ಮೃತ್ಯು, ಹಲವಾರು ಮಂದಿಗೆ ಗಾಯ Read More »

ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರ ಸಹೋದರ ಆನಂದ್ ಪೂಜಾರಿ ನಿಧನ

ಪುತ್ತೂರು : ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರ ಸಹೋದರ, ನಡುಬೈಲು ನಿವಾಸಿ ಆನಂದ್ ಪೂಜಾರಿ (49) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಂಡೂರು ನಡುಬೈಲುಗುತ್ತು ನಾರಾಯಣ ಸಾಲಿಯಾನ್ ಮತ್ತು ದಿ.ಅಪ್ಪಿ ನಡುಬೈಲು ರವರ ಪುತ್ರ,ರಾಗಿರುವ ಆನಂದ್ ಪೂಜಾರಿ ಪ್ರಗತಿಪರ ಕೃಷಿಕರಾಗಿದ್ದು, ಕೊಡ್ತೀರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸೊಸೈಟಿ ನಿರ್ದೇಶಕರಾಗಿದ್ದು, ಪುರುಷರಕಟ್ಟೆಯಲ್ಲಿ ಚಿಕನ್ ಸೆಂಟ‌ರ್ ನಡೆಸುತ್ತಿದ್ದರು. ಮೃತರು ತಂದೆ, ಪತ್ನಿ, ಮೂವರು ಮಕ್ಕಳು, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರ ಸಹೋದರ ಆನಂದ್ ಪೂಜಾರಿ ನಿಧನ Read More »

ಓದಲು ಹಠ ಹಿಡಿದ ಮಗ | ಗೋಣಿ ಚೀಲದಲ್ಲಿ ಕಟ್ಟಿ ಮಗನನ್ನು ಕೆರೆಗೆ ಎಸೆದ ತಂದೆ

ಹೈದ್ರಾಬಾದ್ : ಮಕ್ಕಳು ಮಾತು ಕೇಳಲ್ಲ, ಓದು ಅಂದ್ರೆ ರಚ್ಚೆ ಹಿಡಿತಾವೆ, ಹೋಮ್‌ವರ್ಕ್ ಮಾಡು ಅಂದ್ರೆ ನೆಪ ತಗಿತಾವೆ. ಅದಕ್ಕೆ ಅವರನ್ನು ರಮಿಸಿ, ಮುದ್ದು ಮಾಡಿ, ಕೊನೆಗೆ ಗದರಿಸಿಯಾದ್ರೂ ಓದಲು ಕೂರಿಸುವ ತಂದೆ ತಾಯಿ ನಮಗೆ ಕಾಣ ಸಿಗ್ತಾರೆ, ಆದ್ರೆ ಇದಕ್ಕೆ ಅಪವಾದ ಎಂಬಂತೆ ಘಟನೆಯೊಂದು ನಡೆದಿದೆ. ತೆಲಂಗಾಣದ ಮೆಹಬೂಬ್‌ ನಗರದಲ್ಲಿರುವ ಕೊಲ್ಲಾಪುರದಲ್ಲಿ ಒಬ್ಬ ತಂದೆ ತನ್ನ ಮಗ ಸರಿಯಾಗಿ ಓದುತ್ತಿಲ್ಲ, ಹೇಳಿದ ಮಾತು ಕೇಳುತ್ತಿಲ್ಲ ಎಂದು ಗೋಣಿ ಚಿಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದಾನೆ. ಮೆಹಬೂಬ ನಗರದ

ಓದಲು ಹಠ ಹಿಡಿದ ಮಗ | ಗೋಣಿ ಚೀಲದಲ್ಲಿ ಕಟ್ಟಿ ಮಗನನ್ನು ಕೆರೆಗೆ ಎಸೆದ ತಂದೆ Read More »

ಮೈಸೂರು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ತನುಜ ಕಾಯರ್ಗರಿಗೆ ಡಾಕ್ಟರೇಟ್ ಪದವಿ  

ಪುತ್ತೂರು: ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ತನುಜ ಕಾಯರ್ಗ ಅವರಿಗೆ ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ತಮಿಳುನಾಡಿನ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡಾಕ್ಟರೇಟ್ ಪದವಿ ನೀಡಿದೆ. ವಿಐಟಿ ಪ್ರೊಫೆಸರ್ ಆನಂದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ  ಸಾದರಪಡಿಸಿದ, ‘ ಡಿಸೈನ್ ಆ್ಯಂಡ್ ಡೆವಲಪ್ ಸ್ವಾಮ್ ಇಂಟಲಿಜೆನ್ಸ್ ಬೇಸ್ಡ್ ಕ್ಲಸ್ಟರಿಂಗ್ ಅಲ್ಗೊರಿದಂ ಫಾರ್ ಎಫಿಸಿಯಂಟ್ ರೂಟಿಂಗ್ ಇನ್ ಇಂಟರ್ ನೆಟ್ ಆಫ್ ವೆಹಿಕಲ್ಸ್ ‘ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ಮೈಸೂರು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ತನುಜ ಕಾಯರ್ಗರಿಗೆ ಡಾಕ್ಟರೇಟ್ ಪದವಿ   Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯಕ್ಕೆ ಚಾಲನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯ ಉಳುಮೆಗೆ ಇಂದು ಚಾಲನೆ ನೀಡಲಾಯಿತು. ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ತೆಂಗಿನ ಕಾಯಿ ಒಡೆದು ಟ್ಯಾಕ್ಟರ್ ಮೂಲಕ ಗದ್ದೆ ಉಲುಮೆಗೆ ಚಾಲನೆ ನೀಡಿ ಮಾತನಾಡಿ, ಪುಣ್ಯದ ಗದ್ದೆಯಲ್ಲಿ ಭಕ್ತಾಧಿಗಳ ಆಶಯದಂತೆ ಭತ್ತದ ಬೇಸಾಯ ಆರಂಭಿಸಿದ್ದೇವೆ. ಇಲ್ಲಿ ಕೇವಲ ಆರಂಭ ಮಾಡುವುದು ಮಾತ್ರವಲ್ಲ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಸಾಂಪ್ರದಾಯಿಕ ಗದ್ದೆ ಬೇಸಾಯಕ್ಕೆ ಚಾಲನೆ Read More »

ಮೀನುಗಾರಿಕೆ ಬೋಟ್‍ ಬೆಂಕಿಗಾಹುತಿ

ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ಸಮುದ್ರದ ಮಧ್ಯ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಹುಸೈನ್ ಎಂಬವರ ಮಾಲಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಸೋಮವಾರ ಬೆಳಗಿನ ಜಾವ 3ರಿಂದ 4 ಗಂಟೆಯ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ಬೋಟ್ ನಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ಬೋಟ್ ನಲ್ಲಿದ್ದವರು ರಕ್ಷಿಸಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ರವಿವಾರ ಬೆಳಗ್ಗೆ 10 ಮಂದಿ ಮೀನುಗಾರರೊಂದಿಗೆ ನಮ್ಮ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಸೋಮವಾರ ಬೆಳಗ್ಗಿನ ಹೊತ್ತು

ಮೀನುಗಾರಿಕೆ ಬೋಟ್‍ ಬೆಂಕಿಗಾಹುತಿ Read More »

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ | ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ನಮ್ಮ ಬೆಂಬಲ : ಮಹಾಸಭೆಯಲ್ಲಿ ನಿರ್ಣಯ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದಲ್ಲಿ ಸದಸ್ಯತ್ವ ಅಭಿಯಾನ ಆಗಬೇಕು, ಸಮಾಜದಲ್ಲಿ ಒಗ್ಗಟ್ಟು ಜತೆಗೆ ಜಿಲ್ಲೆಯಲ್ಲಿ ಎರಡು ಸಂಘಟನೆ ಇದ್ದರೆ ನಮ್ಮ ಬೆಂಬಲವಿಲ್ಲ. ಯಾವುದಾದರು ಒಂದೇ ಸಂಘ ಇರಬೇಕು. ಏನಾದರು ವ್ಯತ್ಯಾಸ ಇದ್ದರೆ ಅದನ್ನು ಸರಿದೂಗಿಸಿಕೊಂಡು ಹೋಗಬೇಕು. ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘ ಬೆಂಬಲ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ | ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ನಮ್ಮ ಬೆಂಬಲ : ಮಹಾಸಭೆಯಲ್ಲಿ ನಿರ್ಣಯ Read More »

ಬಿಡದಿ ಪೊಲೀಸ್ ಇನ್‍ ಸ್ಪೆಕ್ಟರ್ ತಿಮ್ಮೇಗೌಡ ನೇಣಿಗೆ ಶರಣು

ಬೆಂಗಳೂರು: ಪೊಲೀಸ್ ಇನ್‍ ಸ್ಪೆಕ್ಟರ್ ತಿಮ್ಮೇಗೌಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಇನ್‍ ಸ್ಪೆಕ್ಟರ್ ಆಗಿದ್ದ ತಿಮ್ಮೇಗೌಡ ಬಿಡದಿಯಲ್ಲಿರುವ ತಮ್ಮ ನಿವಾಸದ ಸಮೀಪ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬಿಡದಿ ಪೊಲೀಸ್ ಇನ್‍ ಸ್ಪೆಕ್ಟರ್ ತಿಮ್ಮೇಗೌಡ ನೇಣಿಗೆ ಶರಣು Read More »

ಹಿಂದೂ ಸಂಘಟನೆಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ

ಬಂಟ್ವಾಳ: ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ ಸಂಭವಿಸಿ ಚೂರಿ ಇರಿತದ ಮೂಲಕ ಕೊನೆಗೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ವೈಯಕ್ತಿಕ ವಿಚಾರವಾಗಿ ನಡೆದ ಹೊಡೆದಾಟ ಚೂರಿ ಇರಿತದ ಮೂಲಕ ಕೊನೆಗೊಂಡಿದೆ. ಘಟನೆಯಲ್ಲಿ ಇತ್ತಂಡಗಳ ಮೂವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೃಥ್ವಿರಾಜ್, ವಿನಿತ್ ಹಾಗೂ ಪುಷ್ಪರಾಜ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಯಾವ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಿಂದೂ ಸಂಘಟನೆಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ Read More »

error: Content is protected !!
Scroll to Top