ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು ಬೆಳಿಗ್ಗೆ ಭಕ್ತಾದಿಗಳಿಂದ ಅರ್ಪಿತವಾದ ಹಾಲು, ಸೀಯಾಳಾಭಿಷೇಕ ನಡೆದು, ಮಧ್ಯಾಹ್ನ ಮಹಾಪೂಜೆ ನಡೆಯಿತು. ದೇವಸ್ಥಾನದ ಅರ್ಚಕ ವೆಂಕಟಕೃಷ್ಣ ಭಟ್‍ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಸದಸ್ಯರಾದ ವಸಂತ ದಲಾರಿ, ನಾರ್ಣಪ್ಪ ಗೌಡ ಜತ್ತೋಡಿ, ಆನಂದ ಗೌಡ ಬನೇರಿ, ಚಾರ್ವಾಕ ಸಿಎ ಬ್ಯಾಂಕ್‍ ಅಧ್ಯಕ್ಷ […]

ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ Read More »

ಕಾಂಕ್ರೀಟ್ ಮಿಕ್ಸ್ ಸಾಗಿಸುತ್ತಿದ್ದ ಅಜೆಕ್ಸ್ ಲಾರಿ ಪಲ್ಟಿ | ಚಾಲಕ ಪ್ರಾಣಾಪಾಯದಿಂದ ಪಾರು

ಪುತ್ತೂರು: ಕಾಂಕ್ರೀಟ್ ಮಿಕ್ಸ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಲಾರಿಯೊಂದಕ್ಕೆ ಸೈಡ್ ಕೊಡುವ ಭರದಲ್ಲಿ ಉರುಳಿ ಬಿದ್ದ ಘಟನೆ ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲದಲ್ಲಿ ಇಂದು ನಡೆದಿದೆ. ಆರ್ಲಪದವಿನ ಕಾಮಗಾರಿ ಒಂದಕ್ಕೆ ಕಾಂಕ್ರೀಟ್ ಮಿಕ್ಸ್ ಹೇರಿಕೊಂಡು ಹಂಟ್ಯಾರು – ಪಾಣಾಜೆ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಕೊರಿಂಗಿಲ ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಬಂದ ಲಾರಿಗೆ ಸೈಡ್ ಕೊಡುವ ಭರದಲ್ಲಿ ಈ ದುರಂತ ಸಂಭವಿಸಿದ್ದು ಸುಮಾರು 30 ಅಡಿ ಆಳದ ತೋಟಕ್ಕೆ ಬಿದ್ದಿದೆ.  ಅದರ ಚಾಲಕ ಅದೃಷ್ಟವಶಾತ್ ಪಾರಗಿದ್ದಾನೆ. ಅಗಲ ಕಿರಿದಾದ ರಸ್ತೆ ಹಾಗೂ

ಕಾಂಕ್ರೀಟ್ ಮಿಕ್ಸ್ ಸಾಗಿಸುತ್ತಿದ್ದ ಅಜೆಕ್ಸ್ ಲಾರಿ ಪಲ್ಟಿ | ಚಾಲಕ ಪ್ರಾಣಾಪಾಯದಿಂದ ಪಾರು Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್‍ ಕುಮಾರ್ ರಿಗೆ ‘ನ್ಯೂಸ್ ಪುತ್ತೂರು’ನ ‘ಶಿವಾಮೃತ’ ಸಂಚಿಕೆ ಹಸ್ತಾಂತರ

ಪುತ್ತೂರು: ‘ನ್ಯೂಸ್ ಪುತ್ತೂರು’ ಹೊರತಂದ ‘ಶಿವಾಮೃತ’ ಸಂಚಿಕೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್‍ ಕುಮಾರ್‍ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಯಿತು. ಯೋಜನೆಯ ನಿರ್ದೇಶಕರ ಕಚೇರಿಗೆ ತೆರಳಿ “ಶಿವಾಮೃತ’ ಸಂಚಿಕೆ ಹಸ್ತಾಂತರಿಸಲಾಯಿತು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು ಹಾಗೂ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ವಸಂತ ಎಸ್‍. ವೀರಮಂಗಲ, ನಾಗೇಶ್‍ ಕೆಡೆಂಜಿ, ಮುರಳೀಧರ ಕೆ.ಎಲ್‍, ಪ್ರೇರಣಾ ಸಂಸ್ಥೆಯ ನಿರ್ದೇಶಕಿ ಮೋಕ್ಷಿತಾ, ಪ್ರೇರಣಾ ಸಂಸ್ಥೆಯ ಮೆನೇಜರ್ ದಯಾಮಣಿ, ಯೋಜನೆಯ ಯೋಜನಾಧಿಕಾರಿ ಮುಖೇಶ್‍, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್‍ ಕುಮಾರ್ ರಿಗೆ ‘ನ್ಯೂಸ್ ಪುತ್ತೂರು’ನ ‘ಶಿವಾಮೃತ’ ಸಂಚಿಕೆ ಹಸ್ತಾಂತರ Read More »

ಆ.14 : ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 13ನೇ ವರ್ಷದ  ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ” ಕಾರ್ಯಕ್ರಮ

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 13ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ” ಕಾರ್ಯಕ್ರಮ ಆ.14 ಬುಧವಾರ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬಡ 10 ಮಂದಿ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಶಿಷ್ಯ ವೇತನ ನೀಡಲಾಗುವುದು. ಅಲ್ಲದೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ನಿವೃತ್ತ

ಆ.14 : ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 13ನೇ ವರ್ಷದ  ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ” ಕಾರ್ಯಕ್ರಮ Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ | ಸರತಿ ಸಾಲಿನಲ್ಲಿ ಭಕ್ತರಿಂದ ಹಾಲು, ಸೀಯಾಳ ಅರ್ಪಣೆ

ಸವಣೂರು: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿಯನ್ನು ಆಚರಿಸಲಾಯಿತು. ನೂರಾರು ಭಕ್ತಾದಿಗಳು ಮುಂಜಾನೆಯಿಂದಲೇ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಹಾಲು, ಸೀಯಾಳಾ, ಹಣ್ಣುಕಾಯಿ ಅರ್ಪಿಸಿ ಪುನೀತರಾದರು. ದೇವಸ್ಥಾನದ ಅರ್ಚಕರು ಶ್ರೀ ನಾಗನಿಗೆ ಅಭಿಷೇಕ ಮಾಡಿದರು. ಈ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸಂಚಾಲಕ ಸವಣೂರು ಸೀತಾರಾಮ ರೈ, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಉತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ | ಸರತಿ ಸಾಲಿನಲ್ಲಿ ಭಕ್ತರಿಂದ ಹಾಲು, ಸೀಯಾಳ ಅರ್ಪಣೆ Read More »

ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಸೌಮ್ಯಾ ಭಟ್ ಕೊಲೆ ಪ್ರಕರಣ | ಪ್ರಕರಣಕ್ಕೆ 27 ವರ್ಷ ಪೂರ್ತಿ | ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿಯ ಸುಳಿವೇ ಇಲ್ಲ

ಪುತ್ತೂರು: ವಿದ್ಯಾರ್ಥಿನಿ ಸೌಮ್ಯಾ ಭಟ್‌ ಕೊಲೆ ಪ್ರಕರಣ ನಡೆದು 27 ವರ್ಷ ತುಂಬಿದ್ದು, ಈ ಪ್ರಕರಣ ಕರಾವಳಿಯನ್ನು ಬೆಚ್ಚಿ ಬೀಳಿಸಿತ್ತು. ಆದರೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಮಿಲಿಟ್ರಿ ಅಶ್ರಫ್ ಸುಳಿವು ಇನ್ನೂ ಪತ್ತೆಯಾಗಿಲ್ಲ. ಪುತ್ತೂರು ವಿವೇಕಾನಂದ ಕಾಲೇಜಿನ ಬಿಎಸ್‌ ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಸೌಮ್ಯಾ ಭಟ್‌ ಅವರನ್ನು ಹಿಂಬಾಲಿಸಿ ಕುದಂಬ್ಲಾಜೆಯ ಮಿಲಿಟ್ರಿ ಅಶ್ರಫ್‌ ಬರ್ಬರವಾಗಿ ಕೊಲೆಗೈದಿದ್ದ ಆ ಘಟನೆ ಇಡೀ ಪುತ್ತೂರು ಕೆರಳಿ ಕೆಂಡದಂತೆ ಮಾಡಿತ್ತು. 1997ರ ಆಗಸ್ಟ್‌ 7 ರಂದು ಸಂಜೆ

ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಸೌಮ್ಯಾ ಭಟ್ ಕೊಲೆ ಪ್ರಕರಣ | ಪ್ರಕರಣಕ್ಕೆ 27 ವರ್ಷ ಪೂರ್ತಿ | ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿಯ ಸುಳಿವೇ ಇಲ್ಲ Read More »

ಅಕ್ಷಯ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಸಂವಹನ ಅಡೆತಡೆಗಳ  ತರಬೇತಿ ಕಾರ್ಯಗಾರ

ಪುತ್ತೂರು : ವೇಗದ ಜಗತ್ತಿನಲ್ಲಿ, ಯಶಸ್ಸನ್ನು ಸಾಧಿಸಬೇಕಾದರೆ ಪರಿಣಾಮಕಾರಿ ಸಂವಹನವು ಅತ್ಯವಶ್ಯ. ಪರಿಣಾಮಕಾರಿ ಸಂವಹನವು ಪ್ರತೀ ಕ್ಷೇತ್ರದಲ್ಲೂ ಅಗತ್ಯವಿದ್ದು, ಪ್ರತಿಯೊಬ್ಬನ ವ್ಯಕ್ತಿತ್ವ ವಿಕಸನಕ್ಕೆ ಮಾತ್ರವಲ್ಲದೆ ಮುಖ್ಯವಾಗಿ ವೃತ್ತಿ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂವಹನ ಕಲೆಯನ್ನು ಜಾಗೃತ ಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ  ನಡೆಯಿತು.  ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, ಫಸೆರಾ ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್

ಅಕ್ಷಯ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಸಂವಹನ ಅಡೆತಡೆಗಳ  ತರಬೇತಿ ಕಾರ್ಯಗಾರ Read More »

ಪಂಜ : ದೇವಾಲಯದಲ್ಲಿ   ನಾಗರ ಪಂಚಮಿ

ಪಂಜ :  ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಸಂಭ್ರಮ ಸಡಗರದಿಂದ ಇಂದು ಮುಂಜಾನೆ ಆಚರಿಸಲಾಯಿತು.  ದೇಗುಲದ ಸಮೀಪದ ನಾಗನ ಕಟ್ಟೆಯಲ್ಲಿ ಪೂರ್ವಾಹ್ನ ನಾಗರ ಪಂಚಮಿ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗರಡಿ ಬೈಲ್ ಮೂಲ ನಾಗನಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 11.30 ಕ್ಕೆ ಪೂಜೆ ನಡೆಯಲಿದೆ. ಆ ಪ್ರಯುಕ್ತ ಹಣ್ಣುಕಾಯಿ, ಪಂಚಾಮೃತ ಅಭಿಷೇಕ,ನಾಗ ತಂಬಿಲ ಸೇವೆಗಳು ನಡೆಯಿತು . ಅರ್ಚಕ ರಾಮಚಂದ್ರ ಭಟ್ ವೈಧಿಕ ಕಾರ್ಯಕ್ರಮ ನೆರವೇರಿಸಿ ಪ್ರಾರ್ಥಿಸಿದರು.

ಪಂಜ : ದೇವಾಲಯದಲ್ಲಿ   ನಾಗರ ಪಂಚಮಿ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಾಗಸನ್ನಿಧಿಯಲ್ಲಿ ನಾಗರ ಪಂಚಮಿ | ಸರತಿ ಸಾಲಿನಲ್ಲಿ ನಿಂತು ಹಾಲು, ಸೀಯಾಳ ಅರ್ಪಿಸಿದ ಭಕ್ತಾದಿಗಳು

ಪುತ್ತೂರು: ಶ್ರಾವಣ ಮಾಸ ಶುಕ್ಲ ಪಕ್ಷ ಪಂಚಮಿಯಂದು ನಡೆಯುವ ಪ್ರಥಮ ಹಬ್ಬ ನಾಗರಪಂಚಮಿಯನ್ನು ತಾಲೂಕಿನ ವಿವಿಧ ನಾಗಸನ್ನಿಧಿಗಳಲ್ಲಿ ಸಂಭ್ರಮ ಸಡಗರದಿಂದ ಇಂದು ಮುಂಜಾನೆಯಿಂದ ಆಚರಿಸಲಾಯಿತು. ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಿಸಲಾಯಿತು. ಮುಂಜಾನೆಯಿಂದಲೇ ನೂರಾರು ಭಕ್ತಾದಿಗಳು ಶ್ರೀ ನಾಗಸನ್ನಿಧಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಹಾಲು, ಸೀಯಾಳಾ, ಹಣ್ಣುಕಾಯಿ ಅರ್ಪಿಸಿದರು. ದೇವಸ್ಥಾನದ ಅರ್ಚಕರು ಶ್ರೀ ನಾಗನಿಗೆ ಅಭಿಷೇಕ ಮಾಡಿದರು.

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಾಗಸನ್ನಿಧಿಯಲ್ಲಿ ನಾಗರ ಪಂಚಮಿ | ಸರತಿ ಸಾಲಿನಲ್ಲಿ ನಿಂತು ಹಾಲು, ಸೀಯಾಳ ಅರ್ಪಿಸಿದ ಭಕ್ತಾದಿಗಳು Read More »

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ | ದ.ಕ.ಜಿಲ್ಲೆಯ ವಸಂತ್ ಅಮೀನ್ ವಾರ್ಷಿಕ ಪ್ರಶಸ್ತಿ, ನಟಿ ಉಮಾಶ್ರೀ ಸೇರಿದಂತೆ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕ ನಾಟಕ ಅಕಾಡೆಮಿ ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಸಂತ್ ಅಮೀನ್ ವಾರ್ಷಿಕ ಪ್ರಶಸ್ತಿಗೆ, ನಟಿ ಉಮಾಶ್ರೀ, ನಾಟಕಕಾರರಾದ ಎಚ್.ಎಸ್. ಶಿವಪ್ರಕಾಶ್ ಹಾಗೂ ಕೋಟಿಗಾನಹಳ್ಳಿ ರಾಮಯ್ಯ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ (ಗೌರವ ಪ್ರಶಸ್ತಿ) ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪತ್ರಿಕಾಗೋಷ್ಠಿಯಲ್ಲಿ 93 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು. ‘ಜೀವಮಾನ ಸಾಧನೆ ಪ್ರಶಸ್ತಿಯು ತಲಾ 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಗೆ 75

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ | ದ.ಕ.ಜಿಲ್ಲೆಯ ವಸಂತ್ ಅಮೀನ್ ವಾರ್ಷಿಕ ಪ್ರಶಸ್ತಿ, ನಟಿ ಉಮಾಶ್ರೀ ಸೇರಿದಂತೆ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ Read More »

error: Content is protected !!
Scroll to Top