ಆಟೋದಲ್ಲಿ ಮಾದಕ ವಸ್ತು ಸಾಗಾಟ | ಮೂವರು ಆರೋಪಿಗಳ ಬಂಧನ

ಪುತ್ತೂರು : ಅಟೋ ರಿಕ್ಷಾದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ವೃತ್ತದ ಬಳಿ ನಡೆದಿದೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮ ನಿವಾಸಿ ಮೊಹಮ್ಮದ್ ನಾಸೀರ್ (21), ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಏನಾಜೆ ಬುಡೋಳಿ ನಿವಾಸಿ ಮಹಮ್ಮದ್ ಆಸೀಫ್.ಬಿ(21) ಹಾಗೂ ಸಿನಾನ್ ಬಂಧಿತ ಆರೋಪಿಗಳು. ನೆಕ್ಕಿಲಾಡಿ ಜಂಕ್ಷನ್ ಬಳಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಹೆಚ್ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ […]

ಆಟೋದಲ್ಲಿ ಮಾದಕ ವಸ್ತು ಸಾಗಾಟ | ಮೂವರು ಆರೋಪಿಗಳ ಬಂಧನ Read More »

ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ!

ಕುಂದಾಪುರ: ಬಾಡಿಕೆ ಕಟ್ಟಡದಲ್ಲಿ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ನಗರದ ಚಿಕ್ಕನಸಾಲು ರಸ್ತೆಯಲ್ಲಿ ಜೈ ಹಿಂದ್ ಹೊಟೇಲಿನ ಎದುರುಗಡೆ ಇರುವ ನಾಗರಾಜ ಎಂಬವರಿಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ಸಂತೋಷ್ ಆಚಾರ್ಯ (45) ಅವರ ಮೃತದೇಹ ಪತ್ತೆಯಾಗಿದೆ. ಅವಿವಾಹಿತರಾಗಿದ್ದ ಸಂತೋಷ ಆಚಾರ್ಯ ಕಳೆದ 25 ವರ್ಷಗಳಿಂದ ಕುಂದಾಪುರ ನಗರದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಬ್ರಹ್ಮಾವರ ಬಳಿಯ ಉಳ್ಳೂರಿನಲ್ಲಿರುವ ತನ್ನ ಮನೆಗೆ ಹೋಗಿ ಬರುತ್ತಿದ್ದರು. ನಾಗರ ಪಂಚಮಿಯ ಪ್ರಯುಕ್ತ

ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ! Read More »

ಉನ್ನತ ಶಿಕ್ಷಣ ವ್ಯವಸ್ಥೆ–ಆದ್ಯತೆಯಿಲ್ಲದ ಕಾರ್ಯಯೋಜನೆಗಳು : ಕೆ. ಚಿನ್ನಪ್ಪ ಗೌಡ

ಮಕ್ಕಳಿಗೆ ವಿವಿಧ ಹಂತದ ಶಿಕ್ಷಣವನ್ನು ನೀಡುವ ಶಾಲಾ ಕಾಲೇಜುಗಳು ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವ ಕನಸನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಸ್ಥಾಪನೆಯಾಗುತ್ತಿರುವ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಅವುಗಳ ನಾಮಫಲಕದಲ್ಲಿ International ಎಂಬ ವಿಶೇಷಣವನ್ನು ಸೇರಿಸಿ ಹೆಸರು ಹಾಕುವುದನ್ನು ನೋಡುತ್ತೇವೆ. ಈ ಅಂತರರಾಷ್ಟ್ರೀಯ ಎಂದರೆ ಏನು  ಎಂದು ಕೇಳಿದರೆ ಸ್ಪಷ್ಟ ಉತ್ತರ ಇಲ್ಲ. ಕಟ್ಟಡ, ಕಿಟಿಕಿ ಬಾಗಿಲುಗಳು, ಪೀಠೋಪಕರಣಗಳು, ತರಗತಿಗಳು, ಶಿಕ್ಷಕರು, ಬಸ್ ವ್ಯವಸ್ಥೆ , ಸಮವಸ್ತ್ರ, ಭದ್ರತಾ ಸಿಬ್ಬಂದಿ ಇತ್ಯಾದಿ ಸವಲತ್ತುಗಳ ಪಟ್ಟಿ ನೀಡುತ್ತಾರೆ. ಈ

ಉನ್ನತ ಶಿಕ್ಷಣ ವ್ಯವಸ್ಥೆ–ಆದ್ಯತೆಯಿಲ್ಲದ ಕಾರ್ಯಯೋಜನೆಗಳು : ಕೆ. ಚಿನ್ನಪ್ಪ ಗೌಡ Read More »

ರೈಲ್ವೇ ಹಳಿ ಮೇಲೆ ಭೂಕುಸಿತ | ಹಾಸನ- ಮಂಗಳೂರು ರೈಲು ಸಂಚಾರ ಸ್ಥಗಿತ

ಹಾಸನ: ಹಾಸನ- ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂಕುಸಿತವಾಗಿದೆ. ಕಲ್ಲು,ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸಕಲೇಶಪುರ, ಯಡಕುಮೇರಿ, ಶಿರವಾಗಿಲು, ಆಲೂರು ಸೇರಿ 6 ಕಡೆಗಳಲ್ಲಿ  6 ರೈಲುಗಳು ನಿಂತಿವೆ.

ರೈಲ್ವೇ ಹಳಿ ಮೇಲೆ ಭೂಕುಸಿತ | ಹಾಸನ- ಮಂಗಳೂರು ರೈಲು ಸಂಚಾರ ಸ್ಥಗಿತ Read More »

ಬಾಂಗ್ಲಾದೇಶದಲ್ಲಿನ ಹಿಂದೂಗಳ  ಪರವಾಗಿ  ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿಶ್ವ ಹಿಂದೂ ಪರಿಷದ್ ಪ್ರಮುಖರು

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ಮತ್ತು ಕಿರುಕುಳದ ಭೀಕರ ಘಟನೆಗಳಿಂದ ಎಚ್ಚೆತ್ತ ವಿಶ್ವ ಹಿಂದೂ ಪರಿಷತ್ ಭಾರತದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ನಮ್ಮ ನೆರೆಯ ದೇಶದಲ್ಲಿನ ತೊಂದರೆಗೊಳಗಾದ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಗಾಗಿ ತಕ್ಷಣದ ಅನಿವಾರ್ಯ ಕ್ರಮಕ್ಕಾಗಿ ವಿನಂತಿಸಿದರು. ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಪ್ರಧಾನ ಕಾರ್ಯದರ್ಶಿ ಬಜರಂಗ್ ಬಾಗ್ರಾ, ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ಅಲೋಕ್ ಕುಮಾರ್  ಕೇಂದ್ರ ಗೃಹ

ಬಾಂಗ್ಲಾದೇಶದಲ್ಲಿನ ಹಿಂದೂಗಳ  ಪರವಾಗಿ  ಅಮಿತ್ ಶಾ ಅವರನ್ನು ಭೇಟಿ ಮಾಡಿದ ವಿಶ್ವ ಹಿಂದೂ ಪರಿಷದ್ ಪ್ರಮುಖರು Read More »

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ – ಸೆನ್ಸಾಯಿ ಮಾಧವ ಅಳಿಕೆ ಅವರ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ವಿಟ್ಲ: ಬಂಟ್ವಾಳ ಮತ್ತು ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿರುತ್ತಾರೆ. ಪ್ರಶಸ್ತಿ ಗಳಿಸಿದ ವಿಧ್ಯಾರ್ಥಿಗಳು –  ಬಂಟ್ವಾಳ ತಾಲೂಕಿನ ಓಜಾಲು ಶಾಲೆ ಲಿತಿಕ ಪ್ರಥಮ ಮತ್ತು ಲಿಪಿಕ ದ್ವಿತೀಯ, ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಸಾನ್ವಿ ಪ್ರಥಮ, ಚೈತನ್ಯ ಕೃಷ್ಣ ಪ್ರಥಮ, ಪ್ರಣವ್ ಪ್ರಥಮ ಮತ್ತು ಪ್ರಥಮ್ ಕಾಮತ್ ದ್ವಿತೀಯ, ಧನ್ವಿ ದ್ವಿತೀಯ,  ಜನಪ್ರಿಯ ಸ್ಕೂಲ್ ಮನಾಫ್ ಪ್ರಥಮ, ಸಂತ ರೀಟಾ ಶಾಲೆಯ ಮೌಶ್ಮಿ ಪ್ರಥಮ,

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ – ಸೆನ್ಸಾಯಿ ಮಾಧವ ಅಳಿಕೆ ಅವರ ವಿದ್ಯಾರ್ಥಿಗಳಿಗೆ ಪ್ರಶಸ್ತಿ Read More »

77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಆಕರ್ಷಣ್‌ ಇಂಡಸ್ಟ್ರೀಸ್‌ ಸಮರ್ಪಿಸುತ್ತಿದೆ ವಿಶೇಷ ಕೊಡುಗೆಗಳು | ಸೈನಿಕರಿಗಾಗಿ ಮತ್ತಷ್ಟು ರಿಯಾಯಿತಿ | ವಿಶೇಷ ಕೊಡುಗೆಗಳು ಆ.10 ರಿಂದ 14 ರ ವರೆಗೆ ಲಭ್ಯ

ಪುತ್ತೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಆಕರ್ಷಣ್‌ ಇಂಡಸ್ಟ್ರೀಸ್‌ ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಸೈನಿಕರಿಗಾಗಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿದೆ. ಈ ವಿಶೇಷ ಕೊಡುಗೆಗಳು ಆಗಸ್ಟ್‌ 10 ರಿಂದ 14ರವರೆಗೆ ಲಭ್ಯವಿದ್ದು, ಕೇವಲ 5 ದಿನಗಳು ಮಾತ್ರ ನಡೆಯಲಿವೆ. ವಿಶೇಷ ಕೊಡುಗೆಗಳ ಅಂಗವಾಗಿ ರೆಡಿವಾಲ್-ರೆಡಿಮೇಡ್‌ ಕಂಪೌಂಡ್‌ ಬುಕ್‌ ಮಾಡಿ ಉಚಿತವಾಗಿ ಅಳವಡಿಸಿಕೊಳ್ಳಿ ಮತ್ತು ಬೇಲಿಕಂಬಗಳು, ಡ್ರ್ಯಾಗನ್‌ ಫ್ರುಟ್‌ ಸ್ಟ್ಯಾಂಡ್‌ಗಳನ್ನು ಬುಕ್‌ ಮಾಡಿ ಸಾಗಾಟದ ವೆಚ್ಚವನ್ನು ಉಚಿತವಾಗಿ ಪಡೆಯಿರಿ. ಆಕರ್ಷಣ್‌ ರೆಡಿವಾಲ್‌ ನಿಮ್ಮ ಮನೆಗೆ ಕಂಪೌಂಡ್‌ ನಿರ್ಮಿಸಿ ಕೇವಲ

77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಆಕರ್ಷಣ್‌ ಇಂಡಸ್ಟ್ರೀಸ್‌ ಸಮರ್ಪಿಸುತ್ತಿದೆ ವಿಶೇಷ ಕೊಡುಗೆಗಳು | ಸೈನಿಕರಿಗಾಗಿ ಮತ್ತಷ್ಟು ರಿಯಾಯಿತಿ | ವಿಶೇಷ ಕೊಡುಗೆಗಳು ಆ.10 ರಿಂದ 14 ರ ವರೆಗೆ ಲಭ್ಯ Read More »

ಪುಣ್ಚತ್ತಾರು ಶ್ರೀ ಸಾರ್ಜನಿಕ ಗಣೇಶೋತ್ಸವ ಸಮಿತಿಯಿಂದ 7ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಣಿಯರು: ಪುಣ್ಯತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಪುಣ್ಯತ್ತಾರು ನಡೆಯುವ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಹರಿ ಸಭಾಭವನದಲ್ಲಿ ಇಂದು ನಡೆಯಿತು. ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸಮಿತಿ ಸದಸ್ಯರಾದ ಮಾಧವ ಕಲ್ಪಡ, ಹರೀಶ್ ಕಟೀಲ್, ಅನಂತಕುಮಾರ್ ಬೈಲಂಗಡಿ, ಅಶ್ವಿನಿ ಕರಿಮಜಲು, ಹರೀಶ್ ಪೈಕ, ಮಹೇಶ್ ಪೈಕ,

ಪುಣ್ಚತ್ತಾರು ಶ್ರೀ ಸಾರ್ಜನಿಕ ಗಣೇಶೋತ್ಸವ ಸಮಿತಿಯಿಂದ 7ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ

ಸವಣೂರು: ಕಡಬ ತಾಲೂಕಿನ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿಯನ್ನು ಇಂದು ಆಚರಿಸಲಾಯಿತು. ನಾಗರಪಂಚಮಿ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ನಾಗತಂಬಿಲ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ Read More »

ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ

ಕಾಣಿಯೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದ ಶ್ರೀ ನಾಗ ಸನ್ನಿಧಿಯಲ್ಲಿ ನಾಗರಪಂಚಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಕ್ಷೀರಾಭಿಷೇಕ, ತಂಬಿಲ ಸೇವೆ ನಡೆಯಿತು. ದೇವಸ್ಥಾನದ ಆರ್ಚಕ ಈಶ್ವರಚಂದ್ರ ಭಟ್ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಯ ಮೊತ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ Read More »

error: Content is protected !!
Scroll to Top