ಪುತ್ತೂರು ನಗರ ಠಾಣೆ ಇನ್‍ ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿ’ಸೋಜಾ

ಪುತ್ತೂರು: ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿಸೋಜ ಆಗಮಿಸಿದ್ದಾರೆ. ಮೂಲತಃ ಸಾಗರ ನಿವಾಸಿಯಾಗಿರುವ ಜಾನ್ಸನ್ ಕಿರಣ್ ಡಿಸೋಜ ದ.ಕ.ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಮಂಗಳೂರು ಗ್ರಾಮಾಂತರ ಹಾಗೂ ಮಂಗಳೂರು ಕೇಂದ್ರ ಕಚೇರಿಯಲ್ಲಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ. ಇದೀಗ ಪುತ್ತೂರು ನಗರ ಪೊಲೀಸ್ ಠಾಣೆಗೆ ಇನ್‌ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದಾರೆ.

ಪುತ್ತೂರು ನಗರ ಠಾಣೆ ಇನ್‍ ಸ್ಪೆಕ್ಟರ್ ಆಗಿ ಜಾನ್ಸನ್ ಕಿರಣ್ ಡಿ’ಸೋಜಾ Read More »

ಶಾಲಾ ಗೋಡೆ, ಮೇಲ್ಛಾವಣಿ ಕುಸಿತ | ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಕಡಬ: ಶಾಲಾ ಕೊಠಡಿಯ ಗೋಡೆ ಹಾಗೂ ಮೇಲ್ಟಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಮಧ್ಯಾಹ್ನ ಕುಂತೂರಿನಲ್ಲಿ ನಡೆದಿದೆ. ಕುಂತೂರು ಸರಕಾರಿ ಶಾಲೆಯ ಕೊಠಡಿಯ ಮೇಲ್ಟಾವಣಿ ಹಾಗೂ ಗೋಡೆ ಕುಸಿದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಘಟನೆ ನಡೆಯುವ ವೇಳೆ ವಿದ್ಯಾರ್ಥಿಗಳು ಹೊರಗಡೆ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಶಾಲಾ ಗೋಡೆ, ಮೇಲ್ಛಾವಣಿ ಕುಸಿತ | ನಾಲ್ವರು ವಿದ್ಯಾರ್ಥಿಗಳಿಗೆ ಗಾಯ Read More »

ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಹತ್ಯೆ ಪ್ರಕರಣ | ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಬೆಳ್ತಂಗಡಿ: ಬೆಳಾಲು ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಬರ್ಬರವಾಗಿ ಕೊಲೆ ಮಾಡಿರುವ ಆರೋಪದಲ್ಲಿ ಆ.24ರಂದು ಧರ್ಮಸ್ಥಳ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕಾಸರಗೋಡು ಮುಳ್ಳೇರಿಯಾದ ರಾಘವೇಂದ್ರ ಕೆದಿಲಾಯ (54ವ) ಮತ್ತು ಆತನ ಮಗ ಮುರಳಿ ಕೃಷ್ಣ (21ವ)ರವರನ್ನು ಇಂದು ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಕೊಲೆಗೀಡಾದ ಬಾಲಕೃಷ್ಣ ಬಡೆಕ್ಕಿಲಾಯರ ಮಗಳು ವಿಜುಲಕ್ಷ್ಮಿ ಅವರ ಪತಿ ರಾಘವೇಂದ್ರ ಕೆದಿಲಾಯ ಮತ್ತು ಮಗ ಮುರಳಿ ಕೃಷ್ಣ ಆಸ್ತಿ ಮತ್ತು ಚಿನ್ನಾಭರಣಕ್ಕಾಗಿ

ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಹತ್ಯೆ ಪ್ರಕರಣ | ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು Read More »

ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್‍ ನಿಂದ ಮೊಸರು ಕುಡಿಕೆ ಉತ್ಸವ, ಇಬ್ಬರಿಗೆ ಸನ್ಮಾನ

ಮಾಣಿಲ: ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ನ 21ನೇ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಗ್ರಾಮದಲ್ಲಿ ನಲ್ವತ್ತೊಂದು ವರುಷಗಳಿಂದ ಅಂಚೆ ಸೇವೆಗೈಯುತ್ತಿದ್ದ ಧೂಮ ಮಡಿವಾಳ ಮತ್ತು ಆಶಾ ಕಾರ್ಯಕರ್ತೆ ರತ್ನಾವತಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬ್ರೀಟಿಷ್ ತಂತ್ರಜ್ಞಾನ ದ ಪ್ರಮುಖ ಡಾ.ವಿನಯಕುಮಾರ್ ಎಂ.ಎಸ್. ವಹಿಸಿದ್ಜರು. ಮುಖ್ಯ ಅತಿಥಿಗಳಾಗಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ವಿಷ್ಣು ಕನ್ನಡಗುಳಿ, ಧನರಾಜ್ ಬಿರಿಕಾಪು.ಜಗನ್ನಾಥ ರೈ.ಕೆಳಗಿನ ಮನೆ

ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್‍ ನಿಂದ ಮೊಸರು ಕುಡಿಕೆ ಉತ್ಸವ, ಇಬ್ಬರಿಗೆ ಸನ್ಮಾನ Read More »

ನಾಳೆ (ಆ.28) : ಬಿಜೆಪಿ ಯುವಮೋರ್ಚಾ, ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಬೃಹತ್ ಪ್ರತಿಭಟನೆ

ಪುತ್ತೂರು: ಬಿಜೆಪಿ ಯುವಮೋರ್ಚಾ, ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ಆ.28 ಬುಧವಾರ ಸಂಜೆ 4.30 ಕ್ಕೆ ದರ್ಬೆ ವೃತ್ತದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಈ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಆ.28) : ಬಿಜೆಪಿ ಯುವಮೋರ್ಚಾ, ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಬೃಹತ್ ಪ್ರತಿಭಟನೆ Read More »

ಪುತ್ತೂರು ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣದಲ್ಲಿ ಕೋಮುಗಲಭೆ ಪ್ರಚೋದನೆಗೆ ಯತ್ನ | ವಾಟ್ಸಾಪ್ ಸಂದೇಶ ರವಾನಿಸಿದ ಇಬ್ರಾಹಿಂ ವಿರುದ್ಧ ದೂರು

ವಿಟ್ಲ:: ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣವನ್ನು ವಿಷಯಾಂತರ ಮಾಡಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಕೋಮುಗಲಭೆಗೆ ಯತ್ನಿಸುವ ವಾಟ್ಸಾಪ್ ಸಂದೇಶವನ್ನು ರವಾನಿಸಿದ ಇಬ್ರಾಹಿಂ ಎಂಬವನ ವಿರುದ್ಧ ವಿಟ್ಲ ಠಾಣಾಧಿಕಾರಿಗೆ ನವೀನ್ ಎಂಬವರು ಸಾರ್ವಜನಿಕರ ಪರವಾಗಿ ದೂರು ನೀಡಿದ್ದಾರೆ. ಪುತ್ತೂರು ಕಾಲೇಜು ಹುಡುಗಿಗೆ ಚೂರಿ ಇರಿದ ಪ್ರಕರಣ ಸುಖಾಂತ್ಯ ಕಂಡ ಕೂಡಲೇ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸಿರುವ ಇಬ್ರಾಹಿಂ ಸೂರ್ಯ ಎಂಬ ವ್ಯಕ್ತಿ ವಾಟ್ಸಾಪ್ ಸಂದೇಶವನ್ನು ಕಳಿಸುತ್ತಾ ಮಿತ್ತೂರು ಆರ್‌ ಎಸ್‌ ಎಸ್‌ ಉಗ್ರರ ಕೇಂದ್ರವಾಗುತ್ತಿದೆಯೇ?

ಪುತ್ತೂರು ವಿದ್ಯಾರ್ಥಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣದಲ್ಲಿ ಕೋಮುಗಲಭೆ ಪ್ರಚೋದನೆಗೆ ಯತ್ನ | ವಾಟ್ಸಾಪ್ ಸಂದೇಶ ರವಾನಿಸಿದ ಇಬ್ರಾಹಿಂ ವಿರುದ್ಧ ದೂರು Read More »

ಕಬಕ ಸಾರ್ವಜನಿಕ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ | ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ

ಪುತ್ತೂರು: ಪುತ್ತೂರು ಟ್ರಾಫಿಕ್ ಪೊಲೀಸರಿಂದ ಕಬಕದ ಸಾರ್ವಜನಿಕರಿಗೆ ನಿತ್ಯ ಕಿರುಕುಳ ಆಗುತ್ತಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಬಕದ ಸಾರ್ವಜನಿಕರ ನಿಯೋಗವೊಂದು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದೆ. ಸ್ಥಳೀಯ ಮುಂದಾಳು ಮೋಹನ್ ಗುರ್ಜಿನಡ್ಕ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಪ್ರತೀ ದಿನ ಬೆಳಿಗ್ಗೆ 8.30ಕ್ಕೆ ಕಬಕಕ್ಕೆ ಬರುವ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ಬೈಕ್‌ ಸವಾರರಿಗೆ ನಿತ್ಯ ತೊಂದರೆ ನೀಡುತ್ತಿದ್ದಾರೆ. ಬೆಳಿಗ್ಗೆ ಶಾಲಾ ಮಕ್ಕಳನ್ನು ಬಸ್ಸಿಗೆ ಬಿಡಲು ಪೋಷಕರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು

ಕಬಕ ಸಾರ್ವಜನಿಕ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ | ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ Read More »

ವಿಟ್ಲದಲ್ಲಿ ಮನೆ ಮೇಲೆ ಗುಡ್ಡ ಕುಸಿತ | ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ

ವಿಟ್ಲ: ವ್ಯಾಪ್ತಿಯ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಕುರುಂಬಳ ನಿವಾಸಿ ಕಲಂದರ್ ಅಲಿ ಎಂಬವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಮಕ್ಕಳು ಸಹಿತ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಿದ್ದು, ಮನೆಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ

ವಿಟ್ಲದಲ್ಲಿ ಮನೆ ಮೇಲೆ ಗುಡ್ಡ ಕುಸಿತ | ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ Read More »

ಚೆಕ್‌ ಬೌನ್ಸ್‌ ಕೇಸ್‌ : ಕನ್ನಡದ ನಟಿಗೆ ಜೈಲು ಶಿಕ್ಷೆ, 40 ಲಕ್ಷ ರೂ. ದಂಡ

ಮಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಕನ್ನಡದ ಹಿರಿಯ ಪೋಷಕ ನಟಿ ಪದ್ಮಜಾ ರಾವ್​ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ 3 ತಿಂಗಳ ಕಾರಾಗೃಹ ವಾಸ ಮತ್ತು 40.20 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.‘ವೀರೂ ಟಾಕೀಸ್’ ಸಿನಿಮಾ ನಿರ್ಮಾಣ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಎಂಬವರಿಂದ ಪದ್ಮಜಾ ರಾವ್ 2020ರ ಜೂನ್‌ 17ರಂದು 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಟಿಯಿಂದ ಪದ್ಮಜಾ ರಾವ್ ಚೆಕ್ ನೀಡಿದ್ದರು. ಬಳಿಕ ಪದ್ಮಜಾ

ಚೆಕ್‌ ಬೌನ್ಸ್‌ ಕೇಸ್‌ : ಕನ್ನಡದ ನಟಿಗೆ ಜೈಲು ಶಿಕ್ಷೆ, 40 ಲಕ್ಷ ರೂ. ದಂಡ Read More »

ರಾಜ್ಯ ಮಟ್ಟದ ವೈಟ್ ಲಿಫ್ಟ್ ಚಿನ್ನದ ಪದಕ ವಿಜೇತೆ ಸ್ಪಂದನಾ ಕೆ ಪುಣಚಾರಿಗೆ ಶಾಸಕರಿಂದ ಸನ್ಮಾನ

ಪುತ್ತೂರು: ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ವೈಟ್ ಲಿಫ್ಟ್ ಸ್ಪರ್ದೆಯಲ್ಲಿ  ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದ ಸ್ಪರ್ದೆಯಲ್ಲಿ‌ಚಿನ್ನದ  ಪದಕ ವಿಜೇತೆ ಸ್ಪಂದನಾ ಕೆ ಪುಣಚಾ ಅವರನ್ನು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.‌ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಈ ಸ್ಪರ್ದೆಯಲ್ಲಿ 45 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕದ ಜತೆಗೆ ಬೆಸ್ಟ್ ವೈಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸ್ಪಂದನಾ ಪುತ್ತೂರು ಸಂತಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಪುಣಚಾ ಗ್ರಾಮದ ಕುರುಡ ಕಟ್ಟೆ

ರಾಜ್ಯ ಮಟ್ಟದ ವೈಟ್ ಲಿಫ್ಟ್ ಚಿನ್ನದ ಪದಕ ವಿಜೇತೆ ಸ್ಪಂದನಾ ಕೆ ಪುಣಚಾರಿಗೆ ಶಾಸಕರಿಂದ ಸನ್ಮಾನ Read More »

error: Content is protected !!
Scroll to Top