ಮುಡಾ ಹಗರಣ : ಸಿದ್ದರಾಮಯ್ಯ ಪತ್ನಿ ವಿರುದ್ಧ ದೂರು ದಾಖಲು

ಮೈಸೂರು: ಮುಡಾ ಹಗರಣ ಸಂಬಂಧ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ. ನಕಲಿ ಸಹಿ ವಿಚಾರವಾಗಿ ಪಾರ್ವತಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಾರ್ವತಿಯವರು ಬರೆದಿದ್ದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಪಿಸಿಸಿ ವಕ್ತಾರ […]

ಮುಡಾ ಹಗರಣ : ಸಿದ್ದರಾಮಯ್ಯ ಪತ್ನಿ ವಿರುದ್ಧ ದೂರು ದಾಖಲು Read More »

ಸೆ.5 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ ಸೆ..5 ರಂದು ನಡೆಯಲಿದೆ. ಭಾದ್ರಪದ ಶುಕ್ಲದ ಹಸ್ತಾನಕ್ಷತ್ರದಂದು ಕದಿರು ಕಟ್ಟುವ ಕ್ರಮ ವರ್ಷಂಪ್ರತಿ ಇಲ್ಲಿ ನಡೆಯುತ್ತಿದ್ದು, ಮೊದಲಿಗೆ ಉತ್ಸವಮೂರ್ತಿಯೊಂದಿಗೆ ದೇವಳದ ಪಶ್ಚಿಮ ಭಾಗದ ಅಶ್ವತ್ಥ ಕಟ್ಟೆಯವರೆಗೆ ಚೆಂಡೆ. ವಾದ್ಯದೊಂದಿಗೆ ಸಾಗಿ ಅಲ್ಲಿ ಸಂಗ್ರಹಿಸಿಟ್ಟ ತೆನೆಗಳನ್ನು ತರಲಾಗುತ್ತದೆ. ಬಳಿಕ ಪೂಜೆ ನಡೆದು ದೇಗುಲದ ಗರ್ಭಗುಡಿ, ಪರಿವಾರ ದೇವರ ಗುಡಿಗಳು, ತೀರ್ಥಬಾವಿ. ಉಗ್ರಾಣ, ತುಳಸೀಕಟ್ಟೆ ಇತ್ಯಾದಿಗಳಿಗೆ ಕದಿರನ್ನು ಕಟ್ಟಿದ ಬಳಿಕ ನೆರೆದ ಭಕ್ತರಿಗೆ ಕದಿರನ್ನು

ಸೆ.5 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ Read More »

ಸಂತ ಫಿಲೋಮಿನ ಕಾಲೇಜು ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನ ಕಾಲೇಜಿನ ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶಿವ ಭಟ್ ಅವರ ಕೃಷಿ ಪ್ರದೇಶ ಕೆಯ್ಯೂರಿನ ಕಣಿಯಾರು ದೇವಳಿಕೆಯಲ್ಲಿ ನಡೆಯಿತು. ಮಾನವಿಕ ವಿಭಾಗದ ಮುಖ್ಯಸ್ಥ ಡಾ.ನೋರ್ಬರ್ಟ್ ಮಸ್ಕರೆನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯ ಮಹತ್ವ, ಗದ್ದೆಯಲ್ಲಿ ಬೆಳೆಯುವ ಭತ್ತ ಮತ್ತು ನಾಟಿ ನೆಡುವ ವಿಧಾನ, ಭತ್ತದ ವಿವಿಧ ತಳಿಗಳು, ತುಳುನಾಡಿನ ವಿವಿಧ ಕೃಷಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ಪ್ರಾಯೋಜಕ ಶಿವ ಭಟ್, ನಾಟಿ ಮಾಡುವ ವಿಧಾನವನ್ನು

ಸಂತ ಫಿಲೋಮಿನ ಕಾಲೇಜು ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ Read More »

ಜನರಿಗೆ ಮಾಂಸ ಹಂಚಲು 83 ಆನೆಗಳ ಹತ್ಯೆ!

ಬರಗಾಲದಿಂದ ಕಂಗೆಟ್ಟಿರುವ ದೇಶದಲ್ಲಿ ಆಹಾರಕ್ಕಾಗಿ ಸರಕಾರದಿಂದಲೇ ಕಾಡುಪ್ರಾಣಿಗಳ ವಧೆ ವಿಂಡ್ಹೋಕ್: ಜಗತ್ತಿನಾದ್ಯಂತ ಕಾಡುಪ್ರಾಣಿಗಳನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಯುತ್ತಿವೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಕಾಡುಪ್ರಾಣಿಗಳ ಹತ್ಯೆಗೆ ಕಠಿಣ ಶಿಕ್ಷೆಯಿದೆ. ಅದರೆ ನಮೀಬಿಯಾ ಎಂಬ ಆಫ್ರಿಕಾದ ದೇಶದಲ್ಲಿ ಸರ್ಕಾರವೇ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶಿಸಿದೆ. ಬರದಿಂದ ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸಲು 83 ಆನೆಗಳು ಸಹಿತ 723 ಕಾಡುಪ್ರಾಣಿಗಳನ್ನು ಕೊಲ್ಲುವ ಯೋಜನೆ ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸ ವಿತರಿಸುವುದಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಜನರಿಗೆ ಮಾಂಸ ಹಂಚಲು 83 ಆನೆಗಳ ಹತ್ಯೆ! Read More »

ಆಸ್ಪತ್ರೆ ಆವರಣದಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಜೋಧ್‌ಪುರ: ಕೋಲ್ಕತದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಘಟನೆಗೆ ವ್ಯಕ್ತವಾಗಿರುವ ಪ್ರತಿಭಟನೆಯ ಬಿಸಿ ತಣ್ಣಗಾಗುವ ಮೊದಲೇ ರಾಜಸ್ಥಾನದಲ್ಲಿ ಇದೇ ಮಾದರಿಯ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ರಾಜಸ್ಥಾನದ ಜೋಧ್‌ಪುರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.ಬಾಲಕಿ ತಾಯಿ ಗದರಿಸಿದ ಕಾರಣಕ್ಕೆ ಸಿಟ್ಟಿನಿಂದ ಕಳೆದ ಭಾನುವಾರ ಮನೆ ತೊರೆದಿದ್ದಳು. ಅದೇ ದಿನ ಸಂಜೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆದರೆ ಪೊಲೀಸರಿಗೆ ಸೋಮವಾರ ಸಂಜೆ ಮಾಹಿತಿ ಸಿಕ್ಕಿದೆ.

ಆಸ್ಪತ್ರೆ ಆವರಣದಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ Read More »

ಸಿದ್ದರಾಮಯ್ಯ ಸಿಎಂ ಆದ ಬಳಿಕ 5 ಸಾವಿರ ಕೋಟಿ ರೂ. ಹಗರಣ: ವಿಜಯೇಂದ್ರ

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ 5,000 ಕೋಟಿ ರೂ. ಹಗರಣವಾಗಿದೆ. ಅಭಿವೃದ್ಧಿ ಮಾಡುತ್ತೇವೆ ಎಂದು ಅಹಿಂದಾ ಸಮಾವೇಶ ಮಾಡಿಕೊಂಡು ಈಗ ಅಹಿಂದಾ ವರ್ಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಸ್‌/ಎಸ್ಟಿಗೆ ಮೀಸಲಾದ ಹಣವನ್ನು ಲೂಟಿ ಹೊಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದ್ದು, ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಮಂತ್ರಿಗಳು ವಿಧಾನಸೌಧಕ್ಕೆ ಬರುತ್ತಿಲ್ಲ. ಡಿ.ಕೆ ಶಿವಕುಮಾರ್ ವೈಷ್ಣೊದೇವಿಗೆ ಹೋಗಿ ಆರ್ಶಿವಾದ ಪಡೆದುಕೊಂಡು ಬಂದಿದ್ದಾರೆ. ಇದೀಗ ಮುಖ್ಯಮಂತ್ರಿಗಳ ರಾಜೀನಾಮೆಗೆ ಕ್ಷಣಗಣನೆ

ಸಿದ್ದರಾಮಯ್ಯ ಸಿಎಂ ಆದ ಬಳಿಕ 5 ಸಾವಿರ ಕೋಟಿ ರೂ. ಹಗರಣ: ವಿಜಯೇಂದ್ರ Read More »

5.35 ತಾಸು ನಡೆದ ಪಂದ್ಯ : ಟೆನಿಸ್‌ನಲ್ಲಿ ನೂತನ ದಾಖಲೆ ಸೃಷ್ಟಿ

ನ್ಯೂಯಾರ್ಕ್‌ : ಅವರಿಬ್ಬರು ಆಡಿದ್ದು ಬರೋಬ್ಬರಿ 5 ತಾಸು 35 ನಿಮಿಷ. ಪಂದ್ಯ ನೋಡುತ್ತಿದ್ದ ಪ್ರೇಕ್ಷಕರಿಗೆ ಟೆನಿಸ್‌ನ ಅಷ್ಟೂ ರೋಮಾಂಚನಗಳು ಈ ಐದೂವರೆ ತಾಸಿನಲ್ಲಿ ದೊರಕಿದೆ. ಒಂದು ಟಿ20 ಕ್ರಿಕೆಟ್‌ ಪಂದ್ಯಕ್ಕೂ ಹೆಚ್ಚು ಹೊತ್ತು ಇವರಿಬ್ಬರೇ ಆಡಿದ್ದಾರೆ.ಇದು ಟೆನಿಸ್‌ ಆಟದ ಇತಿಹಾಸದಲ್ಲೇ ಒಂದು ವಿನೂತನ ದಾಖಲೆ. ನಿನ್ನೆ ನಡೆದ ಯುಎಸ್‌ ಓಪನ್‌ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಬ್ರಿಟನ್‌ನ ಡ್ಯಾನ್‌ ಎವನ್ಸ್‌ ಮತ್ತು ರಷ್ಯಾದ ಕರೆನ್‌ ಕಶನೋವ್‌ ನಡುವೆ ನಡೆದ ಈ ಆಟ ಯುಎಸ್‌ ಓಪನ್‌ ಟೆನಿಸ್‌ನ

5.35 ತಾಸು ನಡೆದ ಪಂದ್ಯ : ಟೆನಿಸ್‌ನಲ್ಲಿ ನೂತನ ದಾಖಲೆ ಸೃಷ್ಟಿ Read More »

ಬಳ್ಳಾರಿ ಜೈಲಿಗೆ ದರ್ಶನ್‌ ಇಂದು ಸ್ಥಳಾಂತರ

ಬೆಂಗಳೂರು: ಕೊಲೆ ಆರೋಪದಲ್ಲಿ ಸೆರೆಯಾಗಿರುವ ನಟ ದರ್ಶನ್‌ ಬಳ್ಳಾರಿ ಜೈಲಿಗೆ ಹೋಗುತ್ತಿರುವುದು ಇದು ಎರಡನೇ ಸಲ.ಈ ಮೊದಲು ಅವರು ಶೂಟಿಂಗ್‌ ಸಲುವಾಗಿ ಕೆಲವು ದಿನ ಬಳ್ಳಾರಿ ಜೈಲಿಗೆ ಹೋಗಿ ಬರುತ್ತಿದ್ದರು. 2017ರಲ್ಲಿ ತೆರೆ ಕಂಡಿದ್ದ ಚೌಕ ಸಿನಿಮಾದ ಶೂಟಿಂಗ್‌ ಬಳ್ಳಾರಿ ಜೈಲಿನಲ್ಲಿ ನಡೆದಿತ್ತು. ಕೊನೆ ಭಾಗವನ್ನು ಜೈಲಿನಲ್ಲಿರುವ ಖಾಲಿ ಸೆಲ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.ಈ ಚಿತ್ರದ ಶೂಟಿಂಗ್‌ಗಾಗಿ ದರ್ಶನ್‌ ಜೈಲಿಗೆ ಹೋಗಿದ್ದರು. ಅಂದು ಶೂಟಿಂಗ್‌ಗಾಗಿ ಹೋದಾಗ ಅಲ್ಲಿದ್ದ ಕೈದಿಗಳು ಅವರನ್ನು ನೋಡಲು ಹಾತೊರೆದಿದ್ದರು. ಇಂದು ಅದೇ ಜೈಲಿಗೆ ತಾನೇ

ಬಳ್ಳಾರಿ ಜೈಲಿಗೆ ದರ್ಶನ್‌ ಇಂದು ಸ್ಥಳಾಂತರ Read More »

ಇನ್ನು ಡಿಜಿಟಲ್‌ ಮಾಧ್ಯಮದಲ್ಲೂ ಬರಲಿದೆ ಸರಕಾರದ ಜಾಹೀರಾತು

ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ ಬಿಡುಗಡೆ ಬೆಂಗಳೂರು : ಡಿಜಿಟಲ್ ಮಾಧ್ಯಮ ಈಗ ಬಹಳ ಪ್ರಭಾವಶಾಲಿಯಾಗಿದ್ದು, ಹೆಚ್ಚು ಜನರನ್ನು ತಲುಪುತ್ತದೆ. ಅದರಲ್ಲೂ ಯುವ ಸಮುದಾಯವನ್ನು ತಲುಪಲು ಡಿಜಿಟಲ್‌ ಮಾಧ್ಯಮ ಸುಲಭ ದಾರಿ ಎಂದು ಕಂಡುಕೊಂಡಿರುವ ಸರಕಾರ ಇನ್ನು ಮುಂದೆ ಡಿಜಿಟಲ್‌ ಮಾಧ್ಯದಲ್ಲೂ ಜಾಹೀರಾತು ನೀಡಲು ನಿರ್ಧರಿಸಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024ನ್ನು ಜಾರಿಗೊಳಿಸಿ ಡಿಜಿಟಲ್ ಜಾಹೀರಾತಿಗೆ ಹೆಚ್ಚಿನ ಆದ್ಯತೆ

ಇನ್ನು ಡಿಜಿಟಲ್‌ ಮಾಧ್ಯಮದಲ್ಲೂ ಬರಲಿದೆ ಸರಕಾರದ ಜಾಹೀರಾತು Read More »

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ    ಉದ್ಘಾಟನೆ ನಡೆಯಿತು. ಸತೀಶ್ ಬೊಲಾರ್ ದೀಪ ಬೆಳಗಿಸಿ ಉದ್ಘಾಟಿಸಿ, ಜೀವನದಲ್ಲಿ ಸವಾಲುಗಳನ್ನು   ಧೈರ್ಯದಿಂದ  ಎದುರಿಸಿ.  ಎಲ್ಲಾ ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ರೀತಿಯ  ಕೌಶಲ್ಯ ಇದ್ದೇ ಇರುತ್ತದೆ. ಅದನ್ನು ನಾವು ಸಮಯೋಚಿತವಾಗಿ ಪ್ರಸ್ತುತ ಪಡಿಸಬೇಕು. ನಾಯಕತ್ವ ಗುಣ ಮೈಗೂಡಿಸಿ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ  ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ,   ಪೋಷಕರು ತಮ್ಮ ಮಕ್ಕಳಿಗೆ ಉತ್ತಮ

ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ Read More »

error: Content is protected !!
Scroll to Top