ರಾಜ್ಯದಲ್ಲಿ ದೊಡ್ಡದೊಂದು ಬದಲಾವಣೆಗೆ ಮುಹೂರ್ತವೆ ಈ ಭೇಟಿ?

ವಾಷಿಂಗ್ಟನ್‌ನಲ್ಲಿ ರಾಹುಲ್‌-ಡಿಕೆಶಿ ಭೇಟಿ ಬಳಿಕ ಗರಿಗೆದರಿದ ಕುತೂಹಲ ಬೆಂಗಳೂರು : ಕಾಂಗ್ರೆಸಿನೊಳಗೆಯೇ ಮುಖ್ಯಮಂತ್ರಿ ಬದಲಾವಣೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಕ್ಷದ ವರಿಷ್ಠ ನಾಯಕ ರಾಹುಲ್‌ ಗಾಂಧಿಯನ್ನು ಭೇಟಿಯಾಗಿರುವುದು ಅನೇಕ ಊಹಾಪೋಹಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ತಾನು ಮತ್ತು ರಾಹುಲ್‌ ಗಾಂಧಿ ಏಕಕಾಲದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿರುವುದು ಕಾಕತಾಳೀಯ, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಅಮೆರಿಕಕ್ಕೆ ಹೋಗುವ ಮೊದಲೇ ಸ್ಪಷ್ಟನೆ ನೀಡಿದ್ದರೂ ಹೀಗೆ ಕಾರಣವಿಲ್ಲದೆ ಯಾವುದೇ ನಡೆಯನ್ನು […]

ರಾಜ್ಯದಲ್ಲಿ ದೊಡ್ಡದೊಂದು ಬದಲಾವಣೆಗೆ ಮುಹೂರ್ತವೆ ಈ ಭೇಟಿ? Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

ಪುತ್ತೂರು: ಬನ್ನೂರು ಕೃಷ್ಣ ನಗರದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಭರತನಾಟ್ಯ ತರಗತಿ ಸೆ.9ರಂದು ಪ್ರಾರಂಭಗೊಂಡಿತು. ಐಕ್ಯಮ್ ಕಲಾ ಅಕಾಡೆಮಿ ಶಿಕ್ಷಕಿ ವಿದುಷಿ ನಿಖಿತಾ ಪಾಣಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಭರತನಾಟ್ಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಅಧ್ಯಕ್ಷ ತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು ಭರತನಾಟ್ಯದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕಿ ಪ್ರತಿಭಾ ದೇವಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸವಿತಾ ಕೆ. ಸ್ವಾಗತಿಸಿದರು. ಶಿಕ್ಷಕಿ ಯಶುಭ ರೈ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ Read More »

ಹೆದ್ದಾರಿಗಳಲ್ಲಿ 20 ಕಿ. ಮೀ. ಪ್ರಯಾಣ ಫ್ರೀ

ಜಿಎನ್‌ಎಸ್‌ಎಸ್‌ ಟೋಲ್‌ ಪದ್ಧತಿ ಅಳವಡಿಕೆ ಬಳಿಕ ಬದಲಾಗಲಿದೆ ಶುಲ್ಕ ವ್ಯವಸ್ಥೆ ಹೊಸದಿಲ್ಲಿ: ಸ್ಯಾಟಲೈಟ್ ಆಧಾರಿತ ಎಲೆಕ್ಟ್ರಿಕ್‌ ಟೋಲ್ ವಸೂಲಿ ವ್ಯವಸ್ಥೆ ಅಳವಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಬಂಧನೆ-2008ಕ್ಕೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ಈಗಿರುವ ಟೋಲ್‌ಗಳಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (GNSS) ಆಧಾರಿತ ಟೋಲ್ ಪದ್ಧತಿ ಜಾರಿಗೆ ಬರಲಿದೆ.ವಾಹನಗಳು ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂನ ಆನ್‌ಬೋರ್ಡ್ ಯೂನಿಟ್ (OBUs) ಹೊಂದಿದ್ದರೆ ಟೋಲ್‌ಗೇಟ್‌ ಕ್ರಾಸ್ ಮಾಡಿದಾಗ ಪ್ರಯಾಣಿಸಿದ ದೂರಕ್ಕೆ

ಹೆದ್ದಾರಿಗಳಲ್ಲಿ 20 ಕಿ. ಮೀ. ಪ್ರಯಾಣ ಫ್ರೀ Read More »

ವೇಶ್ಯಾವಾಟಿಕೆ ದಂಧೆಯಲ್ಲಿ ಸರಕಾರಿ ಶಾಲೆ ಶಿಕ್ಷಕಿ ಆರೋಪಿ

ಕಾರ್ಕಳ ಸಮೀಪ ಸಾಣೂರಿನಲ್ಲಿ ಶಿಕ್ಷಕಿಯ ಮನೆಯಲ್ಲಿ ನಡೆಯುತ್ತಿದ್ದ ದಂಧೆ ಕಾರ್ಕಳ: ಕಾರ್ಕಳ ಸಮೀಪ ಸಾಣೂರಿನ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದು, ಇದರಲ್ಲಿ ಓರ್ವ ಸರಕಾರಿ ಶಾಲಾ ಶಿಕ್ಷಕಿಯೂ ಶಾಮೀಲಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮೂರನೇ ಆರೋಪಿಯಾಗಿ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸರ್ಕಾರಿ ಶಾಲೆಯೊಂದರ ಶಿಕ್ಷಕಿಯನ್ನು ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಿದ್ದಾರೆ.ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್‌ನ ಪ್ರಮೀಳಾ ವಿಜಯಕುಮಾರ್ ಜೈನ್ ಎಂಬಾಕೆಗೆ ಸೇರಿದ ಮನೆಯಲ್ಲಿ ಕೆಲ ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂದು

ವೇಶ್ಯಾವಾಟಿಕೆ ದಂಧೆಯಲ್ಲಿ ಸರಕಾರಿ ಶಾಲೆ ಶಿಕ್ಷಕಿ ಆರೋಪಿ Read More »

ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್…

ಈ ಕುಟುಂಬ ಹಾಡಿದ್ದು ಒಂದು ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು ಗೋವಾದಲ್ಲಿ ಇರುವ ಪ್ರಸಿದ್ಧವಾದ ಮಂಗೇಶಿ ದೇವಸ್ಥಾನಕ್ಕೆ ಕುಳಾವಿಗಳಾದ ಒಂದು ಶ್ರದ್ಧಾವಂತ ಕುಟುಂಬ ಮುಂದೆ ಮಂಗೇಷ್ಕರ್ ಎಂಬ ಉಪನಾಮವನ್ನು ಪಡೆಯಿತು. ಈ ಕುಟುಂಬ ಭಾರತೀಯ ಸಂಗೀತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಭಾರಿ ದೊಡ್ಡ ಪುಸ್ತಕವನ್ನೇ ಬರೆಯಬೇಕು ಎಂದು ಆಸೆ ಇದೆ. ಅದನ್ನು ಸಂಕ್ಷಿಪ್ತ ಮಾಡಿ ಇಲ್ಲಿ ದಾಖಲಿಸುತ್ತಿದ್ದೇನೆ. ಅಪ್ಪ ದೀನಾನಾಥ್ ಮಂಗೇಷ್ಕರ್ ಸಂಗೀತ ಗುರು ಆಗಿದ್ದರು. ಮರಾಠಿ ನಾಟಕದ ಮಂಡಳಿಯಲ್ಲಿ ಹಾರ್ಮೋನಿಯಂ ಮೇಷ್ಟ್ರು ಆಗಿದ್ದರು. ಹಲವು ಕಡೆಗಳಲ್ಲಿ

ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್… Read More »

ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾದ ಪ್ರಕರಣದ ಮುಂದಿನ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

ಪುತ್ತೂರು : ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮಹಿಳೆಯೊಬ್ಬರು  ಅತ್ಯಾಚಾರ ಆರೋಪದಡಿ ದೂರು ನೀಡಿದ್ದು, ದಾಖಲಾಗಿರುವ ಎಫ್.ಐ.ಆರ್. ಮತ್ತು ನ್ಯಾಯಾಲಯದ ಮುಂದಿನ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬೆಂಗಳೂರಿನ ಹೊಟೇಲೊಂದರಲ್ಲಿ ಅತ್ಯಾಚಾರ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಅರುಣ್ ಪುತ್ತಿಲ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರುಣ್ ಪುತ್ತಿಲ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ. ಪಿ. ಹೆಗ್ಡೆ ಅವರು ಮಹಿಳೆಯ ದೂರು ರಾಜಕೀಯ

ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾದ ಪ್ರಕರಣದ ಮುಂದಿನ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ Read More »

ತುಳು ಲಿಪಿ ‘ಯುನಿಕೋಡ್‍’ಗೆ ಸೇರ್ಪಡೆ | ಮಹತ್ವದ ಮೈಲಿಗಲ್ಲು

ಮಂಗಳೂರು : ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ ‘ಯುನಿಕೋಡ್’ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ. ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಭಾಷಿಕರಿಗೆ ಈಗ ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವುದು ಉಲ್ಲೇಖನೀಯ ಅಂಶ. ಯುನಿಕೋಡ್ ಆವೃತ್ತಿ 16 ರಲ್ಲಿ ತುಳು ಸೇರ್ಪಡೆಯಾಗಿದೆ. ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು

ತುಳು ಲಿಪಿ ‘ಯುನಿಕೋಡ್‍’ಗೆ ಸೇರ್ಪಡೆ | ಮಹತ್ವದ ಮೈಲಿಗಲ್ಲು Read More »

ದ ಕ ಜಿಲ್ಲಾ ಕ.ಸಾ.ಪ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆ -4 | 16 ನೇ ಶತಮಾನದ ವಿಗ್ರಹ ಪತ್ತೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಇರುವ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಭ್ಯವಾದ ಸುಮಾರು 302 ವರ್ಷ ಪುರಾತನ 17ನೇ ಶತಮಾನದ ಕನ್ನಡ ಶಿಲಾಶಾಸನವನ್ನು ಸಂಶೋಧಕರಾದ ಡಾ. ಉಮಾನಾಥ ಶೆಣೈ ಅವರ ನೇತೃತ್ವದಲ್ಲಿ ಯುವ ಅಧ್ಯಯನಕಾರರಾದ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ತುಳುನಾಡ್ ಸಹಕಾರದೊಂದಿಗೆ ಅಧ್ಯಯನ ಮಾಡಲಾಯಿತು. ಪುತ್ತೂರು ತಾಲೂಕು ಕನ್ನಡ

ದ ಕ ಜಿಲ್ಲಾ ಕ.ಸಾ.ಪ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆ -4 | 16 ನೇ ಶತಮಾನದ ವಿಗ್ರಹ ಪತ್ತೆ Read More »

ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ನ್ಯೂಸ್ ಪುತ್ತೂರಿನ “ಶಿವಾಮೃತ’ ಸಂಚಿಕೆ ಹಸ್ತಾಂತರ

ನ್ಯೂಸ್ ಪುತ್ತೂರು ಹೊರತಂದ ‘ಶಿವಾಮೃತ’ ಸಂಚಿಕೆಯನ್ನು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಅವರಿಗೆ ನೀಡಲಾಯಿತು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಸಂಚಿಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಪ್ರಸಾದ್ ಕೆ.ಎನ್‍. ಕಡಬ ಉಪಸ್ಥಿತರಿದ್ದರು.

ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ನ್ಯೂಸ್ ಪುತ್ತೂರಿನ “ಶಿವಾಮೃತ’ ಸಂಚಿಕೆ ಹಸ್ತಾಂತರ Read More »

ಮುಂಬಯಿಯ ಅದ್ದೂರಿ ಬಂಗಲೆ ಮಾರಿದ ಕಂಗನಾ

ಎಮರ್ಜೆನ್ಸಿ ಚಿತ್ರದಿಂದಾಗಿ ನಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಶಂಕೆ ಮುಂಬಯಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಬದುಕಿನ ಮೇಲೆ ಬೆಳಕು ಚೆಲ್ಲುವ ಎಮರ್ಜೆನ್ಸಿ ಚಿತ್ರ ವಿವಾದದಲ್ಲಿ ಸಿಲುಕಿರುವಾಗಲೇ ಈ ಚಿತ್ರದ ನಿರ್ದೇಶಕಿ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮುಂಬಯಿಯಲ್ಲಿರುವ ತನ್ನ ವೈಭವೋಪೇತ ಬಂಗಲೆಯನ್ನು ಮಾರಾಟ ಮಾಡಿರುವುದು ಹಲವು ಊಹಾಪೋಹಗಳನ್ನು ಸೃಷ್ಟಿಸಿದೆ. ಎಮರ್ಜೆನ್ಸಿಯಿಂದಾಗಿ ಕೈ ಖಾಲಿಯಾಗಿ ಕಂಗನಾ ರಣಾವತ್‌ ಬಂಗಲೆ ಮಾರಬೇಕಾಯಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.ಬಂಗಲೆ ಮಾರಾಟದ ಬಗ್ಗೆ ಕಂಗನಾ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ ಮಾರಾಟ

ಮುಂಬಯಿಯ ಅದ್ದೂರಿ ಬಂಗಲೆ ಮಾರಿದ ಕಂಗನಾ Read More »

error: Content is protected !!
Scroll to Top