ತಿರುಪತಿ ಲಡ್ಡಿಗೆ ದನದ ಕೊಬ್ಬು ಮೀನಿನೆಣ್ಣೆ | ವಿಶ್ವ ಹಿಂದೂ ಪರಿಷದ್ ತೀವ್ರ ಖಂಡನೆ | ಕಠಿಣ ಶಿಕ್ಷೆಗೆ ಆಗ್ರಹ

ಮಂಗಳೂರು: ಪ್ರಪಂಚದಾದ್ಯಂತ  ತಿರುಪತಿ ವೆಂಕಟರಮಣನ ಮೇಲೆ ಅತೀವ ಭಕ್ತಿ ಭಾವ ಇದ್ದು ಅಲ್ಲಿಯ ಪ್ರಸಾದವನ್ನು ತಿರುಪತಿ ದೇವರ ಪ್ರತೀಕದಂತೆ ನೋಡುತ್ತಾರೆ. ಪ್ರಸಾದವನ್ನು  ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು ಸಮಸ್ತ ಹಿಂದೂ ಸಮಾಜಕ್ಕೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಇದಕ್ಕೆ ಕಾರಣಕರ್ತರಾಗಿದ್ದ ಹಿಂದಿನ ಮುಖ್ಯಮಂತ್ರಿ ಜಗನ್ ರವರ ಸರಕಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ಸಿ ಬಿ ಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು […]

ತಿರುಪತಿ ಲಡ್ಡಿಗೆ ದನದ ಕೊಬ್ಬು ಮೀನಿನೆಣ್ಣೆ | ವಿಶ್ವ ಹಿಂದೂ ಪರಿಷದ್ ತೀವ್ರ ಖಂಡನೆ | ಕಠಿಣ ಶಿಕ್ಷೆಗೆ ಆಗ್ರಹ Read More »

ವಿವೇಕಾನಂದ ಕಾಲೇಜಿನಲ್ಲಿ 43ನೇ ವರ್ಷದ ಮಾನ್ಸೂನ್‌ ಚೆಸ್ ಪಂದ್ಯಾಟ | ಚದುರಂಗ ಆಟವಲ್ಲ, ಜೀವನ ಪಾಠ : ಗೋಪಾಲಕೃಷ್ಣ ಭಟ್

ಪುತ್ತೂರು: ಚದುರಂಗ ಎಂಬುದು ಕೇವಲ ಆಟ ಮಾತ್ರವಲ್ಲ, ಬದಲಾಗಿ  ಜೀವನದುದ್ದಕ್ಕೂ ಅರಿತುಕೊಳ್ಳುವ ಪಾಠ. ಇಲ್ಲಿ ಸ್ಪರ್ಧಾಳುಗಳಾಗಿ ಆಗಮಿಸಿರುವ ಎಲ್ಲಾಆಟಗಾರರು ಚದುರಂಗದ ಆಟದಲ್ಲಿ ಮಾತ್ರ ಚಾಂಪಿಯನ್ಸ್‌ ಆಗದೆ ಜೀವನ ಎಂಬ ಚದುರಂಗದಲ್ಲೂ ಚಾಂಪಿಯನ್ಸ್‌ ಗಳಾಗಬೇಕು. ಸಮಾಜದಲ್ಲಿಉತ್ತಮ ನಾಗರಿಕನಾಗಿ, ದೇಶಕ್ಕೆಉತ್ತಮ ಆಸ್ತಿಯಾಗಬೇಕು. ಸ್ವಾಸ್ಥ್ಯ ಮನಸ್ಸಿನೊಂದಿಗೆ, ಸ್ವಾಸ್ಥ್ಯ ಸಮಾಜಕ್ಕಾಗಿದುಡಿಯಬೇಕು” ಎಂದು ದ್ವಾರಕಾ ಕನ್‌ಸ್ಟ್ರಕ್ಷನ್ ಮಾಲಕ ಗೋಪಾಲಕೃ ಭಟ್ ಹೇಳಿದರು. ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಕಾಲೇಜಿನ ಸುವರ್ಣ ಮಹೋತ್ಸವ

ವಿವೇಕಾನಂದ ಕಾಲೇಜಿನಲ್ಲಿ 43ನೇ ವರ್ಷದ ಮಾನ್ಸೂನ್‌ ಚೆಸ್ ಪಂದ್ಯಾಟ | ಚದುರಂಗ ಆಟವಲ್ಲ, ಜೀವನ ಪಾಠ : ಗೋಪಾಲಕೃಷ್ಣ ಭಟ್ Read More »

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಕೆ ದೃಢ : ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ

ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್‌, ಸೋಯಾಬಿನ್‌, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರಕೆ ತಿರುಪತಿ: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪ ನಿಜ ಎನ್ನುವುದು ಲ್ಯಾಬ್‌ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಾಯ್ಡು ಹೇಳಿಕೆ ನಿನ್ನೆ ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. ತಿರುಪತಿ ತಿಮ್ಮಪ್ಪನ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಯ ಜೊತೆಗೆ ಹಿಂದಿನ ಆಂಧ್ರ ಪ್ರದೇಶ ಸರಕಾರ ಚೆಲ್ಲಾಟವಾಡಿದ್ದು

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಕೆ ದೃಢ : ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ Read More »

ದಾವಣಗೆರೆಯಲ್ಲೂ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ

ದಾವಣಗೆರೆ: ದಾವಣಗೆರೆಯ ಬೇತೂರ ರಸ್ತೆಯ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್‌ಸ್ಟೆಬಲ್‌ ರಘು ಎಂಬವರಿಗೆ ಗಾಯವಾಗಿದೆ. ಕೂಡಲೇ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಸೇರಿದಂತೆ ಪ್ರಮುಖ ಮುಸ್ಲಿಂ‌ ನಾಯಕರು ಯುವಕರನ್ನು ನಿಯಂತ್ರಣ ಮಾಡಲು ಮುಂದಾಗಿದ್ದಾರೆ. ಕಲ್ಲುತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಕಲ್ಲು ತೂರಿದ ಕಿಡಿಗೇಡಿಗಳನ್ನು ಪೊಲೀಸರು ಓಡಿಸಿಕೊಂಡು ಹೋಗಿದ್ದು, ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.

ದಾವಣಗೆರೆಯಲ್ಲೂ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ Read More »

ಈ ಕತೆಯಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ!

ಶತಮಾನಗಳಿಂದ ಬೆಳಕಿನ ಪುಂಜಕ್ಕೆ ಬಂದು ಡಿಕ್ಕಿಯಾಗಿ ರೆಕ್ಕೆ ಸುಟ್ಟುಕೊಳ್ಳುವ ಹಾತೆಗಳು ನಾವಾಗಬೇಕೆ? ಇವತ್ತೂ ಕೂಡ ಒಂದು ಪ್ರಾತಿನಿಧಿಕ ಕತೆಯಿಂದ ಲೇಖನ ಆರಂಭ ಮಾಡುತ್ತೇನೆ.ಒಂದೂರಿನಲ್ಲಿ ಒಬ್ಬರು ಬಹಳ ದೊಡ್ಡ ಪುರೋಹಿತರು ಇದ್ದರು. ಅವರು ಜ್ಯೋತಿಷಿ ಕೂಡ ಆಗಿದ್ದರಿಂದ ಇಡೀ ಗ್ರಾಮ ಅವರನ್ನು ದೇವರ ಹಾಗೆ ಕಾಣುತ್ತಿತ್ತು. ಅವರದ್ದು ಸುಂದರವಾದ ಕುಟುಂಬ. ಒಳ್ಳೆಯ ಸಾತ್ವಿಕ ಹೆಂಡತಿ ಮತ್ತು ಒಂದೇ ಒಂದು ಗಂಡು ಮಗು. ಸಂಪಾದನೆ ಕೂಡ ಚೆನ್ನಾಗಿತ್ತು. ಆ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ ತಗುಲಿತೋ… ಒಂದು ಕೆಟ್ಟ ಗಳಿಗೆಯಲ್ಲಿ

ಈ ಕತೆಯಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ! Read More »

ಮಂಗಳೂರು ಮೇಯರ್ ಮನೋಜ್‍ ಕುಮಾರ್, ಉಪಮೇಯರ್ ಭಾನುಮತಿ ಆಯ್ಕೆ

ಮಂಗಳೂರು : ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ದೇರೆಬೈಲ್ ವಾರ್ಡ್‌ನಿಂದ ಮನೋಜ್ ಕುಮಾರ್, ಉಪಮೇಯರ್ ಆಗಿ ಬೋಳಾರ್ ವಾರ್ಡ್‍ ನಿಂದ ಭಾನುಮತಿ ಆಯ್ಕೆಯಾದರು. ಎಂಸಿಸಿಯ 25ನೇ ಅವಧಿಗೆ ಮೇಯರ್, ಉಪಮೇಯರ್ ಹಾಗೂ ನಾಲ್ವರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸೆ.19ರಂದು ಎಂಸಿಸಿಯ ಮಂಗಳಾ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಮನೋಜ್ ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅರ್ಹ

ಮಂಗಳೂರು ಮೇಯರ್ ಮನೋಜ್‍ ಕುಮಾರ್, ಉಪಮೇಯರ್ ಭಾನುಮತಿ ಆಯ್ಕೆ Read More »

ನಾಳೆ (ಸೆ.20) : ಈ ಪ್ರದೇಶದಲ್ಲಿ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ?

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಲ್ಲಿ  ಸೆ.20 ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. ಕ್ಯಾಂಪ್ಕೋ ಉಪಕೇಂದ್ರದಿಂದ ಹೊರಡುವ ಮುಕ್ವೆ, ಮುಕ್ರಂಪಾಡಿ, ಕೆಮ್ಮಿಂಜೆ ಹಾಗೂ ಮುಂಡೂರು ಫೀಡರ್‍ ನಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ. ಆದ್ದರಿಂದ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‍ ನಿಂದ ವಿದ್ಯುತ್ ಸರಬರಾಜಾಗುವ ಮುಕ್ವೆ, ಮಂಡೂರು, ಕೆಮ್ಮಿಂಜೆ ಹಾಗೂ ಆರ್ಯಾಪು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಬೇಕಾಗಿ

ನಾಳೆ (ಸೆ.20) : ಈ ಪ್ರದೇಶದಲ್ಲಿ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? Read More »

ಮಹಿಳೆಗೆ ಲೈಂಗಿಕ ದೌರ್ಜನ್ಯ | ಆರೋಪಿ ನರಸಿಂಹ ಪ್ರಸಾದ್ ಪಾಂಗಣ್ಣಾಯ ಬಂಧನ

ಬೆಳ್ಳಾರೆ: ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ನರಸಿಂಹ ಪ್ರಸಾದ್ ಪಾಂಗಣ್ಣಾಯ ಬರೆಪ್ಪಾಡಿ ಅವರ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಕುರಿತು ತಿಳಿದು ಬಂದಿದೆ. ಜ್ಯೋತಿಷಿ ಹಾಗೂ ಪುರೋಹಿತರಾಗಿದ್ದ ನರಸಿಂಹ ಪ್ರಸಾದ್ ಪಾಂಗಣ್ಣಾಯರು ಎಡಮಂಗಲದ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬುಧವಾರ ತಡರಾತ್ರಿ ಬೆಳ್ಳಾರೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಗೆ ಲೈಂಗಿಕ ದೌರ್ಜನ್ಯ | ಆರೋಪಿ ನರಸಿಂಹ ಪ್ರಸಾದ್ ಪಾಂಗಣ್ಣಾಯ ಬಂಧನ Read More »

ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಭೂಮಂಜೂರಾತಿ ಮತ್ತು ಅನುದಾನ | ಶಾಸಕ ಅಶೋಕ್ ರೈಯಿಂದ ಸಾರಿಗೆ ಸಚಿವರಿಗೆ ಮನವಿ

ಪುತ್ತೂರು: ಉಪ್ಪಿನಂಗಡಿಯಲ್ಲಿ ನೂತನ ಬಸ್ಸು ನಿಲ್ದಾಣ ನಿರ್ಮಾಣದ ಅಗತ್ಯವಿದ್ದು ಈಗ ಇರುವ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಭೂಮಂಜೂರಾತಿ ಮತ್ತು ಅನುದಾನ | ಶಾಸಕ ಅಶೋಕ್ ರೈಯಿಂದ ಸಾರಿಗೆ ಸಚಿವರಿಗೆ ಮನವಿ ಸಮೀಪದಲ್ಲೇ ಜಾಗವನ್ನು ಗುರುತಿಸಲಾಗಿದ್ದು ಅದನ್ನು ಮಂಜೂರು ಮಾಡಿಸುವುದರ ಜೊತೆ ಅನುದಾನವನ್ನೂ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮವು

ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಭೂಮಂಜೂರಾತಿ ಮತ್ತು ಅನುದಾನ | ಶಾಸಕ ಅಶೋಕ್ ರೈಯಿಂದ ಸಾರಿಗೆ ಸಚಿವರಿಗೆ ಮನವಿ Read More »

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ | 77.98 ಲಕ್ಷ ರೂ. ನಿವ್ವಳ ಲಾಭ, ಶೇ.15 ಡಿವಿಡೆಂಡ್ ಘೋಷಣೆ : ಪದ್ಮನಾಭ ಭಟ್ ಪೆರ್ನಾಜೆ

ಪುತ್ತೂರು: ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 77.98 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತ 19 ವರ್ಷಗಳಿಂದ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. 2015-16 ರಿಂದ ನಿರಂತರವಾಗಿ ಶೇ.100 ಸಾಲ ವಸೂಲಾತಿ ಮಾಡಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಪೆರ್ನಾಜೆ ಹೇಳಿದರು.   ಅವರು ಸಂಘದ ಶತಾನಂದ ಸಭಾ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಷಾಂತ್ಯಕ್ಕೆ ಸಂಘದಲ್ಲಿ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ | 77.98 ಲಕ್ಷ ರೂ. ನಿವ್ವಳ ಲಾಭ, ಶೇ.15 ಡಿವಿಡೆಂಡ್ ಘೋಷಣೆ : ಪದ್ಮನಾಭ ಭಟ್ ಪೆರ್ನಾಜೆ Read More »

error: Content is protected !!
Scroll to Top