ಅ.5ಕ್ಕೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಂತು ಬಿಡುಗಡೆ

ದಸರಾ ಹಬ್ಬದ ಸಂದರ್ಭದಲ್ಲಿ ಕೇಂದ್ರದಿಂದ ರೈತರಿಗೆ ಗಿಫ್ಟ್‌ ಹೊಸದಿಲ್ಲಿ: ದಸರಾ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರಕಾರ ರೈತರಿಗೆ ಉಡುಗೊರೆಯೊಂದನ್ನು ನೀಡಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಬಾರಿ ನೀಡಲಾಗುವ ಕಂತಿನ ಹಣ ಅಕ್ಟೋಬರ್ 5ಕ್ಕೆ ಬರಲಿದೆ.ಈವರೆಗೆ 17 ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅ. 5ಕ್ಕೆ 18ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಜೂನ್ 18ಕ್ಕೆ 17ನೇ ಕಂತಿನ ಹಣ ಬಿಡುಗಡೆ ಆಗಿತ್ತು. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಎಲ್ಲ ನೋಂದಾಯಿತ […]

ಅ.5ಕ್ಕೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಂತು ಬಿಡುಗಡೆ Read More »

ಮುಂಬಯಿಯಲ್ಲಿ ಮಹಾಮಳೆ : 4 ಮಂದಿ ಸಾವು

ಅನಾಹುತಗಳ ಸರಮಾಲೆ ಸೃಷ್ಟಿಸಿದ ಮಳೆ ಮುಂಬಯಿ: ಮುಂಬಯಿ ಮಹಾನಗರ ಸೇರಿ ಮಹಾರಾಷ್ಟ್ರದ ವಿವಿಧೆಡೆ ನಿನ್ನೆಯಿಂದೀಚೆಗೆ ಸುರಿಯುತ್ತಿರುವ ಮಹಾಮಳೆ ಅನಾಹುತಗಳ ಸರಮಾಲೆಯನ್ನು ಸೃಷ್ಟಿಸಿದೆ. ಮಳೆಗೆ ಮುಂಬಯಿಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಸಂಜೆ ಹೊತ್ತಿಗೆ ಮಳೆ ಶುರುವಾಗಿದ್ದು, ಸತತವಾಗಿ 5 ತಾಸು ಸುರಿದಿದೆ. ಮುಂಬಯಿ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ.ಭಾರಿ ಮಳೆಯ ಹಿನ್ನೆಲೆಯಲ್ಲಿ ನಿನ್ನೆಯೇ ಮುಂಬಯಿ ಮತ್ತು ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರೈಲು, ರಸ್ತೆ ಸಂಚಾರ ವ್ಯತ್ಯಯಗೊಂಡು ಜನರು ತಡರಾತ್ರಿಯವರೆಗೂ

ಮುಂಬಯಿಯಲ್ಲಿ ಮಹಾಮಳೆ : 4 ಮಂದಿ ಸಾವು Read More »

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

ಪುತ್ತೂರು:  ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನಾ ದಿನಾಚರಣೆಯನ್ನು ಎನ್ .ಎಸ್ . ಎಸ್‍ ಘಟಕಗಳ ನೇತೃತ್ವದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ, ಎನ್‍ ಎನ್‍ ಎಸ್‍ ಕಾರ್ಯಕ್ರಮ ಅಧಿಕಾರಿ ಡಾ.ಹರಿಪ್ರಸಾದ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯವ್ಯಾಪ್ತಿಯಲ್ಲಿ ಪ್ರಸ್ತುತ ವ್ಯಕ್ತಿತ್ವ ವಿಕಸನಕ್ಕೆ ಒತ್ತುನೀಡಿ,  ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಕೆಲಸಗಳಿಗೆ

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ Read More »

ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರ ಮನ್‍ ಕಿ ಬಾತ್ ವೀಕ್ಷಣೆ ಪ್ರಮುಖ್ ಆಗಿ ಧನಂಜಯ ಗೌಡ ಪಟ್ಟೆ

ಪುತ್ತೂರು: ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರ ಮನ್ ಕಿ ಬಾತ್ ವೀಕ್ಷಣೆ ಪ್ರಮುಖ್ ರಾಗಿ ಧನಂಜಯ ಗೌಡ ಪಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ. ನರೇಂದ್ರ ಮೋದಿಯವರ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾದ ಮನ್ ಕೀ ಬಾತ್ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಬೆಳಿಗ್ಗೆ 11:00 ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಪಧಾನಿಯವರು ದೇಶದ ಜನರನ್ನು ಉದ್ದೇಶಿಸಿ ಹಾಗೂ ಕೆಲವು ದೇಶದ ಹಾಗೂ ಹೋಗು ಮತ್ತು ಇತರ ಪ್ರಮುಖ ಅಂಶಗಳನ್ನು ಜನರ ಜೊತೆ ಹಂಚಿಕ್ಕೊಳ್ಳುತ್ತಾರೆ  ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಯಾವ

ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರ ಮನ್‍ ಕಿ ಬಾತ್ ವೀಕ್ಷಣೆ ಪ್ರಮುಖ್ ಆಗಿ ಧನಂಜಯ ಗೌಡ ಪಟ್ಟೆ Read More »

ಮುಡಾ ಹಗರಣ : ರಾಜೀನಾಮೆ ಕೇಳಬೇಡಿ ಎಂದು ಹೈಕಮಾಂಡನ್ನು ವಿನಂತಿಸಿದ ಸಿದ್ದರಾಮಯ್ಯ

ಬೆಂಬಲ ಕೊಡಿ, ನನ್ನದೇನೂ ತಪ್ಪಿಲ್ಲ ಎಂದು ಪ್ರತಿಪಾದನೆ ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವುದು ಬಯಲಾದ ಬಳಿಕ ಹೇಗಾದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ನಿನ್ನೆ ಕೋರ್ಟ್‌ ತೀರ್ಪು ಹೊರಬಿದ್ದ ಬೆನ್ನಿಗೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಇನ್ನೊಂದು ವರದಿ ರವಾನಿಸಿದ್ದಾರೆ. ತನಿಖೆ ಆಗಲಿ, ನಾನು ತನಿಖೆ ಎದುರಿಸುತ್ತೇನೆ. ನನಗೆ ಯಾವುದೇ ಭಯವಿಲ್ಲ. ರಾಜೀನಾಮೆ ಕೊಡದೆ ನಾನು ತನಿಖೆ ಎದುರಿಸುತ್ತೇನೆ. ನಿಮ್ಮ ಸಹಕಾರ ಬೇಕು ಎಂದು ವರದಿಯಲ್ಲಿ ಹೈಕಮಾಂಡ್‌ನ ಸಹಕಾರ ಕೇಳಿದ್ದಾರೆ.ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ

ಮುಡಾ ಹಗರಣ : ರಾಜೀನಾಮೆ ಕೇಳಬೇಡಿ ಎಂದು ಹೈಕಮಾಂಡನ್ನು ವಿನಂತಿಸಿದ ಸಿದ್ದರಾಮಯ್ಯ Read More »

ಪುತ್ತೂರು ತಾಲೂಕು ಕಚೇರಿ ಉದ್ಯೋಗಿ ಕನಕರಾಜ್ ನಿಧನ

ಪುತ್ತೂರು: ಇಲ್ಲಿನ ತಾಲೂಕು ಕಚೇರಿಯ ಉದ್ಯೋಗಿ ಕನಕರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕನಕರಾಜ್ ಹೃದಯಾಘಾತದಿಂದ ನಿಧನರಾದರು. ನಿನ್ನೆ ರಾತ್ರಿ ವೇಳೆ ಕನಕರಾಜ್ ಅವರ ಅರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರಿನ ಕೊಳ್ಳೆಗಾಲ ನಿವಾಸಿಯಾಗಿರುವ ಕನಕರಾಜ್ ಈ ಹಿಂದೆ ಬೆಟ್ಟಂಪಾಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿ ಪಡೆದು ತಾಲೂಕು ಕಚೇರಿಯ ಚುನಾವಣಾ

ಪುತ್ತೂರು ತಾಲೂಕು ಕಚೇರಿ ಉದ್ಯೋಗಿ ಕನಕರಾಜ್ ನಿಧನ Read More »

ಮಹಾಲಕ್ಷ್ಮಿಕೊಲೆ ಪ್ರಕರಣ : ಡೆತ್‌ನೋಟ್‌ನಲ್ಲಿದೆ ಅಸಲಿ ಕಾರಣ

ಮೃತದೇಹವನ್ನು 50 ತುಂಡು ಮಾಡಿ ಫ್ರಿಜ್‌ನಲ್ಲಿಟ್ಟಿದ್ದ ಪ್ರಕರಣ ಬೆಂಗಳೂರು : ನಗರದ ವೈಯಾಲಿಕಾವಲ್‌ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬ ವಿವಾಹಿತ ಮಹಿಳೆಯನ್ನು ಕೊಂದು ಮೃತದೇಹವನ್ನು 50ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಜ್‌ನಲ್ಲಿ ತುಂಬಿಸಿಟ್ಟು ಹೋಗಿದ್ದ ಹಂತಕ ತನ್ನ ಹುಟ್ಟೂರಾದ ಒಡಿಶಾಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಬರೆದಿಟ್ಟಿರುವ ಡೆತ್‌ನೋಟ್‌ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕೊಲೆಯ ರಹಸ್ಯ ಬಹಿರಂಗವಾಗಿದೆ.ಕಳೆದ ಸೆ.21ರಂದು ಬೆಳಕಿಗೆ ಬಂದ ಈ ಕೊಲೆ ನಗರವನ್ನು ಬೆಚ್ಚಿಬೀಳಿಸಿತ್ತು. ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕೊಲೆಗಾರನ ಬೆನ್ನತ್ತಿದಾಗ

ಮಹಾಲಕ್ಷ್ಮಿಕೊಲೆ ಪ್ರಕರಣ : ಡೆತ್‌ನೋಟ್‌ನಲ್ಲಿದೆ ಅಸಲಿ ಕಾರಣ Read More »

ಕ್ಯಾಂಟರ್‌ಗೆ ಕಾರು ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು

ಬಾಗಲಕೋಟೆ : ಕ್ಯಾಂಟರ್​ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಅಪಘಾತ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಎಂಬ ನಾಲ್ವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.ಕಾರು ಮುದ್ದೇಬಿಹಾಳದ ಕಡೆ ಹೊರಟಿತ್ತು. ಕ್ಯಾಂಟರ್​ ಮುದ್ದೇಬಿಹಾಳದಿಂದ ಹುನಗುಂದ ಕಡೆ ತೆರಳಿತ್ತು. ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕ್ಯಾಂಟರ್​ಗೆ

ಕ್ಯಾಂಟರ್‌ಗೆ ಕಾರು ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು Read More »

ಕೆಎಸ್‌ಆರ್‌ಟಿಸಿಯಿಂದ ದಸರಾ ಟೂರ್‌ ಪ್ಯಾಕೇಜ್‌

ಮಂಗಳೂರಿನಿಂದ ದೇವಸ್ಥಾನಗಳ ದರ್ಶನಕ್ಕೆ ನಿತ್ಯ ಬಸ್‌ಗಳು ಮಂಗಳೂರು: ಈ ವರ್ಷವೂ ಕೆಎಸ್‌ಆರ್‌ಟಿಸಿ ದಸರಾ ಹಬ್ಬದ ಪ್ರಯುಕ್ತ ವಿಶೇಷ ಟೂರ್‌ ಪ್ಯಾಕೇಜ್‌ ಆಯೋಜಿಸಿದೆ. ಮಂಗಳೂರು ವಿಭಾಗದಿಂದ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಮುರುಡೇಶ್ವರಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅ.3ರಿಂದ 12ರವರೆಗೆ ಯೋಜಿಸಲಾಗಿದೆ. ಮಂಗಳೂರು ಟೂರ್‌ ಪ್ಯಾಕೇಜ್‌ ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು, ಶ್ರೀ ಮಂಗಳಾದೇವಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು

ಕೆಎಸ್‌ಆರ್‌ಟಿಸಿಯಿಂದ ದಸರಾ ಟೂರ್‌ ಪ್ಯಾಕೇಜ್‌ Read More »

ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು ಜೋಹ್ಯಾರಿ ಕಿಟಕಿ

ಸ್ವಅವಲೋಕನದ ಶಕ್ತಿಶಾಲಿಯಾದ ಮಾಪನ ಇದು ಪ್ರಸಿದ್ಧ ವಿಜ್ಞಾನಿಯಾದ ಬೆಂಜಮಿನ್ ಫ್ರಾಂಕ್ಲಿನ್ 1750ರಲ್ಲಿ ಹೇಳಿದ ಒಂದು ಮಾತು ತುಂಬಾನೇ ಅರ್ಥಪೂರ್ಣ. Three Things are extremely HARD to break. Steel, Diamond and Self. ಅಂದರೆ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ವಿಕಸನದ ಹಾದಿಯಲ್ಲಿ ಅದು ತುಂಬಾ ಸವಾಲಿನ ಕೆಲಸವೇ ಹೌದು. ನಮ್ಮನ್ನು ನಾವೇ ರೀಡ್ ಮಾಡಲು ಹಲವು ಮಾದರಿಗಳು ಇಂದು ಲಭ್ಯ ಇದ್ದರೂ ಅದರಲ್ಲಿ ಅತ್ಯುತ್ತಮ ಮತ್ತು ನಂಬಿಕೆಗೆ ಅರ್ಹವಾದ ಮಾದರಿ ಎಂದರೆ

ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು ಜೋಹ್ಯಾರಿ ಕಿಟಕಿ Read More »

error: Content is protected !!
Scroll to Top