ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು

ಪೋಕ್ಸೊ ಅಡಿ ಮರಣ ದಂಡನೆ ವಿಧಿಸಿದ ದೇಶದ ಮೊದಲ ಪ್ರಕರಣ ಗುವಾಹಟಿ: ಇಲ್ಲಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ 2014ರಿಂದ 2022ರ ನಡುವೆ 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್‌ ವಾರ್ಡನ್‌ ಯುಮ್ಕೆನ್‌ ಬಾಗ್ರಾ ಎಂಬಾತನಿಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.ಮಕ್ಕಳು ದೂರು ನೀಡಿದರೂ ಅಪರಾಧವನ್ನು ವರದಿ ಮಾಡುವಲ್ಲಿ ವಿಫಲರಾದ ಮಾಜಿ ಮುಖ್ಯಶಿಕ್ಷಕ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕಿ ಮಾರ್ಬೊಮ್ ನ್ಗೊಮ್ದಿರ್ ಅವರಿಗೆ ಪೋಕ್ಸೊ ಕಾಯ್ದೆ ಅಡಿ 20 […]

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು Read More »

ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್‍  ಗೌಡ ಅರ್ಕಲತೋಟ ನಿಧನ

ವಿಟ್ಲ: ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ‌ಸದಸ್ಯ, ಕುಂಡಡ್ಕ ಬಿಜೆಪಿ ಬೂತ್ ಅಧ್ಯಕ್ಷ ಉಮೇಶ್ ಗೌಡ ಅರ್ಕಲತೋಟರವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದಿದ್ದ ಅವರು ನಿಧನರಾದರು. ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ, ಬಾಲ್ಯ ಸ್ನೇಹಿತರಾದ ದಯಾನಂದ ಶೆಟ್ಟಿ ಉಜ್ರೆಮಾರು, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪಕ್ಷದ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದರು.

ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್‍  ಗೌಡ ಅರ್ಕಲತೋಟ ನಿಧನ Read More »

ಅ.2ರಂದು ಸೂರ್ಯ ಗ್ರಹಣ : ಭಾರತದಲ್ಲಿ ಗೋಚರವಿಲ್ಲ

ಸೂರ್ಯನ ಸುತ್ತ ಕೆಂಪು ಉಂಗುರ ಆಕೃತಿ ರಚನೆ ಹೊಸದಿಲ್ಲಿ : ಮುಂಬರುವ ಅಕ್ಟೋಬರ್‌ 2ರಂದು ಆಂಶಿಕ ಸೂರ್ಯ ಗ್ರಹಣ ಸಂಭವಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ನಾಸಾದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಸೂರ್ಯ ಗ್ರಹಣ ಭಾರತೀಯ ಕಾಲಮಾನ ರಾತ್ರಿ 9.21ಕ್ಕೆ ಹಿಡಿದು ಅ.3ರಂದು ನಸುಕಿನ 3.17ಕ್ಕೆ ಬಿಡಲಿದೆ.ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ಭಾದ್ರಪದ ಮಾಸದ ಅಮವಾಸ್ಯೆ ಪಿತೃಪಕ್ಷದ ಕೊನೆಯ ದಿನ. ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ ಇದರ ಪರಿಣಾಮ ಇರುತ್ತದೆ ಎಂದು ಭಾರತೀಯ ಶಾಸ್ತ್ರ ಗ್ರಂಥಗಳು

ಅ.2ರಂದು ಸೂರ್ಯ ಗ್ರಹಣ : ಭಾರತದಲ್ಲಿ ಗೋಚರವಿಲ್ಲ Read More »

ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್

45 ವರ್ಷ ಮಾತ್ರ ಬದುಕಿದ್ದ ಅವರು ಜಗತ್ತಿನಾದ್ಯಂತ ಸಾವಿರಾರು ಮ್ಯಾಂಡೊಲಿನ್ ಕಛೇರಿ ಕೊಟ್ಟಿದ್ದರು ಪೂರ್ವಜನ್ಮದ ಸಂಸ್ಕಾರಗಳು ಇಲ್ಲದೆ ಈ ರೀತಿಯ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ಸಂಗೀತ ಜಗತ್ತು ಅಭಿಪ್ರಾಯಪಟ್ಟದ್ದು ಈತನ ಪ್ರತಿಭೆಯ ಕುರಿತು. ಮ್ಯಾಂಡೊಲಿನ್ ಎಂಬ ಸಂಗೀತ ವಾದ್ಯವನ್ನು ಕೈಗೆ ಎತ್ತಿಕೊಂಡು ಅದನ್ನು ಕರ್ನಾಟಕ ಸಂಗೀತಕ್ಕೆ ಒಗ್ಗಿಸಿಕೊಂಡು ಆತ ಮಾಡಿದ್ದೆಲ್ಲ ಮಿರಾಕಲ್ ಸಾಧನೆಗಳೇ. ಹನ್ನೊಂದನೇ ವರ್ಷಕ್ಕೆ ಆತ ತ್ಯಾಗರಾಜರ ಆರಾಧನೆಯಲ್ಲಿ ಎರಡು ಗಂಟೆಗಳ ಮ್ಯಾಂಡೊಲಿನ್ ಕಛೇರಿಯನ್ನು ಕೊಟ್ಟಾಗ ಸೇರಿದ್ದ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರು

ಮ್ಯಾಂಡೊಲಿನ್ ಮೂಲಕ ಪೂರ್ವ-ಪಶ್ಚಿಮವನ್ನು ಬೆಸೆದ ಯು. ಶ್ರೀನಿವಾಸ್ Read More »

ಎರಡು ಕೋಟಿ ರೂ. ಸಾಲ ಬಾಕಿ | ವಸೂಲಾತಿಗೆ ಹೋದ ಬ್ಯಾಂಕ್‍ ಸಿಬ್ಬಂದಿಗಳನ್ನು ಪಿಸ್ತೂಲ್ ತೋರಿಸಿ ಕೂಡಿಹಾಕಿದ ಅಪ್ಪ-ಮಗ : ಪ್ರಕರಣ ದಾಖಲು

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ತಿರುಮಲ ಹೊಂಡಾ ಮಾಲಕರು ಎಸ್‍ ಬಿಐ ಬ್ಯಾಂಕ್‍ ನಿಂದ ಪಡೆದುಕೊಂಡ  2 ಕೋಟಿ ಸಾಲ ಮರುಪಾವತಿಸಿಲ್ಲ ಎಂದು ವಸೂಲಾತಿಗೆ ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದ್ದು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪುತ್ತೂರು ಕೋರ್ಟ್ ರೋಡ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಷನ್ ಶಿಪ್ ಮ್ಯಾನೇಜರ್ ಆದ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಹೆಚ್.ಸಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಬ್ಯಾಂಕ್ ನಲ್ಲಿ ಪುತ್ತೂರು

ಎರಡು ಕೋಟಿ ರೂ. ಸಾಲ ಬಾಕಿ | ವಸೂಲಾತಿಗೆ ಹೋದ ಬ್ಯಾಂಕ್‍ ಸಿಬ್ಬಂದಿಗಳನ್ನು ಪಿಸ್ತೂಲ್ ತೋರಿಸಿ ಕೂಡಿಹಾಕಿದ ಅಪ್ಪ-ಮಗ : ಪ್ರಕರಣ ದಾಖಲು Read More »

ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯ ನೂತನ ಆಡಳಿತ ಮಂಡಳಿಯ ಆಡಳಿತ ನಿರ್ದೇಶಕರಾಗಿ ಮುರಳೀಧರ ಕೆ.ಎಲ್., ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಕ್ಷಿತಾಮಿಥುನ್ ಆಯ್ಕೆ | ವಿದ್ಯಾರ್ಥಿಗಳಿಗೆ 3 ಲಕ್ಷ ವಿದ್ಯಾರ್ಥಿ ವೇತನ | 20 ಸಾವಿರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾಹಿತಿ

ಪುತ್ತೂರು: ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯ ಆಡಳಿತ ಮಂಡಳಿಯ ಆಡಳಿತ ನಿರ್ದೇಶಕರಾಗಿ ಮುರಳೀಧರ ಕೆ.ಎಲ್. ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಕ್ಷಿತಾಮಿಥುನ್ ಆಯ್ಕೆಯಾಗಿದ್ದಾರೆ.ನಿರ್ದೇಶಕರಾಗಿ ಪ್ರವೀಣ್ ಕುಂಟ್ಯಾನ, ವಸಂತ ವೀರಮಂಗಲ, . ಹಾಗೂ ನಾಗೇಶ್ ಕೆಡೆಂಜಿ, ಆಯ್ಕೆಯಾಗಿದ್ದಾರೆ. ಈ ಹಿಂದೆ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಪ್ರವೀಣ್ ಕುಂಟ್ಯಾನ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಾಗೇಶ್ ಕೆಡೆಂಜಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಸಂಸ್ಥೆಯಲ್ಲಿ ಐಎಎಸ್, ಐಎಫ್ ಎಸ್, ಐಪಿಎಸ್, ಸಿಎ, ಸಿಎಂಎ, ನೀಟ್, ಕೆಸಿಇಟಿ, ಪ್ಲೇಸ್ ಮೆಂಟ್ ತರಬೇತಿ, ಎಜ್ಯುಕೇಶನ್

ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯ ನೂತನ ಆಡಳಿತ ಮಂಡಳಿಯ ಆಡಳಿತ ನಿರ್ದೇಶಕರಾಗಿ ಮುರಳೀಧರ ಕೆ.ಎಲ್., ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಕ್ಷಿತಾಮಿಥುನ್ ಆಯ್ಕೆ | ವಿದ್ಯಾರ್ಥಿಗಳಿಗೆ 3 ಲಕ್ಷ ವಿದ್ಯಾರ್ಥಿ ವೇತನ | 20 ಸಾವಿರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾಹಿತಿ Read More »

ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಬೂತ್-186 ಮನ್ ಕಿ ಬಾತ್ ವೀಕ್ಷಣೆ ಪ್ರಮುಖ್‍ ರಾಗಿ ಸ್ವಸ್ತಿಕ್ ರೈ ಕಯ್ಯಾರು ಆಯ್ಕೆ

ಪುತ್ತೂರು: ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರ ಬೂತ್ 186 ರ ಮನ್ ಕಿ ಬಾತ್ ವೀಕ್ಷಣೆ ಪ್ರಮುಖ್ ರಾಗಿ ಸ್ವಸ್ತಿಕ್ ರೈ ಕುಯ್ಯಾರು ಅವರನ್ನು ಆಯ್ಕೆ ಮಾಡಲಾಗಿದೆ. ನರೇದ್ರ ಮೋದಿಯವರ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾದ ಮನ್ ಕೀ ಬಾತ್ ಕಾರ್ಯಕ್ರವವು ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಬೆಳಿಗ್ಗೆ 11:00 ಗಂಟೆಗೆ ಪ್ರಸಾರಗೊಳ್ಳುತ್ತಿದೆ ಈ ಕಾರ್ಯಕ್ರಮದಲ್ಲಿ ಪಧಾನಿಯವರು ದೇಶದ ಜನರನ್ನು ಉದ್ದೇಶಿಸಿ ಹಾಗೂ ಕೆಲವು ದೇಶದ ಹಾಗೂ ಹೋಗು ಮತ್ತು ಇತರ ಪ್ರಮುಖ ಅಂಶಗಳನ್ನು ಜನರ ಜೊತೆ ಹಚಿಕ್ಕೊಳ್ಳುತ್ತಾರೆ. ಈ

ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಬೂತ್-186 ಮನ್ ಕಿ ಬಾತ್ ವೀಕ್ಷಣೆ ಪ್ರಮುಖ್‍ ರಾಗಿ ಸ್ವಸ್ತಿಕ್ ರೈ ಕಯ್ಯಾರು ಆಯ್ಕೆ Read More »

ಗ್ರಾಮ ಆಡಳಿತಾಧಿಕಾರಿ ಸಂಘದಿಂದ ರಾಜ್ಯಾದ್ಯಂತ ಮುಷ್ಕರ | ಪುತ್ತೂರಿನಲ್ಲೂ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರ

ಪುತ್ತೂರು: ಮನುಷ್ಯನ ಜನನದಿಂದ ಮರಣದ ತನಕ ಎಲ್ಲಾ ಸೇವೆ ನೀಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ನಮ್ಮ ಕೆಲಸದ ಕಾರ್ಯಬಾರದ ಒತ್ತಡ ಕಡಿಮೆ ಮಾಡಿ, ನಮಗೆ ಜೀತದಾಳು ಪದ್ದತಿಯಿಂದ ಮುಕ್ತಿ ನೀಡಿ, ಕರ್ತವ್ಯ ನಿರ್ವಹಿಸಲು ಪೂರಕವಾದ ಆರೋಗ್ಯಕರ ವಾತಾವರಣ ಸೃಷ್ಟಿಸಿಕೊಡುವಂತೆ ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಪ್ರತಿನಿಧಿ ನರಿಯಪ್ಪ ಮಠದ್ ಆಗ್ರಹಿಸಿದರು. ಮೂಲಭೂತ ಸೌಲಭ್ಯ ಒದಗಿಸಿ, ಕಾರ್ಯಭಾರದ ಕಡಿಮೆ ಮಾಡುವುದು ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ

ಗ್ರಾಮ ಆಡಳಿತಾಧಿಕಾರಿ ಸಂಘದಿಂದ ರಾಜ್ಯಾದ್ಯಂತ ಮುಷ್ಕರ | ಪುತ್ತೂರಿನಲ್ಲೂ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರ Read More »

ಬಿಜೆಪಿ ಸವಣೂರು ಶಕ್ತಿ ಕೇಂದ್ರದಲ್ಲಿ ದೀನ್ ದಯಾಳ್‍ ಉಪಾಧ್ಯಾಯರ ಜನ್ಮ ದಿನಾಚರಣೆ

ಸವಣೂರು: ಬಿಜೆಪಿ ಸುಳ್ಯ ಮಂಡಲ ಸವಣೂರು ಶಕ್ತಿಕೇಂದ್ರ ಹಾಗೂ ಬೂತ್ ಸಮಿತಿ 66-ಮೊಗರು ಮತ್ತು ಬೂತ್ ಸಮಿತಿ-65 ಸವಣೂರು ಜಂಟಿ ಆಶ್ರಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಯರ ಜನ್ಮದಿನಾಚರಣೆ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಜರಗಿತು. ಹಣ್ಣಿನ ಗಿಡ ನಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ ಮಂಡಲ ಸದಸ್ಯ ತಾರಾನಾಥ ಕಾಯರ್ಗ, ಸವಣೂರು ಶಕ್ತಿ ಕೇಂದ್ರದ ಅಧ್ಯಕ್ಷ ಚೇತನ್ ಕುಮಾರ್

ಬಿಜೆಪಿ ಸವಣೂರು ಶಕ್ತಿ ಕೇಂದ್ರದಲ್ಲಿ ದೀನ್ ದಯಾಳ್‍ ಉಪಾಧ್ಯಾಯರ ಜನ್ಮ ದಿನಾಚರಣೆ Read More »

ಹೆದ್ದಾರಿ ಬದಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿತ್ತು ಐದು ಶವ

ಒಂದೇ ಕುಟುಂಬದ ಐವರು ಸಾವು ಚೆನ್ನೈ: ಒಂದೇ ಕುಟುಂಬದ ಐವರು ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ತಮಿಳುನಾಡಿನ ಪುದುಕೊಟ್ಟೈನಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಂತಿತ್ತು. ಸಂಜೆಯಾದರೂ ಅದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶಿಲಿಸಿದಾಗ ಕಾರಿನೊಳಗೆ ಐವರು ಮೃತಪಟ್ಟಿರುವುದು ಕಂಡುಬಂದಿದೆ. ಮೃತರನ್ನು ಉದ್ಯಮಿ ಮಣಿಕಂಠನ್ (50), ಅವರ ಪತ್ನಿ ನಿತ್ಯಾ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.

ಹೆದ್ದಾರಿ ಬದಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿತ್ತು ಐದು ಶವ Read More »

error: Content is protected !!
Scroll to Top