ಬಿಜೆಪಿ ಪುತ್ತೂರು ನಗರಮಂಡಲ ಮಹಿಳಾ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸ್ವರ್ಣಲತಾ ಹೆಗ್ಡೆ ಆಯ್ಕೆ

ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಸ್ವರ್ಣಲತಾ ಹೆಗ್ಡೆ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಕಲ್ಲಿಮಾರು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ , ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರ ಮಂಡಲ ಉಪಾಧ್ಯಕ್ಷ […]

ಬಿಜೆಪಿ ಪುತ್ತೂರು ನಗರಮಂಡಲ ಮಹಿಳಾ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸ್ವರ್ಣಲತಾ ಹೆಗ್ಡೆ ಆಯ್ಕೆ Read More »

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಅದ್ದು ಪಡೀಲ್‍ ಎಂಬವರದ್ದೆನ್ನಲಾದ ವೀಡಿಯೋ ವೈರಲ್‍ | ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಅದ್ದು ಪಡೀಲ್‍

ಪುತ್ತೂರು : ರಾಜಕೀಯ ಪಕ್ಷವೊಂದರಲ್ಲಿ ಸಕ್ರಿಯರಾಗಿದ್ದ ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಮಸೀದಿಯೊಳಗಡೆ ವೀಡಿಯೋ ಕಾಲ್ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ಕಾಲ್‌ನಲ್ಲಿ ಮಹಿಳೆಯೊಬ್ಬರು ನಗ್ನವಾಗಿರುವ ಮತ್ತು ನಗ್ನ ವೀಡಿಯೋ ನೋಡಿ ವ್ಯಕ್ತಿಯೊಬ್ಬರು ಸೂಪರ್ ಎಂದು ಹೇಳುವ ವಾಯ್ಸ್ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿರುವ ವ್ಯಕ್ತಿ ಈ ಹಿಂದೆ ಜೆಡಿಎಸ್‌ ನಲ್ಲಿ ಮತ್ತು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಎನ್ನಲಾಗುತ್ತಿದೆ.

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಅದ್ದು ಪಡೀಲ್‍ ಎಂಬವರದ್ದೆನ್ನಲಾದ ವೀಡಿಯೋ ವೈರಲ್‍ | ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಅದ್ದು ಪಡೀಲ್‍ Read More »

ಕೆರೆಮನೆಕಟ್ಟೆ – ಕೇದಗಡಿ- ಮರ್ತಡ್ಕ -ನಡುಬೈಲು – ನಾಡಾಜೆ- ಪಂಜಳ ಸಂಪರ್ಕ ರಸ್ತೆ ನಾದುರಸ್ತಿ | ದುರಸ್ತಿ ಪಡಿಸುವಂತೆ ಸ್ಥಳೀಯರಿಂದ ಆಗ್ರಹ

ಪುತ್ತೂರು: ಮುಂಡೂರು ಗ್ರಾಮದ ಕೆರೆಮನೆಕಟ್ಟೆ – ಕೇದಗಡಿ- ಮರ್ತಡ್ಕ -ನಡುಬೈಲು – ನಾಡಾಜೆಯಾಗಿ ಮುಂಡೂರು ಪಂಜಳ ಸಂಪರ್ಕ ರಸ್ತೆ ನಾದುರಸ್ತಿಯಲ್ಲಿದ್ದು, ವಾಹನ ಸವಾರರಿಗೆ ಸಂಕಷ್ಟ ಉಂಟಾಗಿದೆ. ಈ ರಸ್ತೆ 50ಕ್ಕಿಂತ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಹಲವು ವಾಹನಗಳು ಸಂಚರಿಸುವುದರಿಂದ ಮಳೆಗಾಲ ಸಂದರ್ಭದಲ್ಲಿ ವಾಹನಗಳಲ್ಲದೆ ನಡೆದಾಡಲು ಕಷ್ಟಕರವಾಗಿದೆ. ಈ ವಿಷಯವಾಗಿ ಸ್ಥಳೀಯರಲ್ಲಿ ಚರ್ಚಿಸಿದಾಗ ಇದುವರೆಗೂ ಯಾರೂ ಈ ರಸ್ತೆಯ ಬಗ್ಗೆ ಪ್ರಶ್ನಿಸಿಯೆ ಇಲ್ಲ, ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವ ಅಧಿಕಾರಿಯಾದರೂ ಹಳ್ಳಿ   ಸಮಸ್ಯೆಯ ಕಡೆ

ಕೆರೆಮನೆಕಟ್ಟೆ – ಕೇದಗಡಿ- ಮರ್ತಡ್ಕ -ನಡುಬೈಲು – ನಾಡಾಜೆ- ಪಂಜಳ ಸಂಪರ್ಕ ರಸ್ತೆ ನಾದುರಸ್ತಿ | ದುರಸ್ತಿ ಪಡಿಸುವಂತೆ ಸ್ಥಳೀಯರಿಂದ ಆಗ್ರಹ Read More »

ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಜೀರ್ಣೋದ್ದಾರ | ಅನುದಾನ ನೀಡುವಂತೆ ಶಾಸಕ ಅಶೋಕ್ ರೈಯವರಿಂದ ಸಚಿವರಿಗೆ ಮನವಿ

ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿದ್ದು ದೈವಸ್ಥಾನದ ಅಭಿವೃದ್ದಿ ಕಾರ್ಯಕ್ಕೆ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಮುಜರಾಯಿ ಖಾತೆ ಸಚಿವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಅತ್ಯಂತ ಪುರಾತನ ದೈವಸ್ಥಾನವಾಗಿದೆ. ಇದರ ಜೀರ್ಣೋದ್ದಾರ ಕಾರ್ಯಗಳು ಈಗಾಗಲೇ ಪ್ರಾರಂಭಗೊಂಡಿದ್ದು ನಿತ್ಯ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ 15 ಲಕ್ಷ ಅನುದಾನ ನೀಡುವಂತೆ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಮನವಿ

ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಜೀರ್ಣೋದ್ದಾರ | ಅನುದಾನ ನೀಡುವಂತೆ ಶಾಸಕ ಅಶೋಕ್ ರೈಯವರಿಂದ ಸಚಿವರಿಗೆ ಮನವಿ Read More »

’ಫಿಲೋ ಪ್ರತಿಭೆ-2024’ ಸ್ಪರ್ಧೆ : ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್‌.ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ’ಫಿಲೋ ಪ್ರತಿಭೆ-2024’ ಸ್ಪರ್ಧೆಯಲ್ಲಿ ನಗರದ ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ ಲಭಿಸಿದೆ. 10ನೇ ತರಗತಿ ವಿದ್ಯಾರ್ಥಿ ಅದ್ವೈತ್ ಕೃಷ್ಣ  ’ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ’ ಎಂಬ ಇಂಗ್ಲಿಷ್ ವಿಚಾರಗೋಷ್ಠಿಯಲ್ಲಿ ತೃತೀಯ ಸ್ಥಾನ, 6ನೇ ತರಗತಿ ವಿದ್ಯಾರ್ಥಿನಿಯರಾದ ರಕ್ಷಾ ಎಸ್.ಎಸ್., ವೈಷ್ಣವಿ ಯು.ಆರ್., ನಿಧಿ ಎಂ.ಯು. ಮತ್ತು  8ನೇ ತರಗತಿಯ ಇಂಚರ ಎಸ್. ಮಯ್ಯ, ಯಶಸ್ ಬಿ.ಜೆ. ’ಗೀತ ಸುಧಾ ಗಾಯನ ಸ್ಪರ್ಧೆ’ಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

’ಫಿಲೋ ಪ್ರತಿಭೆ-2024’ ಸ್ಪರ್ಧೆ : ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್‌.ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ Read More »

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲ ಕೇಂದ್ರ ಕಚೇರಿ ಧ್ವಂಸ : ಇಬ್ಬರು ಕಮಾಂಡರ್‌ಗಳು ಬಲಿ

ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಗುರಿ ಮಾಡಿಕೊಂಡು ದಾಳಿ ಜೆರುಸಲೆಂ: ಇಸ್ರೇಲ್ ಮತ್ತು ಹಿಜ್ಬುಲ್ಲ ನಡುವಿನ ಸಮರ ತೀವ್ರಗೊಂಡಿದ್ದು, ಶುಕ್ರವಾರ ಸಂಜೆ ಇಸ್ರೇಲ್‌ ವಾಯುಪಡೆ ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಭಾರಿ ದಾಳಿ ನಡೆಸಿ ಹಿಜ್ಬುಲ್ಲದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ.ದಾಳಿಯ ಗುರಿ ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಆಗಿದ್ದ. ಆದರೆ ಈತ ತಪ್ಪಿಸಿಕೊಂಡಿದ್ದಾನೆ. ಆದರೆ ಹಿಜ್ಬುಲ್ಲದ ಇಬ್ಬರು ಉನ್ನತ ಕಮಾಂಡರ್‌ಗಳು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಗೆ 8 ಬಲಿಯಾಗಿ 76 ಮಂದಿಗೆ ಗಾಯಗೊಂಡಿದ್ದಾರೆ.ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲ ಕೇಂದ್ರ ಕಚೇರಿ ಧ್ವಂಸ : ಇಬ್ಬರು ಕಮಾಂಡರ್‌ಗಳು ಬಲಿ Read More »

ಕೆದಂಬಾಡಿ ಬೂತ್ ಸಂಖ್ಯೆ 188 ರ ಅಧ್ಯಕ್ಷರಾಗಿ ಗಂಗಾಧರ ನಾಯ್ಕ, ಕಾರ್ಯದರ್ಶಿಯಾಗಿ ಪ್ರಶಾಂತ್ ತ್ಯಾಗರಾಜ್ ಆಯ್ಕೆ

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 188 ರ ಸಭೆ ತಿಂಗಳಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಬೂತ್ ಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಗಂಗಾಧರ ನಾಯ್ಕ ಮುಳಿಗದ್ದೆ, ಕಾರ್ಯದರ್ಶಿಯಾಗಿ ಪ್ರಶಾಂತ್ ತ್ಯಾಗರಾಜನಗರ ಆಯ್ಕೆಯಾದರು. ಬೂತ್ ನ ಮತಗಟ್ಟೆ ಏಜೆಂಟ್ ಆಗಿ ಭಾಸ್ಕರ ಬಲ್ಲಾಳ್, ಬಿಎಲ್ ಎ ಟು ಆಗಿ ಎ. ಟಿ. ನಾರಾಯಣ, ಎಸ್. ಸಿ. ಸದಸ್ಯರಾಗಿ ಸುನಿಲ್ ತಿಂಗಳಾಡಿ, ಎಸ್ ಟಿ 

ಕೆದಂಬಾಡಿ ಬೂತ್ ಸಂಖ್ಯೆ 188 ರ ಅಧ್ಯಕ್ಷರಾಗಿ ಗಂಗಾಧರ ನಾಯ್ಕ, ಕಾರ್ಯದರ್ಶಿಯಾಗಿ ಪ್ರಶಾಂತ್ ತ್ಯಾಗರಾಜ್ ಆಯ್ಕೆ Read More »

ಅಕ್ಷಯ ಕಾಲೇಜ್ ಹಾಸ್ಪಿಟಲ್ ಸಾಯನ್ಸ್ ವಿಭಾಗ ದಿಂದ “ಕೋಂಟಿನೆಂಟಲ್  ಕ್ಯೂಸಿನ್” ಪ್ರಾಯೋಗಿಕ ಕಾರ್ಯಗಾರ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಹಾಸ್ಪಿಟಲ್ ಸಾಯನ್ಸ್ ವಿಭಾಗ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ  “ಕೋಂಟಿನೆಂಟಲ್  ಕ್ಯೂಸಿನ್” ಎಂಬ ಯುರೋಪ್ ಮಾದರಿಯ ಖಾದ್ಯ ವಿಷಯಾಧಾರಿತ ಪ್ರಾಯೋಗಿಕ ಕಾರ್ಯಗಾರ ನಡೆಸಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಪ್ರಸಿದ್ಧ ಪಂಚ ತಾರಾ ನೋವೋಟಲ್  ಪಾಕತಜ್ಞಾ ಪ್ರಜ್ವಲ್ ಬಿ. ಕೆ. ಪ್ರಾಯೋಗಿಕ ತರಬೇತಿಯನ್ನು ನಡೆಸಿಕೊಟ್ಟರು.  ಪಾಶ್ಚಿಮಾತ್ಯ ದೇಶಗಳಲ್ಲಿನ ವಿಶಿಷ್ಟ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು  ವಿದ್ಯಾರ್ಥಿಗಳಿಗೆ  ಪರಿಚಯಿಸಿ, ವಿದೇಶಿ ರಾಷ್ಟ್ರಗಳಲ್ಲಿನ ಹಾಸ್ಪಿಟಲ್ ಸಾಯನ್ಸ್ ನ 

ಅಕ್ಷಯ ಕಾಲೇಜ್ ಹಾಸ್ಪಿಟಲ್ ಸಾಯನ್ಸ್ ವಿಭಾಗ ದಿಂದ “ಕೋಂಟಿನೆಂಟಲ್  ಕ್ಯೂಸಿನ್” ಪ್ರಾಯೋಗಿಕ ಕಾರ್ಯಗಾರ Read More »

ಚುನಾವಣಾ ಬಾಂಡ್‌ : ನಿರ್ಮಲಾ ಸೀತಾರಾಮನ್‌, ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಎಫ್‌ಐಆರ್‌

ಮುಡಾ ಹಗರಣದ ವಿರುದ್ಧ ಕಾಂಗ್ರೆಸ್‌ ಹೂಡಿದ ಬಾಣ ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾದ ಬೆನ್ನಿಗೆ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.ಚುನಾವಣಾ ಬಾಂಡ್​ ಮೂಲಕ ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಳಿನ್ ಕುಮಾರ್ ಕಟೀಲು, ಬಿ.ವೈ.ವಿಜಯೇಂದ್ರ ವಿರುದ್ಧ ಜನಾಧಿಕಾರಿ ಸಂಘರ್ಷ ಪರಿಷತ್‌ನ(ಜೆಎಸ್​ಪಿ) ಆದರ್ಶ ಆರ್. ಐಯ್ಯ‌ರ್ ಅವರು

ಚುನಾವಣಾ ಬಾಂಡ್‌ : ನಿರ್ಮಲಾ ಸೀತಾರಾಮನ್‌, ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಎಫ್‌ಐಆರ್‌ Read More »

ದಸರಾ ಕ್ರೀಡಾಕೂಟ : ಯೋಗದಲ್ಲಿ ಪಿಎಂಶ್ರೀ ವೀರಮಂಗಲ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಪುತ್ತೂರು: ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ಯುವ ಸಬಳೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಮೈಸೂರು ದಸರಾ ಕ್ರೀಡಾಕೂಟದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಶಾಲಾ ವಿದ್ಯಾರ್ಥಿಗಳಾದ ಚಿಂತನ, ಶ್ರೀದೇವಿ,ವರ್ಷಾ, ಪ್ರತೀಕ್ಷಾ, ಇಶಾನಿ, ಚಿರಾಗ್ ಯೋಗವನ್ನು ಪ್ರತಿನಿಧಿಸಿದ್ದು, ಅಭೂತಪೂರ್ವ ಸಾಧನೆತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡವನ್ನು ಶಾಲಾ ಎಸ್‍ ಡಿಎಂಸಿಯವರು, ಮುಖ್ಯ ಶಿಕ್ಷಕರು, ಶಿಕ್ಷಕರು ಅಭಿನಂದಿಸಿದ್ದಾರೆ.

ದಸರಾ ಕ್ರೀಡಾಕೂಟ : ಯೋಗದಲ್ಲಿ ಪಿಎಂಶ್ರೀ ವೀರಮಂಗಲ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ Read More »

error: Content is protected !!
Scroll to Top