ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಆಕ್ರೋಶ

ಹಗರಣದ ತನಿಖಾಧಿಕಾರಿಯೇ ಕಡುಭ್ರಷ್ಟ ಎಂದ ಬಿಜೆಪಿ- ಜೆಡಿಎಸ್‌ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿರುವ ಮುಡಾ ಅಕ್ರಮದ ಆರೋಪ ಈಗ ಈ ಹಗರಣವನ್ನು ತನಿಖೆ ಮಾಡುವ ಲೋಕಾಯುಕ್ತದ ಮೇಲೂ ತಿರುಗಿರುವುದು ವಿಪರ್ಯಾಸ. ಲೋಕಾಯುಕ್ತ ಎಸ್​ಐಟಿ ಎಡಿಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವುದು ಜೆಡಿಎಸ್‌ ಮತ್ತು ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಈ ಅಧಿಕಾರಿಯ ವಿರುದ್ಧವೇ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ.ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ […]

ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಆಕ್ರೋಶ Read More »

ರಿಕ್ಷಾ- ಕಾರು ಡಿಕ್ಕಿ : ಇಬ್ಬರಿಗೆ ಗಾಯ

ಕಟಪಾಡಿ: ಕಾರು ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ‌ ರಿಕ್ಷಾ ಚಾಲಕ ಮತ್ತು ಪ್ರಯಾಣಿಕ ಸಹಿತ ಇಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮಸೀದಿ ಜಂಕ್ಷನ್ ಬಳಿ ಶನಿವಾರ ರಾತ್ರಿ ನಡೆದಿದೆ. ರಿಕ್ಷಾ ಚಾಲಕ ಪೂರ್ಣೇಶ್ ಮತ್ತು ಪ್ರಯಾಣಿಕ ನೂರ್ ಸಾಹೇಬ್ ಗಾಯಗೊಂಡವರು. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕೇರಳ ಮೂಲದ ಕಾರು ಕಾಪು ಪೇಟೆಯಿಂದ ಪೊಲಿಪು ಕಡೆಗೆ ತೆರಳುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ರಿಕ್ಷಾ

ರಿಕ್ಷಾ- ಕಾರು ಡಿಕ್ಕಿ : ಇಬ್ಬರಿಗೆ ಗಾಯ Read More »

ನೇಪಾಳ : ಭೀಕರ ಪ್ರವಾಹಕ್ಕೆ 112 ಬಲಿ

80 ಮಂದಿ ನಾಪತ್ತೆ; ಭೂ ಕುಸಿತ, ನೂರಾರು ಮನೆಗಳು ಜಲಾವೃತ ಕಠ್ಮಂಡು: ನಿರಂತರ ಮಳೆಯಿಂದ ನೇಪಾಳದಲ್ಲಿ ಪ್ರವಾಹ ಉಂಟಾಗಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಮತ್ತು ಸುಮಾರು 80 ಮಂದಿ ನಾಪತ್ತೆಯಾಗಿದದಾರೆ. ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ವ್ಯಾಪಕ ನಾಶ ನಷ್ಟ ಸಂಭವಿಸಿದೆ.ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾ ಪಡೆಗಳು ಸ್ಥಳಾಂತರಿಸುತ್ತಿವೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ. ಶನಿವಾರ ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ಬೋಟ್‌ಗಳೊಂದಿಗೆ 3,000 ಕ್ಕೂ

ನೇಪಾಳ : ಭೀಕರ ಪ್ರವಾಹಕ್ಕೆ 112 ಬಲಿ Read More »

ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ ನಿಧನ

ಪುತ್ತೂರು: ನಿವೃತ್ತ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ (80) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.  ಕಳೆದ ಎರಡು ವಾರಗಳಿಂದ ತೀವೃ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಅವರಿಗೆ 1993 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2015 ರಲ್ಲಿ ಎನ್‍.ಎಸ್‍.ಕಿಲ್ಲೆ ಪ್ರಶಸ್ತಿ ಲಭಿಸಿದೆ. 2018 ರಲ್ಲಿ ಪುತ್ತೂರಿನಲ್ಲಿ ನಡೆದ ಕರ್ನಾಟಕ ಏಕೀಕರಣ

ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ ನಿಧನ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವಿನ್ ಮತ್ತು ವಿಜೇತ್ ಭಾರತೀಯ ಸೇನೆಗೆ ಆಯ್ಕೆ | ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದ ಗ್ರಾಮೀಣ ಪ್ರತಿಭೆಗಳು

ಪುತ್ತೂರು: ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಬೇಕೆನ್ನುವ ಆಶಯದಲ್ಲಿರುವ ಗ್ರಾಮೀಣ ಪ್ರದೇಶದ ಯುವ ಜನತೆಗೆ ಆಶಾಕಿರಣವಾಗಿರುವ ಪುತ್ತೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿ ಸುಳ್ಯ ಹಾಗೂ ಕಾರ್ಕಳದಲ್ಲಿ ಶಾಖೆಯನ್ನು ಹೊಂದಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ಅವಿನ್ ಎಂ. ಮತ್ತು ವಿಜೇತ್ ಎಂ. 2024ನೇ ಸಾಲಿನ ಅಗ್ನಿಪಥ್ ನೇಮಕಾತಿಯ ಲಿಖಿತ ಪರೀಕ್ಷೆ, ದೈಹಿಕ ಸದೃಢತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಸೇನೆಗೆ ಆಯ್ಕೆಯಾಗಿರುತ್ತಾರೆ. ಸತತ ವೈಪಲ್ಯವನ್ನು ಮೆಟ್ಟಿ ನಿಂತ ಸಾಧಕರು : ಅಗ್ನಿಪಥ್ ನೇಮಕಾತಿಯು ಪ್ರಾರಂಭವಾದಾಗಿನಿಂದ

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವಿನ್ ಮತ್ತು ವಿಜೇತ್ ಭಾರತೀಯ ಸೇನೆಗೆ ಆಯ್ಕೆ | ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದ ಗ್ರಾಮೀಣ ಪ್ರತಿಭೆಗಳು Read More »

ಪ್ರಾಧ್ಯಾಪಕ ಕೌಶಿಕ್ ಚಿದ್ಗಲ್ ರಿಗೆ ರಾಜಸ್ಥಾನ್ ಸನ್‍ ರೈಸ್ ವಿವಿಯಿಂದ ಡಾಕ್ಟರೇಟ್ ಪದವಿ

ಸುಳ್ಯ: ಪ್ರಾಧ್ಯಾಪಕ ಕೌಶಿಕ್ ಚಿದ್ಗಲ್ ಅವರಿಗೆ ರಾಜಸ್ಥಾನ್ ಸನ್ ರೈಸ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕೌಶಿಕ್ ಅವರು ಡಾ. ಪವನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “Modern Judicial Trend for Implementation of Human rights” ಈ ವಿಷಯದ ಮೇಲೆ ಡಾಕ್ಟರೇಟ್ ಪದವಿ ಲಭಿಸಿದೆ. ಕೌಶಿಕ್ ರವರು ಪ್ರಸ್ತುತ ಭುವನ ಜ್ಯೋತಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಮೂಡಬಿದಿರೆ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಸ್ಕೂಡೆಂಟ್ ವೆಲ್ ಫೇರ್ ಆಫೀಸರ್ ಆಗಿ ಕರ್ತವ್ಯ

ಪ್ರಾಧ್ಯಾಪಕ ಕೌಶಿಕ್ ಚಿದ್ಗಲ್ ರಿಗೆ ರಾಜಸ್ಥಾನ್ ಸನ್‍ ರೈಸ್ ವಿವಿಯಿಂದ ಡಾಕ್ಟರೇಟ್ ಪದವಿ Read More »

ಕುತ್ಯಾರು ಸೂರ್ಯಚೈತನ್ಯ ಪ್ರೌಢಶಾಲೆಯಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ

ಉಡುಪಿ: ರೇಬಿಸ್ ರೋಗವನ್ನು ತಡೆಗಟ್ಟುವ ಜಾಗೃತಿಗಾಗಿ ಸೆ.28 ನ್ನು ವಿಶ್ವ ರೇಬಿಸ್ ದಿನವಾಗಿ ಆಚರಿಸಲಾಗುತ್ತಿದೆ. ರೇಬಿಸ್ ರೋಗವು ನಾಯಿ ಮತ್ತು ಬೆಕ್ಕು ಕಡಿತದಿಂದ ಬರುತ್ತದೆ. ಈ ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ಎಚ್ಚರಿಕೆಯ ಕ್ರಮವಾಗಿ ಎಲ್ಲಾ ಸಾಕುಪ್ರಾಣಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಅಕಸ್ಮಿಕವಾಗಿ ಪ್ರಾಣಿಗಳ ಕಡಿತವಾದರೆ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಮಾರಣಾಂತಿಕ ರೋಗದಿಂದ ದೂರವಿರಬಹುದು ಎಂದು ಕಾಪು ತಾಲೂಕು ಪಶುವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ತಿಳಿಸಿದರು. ಉಡುಪಿ ಜಿಲ್ಲಾ ಪಂಚಾಯಿತಿ ಪಶುಪಾಲನ ಮತ್ತು ಪಶು ವೈದ್ಯ

ಕುತ್ಯಾರು ಸೂರ್ಯಚೈತನ್ಯ ಪ್ರೌಢಶಾಲೆಯಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ Read More »

ಬಿಗ್‌ಬಾಸ್‌ ಮನೆಗೆ ಚೈತ್ರಾ ಕುಂದಾಪುರ ಎಂಟ್ರಿ

ಬೆಂಗಳೂರು : ಕಲರ್ಸ್‌ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ.ನಟ ಸುದೀಪ್‌ ನಿರೂಪಿಸುವ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಗೌತಮಿ ಜಾದವ್ ಆಯ್ಕೆಯಾದರೆ 3ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ.ಮೂಲತಃ ಪತ್ರಕರ್ತೆಯಾಗಿರುವ ಚೈತ್ರಾ ಕುಂದಾಪುರ ಬಳಿಕ ಪ್ರಖರ ವಾಗ್ಮಿಯಾಗಿ ಬದಲಾಗಿದ್ದರು. ಹಿಂದೂ ಭಾಷಣಕಾರರಾಗಿ ನಾಡಿನಾದ್ಯಂತ ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದ ಚೈತ್ರಾ ವಂಚನೆ ಕೇಸೊಂದರಲ್ಲಿ ಸಿಲುಕಿದ ಬಳಿಕ ತುಸು ಸಮಯ ನೇಪಥ್ಯಕ್ಕೆ ಸರಿದಿದ್ದರು. ಈ ಪ್ರಕರಣದಲ್ಲಿ ಸೆರೆಯಾಗಿ ಕೆಲ ಸಮಯ

ಬಿಗ್‌ಬಾಸ್‌ ಮನೆಗೆ ಚೈತ್ರಾ ಕುಂದಾಪುರ ಎಂಟ್ರಿ Read More »

ರಾಮ ಮಂದಿರ ಉದ್ಘಾಟನೆಯನ್ನು ನಾಚ್‌ ಗಾನ ಕಾರ್ಯಕ್ರಮ ಎಂದ ರಾಹುಲ್‌ ಗಾಂಧಿ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ಮತ್ತು ಲೋಕಾರ್ಪಣೆ ಸಮಾರಂಭವನ್ನು ನಾಚ್ ಗಾನ ಕಾರ್ಯಕ್ರಮ ಎಂದು ಕರೆದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತೊಮ್ಮೆ ಹಿಂದುಗಳ ಧಾರ್ಮಿಕ ನಂಬಿಕೆಯನ್ನು ನೋಯಿಸಿದ್ದಾರೆ.ಧಾರ್ಮಿಕ ಕಾರ್ಯಕ್ರಮವನ್ನು ನೃತ್ಯ-ಕುಣಿತದ ಕಾರ್ಯಕ್ರಮ ಎಂದು ಕರೆದ ರಾಹುಲ್‌ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭ ನಾಚ್ ಗಾನ ಕಾರ್ಯಕ್ರಮವಾಗಿತ್ತು. ಕರೆಯಬೇಕಿದ್ದವರನ್ನು ಬಿಟ್ಟು ಅಮಿತಾಬ್ ಬಚ್ಚನ್, ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ವ್ಯಕ್ತಿಗಳು ಹಾಗೂ ಹಣವಿದ್ದ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ರಾಮ

ರಾಮ ಮಂದಿರ ಉದ್ಘಾಟನೆಯನ್ನು ನಾಚ್‌ ಗಾನ ಕಾರ್ಯಕ್ರಮ ಎಂದ ರಾಹುಲ್‌ ಗಾಂಧಿ Read More »

ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ

ಸಾಹಿತ್ಯ ಲೋಕದಲ್ಲಿ ಆತ್ಮಚರಿತ್ರೆಗಳಿಗೆ ಇದೆ ವಿಶೇಷ ಸ್ಥಾನ (ನಿನ್ನೆಯ ಲೇಖನದ ಮುಂದುವರಿದ ಭಾಗ)ಸಾಹಿತ್ಯ ಪ್ರಪಂಚದಲ್ಲಿ ಆತ್ಮಚರಿತ್ರೆಗಳಿಗೆ ವಿಶೇಷ ಸ್ಥಾನ ಇದೆ. ಇಂದು ಸಾವಿರಾರು ಇಂತಹ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳ ನಿರಂತರ ಅಧ್ಯಯನದಿಂದ ನಮ್ಮ ಬದುಕಿನಲ್ಲಿ ಒಂದಿಷ್ಟು ಪರಿವರ್ತನೆ ತರಲು ಸಾಧ್ಯವಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ. ಆದರೆ ಪುಸ್ತಕಗಳ ಆಯ್ಕೆಯಲ್ಲಿ ನಾವು ಒಂದಿಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವುದು ಮಾತ್ರ ನನ್ನ ಕಾಳಜಿ. ಇಂದು ಎಷ್ಟೋ ದುಡ್ಡಿದ್ದವರು ತಮ್ಮನ್ನು ಇಂದ್ರ ಚಂದ್ರ ಎಂದು ಹೊಗಳಿಸಿಕೊಂಡು ಯಾರ್ಯಾರ

ಆಟೋಬಯೋಗ್ರಾಫಿಗಳ ಅದ್ಭುತ ಪ್ರಪಂಚ Read More »

error: Content is protected !!
Scroll to Top