ಮುಡಾ ಹಗರಣ : ಇಂದಿನಿಂದ ತನಿಖೆ ಶುರು

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭ ಮಾಡಲಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೊದಲು ದೂರುದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದೆ. ಜೊತೆಗೆ ದೂರುದಾರರಿಂದ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಸಂಗ್ರಹ ಮಾಡಲಿದ್ದಾರೆ.ಇನ್ನೊಂದೆಡೆ ನಿವೃತ್ತ ನ್ಯಾ. ದೇಸಾಯಿ ತನಿಖಾ ಸಮಿತಿ ಬಳಿಯಿರುವ ದಾಖಲೆ ಪಡೆಯಲು ಕಾನೂನು ಪ್ರಕ್ರಿಯೆ ಶುರುವಾಗಲಿದೆ. ಆ ದಾಖಲೆಗಳು ಸಿಕ್ಕ ನಂತರ ಆರೋಪಿಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ.ಮುಡಾ ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ […]

ಮುಡಾ ಹಗರಣ : ಇಂದಿನಿಂದ ತನಿಖೆ ಶುರು Read More »

ದೇವಸ್ಥಾನಗಳ ಅಡುಗೆ ಕೋಣೆ, ಉಗ್ರಾಣಗಳಲ್ಲಿ ಸಿಸಿಟಿವಿ ಕಡ್ಡಾಯ

ತಿರುಪತಿ ಲಡ್ಡು ಕಲಬೆರಕೆ ಹಿನ್ನೆಲೆಯಲ್ಲಿ ಸರಕಾರ ಆದೇಶ ಬೆಂಗಳೂರು : ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಮತ್ತು ದನದ ಕೊಬ್ಬು ಬಳಸಿರುವುದು ಬೆಳಕಿಗೆ ಬಂದು ಭಾರಿ ವಿವಾದ ಸೃಷ್ಟಿಯಾದ ಬಳಿಕ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸರಕಾರ ಸೂಚನೆ ನೀಡಿದೆ. ಈಗ ರಾಜ್ಯದ ಎಲ್ಲ ವರ್ಗದ ದೇವಸ್ಥಾನಗಳ ಅಡುಗೆ ಕೋಣೆ, ಉಗ್ರಾಣ ಮತ್ತು ಪ್ರಸಾದ ವಿತರಣೆ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಆದೇಶ ಹೊರಡಿಸಲಾಗಿದೆ.ಇತ್ತೀಚೆಗೆ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ

ದೇವಸ್ಥಾನಗಳ ಅಡುಗೆ ಕೋಣೆ, ಉಗ್ರಾಣಗಳಲ್ಲಿ ಸಿಸಿಟಿವಿ ಕಡ್ಡಾಯ Read More »

ಕಿರಣ್ ಬೇಡಿ – ವರ್ಷ 75 ಆದರೂ ಇಂದಿಗೂ ಯೂತ್ ಐಕಾನ್

ಏಷ್ಯಾದ ಅತಿ ದೊಡ್ಡ ಸೆರೆಮನೆಯ ಚಹರೆಯನ್ನೇ ಬದಲಾಯಿಸಿದ ಐಪಿಎಸ್‌ ಅಧಿಕಾರಿ ಕಿರಣ್ ಬೇಡಿ ಐಪಿಎಸ್ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಗಿ ಅವರು ವಿವಿಧ ಪೊಲೀಸ್ ಅಧಿಕಾರಿಯ ಹುದ್ದೆಗಳನ್ನು 35 ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ರೀತಿಗೆ ಇಡೀ ಭಾರತ ಎದ್ದು ನಿಂತು ಸೆಲ್ಯೂಟ್ ಹೊಡೆದಿತ್ತು. ಯಾವ ಹುದ್ದೆಯನ್ನು ಕೊಟ್ಟರೂ ಅದನ್ನು ಶೇ.200 ಬದ್ಧತೆಯ ಜೊತೆಗೆ ಅವರು ಕೆಲಸ ಮಾಡಿ ಎಲ್ಲ ಕಡೆಯಲ್ಲಿಯೂ ಗೆದ್ದಿರುವುದು ನಮಗೆ ಗೊತ್ತಿದೆ. ಭಾರತದ ವಿವಿಧ ಭಾಷೆಗಳಲ್ಲಿ

ಕಿರಣ್ ಬೇಡಿ – ವರ್ಷ 75 ಆದರೂ ಇಂದಿಗೂ ಯೂತ್ ಐಕಾನ್ Read More »

ಮಳಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ : ಈಚಲು ಮರ ಧ್ವಂಸ

ಪುತ್ತೂರು: ಕಾಡಾನೆಯೊಂದು ಮಳಿ ಪ್ರದೇಶದಲ್ಲಿ ಕಾಣಿಡಿಕೊಂಡಿದ್ದು, ಆನೆಗುಂಡಿಯಿಂದ ಬಂದು ಪೆರ್ನಾಜೆ ಮೂಲಕ ಸರ್ಜಿಮೂಲೆ ಕಾಡಿಗೆ ಲಗ್ಗೆ ಇಟ್ಟಿದೆ. ರಾತ್ರಿ ಹೊತ್ತು ಈಚಲು ಮರವೊಂದನ್ನು ಧ್ವಂಸಗೊಳಿಸಿದೆ. ಪರಿಣಾಮ ಸುತ್ತಮುತ್ತಲ ಜನ ಭಯಭೀತರಾಗಿದ್ದಾರೆ. ಈಚಲು ಮರವನ್ನು ಧ್ವಂಸಗೊಳಿಸುವ ಸಂದರ್ಭ ಪಕ್ಕದಲ್ಲಿದ್ದ ವಿದ್ಯುತ್‍ ತಂತಿಗೆ ತಾಗಿ ಬೆಂಕಿ ಕಾಣಿಸಿಕೊಂಡಾಗ ಭಯಭೀತಗೊಂಡು ಕಾಲ್ಕಿತ್ತಿದೆ. ಮಳಿ ಎಂಬ ಪರಿಸರದಲ್ಲಿ ಪೂವಪ್ಪ ಗೌಡ ಹಾಗೂ ಶ್ವೇತ ಕುಮಾರ್ ಎಂಬವರಿಗೆ ಸೇರಿದ ಅಡಕೆ ತೋಟವಿದ್ದು, ರಾತ್ರಿ ವೇಳೆ ನೀರು ಕುಡಿಯಲು ಕಾಡಾನೆ ೀ ಪ್ರದೇಶಕ್ಕೆ ಬರುತ್ತಿರುವುದಾಗಿ ಸ್ಥಳೀಯ

ಮಳಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ : ಈಚಲು ಮರ ಧ್ವಂಸ Read More »

ಉಪಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ | ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ

ಪುತ್ತೂರು: ಉಪಚುನಾವಣೆ ಹಿನ್ನಲೆಯಲ್ಲಿ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಅ.10 ರಂದು ನಡೆಯಲಿರುವ ಕಾರಂತರ 123 ನೇ ಜನ್ಮ ದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂಡೂಡಲಾಗಿದೆ. ಈಗಾಗಲೇ ವಿಧಾನ ಪರಿಷತ್ ಉಪಚುನಾವಣೆ ಘೋಷಣೆಯಾಗಿದ್ದು, ಈ ಕುರಿತು ನೀತಿ ಸಂಹಿತೆ ಸೆ.19 ರಿಂದ ಅ.28 ರ ತನಕ ಜಾರಿಯಲ್ಲಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಚುನಾವನೆ ನೀತಿ ಸಂಹಿತೆ ಮುಗಿದ ಬಳಿಕ ಸಭೆ ನಡೆಸಿ ನಿಗದಿಪಡಿಸಲಾಗುವುದು. ಕಾರಂತರ ಜನ್ಮದಿನೋತ್ಸವ ನಡೆಸುವ ಕುರಿತು ಸೆ.18 ರಂದು ಪೂರ್ವಭಾವಿ ಸಭೆ ನಡೆಸಿ

ಉಪಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ | ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ Read More »

ಅಶೋಕ್ ರೈ ಬ್ರಿಗೇಡ್‌ನಿಂದ ವಿವಾಹ ಸಮಾರಂಭಕ್ಕೆ ಆಹಾರ ಸಾಮಗ್ರಿಗಳ ಕೊಡುಗೆ

ಪುತ್ತೂರು: ಅಶೋಕ್ ರೈ ಬ್ರಿಗೇಡ್‍ ನಿಂದ ಅಶೋಕ್ ರೈ ಮಹಿಳಾ ಬ್ರಿಗೇಡ್ ಸದಸ್ಯೆ ರಂಜಿತಾರವರ ಸಹೋದರಿ ರಕ್ಷಿತಾ ಅವರ ವಿವಾಹಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ  ಅಶೋಕ್ ರೈ ಬ್ರಿಗೇಡ್ ಪ್ರಮುಖರಾದ ಶಶಿಧರ್ ನಾಯ್ಕ್  ಕೃಷ್ಣನಗರ, ಪ್ರಕಾಶ್ ರೈ ಕೊಯಿಲ, ದೇವರಾಜ್ ಸಿಂಹವನ, ಗುರುಪ್ರಸಾದ್  ನಾಯ್ಕ್ ಪಡುಮಲೆ, ಅನಿಲ್ ಕಲ್ಲರ್ಪೆ, ಅಕ್ಷಯ್ ಗೌಡ ಕಾಂಚನ , ಕೀರ್ತನ್ ಆಚಾರ್ಯ ಹಂಟ್ಯಾರ್ , ರವಿ  ಪೋಳ್ಯ, ಆನಂದ ಸಿಂಹವನ ಉಪಸ್ಥಿತರಿದ್ದರು. ಈ ಕಾರ್ಯಕ್ಕೆ  ಅಮರ್ ರೈ ತಿಂಗಳಾಡಿ,

ಅಶೋಕ್ ರೈ ಬ್ರಿಗೇಡ್‌ನಿಂದ ವಿವಾಹ ಸಮಾರಂಭಕ್ಕೆ ಆಹಾರ ಸಾಮಗ್ರಿಗಳ ಕೊಡುಗೆ Read More »

ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್‍ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 186ರ ಸಭೆ ಕುಂಬ್ರ ಬಾಲಕೃಷ್ಣ ರೈ ಮನೆಯಲ್ಲಿ ನಡೆಯಿತು. 186 ಬೂತ್ ಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ನೇಮಿರಾಜ್ ರೈ ಕುರಿಕ್ಕಾರ ಹಾಗೂ ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಇದ್ಯಪ್ಪೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬೂತ್ ನ ಮತಗಟ್ಟೆ ಏಜೆಂಟಾಗಿ ಸೀತಾರಾಮ ಗೌಡ ಇದ್ಯಪ್ಪೆ ಬಿಎಲ್ಎ—2 ಆಗಿ ಮಹೇಶ್ ಗೌಡ ಇದ್ಯಪ್ಪೆ, ಪ್ರೀತಾ

ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್‍ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ Read More »

ಬಿಗ್‍ ಬಾಸ್ ಸೀಸನ್-11 ಕ್ಕೆ ಪುತ್ತೂರಿನ ಯೂಟ್ಯೂಬರ್ ಧನರಾಜ್ ಆಚಾರ್ ಪ್ರವೇಶ !

ಪುತ್ತೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಪುತ್ತೂರಿನ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ. ಇವರು 1ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಸಿಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಧನರಾಜ್ ಅವರು ತಮ್ಮ ಕಾಮಿಡಿ ವಿಡಿಯೋಗಳಿಂದ ಜನರ ಮನಗೆದ್ದಿದ್ದಾರೆ. ಕಾಮಿಡಿ ಜತೆಗೆ ಸಂದೇಶ ನೀಡುವುದು ಅವರ ರೀಲ್ಸ್ ನ ಪ್ಲಸ್ ಪಾಯಿಂಟ್. ಬಿಗ್ ಬಾಸ್ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ನಡೆಸಿಕೊಡಲಿದ್ದಾರೆ.

ಬಿಗ್‍ ಬಾಸ್ ಸೀಸನ್-11 ಕ್ಕೆ ಪುತ್ತೂರಿನ ಯೂಟ್ಯೂಬರ್ ಧನರಾಜ್ ಆಚಾರ್ ಪ್ರವೇಶ ! Read More »

ತಲೆಮರೆಸಿಕೊಂಡಿದ್ದ ಆರೋಪಿ ತೆಲಂಗಾಣದಲ್ಲಿ ಬಂಧನ

ಪುತ್ತೂರು: 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಹಮ್ಮದ್ ಇಕ್ಬಾಲ್‍ (53) ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ತೆಲಂಗಾಣ ರಾಜ್ಯದ ಹೈದರಾಬಾದ್‍ ನಲ್ಲಿ ಶನಿವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲಾ ನಿವಾಸಿ ಮಹಮ್ಮದ್ ಇಕ್ಬಾಲ್‍ ನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 15/2008 ಕಲಂ 416, 420, 511 ಜೊತೆಗೆ 34 Ipc  ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆರೋಪಿ ಬಂಧನಕ್ಕಾಗಿ ಪುತ್ತೂರು ಗ್ರಾಮಾಂತರ ಪೊಲೀಸ್

ತಲೆಮರೆಸಿಕೊಂಡಿದ್ದ ಆರೋಪಿ ತೆಲಂಗಾಣದಲ್ಲಿ ಬಂಧನ Read More »

ಖೋ ಖೋ ಪಂದ್ಯಾಟ – ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಪುತ್ತೂರು: ಜಿಲ್ಲಾ ಉಪನಿರ್ದೇಶಕರ ಕಛೇರಿ, ಮಂಗಳೂರು ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ನಯನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡವನ್ನು ತರುಣ್, ದೀಪಕ್, ಪ್ರಜ್ವಲ್, ಮೇಘರಾಜ್, ಭವಿತ್, ವಿನೀತ್, ಲಿಖಿತ್, ಕೀರ್ತನ್, ದೇಶ್ಚಿತ್, ಭಾಸ್ವತ್‌ ಪ್ರತಿನಿಧಿಸಿದ್ದರು. ತಂಡವನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಅಭಿನಂದಿಸಿದೆ.

ಖೋ ಖೋ ಪಂದ್ಯಾಟ – ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ Read More »

error: Content is protected !!
Scroll to Top