ಇಸ್ರೇಲ್‌ ಮೇಲೆ ಇರಾನ್‌ ಭಯಾನಕ ಕ್ಷಿಪಣಿ ದಾಳಿ

ಬೆಲೆ ತೆರಬೇಕಾಗುತ್ತದೆ ಎಂದು ನೆತನ್ಯಾಹು ಗುಡುಗು 400ಕ್ಕೂ ಅಧಿಕ ಕ್ಷಿಪಣಿಗಳಿಂದ ದಾಳಿ; ಮಧ್ಯಪ್ರಾಚ್ಯ ಧಗಧಗ ಬೈರೂತ್: ಇಸ್ರೇಲ್‌ನ ಮಿಲಿಟರಿ ನೆಲೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುರಿ ಮಾಡಿಕೊಂಡು ಮಂಗಳವಾರ ರಾತ್ರಿ ಇರಾನ್‌ 400ಕ್ಕೂ ಅಧಿಕ ಕ್ಷಿಪಣಿಗಳ ಮೂಲ ಭಯಾನಕ ದಾಳಿ ನಡೆಸಿದೆ. ಇದರಿಂದಾಗಿರುವ ನಾಶ ನಷ್ಟಗಳ ವರದಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಂಡಿದ್ದು, ಈ ದಾಳಿಗೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುಡುಗಿದ್ದಾರೆ.ಇರಾನ್​​ ದಾಳಿ ಮಾಡುವ ಸಿದ್ಧತೆ ನಡೆಸಿದೆ […]

ಇಸ್ರೇಲ್‌ ಮೇಲೆ ಇರಾನ್‌ ಭಯಾನಕ ಕ್ಷಿಪಣಿ ದಾಳಿ Read More »

ಆ ಶ್ರಾದ್ಧದ ಪಿಂಡ ಒಡೆಯಲು ಒಂದು ಕಾಗೆಯೂ ಬರಲಿಲ್ಲ

ಮಕ್ಕಳು ತೀರಿಹೋದ ಅಪ್ಪನ ಫೋಟೊದ ಮುಂದೆ ಕಣ್ಣೀರು ಸುರಿಸಿದಾಗ ನಡೆಯಿತೊಂದು ಪವಾಡ ಇದು ನಿಜವಾಗಿಯೂ ನಡೆದ ಘಟನೆ. ಅದನ್ನು ನಡೆದ ಹಾಗೆ ಬರೆಯುತ್ತೇನೆ. ಒಂದೂರಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಇದ್ದರು. ಅವರು ತುಂಬಾ ಪ್ರಾಯ ಆದ ನಂತರ ಒಂದು ಹೋಟೆಲು ಉದ್ಯಮ ಆರಂಭಿಸಿದ್ದರು. ವ್ಯಾಪಾರ ಚೆನ್ನಾಗಿಯೇ ಇತ್ತು. ಮುಂದೆ ಆ ವೃದ್ಧರು ಶುಗರ್ ಕಾಯಿಲೆಯಿಂದ ಬಳಲಿದರು ಆದರೆ ಮುಂದೆ ಒಮ್ಮೆ ಅವರು ನಿಶ್ಯಕ್ತಿಯಾಗಿ ತಲೆ ತಿರುಗಿ ಬಿದ್ದರು. ಪರೀಕ್ಷೆ ಮಾಡಲು ಆಸ್ಪತ್ರೆಗೆ ಹೋದಾಗ ವೈದ್ಯರು ರಕ್ತ ಪರೀಕ್ಷೆ

ಆ ಶ್ರಾದ್ಧದ ಪಿಂಡ ಒಡೆಯಲು ಒಂದು ಕಾಗೆಯೂ ಬರಲಿಲ್ಲ Read More »

ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲುವು ನಿಶ್ಚಿತ : ನಳಿನ್‌ ಕುಮಾರ್ ಕಟೀಲ್ ವಿಶ್ವಾಸ

ಮಂಗಳೂರು : ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವ ನಾಯಕ ಕಿಶೋರ್ ಕುಮಾರ್ ಪುತ್ತೂರು ಸ್ಪರ್ಧಿಸಲಿದ್ದು, ಅವಿಭಜಿತ ದ.ಕ.ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಅಭೂತಪೂರ್ವ ಗೆಲುವಿಗೆ ಸಹಕರಿಸಬೇಕೆಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿನಂತಿಸಿದ್ದಾರೆ. ಪಕ್ಷ ಯುವಕರಿಗೆ ಆದ್ಯತೆ ನೀಡಿದ್ದು, ಆರ್‌ ಎಸ್‌ ಎಸ್ ಸ್ವಯಂಸೇವಕ ಕಿಶೋರ್ ಕುಮಾರ್ ಪುತ್ತೂರು ಅಭಾವಿಪ ನಾಯಕನಾಗಿ, ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆಗೆ ದುಡಿದವರು. ಬಿಜೆಪಿಯ

ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲುವು ನಿಶ್ಚಿತ : ನಳಿನ್‌ ಕುಮಾರ್ ಕಟೀಲ್ ವಿಶ್ವಾಸ Read More »

ವಿಧಾನಸಭಾ ಉಪಚುನಾವಣೆ : ಬಿಜೆಪಿಯ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಘೋಷಣೆ

ವಿಧಾನಸಭಾ ಉಪಚುನಾವಣೆಗೆ ಬಿಜೆಪಿಯಿಂದ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿ ಸ್ಥಾನಕ್ಕೆ ಬಿಜೆಪಿಯಿಂದ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಹೆಸರು ಘೊಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಿಶೋರ್ ಕುಮಾರ್ ಅವರು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬೊಟ್ಯಾಡಿ ನಿವಾಸಿಯಾಗಿದ್ದಾರೆ. ಕೋಟಾ ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ವಿಧಾನಸಭಾ ಉಪಚುನಾವಣೆ : ಬಿಜೆಪಿಯ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಘೋಷಣೆ Read More »

‘ಕನ್ನಡ ಜ್ಯೋತಿ ರಥಯಾತ್ರೆ’ಗೆ ಪುತ್ತೂರಿನಲ್ಲಿ ಭವ್ಯ ಸ್ವಾಗತ

ಪುತ್ತೂರು: ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಜ್ಯೋತಿರಥಯಾತ್ರೆ’ ಪುತ್ತೂರಿಗೆ ಮಂಗಳವಾರ ಆಗಮಿಸಿತು. ಪುತ್ತೂರಿನ ಆಡಳಿತ ಸೌಧದ ಬಳಿ ರಥವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚಣೆ ಮಾಡುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್‍ ನಾಯಕ್, ಪರಿಷತ್‍ ನ ಬಿ.ಐತ್ತಪ್ಪ ನಾಯ್ಕ್‍ ಸಹಿತ

‘ಕನ್ನಡ ಜ್ಯೋತಿ ರಥಯಾತ್ರೆ’ಗೆ ಪುತ್ತೂರಿನಲ್ಲಿ ಭವ್ಯ ಸ್ವಾಗತ Read More »

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ : ಡಾ. ಜೀವನ್ ರಾಮ್ ಸುಳ್ಯ | ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವ

ಪುತ್ತೂರು: ತರಗತಿಯ ಒಳಗಡೆ ಆಗುವ ಪಾಠ ಮಾತ್ರ ಶಿಕ್ಷಣವಲ್ಲ. ತಮ್ಮನ್ನು ತಾವು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಕೂಡಾ ಒಂದು ಶಿಕ್ಷಣವೇ. ನಮ್ಮ ದೇಶದ ಶ್ರೀಮಂತಿಕೆ ಆರ್ಥಿಕ ಸ್ಥಿತಿಯಲ್ಲಿಲ್ಲ. ಬದಲಾಗಿ ಸರ್ವ ಕಲೆಗಳಲ್ಲಿ ಅಡಗಿದೆ. ಕಲಾವಿದರಾಗದೆ ಇದ್ದ ಪಕ್ಷದಲ್ಲಿ  ಸೌಂದರ್ಯ ಪ್ರಜ್ಞೆಯುಳ್ಳ  ಪ್ರೇಕ್ಷಕರಾದರೆ  ಅದುವೇ  ಸಾಂಸ್ಕೃತಿಕ ಲೋಕಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ರಾಷ್ಟ್ರೀಯ ರಂಗಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಡಾ. ಜೀವನ್ ರಾಮ್ ಸುಳ್ಯ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ : ಡಾ. ಜೀವನ್ ರಾಮ್ ಸುಳ್ಯ | ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವ Read More »

ಅ.2-12 : ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಕಡಬ: ತಾಲೂಕಿನ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.2 ಬುಧವಾರದಿಂದ ಅ.12 ಶನಿವಾರದ ತನಕ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಉತ್ಸವದ ಅಂಗವಾಗಿ ಅ.4 ಶುಕ್ರವಾರ ಬೆಳಿಗ್ಗೆ 8 ರಿಂದ ಸಾಮೂಹಿಕ ಚಂಡಿಕಾಯಾಗ, ಅ.11 ಹಾಗೂ 12 ರಂದು ಮಧ್ಯಾಹ್ನ 2 ರಿಂದ ಆಯುಧ ಪೂಜೆ ಜರಗಲಿದೆ. ಅ.12 ಶನಿವಾರ ವಿಜಯದಶಮಿಯಂದು ಬೆಳಿಗ್ಗೆ 8 ರಿಂದ ಶ್ರೀ ಮಹಾಗಣಪತಿ ಹೋಮ, 9 ರಿಂದ ಅಕ್ಷರಾಭ್ಯಾಸ, ಮಧ್ಯಾಹ್ನ 12 ರಿಂದ

ಅ.2-12 : ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ Read More »

ಪುತ್ತೂರು ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ | ವಿವಿಧ ರಾಷ್ಟ್ರನಾಯಕರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಭವ್ಯ ಭಾರತಕ್ಕಾಗಿ ಬದುಕು ಸಮರ್ಪಿಸಿದ ರಾಷ್ಟ್ರ ಕಂಡ ಹಿರಿಯ ಮುತ್ಸದಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧಿ ಹಾಗೂ ಭಾರತವನ್ನು ಪರಮ ವೈಭವದೆಡಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ರಾಷ್ಟ್ರ ಕಾರ್ಯವನ್ನು ಮಾಡುತ್ತಿರುವ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಚಾರಣೆಗಳ ಪ್ರಯುಕ್ತ ಸೇವಾ ಪಾಕ್ಷಿಕದ ಅಂಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಾಗೂ ದೇವಸ್ಥಾನದ ದೇವರ ಕೆರೆ ಕಟ್ಟೆಯ

ಪುತ್ತೂರು ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ | ವಿವಿಧ ರಾಷ್ಟ್ರನಾಯಕರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ Read More »

ನರಿಮೊಗರು ಹಿತರಕ್ಷಣಾ ವೇದಿಕೆಯ ಮುತುವರ್ಜಿಯಲ್ಲಿ 15 ವರ್ಷದಿಂದ ಬಗೆಹರಿಯದ ಸಮಸ್ಯೆ | ಮೇಘ ಇಂಡಸ್ಟ್ರೀಸ್ ಮಾಲಕರಿಂದ ಶಾಶ್ವತ ಪರಿಹಾರದ ಭರವಸೆ

ಪುತ್ತೂರು: ನರಿಮೊಗರು ಹಿತರಕ್ಷಣಾ ವೇದಿಕೆ ವತಿಯಿಂದ ಆ.20 ರಂದು ನಡೆದ ಗ್ರಾಮ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಾಯದಂತೆ ಸೆ.29 ರಂದು ಸಭೆ ನಡೆಸಿ ಕಲುಷಿತಗೊಂಡ ಕಾಲುವೆಯನ್ನು ಸ್ವಚ್ಛಗೊಳಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಚರ್ಚಿಸಲಾಯಿತು. ಬಿಂದು ಸಂಸ್ಥೆಯ ಮಾಲಕರು, ತಜ್ಞರು, ಗ್ರಾಮ ಪಂಚಾಯತ್, ಸಂತ್ರಸ್ತರು ಮತ್ತು ಊರ ಪ್ರಮುಖರು ಸೇರಿ 15 ವರ್ಷದಿಂದ ನರಕ ಸದೃಶ ಜೀವನ ನಡೆಸುತ್ತಿದ್ದ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ ನಡೆದು ಚರ್ಚಿಸಲಾಯಿತು. ಮುಂದಿನ ಮೂರು

ನರಿಮೊಗರು ಹಿತರಕ್ಷಣಾ ವೇದಿಕೆಯ ಮುತುವರ್ಜಿಯಲ್ಲಿ 15 ವರ್ಷದಿಂದ ಬಗೆಹರಿಯದ ಸಮಸ್ಯೆ | ಮೇಘ ಇಂಡಸ್ಟ್ರೀಸ್ ಮಾಲಕರಿಂದ ಶಾಶ್ವತ ಪರಿಹಾರದ ಭರವಸೆ Read More »

56 ವರ್ಷದ ಹಿಂದೆ ಪತನಗೊಂಡಿದ್ದ ವಿಮಾನದಲ್ಲಿದ್ದವರ ನಾಲ್ಕು ಶವ ಪತ್ತೆ

ರೋಹತಂಗ್‌ ಪಾಸ್‌ ದುರ್ಗಮ ಬೆಟ್ಟದಲ್ಲಿ ಪತನಗೊಂಡಿದ್ದ ವಾಯುಪಡೆ ವಿಮಾನ ಹೊಸದಿಲ್ಲಿ : ಹಿಮಾಚಲ ಪ್ರದೇಶದ ರೋಹತಂಗ್‌ ಪಾಸ್‌ನ ದುರ್ಗಮ ಬೆಟ್ಟದಲ್ಲಿ 56 ವರ್ಷದ ಹಿಂದೆ ಪತನಗೊಂಡಿದ್ದ ವಾಯುಪಡೆ ವಿಮಾನದಲ್ಲಿದ್ದ ನಾಲ್ವರ ಮೃತದೇಹಗಳು ನಿನ್ನೆ ಪರ್ವತಾರೋಹಿಗಳ ತಂಡವೊಂದಕ್ಕೆ ಸಿಕ್ಕಿದೆ.1968 ಫೆಬ್ರವರಿ 7ರಂದು 102 ಪ್ರಯಾಣಿಕರಿದ್ದ ಎಎನ್‌-12 ಎಂಬ ವಾಯುಪಡೆಯ ವಿಮಾನ ಚಂಡೀಗಢದಿಂದ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಹಿಮಾಚಲ ಪ್ರದೇಶದ ರೋಹತಂಗ್‌ ಪಾಸ್‌ ಸಮೀಪ ದುರ್ಗಮ ಬೆಟ್ಟದಲ್ಲಿ ಪತನಗೊಂಡಿತ್ತು. ವಿಮಾನದ ಅವಶೇಷ ಮತ್ತು ಅದರಲ್ಲಿದ್ದ ಪ್ರಯಾಣಿಕರು ಹಿಮರಾಶಿಯೊಳಗೆ ಸಮಾಧಿಯಾಗಿದ್ದರು.

56 ವರ್ಷದ ಹಿಂದೆ ಪತನಗೊಂಡಿದ್ದ ವಿಮಾನದಲ್ಲಿದ್ದವರ ನಾಲ್ಕು ಶವ ಪತ್ತೆ Read More »

error: Content is protected !!
Scroll to Top