ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸಾಕಾರಗೊಂಡ ವಂದೇ ಭಾರತ್ ರೈಲು | ರೈಲು ಸೇವೆ ಆಧುನೀಕರಣದಲ್ಲಿ ಭಾರತದ ದಾಪುಗಾಲಿನ ಓಟ : ಸುಕೇಶ್ ಎನ್‌. ರಾವ್ ಬೈಲೂರು

ಭಾರತದ ಅಭಿವೃದ್ಧಿಯಲ್ಲಿ ಭಾರತೀಯ ರೈಲ್ವೆಯ ಸೇವೆ ಸದಾ ಮಂಚೂಣಿಯಲ್ಲಿ ಇದೆ. ಆದರೆ ಭಾರತದ ರೈಲ್ವೆಯಲ್ಲಿ ಬಹಳ ವರ್ಷಗಳಿಂದ ಹಳೆ ಮಾದರಿಯ ರೈಲುಗಳ ಓಡಾಟ, ನಿಧಾನಗತಿಯಲ್ಲಿ ಸಾಗುತ್ತಿದ್ದ  ಸುಧಾರಣೆಗಳು, ಅಭಿವೃದ್ಧಿ ಯೋಜನೆಗಳಿಂದ  ಜನರು ಬೇಸತ್ತು ಇನ್ನೂ ಹೆಚ್ಚಿನ ಸುಧಾರಣೆಯ ಅಗತ್ಯ, ಅಭಿವೃದ್ಧಿ ಆಗಬೇಕು, ಅಂತಾರಾಷ್ಟ್ರೀಯ ದರ್ಜೆಯ ರೈಲುಗಳು ನಮ್ಮಲ್ಲೂ ಬರಬೇಕು, ಜನಸಾಮನ್ಯರಿಗೆ ಉತ್ತಮ ಸೇವೆ ಸಿಗಬೇಕು, ನಿಲ್ದಾಣಗಳ ಗುಣಮಟ್ಟ, ಸುರಕ್ಷತೆ, ವಿನ್ಯಾಸ, ಎಲ್ಲವೂ ಚೆನ್ನಾಗಿರಬೇಕು ಎಂಬುದು ಹಲವಾರು ವರ್ಷಗಳಿಂದ ನಾವೆಲ್ಲರೂ ಬಯಸುತ್ತಿದ್ದೆವು. ಅದೀಗ ಸಾಕಾರಗೊಳ್ಳುತ್ತಿದೆ. ಭಾರತದಲ್ಲಿ ರೈಲ್ವೆ ಇಲಾಖೆಯಲ್ಲಿ […]

ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಸಾಕಾರಗೊಂಡ ವಂದೇ ಭಾರತ್ ರೈಲು | ರೈಲು ಸೇವೆ ಆಧುನೀಕರಣದಲ್ಲಿ ಭಾರತದ ದಾಪುಗಾಲಿನ ಓಟ : ಸುಕೇಶ್ ಎನ್‌. ರಾವ್ ಬೈಲೂರು Read More »

ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಬೊಟ್ಯಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ಪುತ್ತೂರು: ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ದೊರೆತ ಬೆನ್ನಲ್ಲೇ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಬುಧವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಶ್ರೀ ದೇವಸ್ಥಾನದ ಗರ್ಭಗುಡಿ ಎದುರು ಪ್ರಾರ್ಥನೆ ನೆರವೇರಿಸಿ ಸೇವೆ ಸಲ್ಲಿಸಿದರು. ಪ್ರಧಾನ ಅರ್ಚಕ ವಿ.ಎಸ್‍.ಭಟ್‍ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಂಚಾಲಕ ಚಂದ್ರಶೇಖರ ರಾವ್ ಬಪ್ಪಳಿಗೆ, ನಗರ ಮಂಡಲ ಅಧ್ಯಕ್ಷ ಪಿ.ಬಿ.ಶಿವಕುಮಾರ್, ನಗರಸಭೆ ಸದಸ್ಯೆ ವಿದ್ಯಾ ಆರ್‍.ಗೌರಿ,

ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಬೊಟ್ಯಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ Read More »

ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ ಶಲ್ಯಕ್ಕೆ ಹತ್ತಿಕೊಂಡ ಬೆಂಕಿ

ಗನ್‌ಮ್ಯಾನ್‌ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ ಬೆಂಗಳೂರು : ಕಿತ್ತೂರು ಉತ್ಸವದ ಉದ್ಘಾಟಿಸುವ ವೇಳೆ ಜ್ಯೋತಿ ಬೆಳಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿ ತಾಗಿ ತುಸು ಹೊತ್ತು ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬಟ್ಟೆಗೆ ಬೆಂಕಿ ಹತ್ತಿಕೊಂಡಿರುವುದನ್ನು ಕಂಡ ಗನ್‌ಮ್ಯಾನ್​ ಕೂಡಲೇ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.ವಿಧಾನಸೌಧದ ಮುಂಭಾಗ ಕಿತ್ತೂರು ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಕಿತ್ತೂರು ಉತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ, ಕಿತ್ತೂರು

ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ ಶಲ್ಯಕ್ಕೆ ಹತ್ತಿಕೊಂಡ ಬೆಂಕಿ Read More »

ವಿದ್ಯಾರಶ್ಮಿಯಲ್ಲಿ ಗಾಂಧೀ ಜಯಂತಿ ಆಚರಣೆ

ಸವಣೂರು: ವಿದ್ಯಾರಶ್ಮಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಮಾತನಾಡಿ, ಇತಿಹಾಸವನ್ನು ನಾವು ನೆನಪಿಡಬೇಕಿದೆ ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವನವನ್ನೇ ತ್ಯಾಗಮಾಡಿದ ಗಾಂಧೀಜಿಯವರನ್ನು ಇಂದು ದೂಷಿಸುವ ಕೆಲಸವೂ ಕೆಲವರಿಂದ ಆಗುತ್ತಿದೆ. ಇದು ಸರಿಯಲ್ಲ, ಬದಲಾಗಿ ನಾವು ಗಾಂಧೀಜಿ ಮತ್ತು ಇತರ ನಾಯಕರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನಪಿಟ್ಟು ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ

ವಿದ್ಯಾರಶ್ಮಿಯಲ್ಲಿ ಗಾಂಧೀ ಜಯಂತಿ ಆಚರಣೆ Read More »

ರೈಲು ನಿಲ್ದಾಣದಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಉಗ್ರರು : 8 ಮಂದಿ ಸಾವು

ಇಸ್ರೇಲ್‌ ಮೇಲೆ ಇನ್ನೊಂದು ಭಯೋತ್ಪಾದಕ ದಾಳಿ ಟೆಲ್‌ ಅವಿವ್‌: ಇಸ್ರೇಲ್‌ನ ಟೆಲ್ ಅವಿವ್‌ ಸಮೀಪ ಜಾಫಾ ಪಟ್ಟಣದ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತರಾಗಿದ್ದಾರೆ.ಇಬ್ಬರು ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ನಂತರ ಅವರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‌ನಿಂದ ಆಗಮಿಸಿದ್ದರು ಎಂದು ರಕ್ಷಣಾ ಪಡೆ ತಿಳಿಸಿದೆ.ರೈಲು ನಿಲ್ದಾಣದ ಟ್ರಾಫಿಕ್ ಕ್ರಾಸಿಂಗ್ ಬಳಿ ಗುಂಡಿನ ದಾಳಿ ನಡೆದಿದ್ದು, ಆಗ ರೈಲೊಂದು ನಿಂತಿತ್ತು. ಹೆಚ್ಚಿನ

ರೈಲು ನಿಲ್ದಾಣದಲ್ಲಿ ಯದ್ವಾತದ್ವಾ ಗುಂಡು ಹಾರಿಸಿದ ಉಗ್ರರು : 8 ಮಂದಿ ಸಾವು Read More »

ಹೆಲಿಕಾಪ್ಟರ್‌ ಪತನ : ಇಬ್ಬರು ಪೈಲಟ್‌ಗಳ ಸಹಿತ ಮೂವರು ಸಾವು

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾವ್ಧಾನ್‌ ಎಂಬಲ್ಲಿ ಇಂದು ಬೆಳಗ್ಗೆ ಹೆಲಿಕಾಪ್ಟರ್‌ ಪತನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಹಾಗೂ ಓರ್ವ ಒಂಜಿನಿಯರ್‌ ಸಾವಿಗೀಡಾಗಿದ್ದಾರೆ. ಸಮೀಪದ ಹೆಲಿಪ್ಯಾಡ್‌ನಿಂದ ಟೇಕಾಫ್‌ ಆಗಿದ್ದ ಹೆಲಿಕಾಪ್ಟರ್‌ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೊತ್ತಿ ಉರಿದಿದ್ದು, ಅದರಲ್ಲಿದ್ದ ಮೂವರು ಸುಟ್ಟುಕರಕಲಾಗಿದ್ದಾರೆ.ಪೊಲೀಸರು, ಅಗ್ನಿಶಾಮಕ ದಳ ಹಾಗೂ ವಿಪತ್ತು ಪರಿಹಾರ ದಳ ಸ್ಥಳಕ್ಕೆ ಧಾವಿಸಿದೆ. ಬೆಳಗ್ಗೆ 6.50ರ ಸುಮಾರಿಗೆ ಈ ಘಟನೆ ನಡೆದಿದೆ. ದಟ್ಟ ಮಂಜು ಆವರಿಸಿದ್ದದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ. ಹೆಲಿಕಾಪ್ಟರ್‌ ಹೆರಿಟೇಜ್‌ ಏವಿಯೇಶನ್‌ ಸಂಸ್ಥೆಗೆ ಸೇರಿದ್ದು

ಹೆಲಿಕಾಪ್ಟರ್‌ ಪತನ : ಇಬ್ಬರು ಪೈಲಟ್‌ಗಳ ಸಹಿತ ಮೂವರು ಸಾವು Read More »

ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

ಬೆಳ್ತಂಗಡಿ: ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್  & ಬೈಟ್ ಐಟಿ ಕಂಪನಿಯ ಪ್ರಕಾಶ್ ರಾವ್ ಅವರು ನೀಡಿದ 1.65 ಲಕ್ಷ ರೂ. ವೆಚ್ಚದ ಸ್ಮಾರ್ಟ್ ಕ್ಲಾಸ್ ನ್ನು ರಾಮಕ್ಷೇತ್ರ ದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿಯ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಸ್ಮಾರ್ಟ್ ಕ್ಲಾಸ್ ನ ಸದುಪಯೋಗವನ್ನು ಚೆನ್ನಾಗಿ ಪಡೆದು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ

ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ Read More »

ಇರಾನ್‌-ಇಸ್ರೇಲ್‌ ಸಮರ: ಬೆಂಗಳೂರಿಗೆ ಬರುತ್ತಿದ್ದ ವಿಮಾನ ಇಸ್ತಾಂಬುಲ್‌ನಲ್ಲಿ ಬಾಕಿ

ವಾಯುಮಾರ್ಗ ಮುಚ್ಚಿದ ಕಾರಣ ವಿಮಾನದಲ್ಲೇ ಉಳಿದ 300 ಪ್ರಯಾಣಿಕರು ಇಸ್ತಾಂಬುಲ್‌ : ಇಸ್ರೇಲ್ ಮೇಲೆ ಇರಾನ್‌ ಕ್ಷಿಪಣಿ ಮಳೆಗರೆದು ದಾಳಿ ನಡೆಸಿದ ಪರಿಣಾಮವಾಗಿ ಬೆಂಗಳೂರಿಗೆ ಬರುತ್ತಿದ್ದ ಸುಮಾರು 300 ಪ್ರಯಾಣಿಕರು ವಿಮಾನದಲ್ಲೇ ಬಾಕಿಯಾಗಿದ್ದಾರೆ. ಸ್ವಿಜರ್‌ಲ್ಯಾಂಡ್‌ನ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಕನ್ನಡಿಗರು ಸೇರಿ 300 ಮಂದಿ ಪ್ರಯಾಣಿಕರು ಬರುತ್ತಿದ್ದರು. ಈ ವೇಳೆ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ.ಕ್ಷಿಪಣಿ ದಾಳಿಯ ಬೆನ್ನಲ್ಲೇ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌

ಇರಾನ್‌-ಇಸ್ರೇಲ್‌ ಸಮರ: ಬೆಂಗಳೂರಿಗೆ ಬರುತ್ತಿದ್ದ ವಿಮಾನ ಇಸ್ತಾಂಬುಲ್‌ನಲ್ಲಿ ಬಾಕಿ Read More »

ಮನೆಯ ಅಂಗಳದಲ್ಲೇ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು

ಪುತ್ತೂರು: ಕೊಕ್ಕಡದಲ್ಲಿ ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಅ.1ರಂದು ರಾತ್ರಿ ನಡೆದಿದೆ. ಕೊಕ್ಕಡದ ಹಮೀದ್ ಎಂಬವರ 10 ವರ್ಷ ಪ್ರಾಯದ ಪುತ್ರ ನವಾಫ್ ಮೃತಪಟ್ಟವರು.ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದರು ಎನ್ನಲಾಗಿದೆ. ಅವರ ಮೇಲೆಯೇ ಕಾರು ಹರಿದ ಪರಿಣಾಮ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿ ಮೃತಪಟ್ಡಿದ್ದಾರೆ. ನವಾಫ್ ಅವರು ಕಾರಿನ

ಮನೆಯ ಅಂಗಳದಲ್ಲೇ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು Read More »

ಚೈತ್ರಾರನ್ನು ಬಿಗ್‌ಬಾಸ್‌ನಿಂದ ಹೊರಗೆ ಕಳುಹಿಸಿ, ಇಲ್ಲದಿದ್ದರೆ…

ಕೇಸ್‌ಗಳಿರುವ ಕಳಂಕಿತರಿಂದ ಸಮಾಜಕ್ಕೆ ತಪ್ಪು ಸಂದೇಶ ಎಂದು ವಾರ್ನಿಂಗ್‌ ಬೆಂಗಳೂರು : ಈ ಸಲದ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿಗಳ ಪೈಕಿ ಹೆಚ್ಚು ಸುದ್ದಿಯಾಗುತ್ತಿರುವುದು ಚೈತ್ರಾ ಕುಂದಾಪುರ. ಎಲ್ಲರ ಗಮನ ಈಕೆಯ ಮೇಲಿದೆ. ಬಿಗ್‌ಬಾಸ್ 11 ಆರಂಭವಾಗಿ ಮೂರು ದಿನಗಳಾಗಿದ್ದು, ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ತಲುಪಿದ್ದಾರೆ. ಈಗ ಚೈತ್ರಾಗೆ ಕಾನೂನು ಸಂಕಷ್ಟ ಎದುರಾಗಿದೆ. ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್‌ ಮನೆಯಿಂದ ಹೊರಗೆ ಕಳುಹಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ವಕೀಲರೊಬ್ಬರು ನೋಟಿಸ್‌

ಚೈತ್ರಾರನ್ನು ಬಿಗ್‌ಬಾಸ್‌ನಿಂದ ಹೊರಗೆ ಕಳುಹಿಸಿ, ಇಲ್ಲದಿದ್ದರೆ… Read More »

error: Content is protected !!
Scroll to Top