ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗುಂಡೇಟು

ರಿವಾಲ್ವರ್‌ ಸ್ವಚ್ಛಗೊಳಿಸುವಾಗ ಸಿಡಿದ ಬುಲೆಟ್‌ ಮುಂಬಯಿ: ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ ಕಾಲಿಗೆ ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೆಂದು ಅವರ ಕಾಲಿಗೆ ಯಾರೂ ಗುಂಡು ಹಾರಿಸಿಲ್ಲ, ತನ್ನದೇ ಲೇಸೆನ್ಸ್‌ ಇರುವ ರಿಲಾಲ್ವರ್‌ನಿಂದ ಹಾರಿದ ಗುಂಡಿನಿಂದ ಗೋವಿಂದ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಮಂಗಳವಾರ ಬೆಳಗ್ಗೆ ಗೋವಿಂದ ಅವರ ಕಾಲಿಗೆ ಅವರದೇ ರಿವಾಲ್ವರ್‌ನಿಂದ ಹಾರಿದ ಗುಂಡು ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಕಸ್ಮಿಕವಾಗಿ ಅವರ ರಿವಾಲ್ವರ್‌ನಿಂದ ಗುಂಡು ಹಾರಿದೆ ಎನ್ನಲಾಗಿದೆ.ಮುಂಜಾನೆ 4.45ಕ್ಕೆ ಈ ಘಟನೆ ನಡೆದಿದೆ. ಕೋಲ್ಕತಕ್ಕೆ ಹೋಗುವ […]

ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗುಂಡೇಟು Read More »

ಬೀಡಿ ಕಾರ್ಮಿಕರಿಗೆ ಬೋನಸ್ ಪ್ರತಿ ಒಂದು ಸಾವಿರ ಬೀಡಿಗೆ 41.46 ರೂ. : ಪಿ.ಕೆ. ಸತೀಶನ್

ಪುತ್ತೂರು: ಬೀಡಿ ಕಾರ್ಮಿಕರಿಗೆ ಎಲ್ಲಾ ಕಡೆ ಈಗ ಬೋನಸ್ ವಿತರಣೆ ಆಗುತ್ತಿದ್ದು 2024 ರಲ್ಲಿ ಪ್ರತಿ ಒಂದು ಸಾವಿರ ಬೀಡಿಗೆ 41,46 ರೂ. ಅಂದರೆ ಒಂದು ಲಕ್ಷ ಬೀಡಿಗೆ 4,145  ಬೋನಸ್ ಬಿಡುಗಡೆಯಾಗಿದೆ. ಅದನ್ನು ಬೀಡಿ ಕಾರ್ಮಿಕರು ಪಡಕೊಳ್ಳಬೇಕೆಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಪಿ.ಕೆ. ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್‌, ಖಜಾಂಜಿ ಈಶ್ವರಿ ಹೇಳಿದ್ದಾರೆ. ಪ್ರತಿ ಒಂದು ಸಾವಿರ ಬೀಡಿಗೆ ರಜಾ ಸಂಬಳ 12.62 ಹಬ್ಬದ ರಜಾ ಸಂಬಳ, 7.82 ಮತ್ತು ಬೋನಸ್ 21.02

ಬೀಡಿ ಕಾರ್ಮಿಕರಿಗೆ ಬೋನಸ್ ಪ್ರತಿ ಒಂದು ಸಾವಿರ ಬೀಡಿಗೆ 41.46 ರೂ. : ಪಿ.ಕೆ. ಸತೀಶನ್ Read More »

ದಿಢೀರ್‌ ಎಂದು ಗಗನಮುಖಿಯಾದ ತೆಂಗಿನಕಾಯಿ ಬೆಲೆ : ಹಬ್ಬದ ಸಮಯದಲ್ಲಿ ಜನ ಕಂಗಾಲು

ತೆಂಗಿನೆಣ್ಣೆ ಬೆಲೆಯಲ್ಲಿ 100 ರೂ. ಏರಿಕೆ ಪುತ್ತೂರು: ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಈಗ ತೆಂಗಿನಕಾಯಿ ಕೂಡ ಶಾಕ್‌ ಕೊಡಲಾರಂಭಿಸಿದೆ. ಟೊಮೆಟೊ, ಈರುಳ್ಳಿ, ತರಕಾರಿ, ಅಡುಗೆ ಎಣ್ಣೆ, ಹೂ, ಹಣ್ಣು… ಹೀಗೆ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೇ ಏರುತ್ತಲೇ ಇದೆ. ಇದರ ಜೊತೆಗೆ ಈಗ ತೆಂಗಿನಕಾಯಿ ಕೂಡ ಸೇರಿಕೊಂಡಿದೆ. ಅದರಲ್ಲೂ ಸಾಲು ಸಾಲು ಹಬ್ಬಗಳು ಬರುತ್ತಿರುವಾಗಲೇ ತೆಂಗಿನಕಾಯಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿರುವುದು ಜನರ ಕೈಸುಡಲಾರಂಭಿಸಿದೆ. ಕರಾವಳಿ ಭಾಗದಲ್ಲಿ ಅಡುಗೆಗೆ ತೆಂಗಿನಕಾಯಿ ಬೇಕೇ ಬೇಕು.

ದಿಢೀರ್‌ ಎಂದು ಗಗನಮುಖಿಯಾದ ತೆಂಗಿನಕಾಯಿ ಬೆಲೆ : ಹಬ್ಬದ ಸಮಯದಲ್ಲಿ ಜನ ಕಂಗಾಲು Read More »

ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ. ಘಟಕಗಳಿಂದ ಸ್ವಚ್ಛತಾ ಚಟುವಟಿಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಎನ್.ಸಿ.ಸಿ. ಘಟಕಗಳಾದ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ ಘಟಕ ಮತ್ತು 5 ಕರ್ನಾಟಕ ನೌಕಾದಳ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಚ್ಛಹಿ ಸೇವಾ ಆಂದೋಲನದ ಅಂಗವಾಗಿ ಫಾದರ್ ಪತ್ರವೋ ವೃತ್ತದ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಎನ್.ಸಿ.ಸಿ. ಘಟಕದ ಸದಸ್ಯರು ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧಗೊಳಿಸಿ, ಗಿಡ ಗಂಟಿಗಳು, ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಕಾಲೇಜಿನ ಭೂದಳ ಎನ್.ಸಿ.ಸಿ. ಅಧಿಕಾರಿ ಕ್ಯಾ.

ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ. ಘಟಕಗಳಿಂದ ಸ್ವಚ್ಛತಾ ಚಟುವಟಿಕೆ Read More »

ಸಿದ್ದರಾಮಯ್ಯನವರಿಗೆ ತಿಳಿಸದೆ ಮುಡಾ ಸೈಟ್‌ ಹಿಂದಿರುಗಿಸುವ ನಿರ್ಧಾರ ಕೈಗೊಂಡ ಪತ್ನಿ ಪಾರ್ವತಿ

ಭಾರಿ ಸಂಚಲನ ಸೃಷ್ಟಿಸಿದ ಪಾರ್ವತಿ ಸಿದ್ದರಾಮಯ್ಯನವರ ಭಾವನಾತ್ಮಕ ಪತ್ರ ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ಕೇಸ್‌ಗಳು ದಾಖಲಾಗಿರುವಂತೆಯೇ ಈ ಹಗರಣ ಹಠಾತ್‌ ತಿರುವು ಪಡೆದುಕೊಂಡಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಪತಿಗೆ ತಿಳಿಸದೆಯೇ ತನ್ನ ಹೆಸರಿಗೆ ಮಂಜೂರಾಗಿದ್ದ ಎಲ್ಲ 14 ನಿವೇಶನಗಳನ್ನು ಮುಡಾಕ್ಕೆ ಮರಳಿಸಲು ನಿರ್ಧರಿಸಿದ್ದು, ಈ ಕುರಿತು ಅವರು ಬರೆದಿರುವ ಪತ್ರ ಸಂಚಲನ ಉಂಟು ಮಾಡಿದೆ. ತಾನೂ ಯಾರಲ್ಲೂ ಚರ್ಚಿಸದೆ ಅತ್ಮಸಾಕ್ಷಿ ಪ್ರಕಾರ ಸೈಟ್‌ಗಳನ್ನು ವಾಪಸ್‌ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ

ಸಿದ್ದರಾಮಯ್ಯನವರಿಗೆ ತಿಳಿಸದೆ ಮುಡಾ ಸೈಟ್‌ ಹಿಂದಿರುಗಿಸುವ ನಿರ್ಧಾರ ಕೈಗೊಂಡ ಪತ್ನಿ ಪಾರ್ವತಿ Read More »

ಮುಡಾ ಹಗರಣ : ಇ.ಡಿ.ಯಿಂದ ಸಿದ್ದರಾಮಯ್ಯ ವಿರುದ್ಧ ಇಸಿಐಆರ್‌ ದಾಖಲು

ಇ.ಡಿ.ಗಿದೆ ವಿಚಾರಣೆಗೆ ಕರೆಯುವ, ಬಂಧಿಸುವ ವಿಶೇಷಾಧಿಕಾರ ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ನಾಲ್ವರ ವಿರುದ್ಧ ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ಫಾರ್ಮೇಶನ್‌ ರಿಪೋರ್ಟ್‌ (ಇಸಿಐಆರ್‌) ದಾಖಲಿಸಿಕೊಂಡಿದೆ. ಈಗಾಗಲೇ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಹಿತ ಕೆಲವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇದೀಗ ಇ.ಡಿ. ಕೂಡ ರಂಗ ಪ್ರವೇಶ ಮಾಡಿರುವುದರಿಂದ ಸಿದ್ದರಾಮಯ್ಯನವರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.ಮೈಸೂರು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರೂ

ಮುಡಾ ಹಗರಣ : ಇ.ಡಿ.ಯಿಂದ ಸಿದ್ದರಾಮಯ್ಯ ವಿರುದ್ಧ ಇಸಿಐಆರ್‌ ದಾಖಲು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 48.50 ರೂ. ಏರಿಕೆ

ಹೊಸದಿಲ್ಲಿ : ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿ ನವರಾತ್ರಿ ಹೊತ್ತಲ್ಲಿ ಗ್ರಾಹಕರಿಗೆ ಶಾಕ್ ನೀಡಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂ. ಹೆಚ್ಚಿಸಲಾಗಿದೆ. ದಿಲ್ಲಿಯಲ್ಲಿ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1740 ರೂ ಆಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ಅಕ್ಟೋಬರ್ 1, 2024ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಮುಂಬೈನಲ್ಲಿ ರೂ 1692.50, ಕೋಲ್ಕತ್ತಾದಲ್ಲಿ 1850.50 ರೂ.

ಗ್ಯಾಸ್‌ ಸಿಲಿಂಡರ್‌ ಬೆಲೆ 48.50 ರೂ. ಏರಿಕೆ Read More »

ಬಧಾಯಿ ಹೋ ಮಿಥುನ್ ದಾ

ಬಂಗಾಳಿ ಮತ್ತು ಹಿಂದಿ ಸಿನಿಮಾಗಳ ಸೂಪರ್ ಸ್ಟಾರ್‌ಗೆ ಒಲಿದ ಫಾಲ್ಕೆ ಪ್ರಶಸ್ತಿ ಈ ಸೋಮವಾರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದ್ದು 74 ವರ್ಷದ ಶ್ರೇಷ್ಠ ನಟ ಮಿಥುನ್ ಚಕ್ರವರ್ತಿ ಅವರಿಗೆ (2022ರ) ಪ್ರಶಸ್ತಿ ಒಲಿದಿದೆ. ತನ್ನ ಪ್ರೊಫೈಲಿನಲ್ಲಿ ನೂರಾರು ಅತ್ಯುತ್ತಮ ಹಿಂದಿ ಮತ್ತು ಬೆಂಗಾಳಿ ಸಿನಿಮಾಗಳು, ಗಿನ್ನೆಸ್ ದಾಖಲೆ ಮಾಡಿದ ಟಿವಿ ರಿಯಾಲಿಟಿ ಶೋಗಳು, ಸಿನಿಮಾ ನಿರ್ಮಾಣ, ನಿರ್ದೇಶನ ಇವೆಲ್ಲವನ್ನೂ ಹೊಂದಿರುವ ಮಿಥುನ್ ಚಕ್ರವರ್ತಿ ತಾನೊಬ್ಬ ಶ್ರೇಷ್ಠ ಕಲಾವಿದ ಎನ್ನುವುದನ್ನು ಹೆಜ್ಜೆ ಹೆಜ್ಜೆಗೆ

ಬಧಾಯಿ ಹೋ ಮಿಥುನ್ ದಾ Read More »

9/11 ಹತ್ತು ದಿನದಲ್ಲಿ 72 ಕಡತ ವಿಲೇವಾರಿ : ಅಭಿಲಾಷ್‍

ಪುತ್ತೂರು: ಕಳೆದ ಹತ್ತು ದಿನಗಳಲ್ಲಿ ಪುಡಾದಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ 9/11 ಖಾತೆಯ 72 ಕಡತಗಳು ವಿಲೇವಾರಿಯಾಗಿದೆ ಎಂದು ಪುಡಾ ಕಾರ್ಯದರ್ಶಿ ಅಭಿಲಾಷ್‌ ಮಾಹಿತಿ ನೀಡಿದ್ದಾರೆ. 9/11 ಖಾತೆ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಕಂದಾಯ ಅಧಿಕಾರಿಗಳ ಸಭೆ ಕರೆದಿದ್ದ ಶಾಸಕ ಅಶೋಕ್ ರೈ ಅವರು ಪುತ್ತೂರು ತಾಲೂಕು, ಸುಳ್ಯ,ಬೆಳ್ತಂಗಡಿ ಹಾಗೂ ಕಡಬ ತಾಲೂಕು ಕೇಂದ್ರಗಳ ಕಡತ ವಿಲೆವಾರಿ ಮಾಡುವ ಚರ್ಚೆ ನಡೆಸಿ, ನಾಲ್ಕು ತಾಲೂಕು ಕೇಂದ್ರಗಳಲ್ಲಿ ವಾರದಲ್ಲಿ

9/11 ಹತ್ತು ದಿನದಲ್ಲಿ 72 ಕಡತ ವಿಲೇವಾರಿ : ಅಭಿಲಾಷ್‍ Read More »

ಹೊಸ್ಮಾರಿನಲ್ಲಿ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರ ದುರ್ಮರಣ

ಕಾರ್ಕಳ: ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನನಪ್ಪಿದ ಘಟನೆ  ಹೊಸ್ಮಾರು ಪಾಜೆಗುಡ್ಡೆ ಬಳಿ ಇಂದು ನಡೆದಿದೆ. ಬೈಕಿನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದು, ಬೈಕಿನಲ್ಲಿದ್ದ ನಾಲ್ಕು ಮಂದಿ ಸಾವನಪ್ಪಿದ್ದಾರೆ. ಮೃತರನ್ನು ಸುರೇಶ್ ಆಚಾರ್ಯ (36) ಮೀನಾಕ್ಷಿ (32) ಸುಮಿಕ್ಷಾ (7) ಸುಶ್ಮಿತಾ (5) ಸುಶಾಂತ್ (2) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಹೊಸ್ಮಾರಿನಲ್ಲಿ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರ ದುರ್ಮರಣ Read More »

error: Content is protected !!
Scroll to Top