ಅರಿಯಡ್ಕದಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ಪುತ್ತೂರು: ಭಾನುವಾರ ಸಂಜೆ ಸುರಿದ ಭಾರೀ ಮಳೆಯ ಸಂದರ್ಭ ಸಿಡಿಲು ಬಡಿದು    ಮನೆಯೊಂದಕ್ಕೆ ಅಪಾರ ಹಾನಿ ಉಂಟಾದ ಘಟನೆ ತಾಲೂಕಿನ ಅರಿಯಡ್ಕ ಗ್ರಾಮದ ಪಾಪೆಮಜಲು ಸಮೀಪದ ಪಾದಲಾಡಿ ಎಂಬಲ್ಲಿ ಸಂಭವಿಸಿದೆ. ಪಾದಲಾಡಿ ನಿವಾಸಿ ಶೇಖರ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದಿದೆ. ಗೋಡೆ ಬಿರುಕು ಬಿಟ್ಟಿದ್ದು ಟಿವಿ, ಫ್ರಿಜ್ ಮತ್ತಿತರ ಇಲೆಕ್ಟ್ರಾನಿಕ್ ಸೊತ್ತುಗಳು ಸುಟ್ಟು ಹೋಗಿವೆ. ವಿದ್ಯುತ್ ಲೈನ್ ಕೂಡಾ ಸುಟ್ಟು ಹೋಗಿದೆ. ಮನೆಯ ಹೊರಗೆ ಅಂಗಳದಲ್ಲಿದ್ದ ಸಾಕು ನಾಯಿ ಸಿಡಿಲಾಘಾತದಲ್ಲಿ ಮೃತಪಟ್ಟಿದೆ. ಸುಮಾರು ಐವತ್ತು ಸಾವಿರಕ್ಕೂ […]

ಅರಿಯಡ್ಕದಲ್ಲಿ ಸಿಡಿಲು ಬಡಿದು ಮನೆಗೆ ಹಾನಿ Read More »

ರೆಂಜಿಲಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ | ಕಂಬಳ ಆಯೋಜನೆ ಮೂಲಕ ಪ್ರೋತ್ಸಾಹ ಅಭಿನಂದನೀಯ ; ಚಂದ್ರಹಾಸ

ಸುಬ್ರಹ್ಮಣ್ಯ: ಜಾನಪದ ಕ್ರೀಡೆ ಕಂಬಳವನ್ನು ಗ್ರಾಮೀಣ ಭಾಗದಲ್ಲೂ ಆಯೋಜಿಸುವ ಮೂಲಕ ಕಂಬಳವನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದು  ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಹೇಳಿದರು. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆಜಾಲು ದಿ| ಆರ್.ಸಾಂತಪ್ಪ ಗೌಡ ಅವರ ಗದ್ದೆಯಲ್ಲಿ ನಡೆದ ನೂಜಿಬಾಳ್ತಿಲ- ರೆಂಜಿಲಾಡಿ ಗ್ರಾಮಸ್ಥರ ಸಹಕಾರದಲ್ಲಿ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಯುವಕ ಮಂಡಲದ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಡೆದ ಸಬ್ ಜೂನಿಯರ್ ವಿಭಾಗದ

ರೆಂಜಿಲಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ | ಕಂಬಳ ಆಯೋಜನೆ ಮೂಲಕ ಪ್ರೋತ್ಸಾಹ ಅಭಿನಂದನೀಯ ; ಚಂದ್ರಹಾಸ Read More »

ಮಧ್ಯಮವರ್ಗದ ಜನರ ಸೈಟ್ ಖರೀದಿಯ ಕನಸನ್ನು ನನಸು ಮಾಡುವ ಸುವರ್ಣಾವಕಾಶ | ಆಶೀರ್ವಾದ್ ಎಂಟರ್ ಪ್ರೈಸಸ್‍ನಿಂದ ಯೋಜನೆ

ಪುತ್ತೂರು: ‘ನಿಮ್ಮ ಕನಸು ನಮ್ಮಲ್ಲಿ ನನಸು’ ಎಂಬ ಧೈಯವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ಇದೀಗ ಮಧ್ಯಮವರ್ಗದ ಜನರ ಸೈಟ್ ಖರೀದಿಯ ಕನಸನ್ನು ನನಸು ಮಾಡುವ ಸುವರ್ಣಾವಕಾಶವೊಂದನ್ನು ಒದಗಿಸುತ್ತಿದೆ. ತನ್ನ ಪ್ರಥಮ ಯೋಜನೆಯ ಲಕ್ಕಿ ಡ್ರಾದಲ್ಲಿ ಇಬ್ಬರಿಗೆ ಎರಡು ಬೈಕ್ ಮತ್ತು ಇನ್ನಿಬ್ಬರು ಅದೃಷ್ಟಶಾಲಿಗಳಿಗೆ ಚಿನ್ನ ಗೆಲ್ಲುವ ಅವಕಾಶವನ್ನು ನೀಡಿದ್ದ ಆಶೀರ್ವಾದ್ ಸಂಸ್ಥೆ ಇದೀಗ ಆಶೀರ್ವಾದ 2.0ದ ಎರಡನೇ ಲಕ್ಕಿ ಡ್ರಾ ಯೋಜನೆಯಲ್ಲಿ, ಒಬ್ಬ ಅದ್ಯಾಶಾಲಿಗೆ 5 ಸೆಂಟ್ಸ್ ನಿವೇಶನ ಸ್ಥಳವನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ನೀಡುತ್ತಿದೆ. ಇದಕ್ಕೆ

ಮಧ್ಯಮವರ್ಗದ ಜನರ ಸೈಟ್ ಖರೀದಿಯ ಕನಸನ್ನು ನನಸು ಮಾಡುವ ಸುವರ್ಣಾವಕಾಶ | ಆಶೀರ್ವಾದ್ ಎಂಟರ್ ಪ್ರೈಸಸ್‍ನಿಂದ ಯೋಜನೆ Read More »

ಕಿಲ್ಲೆ ಮೈದಾನದಲ್ಲೇ ಸೋಮವಾರದ ಸಂತೆ : ಶಾಸಕರ ಸೂಚನೆ

ಪುತ್ತೂರು: ವಿಧಾನಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ಸೋಮವಾrದ ಸಂತೆಯನ್ನು ಅಧಿಕಾರಿಗಳು ರದ್ದು ಮಾಡಿದ್ದು , ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಶಾಶಕರು ಕಿಲ್ಲೆ ಮೈದಾನದಲ್ಲೇ ಸಂತೆ ನಡೆಸಲು ಅವಕಾಶ ನೀಡುವಂತೆ ಸೂಚನೆಯನ್ನು ನೀಡಿದ್ದಾರೆ. ಅದರಂತೆ ಕಿಲ್ಲೆ ಮೈದಾನದಲ್ಲೇ ಸಂತೆ ನಡೆಯಲಿದೆ. ಪುತ್ತೂರು ನಗರಸಭಾ ವ್ಯಾಪ್ತಿಯ ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಕಿಲ್ಲೆ ಮೈದಾನ ಇರುವ ಕಾರಣ ನೀತಿ ಸಂಹಿತೆ ನೆಪದಲ್ಲಿ ವಾರದ ಸಂತೆಯನ್ನು ಅಧಿಕಾರಿಗಳು ರದ್ದು ಮಾಡಿದ್ದರು. ಈ ಬಗ್ಗೆ ಸಂತೆ ವ್ಯಾಪಾರಿಗಳು ಶಾಸಕರ

ಕಿಲ್ಲೆ ಮೈದಾನದಲ್ಲೇ ಸೋಮವಾರದ ಸಂತೆ : ಶಾಸಕರ ಸೂಚನೆ Read More »

ಮುಡಾ ಹಗರಣ : ಇ.ಡಿ. ಪರಿಶೀಲನೆ ಮುಕ್ತಾಯ

ಎರಡು ಬಾಕ್ಸ್‌ ದಾಖಲೆ ಒಯ್ದ ತನಿಖಾಧಿಕಾರಿಗಳು ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡುಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇ.ಡಿ ಅಧಿಕಾರಿಗಳು ಎರಡನೇ ದಿನವೂ 17 ಗಂಟೆಗಳ ಕಾಲ ಮಾಹಿತಿ ಕಲೆಹಾಕಿದ್ದಾರೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಎಲ್ಲ ಹಂತದ ಅಧಿಕಾರಿಗಳ

ಮುಡಾ ಹಗರಣ : ಇ.ಡಿ. ಪರಿಶೀಲನೆ ಮುಕ್ತಾಯ Read More »

ಉಳ್ಳಾಲ ಸಮೀಪ ರೈಲು ಹಳಿತಪ್ಪಿಸುವ ಯತ್ನ?

ರಾತ್ರಿ ಹಳಿ ಮೇಲೆ ಜಲ್ಲಿಕಲ್ಲು ಸುರಿದ ದುಷ್ಕರ್ಮಿಗಳು ಮಂಗಳೂರು : ಕಳೆದ ಕೆಲ ದಿನಗಳಿಂದ ದೇಶದ ಅಲ್ಲಲ್ಲಿ ದುಷ್ಕರ್ಮಿಗಳು ಹಳಿಯ ಮೇಲೆ ಗ್ಯಾಸ್‌ ಸಿಲಿಂಡರ್‌, ಮರದ ತುಂಡು, ಕಬ್ಬಿಣದ ಸರಳು ಇತ್ಯಾದಿಗಳನ್ನು ಇಟ್ಟು ರೈಲುಗಳ ಹಳಿ ತಪ್ಪಿಸಲು ಯತ್ನಿಸಿದ ಹಲವು ಘಟನೆಗಳು ವರದಿಯಾಗಿವೆ. ಬಹುತೇಕ ಘಟನೆಗಳಲ್ಲಿ ಚಾಲಕರ ಸಮಯ ಪ್ರಜ್ಞೆಯಿಂದಾಗಿ ದುರಂತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿವೆ. ಈಗ ಇದೇ ಮಾದರಿಯ ಪ್ರಯತ್ನವೊಂದು ಮಂಗಳೂರು ಸಮೀಪ ತೊಕ್ಕೊಟ್ಟುವಿನಲ್ಲಿ ನಡದಿರುವ ಅನುಮಾನ ಉಂಟಾಗಿದೆ. ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ

ಉಳ್ಳಾಲ ಸಮೀಪ ರೈಲು ಹಳಿತಪ್ಪಿಸುವ ಯತ್ನ? Read More »

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಮೂಡುಬಿದಿರೆಯ ಶಿಕ್ಷಕನಿಗೆ 5 ವರ್ಷ ಜೈಲು

ಹೋಮ್‌ವರ್ಕ್‌ ಪರೀಕ್ಷಿಸುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದ ಹೈಸ್ಕೂಲ್‌ ಶಿಕ್ಷಕ ಬೆಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮೂಡುಬಿದಿರೆ ಪ್ರೌಢಶಾಲೆಯೊಂದರ ಶಿಕ್ಷಕನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ಮೂಲದ ಗುರುವ ಮೊಗೇರ (49) ಶಿಕ್ಷೆಗೊಳಗಾದ ವ್ಯಕ್ತಿ. ಕಳೆದ ಫೆಬ್ರವರಿಯಲ್ಲಿ 10ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಶಿಕ್ಷಕ ಅನುಚಿತವಾಗಿ ಸ್ಪರ್ಶಿಸಿದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಆರೋಪಿ ವಿದ್ಯಾರ್ಥಿನಿಯರನ್ನು ಸ್ಟಾಫ್‌ರೂಮ್ ಹೊರತುಪಡಿಸಿ ಬೇರೆ ಬೇರೆ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಮೂಡುಬಿದಿರೆಯ ಶಿಕ್ಷಕನಿಗೆ 5 ವರ್ಷ ಜೈಲು Read More »

ಪಾಕಿಸ್ಥಾನದ ಹುಡುಗಿ ಜೊತೆ ಬಿಜೆಪಿ ಕಾರ್ಪೋರೇಟ್‌ ಪುತ್ರನ ಆನ್‌ಲೈನ್‌ ಮದುವೆ

ವಿಸಾ ಸಿಗದ ಕಾರಣ ದಿಢೀರ್‌ ಎಂದು ನಿಕಾ ಮಾಡಿಕೊಂಡ ಜೋಡಿ ಲಖನೌ : ಉತ್ತರ ಪ್ರದೇಶದ ಬಿಜೆಪಿ ಕಾರ್ಪೊರೇಟರ್ ಪುತ್ರ ಆನ್​ಲೈನ್​ನಲ್ಲಿ ಪಾಕಿಸ್ಥಾನದ ಯುವತಿಯನ್ನು ಮದುವೆಯಾಗಿದ್ದಾರೆ. ಉತ್ತರ ಪ್ರದೇಶದ ಜೌನ್​ಪುರ ಜಿಲ್ಲೆಯಲ್ಲಿ ವಿವಾಹ ನಡೆದಿದೆ. ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರ ವಿವಾಹವನ್ನು ಏರ್ಪಡಿಸಿದ್ದರು.ಎರಡು ನೆರೆಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವೀಸಾಗೆ ಅರ್ಜಿ ಸಲ್ಲಿಸಿದರೂ ಪಡೆಯಲು ಸಾಧ್ಯವಾಗಿಲ್ಲ. ವಧುವಿನ ತಾಯಿ

ಪಾಕಿಸ್ಥಾನದ ಹುಡುಗಿ ಜೊತೆ ಬಿಜೆಪಿ ಕಾರ್ಪೋರೇಟ್‌ ಪುತ್ರನ ಆನ್‌ಲೈನ್‌ ಮದುವೆ Read More »

ನಟ ಸುದೀಪ್‌ ತಾಯಿ ಸರೋಜಾ ನಿಧನ

ಬೆಂಗಳೂರು : ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ತಾಯಿ ಮಂಗಳೂರು ಮೂಲದ ಸರೋಜಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅರೋಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ನಿಧನರಾಗಿದ್ದಾರೆ. ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್​ರ ಜೆ.ಪಿ ನಗರ ನಿವಾಸಕ್ಕೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಸುದೀಪ್ ಅವರ ತಾಯಿಯವರು ಕಳೆದ ಕೆಲ ದಿನಗಳಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ

ನಟ ಸುದೀಪ್‌ ತಾಯಿ ಸರೋಜಾ ನಿಧನ Read More »

ಪುತ್ತೂರಿನ ಸೋಮವಾರದ ಸಂತೆ ರದ್ದು | ನಗರಸಭೆ ಪೌರಾಯುಕ್ತರಿಂದ ಆದೇಶ

ಪುತ್ತೂರು: ಅ.21 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ನಡೆಯುವ ಸಂತೆಯನ್ನು ರದ್ದುಗೊಳಿಸಿ ನಗರಸಭೆ ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನೂತನ ಸದಸ್ಯರೋರ್ವರ  ಆಯ್ಕೆಗಾಗಿ ಅ. 21ರಂದು ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂತೆ ರದ್ದುಗೊಳಿಸಲಾಗಿದೆ. ನಗರಸಭಾ ಕಚೇರಿಯೂ ಮತಗಟ್ಟೆಯಾಗಿದ್ದು ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹಾಗಾಗಿ ಅ. 21ರಂದು ಕಿಲ್ಲೆ ಮೈದಾನದಲ್ಲಿ ನಡೆಯಬೇಕಿದ್ದ ಸೋಮವಾರದ ಸಂತೆಯನ್ನು ರದ್ದು ಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ

ಪುತ್ತೂರಿನ ಸೋಮವಾರದ ಸಂತೆ ರದ್ದು | ನಗರಸಭೆ ಪೌರಾಯುಕ್ತರಿಂದ ಆದೇಶ Read More »

error: Content is protected !!
Scroll to Top