ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ, ಕರಪತ್ರ ಹಂಚಿಕೆ | ಗ್ರಾಮ ವಿಕಾಸ ಯೋಜನೆಯ ಮತ್ತೊಂದು ಮೈಲಿಗಲ್ಲು

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸ್ಕಿಲ್ ಫೊರ್ಜ್ ವಿದ್ಯಾರ್ಥಿ ಬಳಗ, ಐಇಇಇ ವಿದ್ಯಾರ್ಥಿ ವಿಭಾಗ ಮತ್ತು ಗ್ರಾಮ ವಿಕಾಸ ಯೋಜನೆ ವಿಸಿಇಟಿ ಸಂಯುಕ್ತ ಆಶ್ರಯದಲ್ಲಿ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಜ್ಞ ವೈದ್ಯರಿಂದ ಮಾಹಿತಿಯನ್ನು ಪಡೆದ ಸುಮಾರು 35 ವಿದ್ಯಾರ್ಥಿಗಳ ತಂಡ ಉಪನ್ಯಾಸಕರು ಹಾಗೂ ಊರವರ ಸಹಕಾರದೊಂದಿಗೆ 170 ಕ್ಕೂ ಹೆಚ್ಚಿನ ಮನೆಗಳಿಗೆ ಭೇಟಿ ನೀಡಿ ಕರಪತ್ರ ಹಂಚಿ, ಸ್ತನ ಕ್ಯಾನ್ಸರ್ ಬಗ್ಗೆ […]

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ, ಕರಪತ್ರ ಹಂಚಿಕೆ | ಗ್ರಾಮ ವಿಕಾಸ ಯೋಜನೆಯ ಮತ್ತೊಂದು ಮೈಲಿಗಲ್ಲು Read More »

ಅಕ್ರಮ ಕೋಳಿ ಅಂಕಕ್ಕೆ ದಾಳಿ | ಐವರ ಬಂಧನ, ಕೋಳಿ, ನಗದು ವಶಕ್ಕೆ

ಪುತ್ತೂರು : ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಈ ಕೋಳಿ ಅಂಕ ನಡೆಯುತ್ತಿತ್ತು. ಖಚಿತ ಮಾಹಿತಿ ಹಿನ್ನಲೆಯಲ್ಲಿ  ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿಗಳು ದಾಳಿ ನಡೆಸಿ ಸ್ಥಳದಿಂದ ಕೋಳಿ ಅಂಕಕ್ಕೆ ಬಳಸಿದ 5 ಕೋಳಿ ಮತ್ತು 7710 ರೂ. ನಗದು ವಶಕ್ಕೆ ಪಡೆದು, ಐವರನ್ನು ಬಂಧಿಸಿದ್ದಾರೆ. ಠಾಣೆಯ ಪಿ.ಎಸ್.ಐ ಜಂಬೂರಾಜ್ ಮಹಾಜನ್, ಸಿಬ್ಬಂದಿಗಳಾದ

ಅಕ್ರಮ ಕೋಳಿ ಅಂಕಕ್ಕೆ ದಾಳಿ | ಐವರ ಬಂಧನ, ಕೋಳಿ, ನಗದು ವಶಕ್ಕೆ Read More »

ಶಾಂತಿಗೋಡು ನಿವಾಸಿ ವಿಜಯ ಗೌಡ ಪಾದೆ ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಪಾದೆ ನಿವಾಸಿ ವಿಜಯ ಗೌಡ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅನಾರೋಗ್ಯದಿಂದಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಮೃತರು ತಂದೆ ತಂದೆ ನಿವೃತ ಶಿಕ್ಷಕ ಮಾಧವ ಗೌಡ, ತಾಯಿ ಶೋಭಾ, ಪತ್ನಿ, ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಶಾಂತಿಗೋಡು ನಿವಾಸಿ ವಿಜಯ ಗೌಡ ಪಾದೆ ನಿಧನ Read More »

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅಧಿಕಾರ ಸ್ವೀಕಾರ

ಪುತ್ತೂರು: ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುಂದರ ಪೂಜಾರಿ ಬಡಾವು ಇಂದು ಅಧಿಕಾರಿ ಸ್ವೀಕರಿಸಿದರು. ಬೆಳಿಗ್ಗೆ ನಗರಸಭೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿoಜೆ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ.,  ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಂಚಾಲಕ

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅಧಿಕಾರ ಸ್ವೀಕಾರ Read More »

13ನೇ ಶತಮಾನದ ಮಠದ ಆಸ್ತಿಯೂ ವಕ್ಫ್‌ ಪಾಲು!

ಭಕ್ತರ ತೀವ್ರ ಆಕ್ರೋಶ, ಉದ್ವಿಗ್ನ ಪರಿಸ್ಥಿತಿ ವಿಜಯಪುರ: ಸಿಂದಗಿ ಪಟ್ಟಣದಲ್ಲಿರುವ 13ನೇ ಶತಮಾನದ ಮಠದ ಆಸ್ತಿ ಕೂಡ ಈಗ ವಕ್ಫ್‌ ಬೋರ್ಡ್‌ ಆಸ್ತಿ ಎಂದು ನೋಂದಣಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರೈತರ ನೂರಾರು ಎಕರೆ ಕೃಷಿಭೂಮಿ ವಕ್ಫ್‌ ಆಸ್ತಿ ಎಂದು ಪಹಣಿಯಾದ ಬೆನ್ನಿಗೆ ಮಠದ ಆಸ್ತಿಯೂ ವಕ್ಫ್‌ ಪಾಲಾಗಿರುವುದು ಬೆಳಕಿಗೆ ಬಂದಿದೆ. ಸರ್ವೆ ನಂಬರ್‌ 1020ರ ಆಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ ಎಂದು ನೋಂದಣಿಯಾಗಿದೆ. ಸಿದ್ದಲಿಂಗ ಸ್ವಾಮಿಜಿ ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂಬರ್‌ 11 ಖಾಲಿ

13ನೇ ಶತಮಾನದ ಮಠದ ಆಸ್ತಿಯೂ ವಕ್ಫ್‌ ಪಾಲು! Read More »

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ!

ಕಾಸರಗೋಡು: ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ನಿನ್ನೆ ತಡರಾತ್ರಿ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ಜನರನ್ನು ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದವರ ಕಥೆಗಳು ಬೆಳಕಿಗೆ ಬರುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ದೈವ ನರ್ತಕನೇ ತನ್ನ ಪ್ರಾಣಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ನಡುವೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ.ರಾತ್ರಿ 12.30 ವೇಳೆಗೆ ದೈವಸ್ಥಾನದಲ್ಲಿ ಭೀಕರ ದುರಂತ ಸಂಭವಿಸಿದೆ. ಈ ವೇಳೆ ತೆಯ್ಯಂ (ದೈವ) ಆವೇಶವಾಗಿ ನರ್ತನ ನಡೆಯುತ್ತಿತ್ತು. ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ! Read More »

ಬ್ಯಾಂಕ್‌ನಿಂದ 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣ ಕಳ್ಳತನ | ಕಿಟಿಕಿ ಸರಳು ಮುರಿದು ಒಳನುಗ್ಗಿದ್ದ ಕಳ್ಳರು; ಬ್ಯಾಂಕ್‌ ಒಳಗೆಲ್ಲ ಮೆಣಸಿನ ಪುಡಿ

ದಾವಣಗೆರೆ: ಜಿಲ್ಲೆಯ ನ್ಯಾಮತಿಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯಿಂದ ಕಳ್ಳರು ಬರೋಬ್ಬರಿ 17 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಕುರಿತು ಬ್ಯಾಂಕ್‌ ಮ್ಯಾನೇಜರ್‌ ಸುನಿಲ್‌ ಕುಮಾರ್‌ ಯಾದವ್‌ ಪೊಲೀಸರಿಗೆ ದೂರು ನೀಡಿದ್ದಾರೆ. 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.ನ್ಯಾಮತಿ ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಯ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು

ಬ್ಯಾಂಕ್‌ನಿಂದ 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣ ಕಳ್ಳತನ | ಕಿಟಿಕಿ ಸರಳು ಮುರಿದು ಒಳನುಗ್ಗಿದ್ದ ಕಳ್ಳರು; ಬ್ಯಾಂಕ್‌ ಒಳಗೆಲ್ಲ ಮೆಣಸಿನ ಪುಡಿ Read More »

ಮುಂದುವರಿದ ಉಗ್ರ ಬೇಟೆ : ಇನ್ನೋರ್ವ ಭಯೋತ್ಪಾದಕ ಹತ್ಯೆ | ಸೇನೆಯ ಶ್ವಾನ ಫ್ಯಾಂಟಮ್‌ ಗುಂಡು ತಗಲಿ ಸಾವು

ಜಮ್ಮು: ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಮತ್ತೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕನನ್ನು ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಅಡಗಿರುವ ಮೂರನೇ ಉಗ್ರನನ್ನು ಮುಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ

ಮುಂದುವರಿದ ಉಗ್ರ ಬೇಟೆ : ಇನ್ನೋರ್ವ ಭಯೋತ್ಪಾದಕ ಹತ್ಯೆ | ಸೇನೆಯ ಶ್ವಾನ ಫ್ಯಾಂಟಮ್‌ ಗುಂಡು ತಗಲಿ ಸಾವು Read More »

ಧಾರವಾಡ, ಯಾದಗಿರಿ ಜಿಲ್ಲೆಯ ರೈತರಿಗೂ ವಕ್ಫ್‌ ಶಾಕ್‌ : ಅನ್ನದಾತ ಕಂಗಾಲು

ನೂರಾರು ಎಕರೆ ಭೂಮಿ ಸದ್ದಿಲ್ಲದೆ ವಕ್ಫ್‌ಗೆ ವರ್ಗಾವಣೆಯಾದದ್ದು ಹೇಗೆ ಎಂಬ ಪ್ರಶ್ನೆ ಬೆಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಕಾಯ್ದೆಯ ಬಿಸಿ ಇದೀಗ ಧಾರವಾಡ ಮತ್ತು ಯಾದಗಿರಿ ಜಿಲ್ಲೆಗಳಿಗೆ ವಿಸ್ತರಿಸಿದೆ. ಧಾರವಾಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೂರಾರು ರೈತರ ಕೃಷಿಭೂಮಿ ಅವರಿಗರಿವಿಲ್ಲದೆ ವಕ್ಫ್‌ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಕಂದಾಯ ಇಲಾಖೆಯಿಂದ ನೋಟಿಸ್‌ ಬಂದ ಬಳಿಕ ಎಚ್ಚೆತ್ತಿರುವ ಇಲ್ಲಿನ ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಧಾರವಾಡದಲ್ಲಿ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ವಕ್ಫ್ ಹೆಸರು ದಾಖಲಾಗಿರುವುದು

ಧಾರವಾಡ, ಯಾದಗಿರಿ ಜಿಲ್ಲೆಯ ರೈತರಿಗೂ ವಕ್ಫ್‌ ಶಾಕ್‌ : ಅನ್ನದಾತ ಕಂಗಾಲು Read More »

ಎರಡು ಬೈಕ್‍ ಗಳ ನಡುವೆ ಡಿಕ್ಕಿ | ಓರ್ವರಿಗೆ ಗಂಭೀರ ಗಾಯ

ಪುತ್ತೂರು: ಮುಕ್ರುಂಪಾಡಿಯಲ್ಲಿ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ  ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪುತ್ತೂರು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಮತ್ತು ಕಾಸರಗೋಡಿನ ಉದಯ ಎಂಬವರ ಬೈಕ್ ಗಳು ಮಾಣಿ ಮೈಸೂರು ಹೈವೇಯ ಪುತ್ತೂರಿನ ಮುಕ್ರುಂಪಾಡಿಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರಿಗೂ ಗಾಯವಾಗಿದೆ. ಓರ್ವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಹಾವೀರ ಆಸ್ಪತ್ರೆಗೆ ತನ್ನ ಕಾರಿನಲ್ಲೇ ಸಾಗಿಸಿದ್ದಾರೆ ಎನ್ನಲಾಗಿದೆ.

ಎರಡು ಬೈಕ್‍ ಗಳ ನಡುವೆ ಡಿಕ್ಕಿ | ಓರ್ವರಿಗೆ ಗಂಭೀರ ಗಾಯ Read More »

error: Content is protected !!
Scroll to Top