ನಟ ದರ್ಶನ್‌ಗೆ ಕೊನೆಗೂ ಸಿಕ್ಕಿತು ಜಾಮೀನು

ಬೆನ್ನುನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಆರು ವಾರ ಬಿಡುಗಡೆ ಭಾಗ್ಯ ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಬಹಳಷ್ಟು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲರಾದ […]

ನಟ ದರ್ಶನ್‌ಗೆ ಕೊನೆಗೂ ಸಿಕ್ಕಿತು ಜಾಮೀನು Read More »

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ 63 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ

ಬೆಂಗಳೂರು: ಕರ್ನಾಟಕದಲ್ಲಿ ಈಗ ಹಗರಣ ಮತ್ತು ಕಬಳಿಕೆಯದ್ದೇ ಸುದ್ದಿ. ನಿತ್ಯ ಬೆಳಗಾದರೆ ಒಂದಿಲ್ಲೊಂದು ಹಗರಣ ಅಥವಾ ಭೂ ಕಬಳಿಕೆ ಪ್ರಕರಣಗಳು ಬಯಲಾಗುತ್ತಿವೆ. ಈಗ ಮಾಜಿ ಸ್ಪೀಕರ್‌ ಚೊನಗರೆಸಸ ಹಿರಿಯ ನಾಯಕ ರಮೇಶ್‌ ಕುಮಾರ್‌ ಸರದಿ. ರಮೇಶ್​ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊಸಹುಡ್ಯದ ಸರ್ವೆ ನಂ.1, 2ರಲ್ಲಿ 122 ಎಕರೆ ಭೂಮಿಯನ್ನು ಏಳು

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ 63 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ Read More »

ಮಗನ ಕೊಳೆತ ಮೃತದೇಹದ ಜೊತೆ ಐದು ದಿನ ಕಳೆದ ಅಂಧ ತಂದೆ-ತಾಯಿ

ಹೈದರಾಬಾದ್: ಮಗ ಮೃತಪಟ್ಟಿರುವುದು ತಿಳಿಯದೆ ಅಂಧ ವೃದ್ಧ ದಂಪತಿ ಮೃತದೇಹದ ಜೊತೆಗೆ 5 ದಿನ ಕಳೆದ ದಾರುಣ ಘಟನೆಯೊಂದು ಹೈದರಾಬಾದ್‌ ಬ್ಲೈಂಡ್ಸ್‌ ಕಾಲೋನಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ ಇಬ್ಬರೂ 60 ವರ್ಷ ಮೇಲ್ಪಟ್ಟವರು ಮತ್ತು ಇಬ್ಬರೂ ಅಂಧರು. ದಂಪತಿ ತಮ್ಮ ಮಗ ಪ್ರಮೋದ್‌ನೊಂದಿಗೆ ಹೈದರಾಬಾದ್‌ನ ಬ್ಲೈಂಡ್ಸ್‌ ಕಾಲೋನಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅಕ್ಕಪಕ್ಕದವರು ಅವರ ಮನೆಯಿಂದ ವಿಪರೀತ ದುರ್ವಾಸನೆ

ಮಗನ ಕೊಳೆತ ಮೃತದೇಹದ ಜೊತೆ ಐದು ದಿನ ಕಳೆದ ಅಂಧ ತಂದೆ-ತಾಯಿ Read More »

ವಕ್ಫ್‌ ನೋಟಿಸ್‌ : ರೈತರಿಂದ ಅಹೋರಾತ್ರಿ ಧರಣಿ

ಸರಕಾರ ನಮಗೆ ದೀಪಾವಳಿಯ ಕರಾಳ ಉಡುಗೊರೆ ಕೊಟ್ಟಿದೆ ಎಂದು ಆಕ್ರೋಶ ವಿಜಯಪುರ: ಎಲ್ಲೆಡೆ ಜನರು ದೀಪಾವಳಿ ಸಂಭ್ರಮಕ್ಕೆ ಅಣಿಯಾಗುತ್ತಿದ್ದರೆ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಮಾತ್ರ ವಕ್ಫ್‌ ದೆಸೆಯಿಂದಾಗಿ ತಮ್ಮ ಕೃಷಿ ಜಮೀನು ಉಳಿಸಿಕೊಳ್ಳಲು ಹಬ್ಬ ಬಿಟ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ರೈತರ ಪಾಲಿಗೆ ಈ ವರ್ಷದ ದೀಪಾವಳಿ ಕರಾಳವಾಗುವ ಲಕ್ಷಣ ಕಾಣಿಸಿದೆ. ತಮ್ಮ ಜಮೀನನ್ನು ವಕ್ಫ್ ಮಂಡಳಿ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರೈತರು ಅಹೋರಾತ್ರಿ ಹೋರಾಟ ಪ್ರಾರಂಭಿಸಿದ್ದಾರೆ. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ

ವಕ್ಫ್‌ ನೋಟಿಸ್‌ : ರೈತರಿಂದ ಅಹೋರಾತ್ರಿ ಧರಣಿ Read More »

ಮುಡಾ ಹಗರಣ : 35 ತಾಸು ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ | ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮೊನ್ನೆಯಿಂದ ಪ್ರಾರಂಭಿಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆ ಬರೋಬ್ಬರಿ 35 ತಾಸು ನಿರಂತರವಾಗಿ ನಡೆದಿದೆ. ಇ.ಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ದಾಳಿ ಮಾಡಿ ದಾಖಲೆಪತ್ರ ಮತ್ತಿತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ರಾಕೇಶ್ ಪಾಪಣ್ಣ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಕಳೆದೆರಡು ದಿನಗಳಿಂದ ಇಡಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ

ಮುಡಾ ಹಗರಣ : 35 ತಾಸು ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ | ಬೆಂಗಳೂರು, ಮೈಸೂರಿನಲ್ಲಿ ದಾಳಿ; ಸಿದ್ದರಾಮಯ್ಯ ಆಪ್ತರ ವಿಚಾರಣೆ Read More »

ಕೊಂಬೆಟ್ಟು ನಿವಾಸಿ ಜ್ಞಾನಾನಂದ ಹೆಗ್ಡೆ ನಿಧನ

ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್‌ನ ಮಾಲಕ ಜ್ಞಾನಾನಂದ ಹೆಗ್ಡೆ (58) ಮಂಗಳವಾರ ಸಂಜೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಜ್ಞಾನಾನಂದ ಹೆಗ್ಡೆಯವರು ಕೊಂಬೆಟ್ಟಿನಲ್ಲಿ ಕಬ್ಬಿನ ಹಾಲಿನ ‘ಮಮ್ಮಿ ಜ್ಯೂಸ್’ ಶಾಪ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬಳಿಕ ಅನಾರೋಗ್ಯದಿಂದಾಗಿ ವ್ಯವಹಾರದಿಂದ ನಿವೃತ್ತಿ ಪಡೆದಿದ್ದ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು. ಮೃತರು ತಾಯಿ, ಪತ್ನಿ, ಪುತ್ರಿಯರು ಹಾಗೂ ಸಹೋದರರನ್ನು ಅಗಲಿದ್ದಾರೆ.

ಕೊಂಬೆಟ್ಟು ನಿವಾಸಿ ಜ್ಞಾನಾನಂದ ಹೆಗ್ಡೆ ನಿಧನ Read More »

ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ

ಪುತ್ತೂರು: ಈಚೆಗಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ. ಕೆಲಹೊತ್ತು ಬಯಲಿನಲ್ಲಿ ನಿಂತರೆ ತಲೆತಿರುಗಿ ಕುಸಿಯುವ ವಿದ್ಯಾರ್ಥಿಗಳನ್ನು ಕಾಣುತ್ತಿದ್ದೇವೆ. ಮನೆಗಳಲ್ಲಿ ಮಕ್ಕಳಿಂದ ದೈಹಿಕ ಕೆಲಸ ಮಾಡಿಸದಿರುವುದು, ನಡೆದುಹೋಗಬಹುದಾದ ಜಾಗದಲ್ಲೂ ವಾಹನಗಳಲ್ಲೇ ಸಂಚರಿಸುವುದು ದೇಹಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತಿದೆ. ಆದ್ದರಿಂದ ನಮ್ಮ ದೇಹಕ್ಕೆ ಶ್ರಮದಾಯಕ ಕಾರ್ಯಗಳಿಗೆ ಒಗ್ಗಿಕೊಳ್ಳುವ ಕಲೆಯನ್ನು ಕಲಿಸಿಕೊಡಬೇಕಿದೆ ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು. ಅವರು ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ‘ಮಾನಸೋಲ್ಲಾಸ-2024’ ವನ್ನು ಬಪ್ಪಳಿಗೆಯ

ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ Read More »

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ

ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗೆ ಅವಕಾಶ ಬೆಂಗಳೂರು : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಅಭಿಯಾನ ಪ್ರಾರಂಭವಾಗಿದೆ. ಮತದಾರರ ಕರಡು ಪಟ್ಟಿ ಪರಿಷ್ಕರಣೆಗೆ ಹಕ್ಕುಗಳು ಮತ್ತು ಆಕ್ಷೇಪಣೆ ಸಲ್ಲಿಸಲು ಅ.29ರಿಂದ ನವೆಂಬರ್‌ 24ರ ವರೆಗೆ ಅವಕಾಶ ಇರಲಿದೆ. ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗಳಿಗೆ ನವೆಂಬರ್‌ 9-10 ಹಾಗೂ 23-24 (ಶನಿವಾರ-ರವಿವಾರ) ವಿಶೇಷ ದಿನಾಂಕ ಇರಲಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಆರಂಭ Read More »

ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು

ಪುತ್ತೂರು: ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು, ಖಜಾಂಜಿಯಾಗಿ ಮುರಳೀಕೃಷ್ಣ ಸಿದ್ದಮೂಲೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಬೆಳಿಯಪ್ಪ ಗೌಡ ಪಾದೆಕಲ್ಲು, ಶ್ರೀರಾಮ ಸಿದ್ಧಮೂಲೆ, ಜಯಪ್ರವೀಣ ಪಾಂಬಾರು, ಕೆ.ವಿ.ಅಶೋಕ್‍ ಆಯ್ಕೆಯಾಗಿದ್ದಾರೆ. ಧಜಂಜಯ ಪೂಜಾರಿ ಅವರ ಅವರ ಅಧ್ಯಕ್ಷತೆಯಲ್ಲಿ ನಡೆದ ಬೋರ್ಡ್ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಾಜಿ ಖಜಾಂಜಿ ಸೀತಾರಾಮ ಅಮಲ ಉಪಸ್ಥಿತರಿದ್ದರು.

ಕೊಳ್ತಿಗೆ ರಬ್ಬರ್ ಬೆಳೆಗಾರರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸತೀಶ್‍ ಪಾಂಬಾರು, ಉಪಾಧ್ಯಕ್ಷರಾಗಿ ಸತ್ಯಾನಂದ ಭರಣಿಮಜಲು Read More »

ತಮಗಾದ ಅನ್ಯಾಯದ ಕುರಿತು ಚೀಟಿಯಲ್ಲಿ ಬರೆದು ದೇವಸ್ಥಾನ ಹುಂಡಿಗೆ ಹಾಕಿದ ಮಹಿಳೆ | ದೇವಸ್ಥಾನದ ಹುಂಡಿಯಲ್ಲಿ ಚೀಟಿ ಪತ್ತೆ

ಪುತ್ತೂರು : ದೇವಸ್ಥಾನಕ್ಕೆ ತೆರಳಿ ದೇವರ ಎದುರು ಕೈ ಮುಗಿದು ನಿಂತು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹಾ ಕಷ್ಟಗಳನ್ನು  ಚೀಟಿ ಮೂಲಕ ಬರೆದು ದೇವರ ಹುಂಡಿಯಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಕುರಿತು ಬರೆದಿರುವುದು ತಿಳಿದು ಬಂದಿದೆ. “ಸಮೀರ್ ಎಂಬಾತ ನನ್ನ ಜೀವನ ಹಾಳು ಮಾಡಿದ್ದಾನೆ. ಇಂದು ನಾನು ಮತ್ತು ನನ್ನ ಮಗಳು ಬೀದಿಯಲ್ಲಿ ಇದ್ದೇವೆ.

ತಮಗಾದ ಅನ್ಯಾಯದ ಕುರಿತು ಚೀಟಿಯಲ್ಲಿ ಬರೆದು ದೇವಸ್ಥಾನ ಹುಂಡಿಗೆ ಹಾಕಿದ ಮಹಿಳೆ | ದೇವಸ್ಥಾನದ ಹುಂಡಿಯಲ್ಲಿ ಚೀಟಿ ಪತ್ತೆ Read More »

error: Content is protected !!
Scroll to Top