ಯುವಕ ನೇಣು ಬಿಗಿದು ಆತ್ಮಹತ್ಯೆ !

ಬೆಳ್ತಂಗಡಿ: ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಕುಂಠಿನ ಎಂಬಲ್ಲಿ ನಡೆದಿದೆ. ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನಿತಿನ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಕೆಲವು ಸಮಯಗಳಿಂದ ಗೂಡ್ಸ್ ರಿಕ್ಷಾದಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದ, ನಿನ್ನೆ ಕೂಡ ಕುಂಟಿನಿಯಲ್ಲಿ ಮೀನು ವ್ಯಾಪಾರ ಮಾಡಿ ನಂತರ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾನೆ. ಅಲ್ಲಿ ಯಾವುದೋ ಕಾರಣಕ್ಕಾಗಿ ತನ್ನ ಮನೆಯವರೊಂದಿಗೆ ಜಗಳವಾಗಿದೆ. ಇದೇ ವೇಳೆ ಮನೆಗೆ ಬಂದ ನಿತಿನ್ ಬಾಗಿಲು ಹಾಕಿ ನೇಣು ಬಿಗಿದುಕೊಂಡಿದ್ದಾನೆ. […]

ಯುವಕ ನೇಣು ಬಿಗಿದು ಆತ್ಮಹತ್ಯೆ ! Read More »

ಅಕ್ಷಯ ಕಾಲೇಜಿನಲ್ಲಿ ಬಿಸಿಎ ವಿಭಾಗದ ಐಟಿ ಕ್ಲಬ್‍ ನಿಂದ ಕಾರ್ಯಾಗಾರ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಸಿ.ಎ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಮಾಹಿತಿ ತಂತ್ರಜ್ಞಾನ ಸಂಘದ ವತಿಯಿಂದ  ಸಾಫ್ಟವೇರ್ ಡೆವಲಪ್‍ ಮೆಂಟ್‍ ವಿಷಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿಸಂಪನ್ಮೂಲ ವ್ಯಕ್ತಿಯಾಗಿ ಸಾಫ್ಟ್ ವೇರ್ ಇಂಜಿನಿಯರ್‍  ಗೌತಮಿ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ, ಸಾಫ್ಟವೇರ್ ಡೆವಲಪ್‍ ಮೆಂಟ್‍ ಗೆ ಸಂಬಂಧಿಸಿದಂತೆ ಉನ್ನತ ಗುಣಮಟ್ಟದ ಸಾಫ್ಟ್‌ ವೇರ್ ನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಸಂಬಂಧಿಸಿದ ಪ್ರಕ್ರಿಯೆಗಳ

ಅಕ್ಷಯ ಕಾಲೇಜಿನಲ್ಲಿ ಬಿಸಿಎ ವಿಭಾಗದ ಐಟಿ ಕ್ಲಬ್‍ ನಿಂದ ಕಾರ್ಯಾಗಾರ Read More »

ಎಕ್ಸ್ ಪ್ರೆಸ್ ರೈಲು ಡಿಕ್ಕಿ : ನಾಲ್ವರು ಕಾರ್ಮಿಕರು ಮೃತ್ಯು

ತಿರುವನಂತಪುರಂ: ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಕೇರಳದ ಚೋರನೂರ್ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ. ತಿರುವನಂತಪುರಂ ಕಡೆಗೆ ಸಾಗುತ್ತಿದ್ದ ಕೇರಳ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ. ರೈಲು ನಿಲ್ದಾಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ತೋರನೂರ್ ಸೇತುವೆ ಬಳಿ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ನವದೆಹಲಿ- ತಿರುವನಂತಪುರಂ ಮಾರ್ಗದ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ ಎಂದು

ಎಕ್ಸ್ ಪ್ರೆಸ್ ರೈಲು ಡಿಕ್ಕಿ : ನಾಲ್ವರು ಕಾರ್ಮಿಕರು ಮೃತ್ಯು Read More »

ವಿವಿ ಮಟ್ಟದ ಭಾಷಣ ಸ್ಪರ್ಧೆ : ಸಂತ ಫಿಲೋಮಿನಾ ಕಾಲೇಜಿನ ಶ್ರೀದೇವಿ ಎನ್. ಪ್ರಥಮ

ಪುತ್ತೂರು: ಮೂಡುಬಿದಿರೆ ಶ್ರೀ ಧವಲಾ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಶ್ರೀದೇವಿ ಎನ್. ಇವರು ಪ್ರಥಮ ಬಹುಮಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಒಟ್ಟು 38 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಂಶುಪಾಲ ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅಭಿನಂದಿಸಿದ್ದಾರೆ.

ವಿವಿ ಮಟ್ಟದ ಭಾಷಣ ಸ್ಪರ್ಧೆ : ಸಂತ ಫಿಲೋಮಿನಾ ಕಾಲೇಜಿನ ಶ್ರೀದೇವಿ ಎನ್. ಪ್ರಥಮ Read More »

ಅನ್ಯ ಕೋಮಿನ ಯುವಕನಿಂದ ಹಿಂದೂ ಯುವತಿಗೆ ಮೆಸೇಜ್ | ತಂಡದಿಂದ ಹಲ್ಲೆ

ಸುಳ್ಯ: ಅನ್ಯಕೋಮಿನ ಯುವಕನನೋರ್ವ ಹಿಂದೂ ಯುವತಿಗೆ ಮೆಸೇಜ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ನಡೆದಿದೆ. ನಯಾಜ್‍ ಎಂಬಾತ ಮೆಸೇಜ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಯುವಕರ ತಂಡ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದ್ದು, ಹಲ್ಲೆಗೊಳಗಾದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ. ಯುವಕನ್ನು ಸ್ಥಳೀಯ ನಿವಾಸಿಯೋರ್ವ ಮಾತನಾಡಲು ಇದೆ ಎಂದು ಗ್ಯಾರೇಜಿಗೆ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಯುವಕ ಪೊಲೀಸರಿಗೆ

ಅನ್ಯ ಕೋಮಿನ ಯುವಕನಿಂದ ಹಿಂದೂ ಯುವತಿಗೆ ಮೆಸೇಜ್ | ತಂಡದಿಂದ ಹಲ್ಲೆ Read More »

ಶಬರಿಮಲೆ ಯಾತ್ರಿಕರಿಗೆ 5 ಲ.ರೂ. ಉಚಿತ ವಿಮೆ

ಎರಡು ತಿಂಗಳ ಯಾತ್ರೆಗಾಗಿ ನಡೆದಿದೆ ಭರದ ಸಿದ್ಧತೆ ಶಬರಿಮಲೆ : ಶಬರಿಮಲೆ ಯಾತ್ರಿಕರಿಗೆ ಈ ವರ್ಷ ಕೇರಳ ಸರಕಾರ 5 ಲ.ರೂ. ಉಚಿತ ವಿಮೆಯ ಸೌಲಭ್ಯ ನೀಡಲಿದೆ. ಈ ತಿಂಗಳಾಂತ್ಯದಲ್ಲಿ ಮಂಡಲ ಮತ್ತು ಮಕರವಿಳಕ್ಕು ಯಾತ್ರಾ ಋತು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೋಟಿಗಟ್ಟಲೆ ಭಕ್ತರು ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಇವರೆಲ್ಲ ಕೇರಳ ಸರಕಾರದ ವಿಮಾ ವ್ಯಾಪ್ತಿಯಲ್ಲಿರುತ್ತಾರೆ.ಶಬರಿಮಲೆ ದೇವಸ್ಥಾನದ ಆಡಳಿತ ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಬೋರ್ಡ್‌ ಭಕ್ತರಿಗೆ ವಿಮಾ ಸೌಲಭ್ಯ ಒದಗಿಸಲಿದೆ. ಯಾತ್ರಿಕರು ದುರ್ಮರಣವನ್ನಪ್ಪಿದರೆ ಕುಟುಂಬಕ್ಕೆ 5 ಲ.ರೂ.

ಶಬರಿಮಲೆ ಯಾತ್ರಿಕರಿಗೆ 5 ಲ.ರೂ. ಉಚಿತ ವಿಮೆ Read More »

ಅಮೆಜಾನ್‌ ಕಂಪನಿಗೆ 30 ಕೋಟಿ ರೂ. ವಂಚಿಸಿದ ಇಬ್ಬರು ಮಂಗಳೂರಿನಲ್ಲಿ ಸೆರೆ

ದುಬಾರಿ ವಸ್ತುಗಳನ್ನು ಆರ್ಡರ್‌ ಮಾಡಿ ವಂಚಿಸುತ್ತಿದ್ದ ಕಿಲಾಡಿಗಳು ಮಂಗಳೂರು : ಅಮೆಜಾನ್‌ ಕಂಪನಿಗೆ ಬರೊಬ್ಬರಿ 30 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಮಂಗಳೂರಿನ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ರಾಜಕುಮಾರ್ ಮೀನಾ (23) ಮತ್ತು ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.ಆರೋಪಿಗಳು ಅಮೆಜಾನ್​ನಲ್ಲಿ ಬೆಲೆಬಾಳುವ ವಸ್ತುಗಳನ್ನು ಆರ್ಡರ್​​ ಮಾಡುತ್ತಿದ್ದರು. ವಸ್ತುಗಳ ಡೆಲಿವರಿ ಪಡೆಯಲು ಮಂಗಳೂರಿನಂಥ ಎರಡನೇ ಹಂತದ ನಗರಗಳ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು

ಅಮೆಜಾನ್‌ ಕಂಪನಿಗೆ 30 ಕೋಟಿ ರೂ. ವಂಚಿಸಿದ ಇಬ್ಬರು ಮಂಗಳೂರಿನಲ್ಲಿ ಸೆರೆ Read More »

ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ : ಸವಾರ ಮೃತ್ಯು

ಕಡಬ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಸ್ಪಂದನ ಸಮುದಾಯ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕರಾದ ಸೀತಾರಾಮ ಗೌಡ ದೇವಸ್ಯ ಮೃತಪಟ್ಟವರು. ಕಡಬ ಸ್ಪಂದನ ಸಮುದಾಯ ಸಹಕಾರಿ ಸಂಘದ ಸಿಬ್ಬಂದಿ ಶಿಲ್ಪಾ ಅವರ ತಂದೆಯಾಗಿದ್ದಾರೆ.

ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ : ಸವಾರ ಮೃತ್ಯು Read More »

ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ | ಮೋದಿ ಹಾದಿ ಅನುಸರಿಸಿದ ಸಂಸದರು

ಮಂಗಳೂರು:  ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕರಾವಳಿ ಭದ್ರತಾ ಪಡೆಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿಕೊಂಡಿದ್ದಾರೆ. ಕ್ಯಾ. ಚೌಟ ಅವರು ಶುಕ್ರವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಾರ್ವಜನಿಕರು ಹಾಗೂ  ಪಕ್ಷದ ಕಾರ್ಯಕರ್ತರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದು, ಸಂಜೆ ಪಣಂಬೂರಿನಲ್ಲಿರುವ ಕರಾವಳಿ ಭದ್ರತಾ ಪಡೆಯ ಮಂಗಳೂರು ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಯೋಧರೊಂದಿಗೆ ಸಿಹಿ ಹಂಚಿಕೊಂಡು, ಜವಾನರೊಂದಿಗೆ ಉಭಯ ಕುಶಲೋಪರಿ ನಡೆಸುವ ಮೂಲಕ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬಳಿಕ ಮಾತನಾಡಿದ ಸಂಸದರು

ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ | ಮೋದಿ ಹಾದಿ ಅನುಸರಿಸಿದ ಸಂಸದರು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ

ಹೊಸದಿಲ್ಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲೇ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಸದ್ದಿಲ್ಲದೆ ಏರಿಸಿವೆ. ನಿನ್ನೆ ವಾಣಿಜ್ಯ ಸಿಲಿಂಡರ್‌ ಬೆಲೆ 62 ರೂ. ಏರಿಕೆಯಾಗಿದೆ. ಇದರೊಂದಿಗೆ ಸತತ 3ನೇ ತಿಂಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದಂತಾಗಿದೆ. ಆದರೆ 14 ಕೆಜಿಯ ಗೃಹ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 19

ಗ್ಯಾಸ್‌ ಸಿಲಿಂಡರ್‌ ಬೆಲೆ ಸದ್ದಿಲ್ಲದೆ 62 ರೂ. ಏರಿಕೆ Read More »

error: Content is protected !!
Scroll to Top