ಬೈಕ್ – ಖಾಸಗಿ ಬಸ್ ಡಿಕ್ಕಿ | ಓರ್ವ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ

ಬಂಟ್ವಾಳ: ಬೈಕ್ ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಓರ್ವ ಮೃತಪಟ್ಟು, ಇನ್ನೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ತುಂಬೆ ಬಳಿ ನಡೆದಿದೆ. ಕಡೆಗೋಳಿ ನಿವಾಸಿ ಪ್ರವೀಣ (30) ಸ್ಥಳದಲ್ಲೇ ಮೃತಪಟ್ಟವರು. ಸಂದೀಪ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಮಂಗಳೂರು ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ […]

ಬೈಕ್ – ಖಾಸಗಿ ಬಸ್ ಡಿಕ್ಕಿ | ಓರ್ವ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ Read More »

ದೇವಸ್ಥಾನಕ್ಕೆ ನುಗ್ಗಿ ಹಿಂದುಗಳ ಮೇಲೆ ಹಲ್ಲೆ ನಡೆಸಿದ ಉಗ್ರರು

ಖಲಿಸ್ಥಾನಿ ಉಗ್ರರ ಕೃತ್ಯಕ್ಕೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ವಿಷಾದ ಒಟ್ಟಾವಾ: ಭಾರತ-ಕೆನಡಾ ರಾಜಕೀಯ ಬಿಕ್ಕಟ್ಟಿನ ನಡುವೆ ಕೆನಡಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ಥಾನಿ ಉಗ್ರರ ಗುಂಪೊಂದು ದಾಳಿ ನಡೆಸಿದೆ.ಖಲಿಸ್ಥಾನಿ ಧ್ವಜ ಹಿಡಿದಿದ್ದ ಉಗ್ರರ ಗುಂಪು ದೇವಸ್ಥಾನಕ್ಕೆ ನುಗ್ಗಿ ಭಕ್ತರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದೆ. ಈ ಹಲಕ್ಲೆಯ ವೀಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವೀಡಿಯೊಲ್ಲಿ ಖಲಿಸ್ಥಾನಿ ಧ್ವಜ ಹಿಡಿದ ಗುಂಪು

ದೇವಸ್ಥಾನಕ್ಕೆ ನುಗ್ಗಿ ಹಿಂದುಗಳ ಮೇಲೆ ಹಲ್ಲೆ ನಡೆಸಿದ ಉಗ್ರರು Read More »

ಲಷ್ಕರ್‌ ಕಮಾಂಡರ್‌ ಹತ್ಯೆಗೆ ಯೋಧರು ಬಳಸಿದ್ದು ಬಿಸ್ಕಿಟ್‌!

ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ ಉಗ್ರ ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಶ್ರೀನಗರದಲ್ಲಿ ಶನಿವಾರ ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿಯನ್ನು ಸಾಯಿಸಲು ಯೋಧರು ಬಳಸಿದ್ದು ಬಿಸ್ಕಿಟ್‌ಗಳನ್ನು! ಇದು ಶ್ರೀನಗರದಲ್ಲಿ 2 ವರ್ಷದಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಆಗಿದೆ. ಉಸ್ಮಾನ್ ಹತ್ಯೆಯಲ್ಲಿ ‘ಬಿಸ್ಕೆಟ್’ ಮಹತ್ವದ ಪಾತ್ರ ವಹಿಸಿದೆ. ಆತ ವಾಸವಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿ ನಾಯಿಗಳು ಇದ್ದು, ಅವುಗಳ ಬೊಗಳುವಿಕೆಯಿಂದ ಉಗ್ರ ಎಚ್ಚೆತ್ತುಕೊಂಡು ಪರಾರಿಯಾಗುವ ಸಾಧ್ಯತೆಯಿತ್ತು. ಹೀಗಾಗಿ ಯೋಧರು ಬಿಸ್ಕೆಟ್‌ ನೀಡಿ

ಲಷ್ಕರ್‌ ಕಮಾಂಡರ್‌ ಹತ್ಯೆಗೆ ಯೋಧರು ಬಳಸಿದ್ದು ಬಿಸ್ಕಿಟ್‌! Read More »

ವಕ್ಫ್‌ ನೋಟಿಸ್‌ ಭೀತಿ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ವಕ್ಫ್‌ ದಾಖಲೆ ತಿದ್ದುಪಡಿ ಕುರಿತು ಸಿಬಿಐ, ಇ.ಡಿ. ತನಿಖೆಗೆ ಒತ್ತಾಯ ಬೆಂಗಳೂರು: ರಾಜ್ಯದ ವಿವಿಧೆಡೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ನಮೂದಿಸಿ ನೋಟಿಸ್‌ ನೀಡಿರುವುದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ವಕ್ಫ್ ಆಸ್ತಿ ಕುರಿತಾದ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಆಗ್ರಹಿಸಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಗಳ ಎದುರು

ವಕ್ಫ್‌ ನೋಟಿಸ್‌ ಭೀತಿ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ Read More »

ದೀಕ್ಷಿತ್ – ರಕ್ಷಿತಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ

ಪುತ್ತೂರು: ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಮನೆ ಯಶೋದಾ ಮತ್ತು ಗಂಗಾಧರ ಗೌಡರ ಪುತ್ರ ದೀಕ್ಷಿತ್ ಅವರ ವಿವಾಹ ನಿಶ್ಚಿತಾರ್ಥ ಕಡಬ ತಾಲೂಕಿನ ಎಣ್ಮೂರು ಗ್ರಾಮದ ಹೇಮಳ ಕೂರಂಬೇಲು ಭುವನೇಶ್ವರಿ ಮತ್ತು ಬಾಲಕೃಷ್ಣ ಗೌಡರ ಪುತ್ರಿ ರಕ್ಷಿತಾ ಅವರೊಂದಿಗೆ ಕೆಮ್ಮಲೆ ಹೇಮಳದಲ್ಲಿರುವ ಭ್ರಮರಾಂಬಿಕ ನಿಲಯದಲ್ಲಿ ಇಂದು ನಡೆಯಿತು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ವಿವಾಹ ಸಮಾರಂಭ ಫೆ.16, 2025 ನೇ ಶನಿವಾರ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ದೀಕ್ಷಿತ್ – ರಕ್ಷಿತಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ Read More »

ದಂಪತಿ ಶವ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಪತ್ತೆ

ಧರ್ಮಸ್ಥಳ: ಕಾಣೆಯಾಗಿದ್ದ ದಂಪತಿಯ ಶವ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ಭಾನುವಾರ ಪತ್ತೆಯಾಗಿದೆ. ಮೃತ ದಂಪತಿಯನ್ನು ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61), ಈಶ್ವರಮ್ಮ (52) ಎಂದು ಗುರುತಿಸಲಾಗಿದೆ. ಅ.31 ರಂದು ದಂಪತಿಗಳು ನಾಪತ್ತೆಯಾಗಿದ್ದು. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಲ್ಲಿ‌‌ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ನದಿಯಲ್ಲಿ ಹುಡುಕಾಡಿದಾಗ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್ ನ

ದಂಪತಿ ಶವ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಚಾಲಕನ ನಿದ್ರೆಯ ಮಂಪರಿನಲ್ಲಿ ಪ್ರಪಾತಕ್ಕೆ ಬಿದ್ದ ಕಾರು | ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು

ಪುತ್ತೂರು: ಸಂಟ್ಯಾರ್ ಪಾಣಾಜೆ ಹೆದ್ದಾರಿಯ ಕೈಕಾರ ಎಂಬಲ್ಲಿ ಚಾಲಕನಿಗೆ ನಿದ್ದೆ ಮಂಪರು ಆವರಿಸಿ ಹತೋಟಿ ತಪ್ಪಿದ ಕಾರು ರಸ್ತೆ ಅಂಚಿನಲ್ಲಿದ್ದ 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಶನಿವಾರ ತಡರಾತ್ತಿ ಈ ಘಟನೆ ನಡೆದಿದ್ದು, ಪ್ರಪಾತಕ್ಕೆ ಕಾರು ಉರುಳಿ ಬಿದ್ದರೂ, ಯಾವುದೇ ಆಪಾಯಗಳಿಲ್ಲದೇ ಚಾಲಕ ಪಾರಾಗಿದ್ದಾನೆ. ಕಾರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಡಾ. ಚಂದ್ರಶೇಖರ್ ಅವರ ಪುತ್ರ ಡಾ. ವಿವೇಕ್ ಅವರಿಗೆ ಸೇರಿದಾಗಿದೆ. ರಾತ್ರಿ ಬದಿಯಡ್ಕದಿಂದ ಅವರು ಪುತ್ತೂರಿಗೆ ಕಾರ್ಯ ನಿಮಿತ್ತ ಬರುತ್ತಿದ್ದರು. ಬಳಕ್ಕೆ

ಚಾಲಕನ ನಿದ್ರೆಯ ಮಂಪರಿನಲ್ಲಿ ಪ್ರಪಾತಕ್ಕೆ ಬಿದ್ದ ಕಾರು | ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು Read More »

ಮಹಿಳೆಯ ತಲೆ ಬುರುಡೆ, ಎಲುಬುಗಳು ಪತ್ತೆ | ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ | ಪೊಲೀಸರಿಂದ ತನಿಖೆ

ಪುತ್ತೂರು: ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆಯಾದ ಘಟನೆ ಒಳಮೊಗ್ರು ಗ್ರಾಮದ ಉರ್ವದಲ್ಲಿ ನಡೆದಿದೆ. ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂಬಾಕೆ ತನ್ನ ಮನೆಯ ಎದುರಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಮನೆಯವರಿಗೆ ಒಂದು ತಿಂಗಳ ಬಳಿಕ ಗೊತ್ತಾಗಿದ್ದು ಈ ವೇಳೆ ಮಹಿಳೆಯ ತಲೆ ಬುರುಡೆ ಹಾಗೂ ಕೈ, ಕಾಲುಗಳ ಎಲುಬು ಪತ್ತೆಯಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದು ತಲೆ

ಮಹಿಳೆಯ ತಲೆ ಬುರುಡೆ, ಎಲುಬುಗಳು ಪತ್ತೆ | ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ | ಪೊಲೀಸರಿಂದ ತನಿಖೆ Read More »

ಈಶ್ವರ್ ಮಲ್ಪೆಯವರಿಗೆ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸಂಘದಿಂದ ‘ನ್ಯೂಸ್ ಪುತ್ತೂರು’ ಕಚೇರಿಯಲ್ಲಿ ಸನ್ಮಾನ

ಪುತ್ತೂರು: ಖ್ಯಾತ ಈಜುಪಟು, ನೀರಿಗೆ ಬಿದ್ದ ಶವಗಳನ್ನು ಮೇಲೆತ್ತುವ ಸಾಹಸ ಕಾರ್ಯ ಮಾಡುತ್ತಿರುವ ಅಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಪುತ್ತೂರಿನ ಏಳ್ಮುಡಿಯಲ್ಲಿರುವ ಪ್ರಾವಿಡೆನ್ಸ್ ಕಾಂಪ್ಲೆಕ್ಸ್ ನಲ್ಲಿರುವ ‘‘ನ್ಯೂಸ್ ಪುತ್ತೂರು’ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನ್ಯೂಸ್ ಪುತ್ತೂರು ಕಚೇರಿಗೆ ಬಂದ ಅವರನ್ನು ಕಚೇರಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ನ್ಯೂಸ್ ಪುತ್ತೂರು ನಿರ್ದೇಶಕ, ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸಂಘದ ಪ್ರವೀಣ್‍ಕುಂಟ್ಯಾನ ಈಶ್ವರ್ ಮಲ್ಪೆ ಅವರನ್ನು ಪೇಟ ತೊಡಿಸಿ, ಹೂಹಾರ ಹಾಕಿ, ಫಲ, ಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಿದರು. ಈ

ಈಶ್ವರ್ ಮಲ್ಪೆಯವರಿಗೆ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸಂಘದಿಂದ ‘ನ್ಯೂಸ್ ಪುತ್ತೂರು’ ಕಚೇರಿಯಲ್ಲಿ ಸನ್ಮಾನ Read More »

ಆತ್ಮಹತ್ಯೆ ಮಾಡಿಕೊಂಡ ನಟ, ನಿರ್ದೇಶಕ ಗುರುಪ್ರಸಾದ್ !

ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ ನಲ್ಲಿರುವ ತಮ್ಮ ನಿವಾಸದಲ್ಲಿ ಮೂರು ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಆತ್ಮಹತ್ಯೆ ಮಾಡಿಕೊಂಡ ನಟ, ನಿರ್ದೇಶಕ ಗುರುಪ್ರಸಾದ್ ! Read More »

error: Content is protected !!
Scroll to Top