ಗಂಡಸರಿಗೂ ಸಿಗಲಿದೆಯೇ ಉಚಿತ ಪ್ರಯಾಣ ಭಾಗ್ಯ?

ಡಿ.ಕೆ. ಶಿವಕುಮಾರ್‌ ಹೇಳಿಕೆ ಹಿನ್ನೆಲೆಯಲ್ಲಿ ಗರಿಗೆದರಿದ ನಿರೀಕ್ಷೆ ಬೆಂಗಳೂರು: ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯ ಪುರುಷರಿಗೂ ಸಿಗಲಿದೆಯೇ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯೊಂದು ಈ ನಿಟ್ಟಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡಸರಿಗೂ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಬಳಿಕ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ ಎಂಬ ಆಶಾಭಾವನೆ ಗರಿಗೆದರಿದೆ.ವಿಧಾನಸೌಧದಲ್ಲಿ ನಿನ್ನೆ ಔಪಚಾರಿಕವಾಗಿ […]

ಗಂಡಸರಿಗೂ ಸಿಗಲಿದೆಯೇ ಉಚಿತ ಪ್ರಯಾಣ ಭಾಗ್ಯ? Read More »

ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ

ಉಪಚುನಾವಣೆ ಸೋಲಿನ ವಾಸನೆ ಬಡಿದು ಬಡಬಡಿಕೆ ಎಂದು ಟೀಕೆ ಕಾರ್ಕಳ : ಉಪಚುನಾವಣೆ ಫಲಿತಾಂಶ ಬರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೀತಿಗೊಂಡಿದ್ದಾರೆ. ಪೀಠದಿಂದ ಪತನಗೊಳ್ಳುವ ಕನಸು ಬೀಳುತ್ತಿರುವುದರಿಂದ ಪದೇಪದೆ ಬೆಚ್ಚಿ ಬೀಳುತ್ತಿದ್ದಾರೆ. ನಿರಾಯಾಸವಾಗಿ ಸಿಕ್ಕಿದ ಮುಖ್ಯಮಂತ್ರಿ ಗಾದಿಯನ್ನು ತಮ್ಮದೇ ಪಕ್ಷದವರು ಇನ್ನು ಕೆಲವೇ ದಿನಗಳಲ್ಲಿ ಕಸಿದುಕೊಳ್ಳುತ್ತಾರೆ ಎಂಬ ವಾಸನೆ ಬಡಿಯುತ್ತಿದ್ದಂತೆ ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟು ಸ್ವಪಕ್ಷೀಯರನ್ನು ಬೆದರಿಸಲು ಹೊರಟಿದ್ದಾರೆ ಎಂದು ಶಾಸಕ ಸುನೀಲ್‌ ಕುಮಾರ್‌ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ನ ಒಬ್ಬೊಬ್ಬ ಶಾಸಕರಿಗೆ ಬಿಜೆಪಿ ತಲಾ

ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ Read More »

ಬಂದೂಕು ತೋರಿಸಿ ಬೆದರಿಸಿ ಊಟ ಮಾಡಿಕೊಂಡು ಹೋಗಿದ್ದ ನಕ್ಸಲರು

ತೀವ್ರಗೊಂಡ ಕೂಂಬಿಂಗ್‌ ಕಾರ್ಯಾಚರಣೆ, ವಾಹನ ತಪಾಸಣೆ ಕೊಪ್ಪ: ಕೊಪ್ಪದ ಕಾಡಂಚಿನ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ್ದ ನಕ್ಸಲರು ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿ ಅಡುಗೆ ತಯಾರಿಸಲು ಹೇಳಿ ಊಟ ಮಾಡಿಕೊಂಡು ಹೋಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇ ಗೌಡ ಎಂಬವರ ಮನೆಯಲ್ಲಿ ನಕ್ಸಲರಿಗೆ ಸೇರಿದ್ದು ಎನ್ನಲಾಗಿರುವ ಮೂರು ಬಂದೂಕುಗಳು ಸಿಕ್ಕಿದ ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದ್ದು, ಆಗ ಮನೆಯವರು ತಮ್ಮನ್ನು ಬಂದೂಕು ತೋರಿಸಿ ಹೆದರಿಸಿರುವ ವಿಚಾರ ತಿಳಿಸಿದ್ದಾರೆ.ನಕ್ಸಲರ ಓಡಾಟದ

ಬಂದೂಕು ತೋರಿಸಿ ಬೆದರಿಸಿ ಊಟ ಮಾಡಿಕೊಂಡು ಹೋಗಿದ್ದ ನಕ್ಸಲರು Read More »

ಮುಡಾ ಹಗರಣದಲ್ಲಿ ಇಬ್ಬರು ಸಚಿವರೂ ಭಾಗಿ?

ವಿಚಾರಣೆ ವೇಳೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟ ಮುಡಾ ಅಧಿಕಾರಿಗಳು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಆರೋಪಿಯಾಗಿರುವ ಮುಡಾ ಹಗರಣ ಈಗ ಇಬ್ಬರು ಸಚಿವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಗೋಚರಿಸಿದೆ. ಜಾರಿ ನಿರ್ದೇಶನಾಲಯದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮುಡಾದ ಅಧಿಕಾರಿಗಳು ಸೈಟ್‌ ನೀಡಲು ತಮ್ಮ ಮೇಲೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟಿದ್ದು, ಈ ಪೈಕಿ ಇಬ್ಬರು ಸಚಿವರೂ ಇದ್ದಾರೆ ಎನ್ನಲಾಗುತ್ತಿದೆ.ಇ.ಡಿ ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ

ಮುಡಾ ಹಗರಣದಲ್ಲಿ ಇಬ್ಬರು ಸಚಿವರೂ ಭಾಗಿ? Read More »

ಬೀದರ್‌ನಲ್ಲಿ 13 ಸಾವಿರ ಎಕರೆಗೂ ಅಧಿಕ ಜಮೀನು ವಕ್ಫ್‌ ಪಾಲು | ಐತಿಹಾಸಿಕ ಸ್ಮಾರಕ, ಪ್ರವಾಸಿ ತಾಣ, ಸರ್ಕಾರಿ ಆಸ್ಪತ್ರೆಯೂ ವಕ್ಫ್‌ ಗೆ

ಬೆಂಗಳೂರು: ವಿಜಯಪುರದ ಬಳಿಕ ಈಗ ವಚನಕಾರ ಬಸವಣ್ಣನವರ ಕರ್ಮಭೂಮಿ ಎಂದೇ ಅರಿಯಲ್ಪಡುವ ಬೀದರ್‌ನಲ್ಲೂ ಸಾವಿರಾರು ಎಕರೆ ಭೂಮಿ ವಕ್ಫ್‌ ಕಬಳಿಸಿರುವುದು ಬಹಿರಂಗವಾಗಿದೆ. ಬೀದರ್‌ನಲ್ಲಿ ಬರೋಬ್ಬರಿ 13,295 ಎಕರೆ ಭೂಮಿ ವಕ್ಫ್ ಪಾಲಾಗಿದೆ. ತಲೆತಲಾಂತರಗಳಿಂದ ಕೃಷಿ ಮಾಡುತ್ತಿದ್ದ ಸಾವಿರಾರು ಎಕರೆ ರೈತರ ಜಮೀನಿನಲ್ಲಿ ವಕ್ಫ್ ಹೆಸರು ಸೇರಿಕೊಂಡಿದೆ. 13,295 ಎಕರೆ ಜಮೀನು ತನ್ನದು ಎಂದು ವಕ್ಫ್ ಬೋರ್ಡ್ ಅಧಿಕೃತ ದಾಖಲೆಯನ್ನು ನೀಡಿದೆ. ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಗ್ರಾಮಕ್ಕೆ ಗ್ರಾಮ, ಸರ್ಕಾರಿ ಆಸ್ಪತ್ರೆ, ಸಹಸ್ರಾರು ರೈತರ ಫಲವತ್ತಾದ ಕೃಷಿ

ಬೀದರ್‌ನಲ್ಲಿ 13 ಸಾವಿರ ಎಕರೆಗೂ ಅಧಿಕ ಜಮೀನು ವಕ್ಫ್‌ ಪಾಲು | ಐತಿಹಾಸಿಕ ಸ್ಮಾರಕ, ಪ್ರವಾಸಿ ತಾಣ, ಸರ್ಕಾರಿ ಆಸ್ಪತ್ರೆಯೂ ವಕ್ಫ್‌ ಗೆ Read More »

ಪುಣ್ಚಪ್ಪಾಡಿ ಹಿ.ಪ್ರಾ. ಶಾಲೆಯ ವಾರ್ಷಿಕ ಕ್ರೀಡಾಕೂಟ | ವಿದ್ಯಾರ್ಥಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು

ಸವಣೂರು: ಪುಣ್ಚಪ್ಪಾಡಿ  ಸ. ಹಿ. ಪ್ರಾ. ಶಾಲೆಯ ವಾರ್ಷಿಕ ಕ್ರೀಡಾಕೂಟ ನಡೆಯಿತು. ಸವಣೂರು ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಗೂ ಪ್ರಾಶಸ್ತ್ಯವನ್ನು ನೀಡುತ್ತಿದ್ದು ದೇಹ ಸಧೃಡವಾಗಿ ಬೆಳೆಯಲು ವ್ಯಾಯಾಮ, ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯ ಎಂದರು. ಸವಣೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯ ಬಾಬು ಜರಿನಾರು ಕ್ರೀಡಾ ಜ್ಯೋತಿ ಬೆಳಗಿಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳು ತಮ್ಮ

ಪುಣ್ಚಪ್ಪಾಡಿ ಹಿ.ಪ್ರಾ. ಶಾಲೆಯ ವಾರ್ಷಿಕ ಕ್ರೀಡಾಕೂಟ | ವಿದ್ಯಾರ್ಥಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು Read More »

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ “ಹೂಡಿಕೆ ಜಾಗೃತಿ” ಕಾರ್ಯಗಾರ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ “ಹೂಡಿಕೆ ಜಾಗೃತಿ” ಕಾರ್ಯಗಾರ ನಡೆಯಿತು. ಕಾರ್ಯಗಾರವನ್ನು ಸಂಸ್ಥೆಯ ಉಪ ಪ್ರಾಂಶುಪಾಲ  ಶೇಷಗಿರಿ ಎಂ. ಉದ್ಘಾಟಿಸಿದರು. ಕಾರ್ಯಗಾರ 2 ಅವಧಿಯನ್ನು ಒಳಗೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಎಮ್. ಎಫ್. ಐ ರಿಜ್ ಮ್ಯುಚ್ಯೂವಲ್ ಫಂಡ್ ಡಿಸ್ಟ್ರಿಬ್ಯೂಟರ್ ಮತ್ತು ಫಿನಾನ್ಶಿಯಲ್ ಎಡ್ವೈಸರ್ ನಿರಂಜನ್ ರೈ ಇಲಾವರು ಸ್ಟಾಕ್ ಮಾರ್ಕೆಟ್ ಮತ್ತು ಮ್ಯುಚ್ಚಲ್ ಫಂಡ್ ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.  ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ “ಹೂಡಿಕೆ ಜಾಗೃತಿ” ಕಾರ್ಯಗಾರ Read More »

ವಿಟಿಯು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕದ ಸಾಧನೆ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸಿಕೊಂಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ದ್ವಿತೀಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಭುವನ್‌ರಾಮ್ ಜಗದೀಶ್ ಭಂಡಾರಿ 73 ಕೆಜಿ ವಿಭಾಗದಲ್ಲಿ ಒಟ್ಟು 190 ಕೆಜಿ ಭಾರ ಎತ್ತುವುದರ ಮೂಲಕ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಇದೇ

ವಿಟಿಯು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕದ ಸಾಧನೆ Read More »

ಮುಸ್ಲಿಂ ಖದರಸ್ಥಾನಗಳಿಗೆ ಸಾವಿರಾರು ಎಕರೆ ಸರಕಾರಿ ಜಮೀನು ಮಂಜೂರಾತಿಗೆ ಕ್ರಮ

ದೇವಾಲಯಗಳು ದಶಕಗಳಿಂದ ಅರ್ಜಿ ಸಲ್ಲಿಸಿದರೂ ಸಿಗದ ಭೂಮಿ ಬೆಂಗಳೂರು : ರೈತರ, ಮಠ ಮಂದಿರಗಳ ಜಮೀನನನ್ನು ವಕ್ಫ್‌ ಮಂಡಳಿ ಕಬಳಿಸಿದ ಬೆನ್ನಿಗೆ ಈಗ ಮುಸ್ಲಿಮರ ಖಬರಸ್ಥಾನಗಳಿಗೆ ಸರಕಾರ ಸಾವಿರಾರು ಎಕರೆ ಜಮೀನು ಮಾಡಲು ಮುಂದಾಗಿರುವ ವಿಷಯ ಬಯಲಾಗಿದ್ದು, ಕಾಂಗ್ರೆಸ್‌ ಸರಕಾರ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.ರಾಜ್ಯದ 328 ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರಿ ಜಮೀನನ್ನು ಮಂಜೂರಾತಿ ನೀಡಲು ಸರ್ಕಾರ ಮುಂದಾಗಿದೆ. ಸುಮಾರು 2750 ಎಕರೆ ಭೂಮಿ ಮಂಜುರಾತಿ ನೀಡಲು ತಯಾರಿ

ಮುಸ್ಲಿಂ ಖದರಸ್ಥಾನಗಳಿಗೆ ಸಾವಿರಾರು ಎಕರೆ ಸರಕಾರಿ ಜಮೀನು ಮಂಜೂರಾತಿಗೆ ಕ್ರಮ Read More »

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯರಿಗೆ ಜಾಮೀನು ಮಂಜೂರು

ಸುಳ್ಯ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಫೋಕ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾದ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್ ಪಾಂಗಣ್ಯಾಯರಿಗೆ ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೆ.19 ರಂದು ಬೆಳ್ಳಾರೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದೀಗ ಪ್ರಸಾದ್ ಪಾಂಗ್ರಣ್ಯಾಯರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಘೋಷಣೆ ಮಾಡಿದೆ. ಆರೋಪಿಯ ಪರವಾಗಿ ಪುತ್ತೂರಿನ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯರಿಗೆ ಜಾಮೀನು ಮಂಜೂರು Read More »

error: Content is protected !!
Scroll to Top