ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿ.3ರಂದು ಸಚಿವ ಜಮೀರ್‌ ವಿಚಾರಣೆ

ಖುದ್ದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ತನಿಖಾಧಿಕಾರಿಯಿಂದ ನೋಟಿಸ್‌ ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಡಿ.3ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸಚಿವ ಜಮೀರ್‌ ಅಹ್ಮದ್‌ ಖಾನ್‌ಗೆ ಲೋಕಾಯುಕ್ತ ನೋಟಿಸ್‌ ನೀಡಿದೆ. ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಜಮೀರ್‌ ಮನೆಗೆ ಹೋಗಿ ಲೋಕಾಯುಕ್ತ ಇನ್‌ಸ್ಪೆಕ್ಟ‌ರ್ ಸಚಿವರಿಗೆ ನೋಟಿಸ್‌ ನೀಡಿದ್ದು, ಸೂಕ್ತ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ.ಮೂರು ವರ್ಷಗಳ ಹಿಂದೆ ಜಮೀರ್ ವಿರುದ್ಧ ಎಸಿಬಿಯಲ್ಲಿ ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು. ಎಸಿಬಿ […]

ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿ.3ರಂದು ಸಚಿವ ಜಮೀರ್‌ ವಿಚಾರಣೆ Read More »

ಹದಗೆಟ್ಟಿರುವ ರಸ್ತೆ | ಗ್ರಾಮಸ್ಥರಿಂದ ಉಪಚುನಾವಣೆ ಬಹಿಷ್ಕಾರ ನಿರ್ಧಾರ

ಪುತ್ತೂರು: ರಸ್ತೆ ಸಂಪೂರ್ಣ ಹದಗೆಟ್ಟಿರುವ ಹಿನ್ನಲೆಯಲ್ಲಿ ನ. 23 ರಂದು ಅರಿಯಡ್ಕ ಗ್ರಾಮ ಪಂಚಾಯತ್ ನ ಉಪಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮಸ್ಥರು ತಳೆದಿದ್ದಾರೆ. ಕಾವು- ಅಶ್ವತ್ತಡಿ-ಸಸ್ಪೆಟ್ಟಿ-ಪಳನೀರು- ಸಾಂತ್ಯ ಮೂಲಕ ಈಶ್ವರ ಮಂಗಲವನ್ನು ಸಂಪರ್ಕಿಸುವ ಕಚ್ಚಾರಸ್ತೆಯ ಕಾಂಕ್ರೀಟಿಕರಣಕ್ಕೆ ಕಳೆದ ಹತ್ತು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಈ ಭಾಗದ ಸಾರ್ವಜನಿಕರು ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಶಾಸಕರವರೆಗೂ ಮನವಿ ನೀಡುವ ಮೂಲಕ ಬೇಡಿಕೆ ಇಟ್ಟಿದ್ದರು.  ಆದರೆ ಕಾಂಕ್ರೀಟಿಕರಣ ಬಿಡಿ ಕನಿಷ್ಠ ದುರಸ್ತಿಯೂ ಇಲ್ಲದೆ ಈ ರಸ್ತೆಯಲ್ಲಿ ಸಂಚರಿಸುವುದೂ ದುಸ್ತರವಾಗಿದೆ. ಆದುದರಿಂದ ಮುಂದಿನ

ಹದಗೆಟ್ಟಿರುವ ರಸ್ತೆ | ಗ್ರಾಮಸ್ಥರಿಂದ ಉಪಚುನಾವಣೆ ಬಹಿಷ್ಕಾರ ನಿರ್ಧಾರ Read More »

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಗಳ ಅಂತರ್ ಕಾಲೇಜು ಮಟ್ಟದ ಗುಡ್ಡಗಾಡು ಓಟ | ವಿವೇಕಾನಂದ ಕಾನೂನು ಮಹಾವಿದ್ಯಾಲಯ ಸತತ ನಾಲ್ಕನೇ ಬಾರಿಗೆ ಚಾಂಪಿಯನ್

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡುವ ಮಹಾವಿದ್ಯಾಲಯದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ. ಚಿಕ್ಕೋಡಿಯ ಕೆ.ಎಲ್.ಇ. ಸೊಸೈಟಿ ಕಾನೂನು ಮಹಾವಿದ್ಯಾಲಯದಲ್ಲಿ,  ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಆಯೋಜಿಸಿದ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯಗಳ ಅಂತರ್ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅಮೋಘ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಚತುರ್ಥ ಬಿ.ಎ.ಎಲ್.ಎಲ್.ಬಿ.ಯ ವಿದ್ಯಾರ್ಥಿ ವಿಜಯ್

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಗಳ ಅಂತರ್ ಕಾಲೇಜು ಮಟ್ಟದ ಗುಡ್ಡಗಾಡು ಓಟ | ವಿವೇಕಾನಂದ ಕಾನೂನು ಮಹಾವಿದ್ಯಾಲಯ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ Read More »

ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳು ಜೀವಂತ ದಹನ

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು ಸಂಭವಿಸಿದ ಭೀಕರ ದುರಂತ ಲಖನೌ : ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಹರಡಿದೆ. ಬೆಂಕಿ ಹೊತ್ತಿಕೊಂಡಾಗ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡತೊಡಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು,

ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳು ಜೀವಂತ ದಹನ Read More »

ಟಿ-20 ಸರಣಿ : ಟೀಮ್‌ ಇಂಡಿಯಾ ಎದುರು ಸೋತು ಸುಣ್ಣವಾದ ದಕ್ಷಿಣ ಆಫ್ರಿಕ

ಅತ್ಯಧಿಕ ರನ್, ಹೀನಾಯ ಸೋಲು… ದಾಖಲೆಗಳ ಮೇಲೆ ದಾಖಲೆ ಬರೆದ ಭಾರತ ಜೋಹಾನ್ಸ್​ಬರ್ಗ್ : ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಟಿ-20 ಸರಣಿಯ ನಾಲ್ಕನೇ ತಥಾ ಕೊನೆಯ ಪಂದ್ಯದಲ್ಲಿ ದಾಖಲೆ ರನ್‌ ಗಳಿಸಿ, ದಾಖಲೆ ಅಂತರದಿಂದ ದಕ್ಷಿಣ ಆಫ್ರಿಕವನ್ನು ಸೋಲಿಸುವ ಮೂಲಕ ಭಾರತ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಬೀಗಿದೆ. ದಕ್ಷಿಣ ಆಫ್ರಿಕ ವಿರುದ್ಧ ಟೀಮ್ ಇಂಡಿಯಾ 135 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 4 ಪಂದ್ಯಗಳ ಟಿ-20 ಸರಣಿಯನ್ನು ಭಾರತ

ಟಿ-20 ಸರಣಿ : ಟೀಮ್‌ ಇಂಡಿಯಾ ಎದುರು ಸೋತು ಸುಣ್ಣವಾದ ದಕ್ಷಿಣ ಆಫ್ರಿಕ Read More »

ನೇಣು ಬಿಗಿದು ಆತ್ಮಹತ್ಯೆ !

ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೂರಿನಲ್ಲಿ ಇಂದು ನಡೆದಿದೆ. ಬನ್ನೂರು ನಂದಿಲ ನಿವಾಸಿ ಕಿರಣ್ ಕುಮಾರ್ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡವರು. ಪುತ್ತೂರಿನ ಜ್ಯುವೆಲ್ಲರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಿರಣ್ ರವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ,ಮಗು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೇಣು ಬಿಗಿದು ಆತ್ಮಹತ್ಯೆ ! Read More »

ಎವಿಜಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಪುತ್ತೂರು :ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಬೆಳಿಗ್ಗೆ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಪ್ರಾರಂಭಿಸಿ ಆ ಬಳಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು    ಶಾಲಾ ವಿದ್ಯಾರ್ಥಿ ನಾಯಕ ಮಾಸ್ಟರ್ ಅದ್ವಿಕ್  ಬಂಜನ್ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕುಮಾರಿ ಜ್ಞಾನ  ರೈ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೊರಹಮ್ಮಿಸಲು ಶಾಲೆಯು ಪ್ರಧಾನ ಪಾತ್ರ ವಹಿಸುತ್ತದೆ, ಮಕ್ಕಳಿಗೆ ಪ್ರೋತ್ಸಾಹ ನೀಡುವಂತೆ ಮಾತನಾಡಿ ಹೆಣ್ಣು ಮಕ್ಕಳ ಸುರಕ್ಷತೆಯ

ಎವಿಜಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ Read More »

ಪುತ್ತೂರಿನಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಂಸದ ಕ್ಯಾ. ಚೌಟ: ಅಹವಾಲು ಸ್ವೀಕಾರ

ಪುತ್ತೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಪುತ್ತೂರಿಗೆ ಭೇಟಿ ನೀಡಿದ್ದು, ಈ ವೇಳೆ ಅವರು ಸ್ಥಳೀಯ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು. ಸಂಸದ ಕ್ಯಾ. ಚೌಟ ಅವರು ಶುಕ್ರವಾರ ಬೆಳಗ್ಗೆ ಪುತ್ತೂರಿನ ಐಬಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಭಾಗದ ನಾಗರಿಕರು ರಸ್ತೆ, ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸ್ಪಂದಿಸುವಂತೆ ಮನವಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಸಂಸದರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ

ಪುತ್ತೂರಿನಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಂಸದ ಕ್ಯಾ. ಚೌಟ: ಅಹವಾಲು ಸ್ವೀಕಾರ Read More »

ವಕ್ಫ್‌ ವಿರುದ್ಧ ಬಿಜೆಪಿ ಒಂದು ತಿಂಗಳು ಅಭಿಯಾನ

ಸಂತ್ರಸ್ತರ ನೆರವಿಗೆ ವಾಟ್ಸಪ್‌ ಸಹಾಯವಾಣಿ, ವಾರ್‌ ರೂಂ ಸ್ಥಾಪನೆ ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ ನೋಟಿಸ್​ ನೀಡಿರುವ ವಿಚಾರವಾಗಿ ನವೆಂಬರ್​​ 25ರಿಂದ ಡಿಸೆಂಬರ್​ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.ವಕ್ಫ್‌ ಸಮಸ್ಯೆ ಎದುರಾಗಿರುವವರಿಗೆ ಮಾಹಿತಿ ನೀಡಲು ವಾರ್ ರೂಂ ಸ್ಥಾಪನೆ ಮಾಡುತ್ತಿದ್ದೇವೆ.

ವಕ್ಫ್‌ ವಿರುದ್ಧ ಬಿಜೆಪಿ ಒಂದು ತಿಂಗಳು ಅಭಿಯಾನ Read More »

ದರ್ಶನ್‌ ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿ

ಸೋಮವಾರದಿಂದ ಮೇಲ್ಮನವಿ ಸಲ್ಲಿಕೆ ಪ್ರಕ್ರಿಯೆ ಆರಂಭ ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್‌ ನೀಡಿದ ಜಾಮೀನು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಗೃಹ ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಹೇಳಿದ್ದಾರೆ.ಗೃಹ ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಸೋಮವಾರದ ಬಳಿಕ ಪೊಲೀಸರು ಮೇಲ್ಮನವಿ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಪೊಲೀಸರ

ದರ್ಶನ್‌ ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿ Read More »

error: Content is protected !!
Scroll to Top