ಹಿಂದೂ ಯುವತಿ ಹಾಗೂ ಮಹಿಳೆಗೆ ಕಿರುಕುಳ : ಆರೋಪಿ ಸೈಯದ್ ನಯೀಮ್ ಬಂಧನ

ಮಂಗಳೂರು: ಹಿಂದೂ ಯುವತಿ ಮತ್ತು ಮಹಿಳೆಯ ಮನೆಗೆ ಬಂದು ಯುವಕನೋರ್ವ ಬಂದು ಕಿರುಕಳ ಮತ್ತು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಈತ ಮಹಿಳೆಗೆ ರವಿ ಎಂಬ ಹೆಸರಿನಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದು ಆಗಾಗ ಮಹಿಳೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವೂ ಇತ್ತೆಂದು ತಿಳಿದು ಬಂದಿದೆ. ಶುಕ್ರವಾರ ಬೆಳಿಗ್ಗೆ ಬಂದಿದ್ದ ಯುವಕ ಮಹಿಳೆ ಮತ್ತು ಮಹಿಳೆಯ ಅಕ್ಕನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಮಹಿಳೆ ಮತ್ತು ಯುವಕನ ಮಧ್ಯೆ ಗಲಾಟೆ […]

ಹಿಂದೂ ಯುವತಿ ಹಾಗೂ ಮಹಿಳೆಗೆ ಕಿರುಕುಳ : ಆರೋಪಿ ಸೈಯದ್ ನಯೀಮ್ ಬಂಧನ Read More »

ಪ್ರಧಾನಿ ಅಂಗಳ ತಲುಪಿದ ಮುಡಾ ಹಗರಣ

ಸಿಬಿಐ ತನಿಖೆಗೆ ಆಗ್ರಹಿಸಿ ನರೇಂದ್ರ ಮೋದಿಯವರಿಗೆ ಪತ್ರ ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉರುಳಾಗಿ ಪರಣಮಿಸಿರುವ ಮುಡಾ ಹಗರಣ ಈಗ ಪ್ರಧಾನಿ ಅಂಗಳ ತಲುಪಿದೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸದಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾದ ಬೆನ್ನಿಗೆ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲರೊಬ್ಬರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ವಕೀಲ ರವಿಕುಮಾರ್ ಎಂಬವರು ಪ್ರಧಾನ ಮಂತ್ರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ

ಪ್ರಧಾನಿ ಅಂಗಳ ತಲುಪಿದ ಮುಡಾ ಹಗರಣ Read More »

ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು ನಿಧನ

ಪುತ್ತೂರು: ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು (75.ವ.) ಇವರು ಡಿ.07 ರಂದು ಬೆಳಗ್ಗೆ ಹೃದಯಾಘತದಿಂದ ನಿಧನರಾಗಿದ್ದಾರೆ. ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು ಅವರು ಬ್ಯಾಂಕ್ ಆಫ್ ಬರೋಡಾ, ಹಿಂದೆ ಇದ್ದ ವಿಜಯ ಬ್ಯಾಂಕಿನ ಪುತ್ತೂರು ಶಾಖೆಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ನಿವೃತ್ತರಾಗಿದ್ದರು. ನಿನ್ನೆ ಸಂಜೆ ಇವರು ಆರೋಗ್ಯದಿಂದ ಇದ್ದು ಮನೆಯಲ್ಲಿ ಕೆಲಸ ಮಾಡುತ್ತಿದ್ದರು, ಇಂದು ಬೆಳಗ್ಗೆ ಸೋಮಪ್ಪ ಗೌಡ ಇವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘತವಾಗಿ

ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು ನಿಧನ Read More »

ಕೆ ಎಸ್‍ ಆರ್ ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು | ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಬಸ್ ನಿರ್ವಾಹಕ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ  ನಿರ್ವಾಹಕ ವಿಷ್ಣು ಎಂಬವರು ಬಸ್ ಅನ್ನು ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.6ರಂದು ತಿಳಿದು ಬಂದಿದೆ. ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಬಸ್ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿಯವರ ಚಾಲನೆಯ ವೇಗವನ್ನು ನಿಧಾನ ಮಾಡತೊಡಗಿದರು. ಇದನ್ನು ಕಂಡು ಸಂಶಯಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿದಾಗ

ಕೆ ಎಸ್‍ ಆರ್ ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು | ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಬಸ್ ನಿರ್ವಾಹಕ Read More »

ವಿಟ್ಲದ ಉದ್ಯಮಿ ಆತ್ಮಹತ್ಯೆ

ವಿಟ್ಲ : ವಿಟ್ಲದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಟ್ಲದ ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಮೃತರು ಇಬ್ಬರು ಮಕ್ಕಳು, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ವಿಟ್ಲದ ಉದ್ಯಮಿ ಆತ್ಮಹತ್ಯೆ Read More »

ಕಡಬ ತಹಶೀಲ್ದಾರ್ ರಿಂದ ದಲಿತರ ಮೇಲೆ ಮುಂದುವರಿದ ದೌರ್ಜನ್ಯ : ಬಿ.ಎಂ.ಭಟ್‌ಖಂಡನೆ

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮ ನಿವಾಸಿ ದಲಿತೆ ರಾಧಮ್ಮ ಕುಟುಂಬದ ಮೇಲೆ ಮತ್ತೆ ಮತ್ತೆ ದೌರ್ಜನ್ಯ ಎಸಗುತ್ತಿರುವ ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ ಅವರ ಕಾನೂನು ದುರುಪಯೋಗದ ನಡೆಯನ್ನು ಸಹಿಸಲು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಜಿಲ್ಲಾ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ. ರೇಣುಕೆ ಎಂಬ ಬೆಳ್ತಂಗಡಿ ತಾಲೂಕು ಶಿಬಾಜೆ ನಿವಾಸಿಯ ಹೆಸರಲ್ಲಿ ಹೈಕೋರ್ಟಲ್ಲಿ ದಾವೆ ದಾಖಲಿಸಲಾಗಿದೆ ಎಂದು ರೇಣುಕೆ ಎಂಬವರ ಮನೆಯನ್ನು ದ್ವಂಸ ಮಾಡಲು ಆದೇಶವಿದೆ

ಕಡಬ ತಹಶೀಲ್ದಾರ್ ರಿಂದ ದಲಿತರ ಮೇಲೆ ಮುಂದುವರಿದ ದೌರ್ಜನ್ಯ : ಬಿ.ಎಂ.ಭಟ್‌ಖಂಡನೆ Read More »

ಡ್ರಗ್ಸ್‌ ದಂಧೆ : 63 ವರ್ಷದ ಮಹಿಳೆ ಬಂಧನ; 40 ಕೆಜಿ ಗಾಂಜಾ ವಶ

ಮಾದಕವಸ್ತು ವ್ಯಾಪಾರದಿಂದಲೇ ಕೋಟಿಗಟ್ಟಲೆ ಸಂಪಾದಿಸಿದ್ದ ಲೇಡಿ ಡಾನ್‌ ಬೆಂಗಳೂರು: ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ಮಾಡುತ್ತಿದ್ದ 63 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ಪೊಲೀಸರು ಸಹ ಆಕೆಯೊಂದಿಗೆ ಕೈಜೋಡಿಸಿದ್ದಾರೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಮಹಿಳೆಯ ಮನೆಯಿಂದ 40 ಕೆಜಿ ಗಾಂಜಾ, 33 ಲಕ್ಷ ರೂ. ನಗದು, ಮಚ್ಚು ಸೇರಿದಂತೆ ಎಂಟು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಮಾದಕವಸ್ತು ಮಾರಾಟಗಾರ್ತಿ ಕಾಲಿ ಮೆಹರುನಿಸಾ ಒಡೆತನದ ಹಲವು

ಡ್ರಗ್ಸ್‌ ದಂಧೆ : 63 ವರ್ಷದ ಮಹಿಳೆ ಬಂಧನ; 40 ಕೆಜಿ ಗಾಂಜಾ ವಶ Read More »

ಕುವೈಟ್‌ನ ಬ್ಯಾಂಕಿಗೇ 700 ಕೋ. ರೂ. ವಂಚಿಸಿದ ಮಲಯಾಳಿಗಳು

ಸಾಲ ಪಡೆದು ಸ್ವದೇಶಕ್ಕೆ ಪಲಾಯನ ತಿರುವನಂತಪುರ: ಕುವೈಟ್‌ಗೆ ಉದ್ಯೋಗಕ್ಕೆ ತೆರಳಿದ ಕೇರಳದವರು ಅಲ್ಲಿನ ಗಲ್ಫ್‌ ಬ್ಯಾಂಕ್‌ಗೆ 700 ಕೋ. ರೂ.ಅಧಿಕ ಮೊತ್ತ ವಂಚಿಸಿ ಪಲಾಯನ ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಗಲ್ಫ್‌ ಬ್ಯಾಂಕ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಕೇರಳಕ್ಕೆ ಬಂದು ಈ ಕುರಿತು ದೂರು ನೀಡಿದ ಬಳಿಕ ಕೇರಳ ಪೊಲೀಸರು ವಂಚನೆ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಸಾಲ ಪಡೆದು ವಂಚಿಸಿದವರಲ್ಲಿ ಬಹುತೇಕ ಮಂದಿ ನರ್ಸ್‌ ಕೆಲಸಕ್ಕಾಗಿ ಕುವೈಟ್‌ಗೆ ಹೋದ ಮಹಿಳೆಯರು. ಗಲ್ಫ್‌ ಬ್ಯಾಂಕ್‌ನ ಕುವೈಟ್‌ ಷೇರ್‌

ಕುವೈಟ್‌ನ ಬ್ಯಾಂಕಿಗೇ 700 ಕೋ. ರೂ. ವಂಚಿಸಿದ ಮಲಯಾಳಿಗಳು Read More »

ಶಬರಿಮಲೆಯಲ್ಲಿ ನಟನಿಗೆ ವಿಶೇಷ ದರ್ಶನ ಸೌಲಭ್ಯ : ಹೈಕೋರ್ಟ್‌ ಗರಂ

ಯಾವ ನೆಲೆಯಲ್ಲಿ ನಟನಿಗೆ ಈ ಸೌಲಭ್ಯ ನೀಡಲಾಯಿತು ಎಂದು ಪ್ರಶ್ನೆ ಕೊಚ್ಚಿ : ಶಬರಿಮಲೆಯಲ್ಲಿ ಮಲಯಾಳಂ ನಟ ದಿಲೀಪ್‌ಗೆ ವಿಶೇಷ ಸೌಲಭ್ಯಕ್ಕೆ ಒದಗಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್ ಪೊಲೀಸ್ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಬೋರ್ಡನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾ.ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾ.ಮುರಳಿ ಕೃಷ್ಣ ಎಸ್. ಅವರಿಂದ ದ್ವಿಸದಸ್ಯ ಪೀಠ, ನಟನಿಗೆ ಯಾವ ಆಧಾರದ ಮೇಲೆ ವಿಶೇಷ ದರ್ಶನ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದೆ. ದಿಲೀಪ್

ಶಬರಿಮಲೆಯಲ್ಲಿ ನಟನಿಗೆ ವಿಶೇಷ ದರ್ಶನ ಸೌಲಭ್ಯ : ಹೈಕೋರ್ಟ್‌ ಗರಂ Read More »

ಚೆಲ್ಯಡ್ಕ ಸೇತುವೆ ನಿರ್ಮಾಣದ ಹಿನ್ನಲೆ | ಇಲಾಖೆಯಿಂದ ಬದಲಿ ಮಾರ್ಗ ಸೂಚಿ

ಪುತ್ತೂರು : ದೇವಸ್ಯ-ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿ ಶಿಥಿಲಾವಸ್ಥೆಯಲ್ಲಿರುವ ಚೆಲ್ಯಡ್ಕ ಮುಳುಗು ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿರುವುದರಿಂದ ಆರ್ಯಾಪು ಗ್ರಾಮದ ಒಳತ್ತಡ್ಕ-ದೇವಸ್ಯದಿಂದ ಬೆಟ್ಟಂಪಾಡಿ -ಪಾಣಾಜೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ಡಿ.9 ರಿಂದ ಮುಂದಿನ ಮೇ 6 ರ ತನಕ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಈ ಅವಧಿಯಲ್ಲಿ ಬದಲಿ ರಸ್ತೆಯನ್ನು ಬಳಸಿಕೊಂಡು ಸಾರ್ವಜನಿಕರು ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ವಾಹನ ಸವಾರರು ದೇವಸ್ಯ-ಬೈರೋಡಿ-ಕಾಫಿಕಾಡು

ಚೆಲ್ಯಡ್ಕ ಸೇತುವೆ ನಿರ್ಮಾಣದ ಹಿನ್ನಲೆ | ಇಲಾಖೆಯಿಂದ ಬದಲಿ ಮಾರ್ಗ ಸೂಚಿ Read More »

error: Content is protected !!
Scroll to Top