ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟ : ಸಾವಿನ ಸಂಖ್ಯೆ 8ಕ್ಕೇರಿಕೆ

ಹುಬ್ಬಳ್ಳಿ: ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟಿಸಿ ಗಂಭೀರವಾಗಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ವ್ರತಧಾರಿಗಳ ಪೈಕಿ ಇನ್ನಿಬ್ಬರು ಕೊನೆಯುಸಿರೆಳೆಯುವುದರೊಂದಿಗೆ ಸಾವಿನ ಸಂಖ್ಯೆ 8ಕ್ಕೇರಿದೆ. ಈ ಅವಘಡದಲ್ಲಿ ಈಗ ಒಬ್ಬ ಗಾಯಾಳು ಮಾತ್ರ ಬಾಕಿ ಉಳಿದಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಳಗಳು ತಿಳಿಸಿವೆ. ಪ್ರಕಾಶ ಬಾರಕೇರ (42) ಎಂಬವರು ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ತೇಜಸ್ವರ್ (27)​​ ಎಂಬವರು ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ವ್ರತಧಾರಿಗಳ ಸಾವಾಗಿದ್ದು, […]

ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟ : ಸಾವಿನ ಸಂಖ್ಯೆ 8ಕ್ಕೇರಿಕೆ Read More »

2025ರ ಸಾರ್ವತ್ರಿಕ ರಜೆಗಳ ಪಟ್ಟಿ

ಬೆಂಗಳೂರು: ಇನ್ನು ಕೆಲವೇ ತಾಸುಗಳಲ್ಲಿ 2024 ಮರೆಗೆ ಸರಿದು 2025ನೇ ವರ್ಷ ಶುರುವಾಗಲಿದೆ. ಪ್ರತಿ ವರ್ಷದಂತೆ 2025ರ ಸಾರ್ವತ್ರಿಕ ಮತ್ತು ಪರಿಮಿತ ರಜೆ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರ ಸರಕಾರಿ ರಜೆ ಇರುತ್ತದೆ. ಸಾರ್ವತ್ರಿಕ ರಜಾ ದಿನಗಳ ಪಟ್ಟಿ

2025ರ ಸಾರ್ವತ್ರಿಕ ರಜೆಗಳ ಪಟ್ಟಿ Read More »

2024ರ ಟಾಪ್ 26 ಮೆಗಾ ಸುದ್ದಿಗಳು

ಗತಿಸಿ ಹೋದ ವರ್ಷ ಬಿಟ್ಟುಹೋದದ್ದು ವಿವಾದಗಳನ್ನು, ನೋವುಗಳನ್ನು ಮತ್ತು ಒಂದಷ್ಟು ಸಂತಸದ ಕ್ಷಣಗಳನ್ನು… 2024ರ ವರ್ಷ ಇಂದು ರಾತ್ರಿ ಇತಿಹಾಸದ ಭಾಗವಾಗಿ ನೇಪಥ್ಯಕ್ಕೆ ಸರಿದು 2025ಕ್ಕೆ ದಾರಿ ಮಾಡಿಕೊಡುತ್ತಾ ಇದೆ. ಒಮ್ಮೆ ಹಿಂತಿರುಗಿ 2024ರ ಮಹತ್ವದ ಘಟನೆಗಳನ್ನು ಇಣುಕಿ ನೋಡುತ್ತಾ ಹೋದಾಗ ‘ಕಭಿ ಖುಷ್‌ ಕಭಿ ಗಮ್’ ಹಾಡು ನೆನಪಾಗುತ್ತದೆ. ಇಡೀ ವರ್ಷ ವಿವಾದಗಳು, ನೋವುಗಳು ಮತ್ತು ಒಂದಿಷ್ಟು ಸಂತಸಗಳು ಈ ವರ್ಷದಲ್ಲಿ ನಡೆದಿವೆ. ಅವುಗಳ ಒಂದು ಇಣುಕು ನೋಟ ಇಲ್ಲಿದೆ. 1) ದೋಮ್ಮರಾಜು ಗುಕೇಶ್ ಚೆಸ್ಸಿನಲ್ಲಿ

2024ರ ಟಾಪ್ 26 ಮೆಗಾ ಸುದ್ದಿಗಳು Read More »

ಜ.4 : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶ ಸಂಭ್ರಮ | ಟ್ರಸ್ಟ್ ನ ನೂತನ ಸಭಾ ಭವನ ಉದ್ಘಾಟನೆ | ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ

ಪುತ್ತೂರು : ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು , ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಸಹ ಸಂಸ್ಥೆಗಳ ಸಹಯೋಗದೊಂದಿಗೆ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕಲಿಗ ಸ್ವ- ಸಹಾಯ ಟ್ರಸ್ಟ್ ನ ಸಭಾಭವನ ಉದ್ಘಾಟನೆ ಹಾಗೂ ದಶಸಂಭ್ರಮ ಜ.4 ರಂದು ಒಕ್ಕಲಿಗ ಗೌಡ ಸಮುದಾಯ ಭವನ ಒಕ್ಕಲಿಗನಗರ ತೆಂಕಿಲದಲ್ಲಿ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್‍ ಹೇಳಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ  ಆದಿಚುಂಚನಗಿರಿ

ಜ.4 : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶ ಸಂಭ್ರಮ | ಟ್ರಸ್ಟ್ ನ ನೂತನ ಸಭಾ ಭವನ ಉದ್ಘಾಟನೆ | ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ | ಮುಂದಿನ ಕಲ್ಯಾಣೋತ್ಸವದೊಳಗೆ ಬೃಹತ್ ಗೋ ಶಾಲೆ ನಿರ್ಮಾಣಕ್ಕೆ ಸಂಕಲ್ಪ – ಪೇಜಾವರ ಶ್ರೀ

ಪುತ್ತೂರು1: ಶೂರರಾಜ ಪೌತ್ರನಾದ ವಸುದೇವನ ಪುತ್ರ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭಾನಾದ, ಭೂವೈಕುಂಠಾಧಿಪತಿ ಶ್ರೀನಿವಾಸ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ತೋತ್ಪನ್ನಳಾದ ಪದ್ಮಾವತಿಯ ಕಲ್ಯಾಣೋತ್ಸವ ಡಿ.29ರಂದು ಸಂಜೆ ಗೊಧೋಳಿ ಲಗ್ನದಲ್ಲಿ ವಿಜೃಂಭಣೆಯಿಂದ ಮತ್ತು ಭಕ್ತಿ ಪ್ರಧಾನವಾಗಿ ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಭವ್ಯವಾದ ವೇದಿಕೆಯಲ್ಲಿ ನಿರ್ಮಿಸಿದ ತಿರುಪತಿ ಮಾದರಿಯ ಮಂಟಪದಲ್ಲಿ ನಡೆಯಿತು. ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ಶುಭಗಳಿಗೆಯಲ್ಲಿ ಸಹಸ್ರಾರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ | ಮುಂದಿನ ಕಲ್ಯಾಣೋತ್ಸವದೊಳಗೆ ಬೃಹತ್ ಗೋ ಶಾಲೆ ನಿರ್ಮಾಣಕ್ಕೆ ಸಂಕಲ್ಪ – ಪೇಜಾವರ ಶ್ರೀ Read More »

ಪುತ್ತೂರು ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದ ಪೈಪ್‍ ಲೈನ್‍ |ಪೈಪ್‍ಗೆ ಕಾಲು ಸಿಲುಕಿ ಮಹಿಳೆ ಒದ್ದಾಟ

ಪುತ್ತೂರು : ಪುತ್ತೂರಿನ ಮುಖ್ಯರಸ್ತೆ ಬದಿಯಲ್ಲೇ ಇದ್ದಂತಹ ಪೈಪ್ ಒಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೈಪ್‍ ನಿಂದ ಕಾಲು ತೆಗೆಯಲು ಒದ್ದಾಡಿದ್ದ ಘಟನೆ ಸೋಮವಾರ ಸಂಜೆ ನಡೆಯಿತು. ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆಯಾಗಿದೆ. ಮುಖ್ಯ ರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿದ್ದು, ಅಲ್ಲಿದ್ದ ಪೈಪ್ ಲೈನ್ ಕಳೆವು ದಿನಗಳಿಂದ ತುಂಡಾಗಿ ಅಲ್ಲೆ ಬಿದ್ದಿತ್ತು ಎನ್ನಲಾಗಿತ್ತು. ತುಂಡಾಗಿ ಬಿದ್ದಿರುವ ಪೈಪ್‍ ಲೈನ್‍ಗಳನ್ನು ಗಮನಿಸದ

ಪುತ್ತೂರು ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದ ಪೈಪ್‍ ಲೈನ್‍ |ಪೈಪ್‍ಗೆ ಕಾಲು ಸಿಲುಕಿ ಮಹಿಳೆ ಒದ್ದಾಟ Read More »

ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿನಿಂದ ಪೊದೆಗೆ ಬಿದ್ದ ವಿದ್ಯಾರ್ಥಿ

ಮೂಡುಬಿದ್ರೆ : ಬಸ್ಸು ಚಲಿಸುತ್ತಿದ್ದಂತೆ ಕಾಲೇಜು ವಿದಯಾರ್ಥಿಯೋರ್ವ ನಿಯಂತ್ರಣ ತಪ್ಪಿ ಬಲ್ಲೆಗೆ ಬಿದ್ದ ಘಟನೆ ಡಿ.30 ರಂದು ಮೂಡುಬಿದ್ರೆ ಸಮೀಪ ತೊಡಾರಿನ ಖಾಸಗಿ ಕಾಲೇಜು ಬಳಿ ನಡೆದಿದೆ. ಚಲಿಸುತ್ತಿದ್ದ ಖಾಸಗಿ ಬಸ್‌ನ ಬಾಗಿಲಲ್ಲಿ ನಿಂತಿದ್ದ ವೇಳೆ ಕಾಲೇಜು  ನಿಯಂತ್ರಣ ತಪ್ಪಿ ಬಸ್ಸಿಂದ ಬಲ್ಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ.  ಅದೃಷ್ಟವಶಾತ್ ಬಸ್ಸಿಂದ ಬಿದ್ದ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರ್ಕಾಳ-ಮೂಡುಬಿದರೆ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ತೋಡಾರಿನ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಬರುತ್ತಿರುವ ವೇಳೆ ತನ್ನ ನಿಲ್ದಾಣ ಬರುವ ಮನ್ನವೇ ಇಳಿಯುವ

ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿನಿಂದ ಪೊದೆಗೆ ಬಿದ್ದ ವಿದ್ಯಾರ್ಥಿ Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಪಂಜ: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡ ಘಟನೆ ಡಿ.29 ರಂದು ರಾತ್ರಿ ಪಂಜದ ಕೃಷ್ಣನಗರದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿ ಜೀವನ್ ಎಂದು ಗುರುತಿಸಲಾಗಿದೆ. ಪಂಜ ಕಡೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಜೀವನ್ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾಣಿಸಲಾಗಿದೆ. ಕಾರಿನಲ್ಲಿದ್ದ ದೇವಣ್ಣ ಎಂಬವರು ಅಪಾಯದಿಂದ ಪಾರಾಗಿದ್ದಾರೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ Read More »

ಬಿಜೆಪಿಯವರು ಎಷ್ಟೇ ಚೀರಾಡಿದರು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್‌ ಖರ್ಗೆ

ಗುತ್ತಿಗೆದಾರ ಸಚಿನ್‌ ಪಂಚಾಳ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಇಲ್ಲ ಎಂದು ವಾದ ಬೆಂಗಳೂರು: ಬಿಜೆಪಿಯವರು ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಚಿನ್‌ ಪಂಚಾಳ್‌ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದೆ. ಸಿಎಂ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿ ಮನವಿ ಮಾಡಿದ್ದೆ. ಇದರಂತೆ ಈಗ ಗೃಹ ಸಚಿವರು ಸಿಐಡಿ ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿಯವರಿಗೆ

ಬಿಜೆಪಿಯವರು ಎಷ್ಟೇ ಚೀರಾಡಿದರು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್‌ ಖರ್ಗೆ Read More »

ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು

ಸೋತು ಸುಣ್ಣವಾದ ಟೀಂ ಇಂಡಿಯಾ ಹೋರಾಟ 155 ರನ್‌ಗಳಿಗೆ ಮುಕ್ತಾಯ ಮೆಲ್ಬೋರ್ನ್​: ಮೆಲ್ಬೋರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತವನ್ನು ಬಗ್ಗುಬಡಿದು ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಯಾಮ್​ ಕೊನ್​ಸ್ಟಾಸ್ (60), ಉಸ್ಮಾನ್ ಖ್ವಾಜಾ (57), ಮಾರ್ನಸ್

ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು Read More »

error: Content is protected !!
Scroll to Top