ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವಕ್ಕೆ  ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ. ಅನುರಾಧಾ ಕುರುಂಜಿ ಆಯ್ಕೆ | ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ

ಸುಳ್ಯ : ಅಂತಾರಾಷ್ಟ್ರೀಯ ಖ್ಯಾತಿಯ ಜಗದ್ವಿಖ್ಯಾತ ಹಂಪಿ ಉತ್ಸವದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರು, ವ್ಯಕ್ತಿತ್ವವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ. ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರು ಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಆರಂಭಿಸಿರುವ ಹಂಪಿ ಉತ್ಸವಕ್ಕೆ ದೇಶ ವಿದೇಶಗಳಿಂದ ಸಾಗರೋಪಾದಿಯಲ್ಲಿ  ಜನರು ಆಗಮಿಸಿ ಸಾಕ್ಷಿಯಾಗುತ್ತಿದ್ದು, 2025ರ  ಹಂಪಿ ಉತ್ಸವವು ಫೆಬ್ರುವರಿ  28 ರಿಂದ ಮಾರ್ಚ್  2 […]

ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವಕ್ಕೆ  ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ. ಅನುರಾಧಾ ಕುರುಂಜಿ ಆಯ್ಕೆ | ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ Read More »

ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಉಪ್ಪಿನಂಗಡಿ: ಯುವಕನೋರ್ವ ತನ್ನ ಮನೆಯ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆದಿದೆ. ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ ಆತ್ಮಹತ್ಯೆಗೈದ ಯುವಕ ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿತ್ತು ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ

ಕೆರೆಗೆ ಹಾರಿ ಯುವಕ ಆತ್ಮಹತ್ಯೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಜನಮಂಗಲ ಕಾರ್ಯಕ್ರಮದಲ್ಲಿ ಕೊಮೋಡಾ ವೀಲ್ ಚಯರ್ ವಿತರಣೆ

ಬಂಟ್ವಾಳ  ತಾಲೂಕು, ಕೆದಿಲ ಗ್ರಾಮದ  ಕರಿಮಜಲು  ಪ್ರೇಮ W/O  ರಾಮಮೂಲ್ಯ ಮತ್ತು  ಕಂಪ  ಲೋಕಯ ಗೌಡ ಇವರು ಅಸೌಖ್ಯಂದಿದ್ದು, ಇವರಿಗೆ    ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯ  ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ ಫೆ.24   ಸೋಮವಾರದಂದು ಕೊಮೋಡೋ  ವೀಲ್ ಚಯರನ್ನು ನೀಡಲಾಯಿತು. ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ಕೊಮೋಡೋ  ವೀಲ್ ಚಯರನ್ನು ವಿತರಿಸಿದರು.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದಾ ಮತ್ತು ಕೆದಿಲ  “B” ಒಕ್ಕೂಟದ ಸೇವಾಪ್ರತಿನಿಧಿ

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಜನಮಂಗಲ ಕಾರ್ಯಕ್ರಮದಲ್ಲಿ ಕೊಮೋಡಾ ವೀಲ್ ಚಯರ್ ವಿತರಣೆ Read More »

ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಪುತ್ತೂರು: ತೋಟವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುತ್ತೂರಿನ ಪಾಂಗ್ಲಾಯಿ ಎಂಬಲ್ಲಿ ನಡೆದಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹದ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ Read More »

ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ

ಸತಾಯಿಸುತ್ತಿದ್ದ ಮಾಲೀಕನಿಂದ ಪಾರಾಗಲು ತಪ್ಪಿಸಿಕೊಂಡು ಬಂದ ತಮಿಳುನಾಡಿನ ಮೀನುಗಾರರು 4000 ಕಿ.ಮೀ. ಮೀನುಗಾರಿಕೆ ದೋಣಿಯಲ್ಲೆ ಪ್ರಯಾಣ ಉಡುಪಿ : ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಮೀನುಗಾರಿಕೆ ದೋಣಿಯೊಂದು ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮಾನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮಾನ್ ಹಾರ್ಬರ್​ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ. ಬೋಟ್​​​ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ.ಓಮಾನ್ ಮೂಲದ ಬೋಟ್​ನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ

ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ “ರಜತ ಪಥ” | ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ, ಕುಣಿತ ಭಜನೆ | ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ

ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ ಉತ್ಸವ ‘ರಜತ ಪಥ’ ಫೆ.26 ಬುಧವಾರ ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಬೆಳಿಗ್ಗೆ 6.30 ರಿಂದ ಸಂಜೆ 6.30 ರ ತನಕ ಅರ್ಧ ಏಕಾಹ ಭಜನೆ, ಬೆಳಿಗ್ಗೆ 7.30 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಏಕಾದಶ ರುದ್ರಾಭಿಷೇಕ, ಶ್ರೀ ಪಂಚಲಿಂಗೇಶ್ವರ ದೇವರಿಗೆ ರಜತ ಕವಚ ಸಮರ್ಪಣೆ, ಶ್ರೀ ರುದ್ರಯಾಗದ ಪ್ರಾರಂಭ, ಮಧ್ಯಾಹ್ನ

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ “ರಜತ ಪಥ” | ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ, ಕುಣಿತ ಭಜನೆ | ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ Read More »

ಪುತ್ತೂರು ಸಂಚಾರಿ ಪೋಲಿಸ್ ಠಾಣೆಗೆ ಜಿ.ಎಲ್ ಆಚಾರ್ಯ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ | ಕೃತಜ್ಞತಾ ಪತ್ರ ನೀಡಿ ಅಭಿನಂದನೆ

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ಸಂಚಾರ ಪೊಲೀಸ್ ಠಾಣೆಗೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದೆ.   ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಗೆ ಸಂಚಾರ ಪೊಲೀಸ್ ಠಾಣೆಯಿಂದ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಲಾಯಿತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ಮತ್ತು ಹೆಡ್‌ಕಾನ್‌ ಸ್ಟೇಬಲ್ ದಿನೇಶ್ ಅವರು ಜಿ.ಎಲ್.ಆಚಾರ್ಯ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಆಚಾರ್ಯ ಅವರಿಗೆ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಿದರು. ಈ ಸಂದರ್ಭ ಎಸ್.ಬಿ ಉದಯರವಿ

ಪುತ್ತೂರು ಸಂಚಾರಿ ಪೋಲಿಸ್ ಠಾಣೆಗೆ ಜಿ.ಎಲ್ ಆಚಾರ್ಯ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ | ಕೃತಜ್ಞತಾ ಪತ್ರ ನೀಡಿ ಅಭಿನಂದನೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್  ವಿತರಣೆ

ಕೆದಿಲ : ಬಂಟ್ವಾಳ  ತಾಲೂಕು, ಕೆದಿಲ ಗ್ರಾಮದ    ಲಕ್ಷ್ಮಿ  ವಿಶ್ವನಾಥ ಮಡಿವಾಳ  ಕುಕ್ಕಾಜೆ ಮತ್ತು  ಕುಸುಮಾವತಿ  ಚೆನ್ನಪ್ಪ ಗೌಡ  ಮುದ್ರಾಜೆ   ಇವರು ಅಸೌಖ್ಯಂದಿದ್ದು, ಇವರಿಗೆ   ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್ ಅನ್ನು  ಫೆ.24 ಸೋಮವಾರದಂದು ವಿತರಿಸಲಾಯಿತು.  ವಿಟ್ಲ ತಾಲೂಕು ಕೃಷಿ ಅಧಿಕಾರಿ  ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ಕ್ರಿಟಿಕಲ್ ಇನ್ಲೆಸ್ ಫಂಡ್ ವಿತರಿಸಿದರು.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದಾ, ಕೆದಿಲ  “B” ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ,

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್  ವಿತರಣೆ Read More »

ಸೈಬರ್‌ ವಂಚಕನಿಂದಲೇ ವಿದ್ಯಾರ್ಥಿಗಳಿಗೆ ಸೈಬರ್‌ ಜಾಗೃತಿ ಪಾಠ ಮಾಡಿಸಿದ ಮಂಗಳೂರು ಪೊಲೀಸರು!

ಆರೋಪಿಗಳ ಖರ್ಚಿನಲ್ಲೇ ಗುಜರಾತ್‌ಗೆ ಹೋಗಿ ಮೋಜುಮಸ್ತಿ ಮಾಡಿದ ಫೋಟೊ ಬಹಿರಂಗ ಮಂಗಳೂರು : ಅಮೆಜಾನ್‌ ಆನ್‌ಲೈನ್‌ ಕಂಪನಿಗೆ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಇಬ್ಬರು ಸೈಬರ್‌ ವಂಚಕರಿಂದಲೇ ಮಂಗಳೂರು ಪೊಲೀಸರು ಕಾನೂನು ವಿದ್ಯಾರ್ಥಿಗಳಿಗೆ ಸೈಬರ್‌ ವಂಚನೆ ಜಾಗೃತಿಯ ಪಾಠ ಮಾಡಿಸಿ ಯಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇಷ್ಟು ಮಾತ್ರವಲ್ಲದೆ ಈ ಆರೋಪಿಗಳ ಖರ್ಚಿನಲ್ಲಿ ಪೊಲೀಸರು ತಿರುಗಾಡಿ ಮೋಜು ಮಸ್ತಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಕೂಡ ಬಹಿರಂಗವಾಗಿ ಪೊಲೀಸ್‌ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಮಂಗಳೂರಿನ ಉರ್ವ ಠಾಣೆಯ ಪೊಲೀಸರ ವಿರುದ್ಧ ಇಂಥದ್ದೊಂದು ಗಂಭೀರ

ಸೈಬರ್‌ ವಂಚಕನಿಂದಲೇ ವಿದ್ಯಾರ್ಥಿಗಳಿಗೆ ಸೈಬರ್‌ ಜಾಗೃತಿ ಪಾಠ ಮಾಡಿಸಿದ ಮಂಗಳೂರು ಪೊಲೀಸರು! Read More »

ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ : ಅಶೋಕ್ ಕುಮಾರ್ ರೈ | ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳ ಸಭೆ

ಪುತ್ತೂರು: ಈ ಬಾರಿ ಗ್ರಾಪಂಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸರ್ಕಾರ ರದ್ದು ಮಾಡಿದೆ. ಈ ಹಿಂದೆ ತೆಗೆಯಲಾದ ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ತಾಲೂಕಿನ ಒಟ್ಟು 56 ಗ್ರಾಪಂಚಾಯತ್ ಗಳಿಗೆ  ಕುಡಿಯುವ ನೀಡಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಅವರು ಸೋಮವಾರ ಸಂಜೆ ಪುತ್ತೂರು ತಾಪಂ ಸಭಾಂಗಣದಲ್ಲಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ವಿಧಾನಸಭಾ

ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ : ಅಶೋಕ್ ಕುಮಾರ್ ರೈ | ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳ ಸಭೆ Read More »

error: Content is protected !!
Scroll to Top