ಬಸ್‌ನಲ್ಲೇ ನೇಣು ಬಿಗಿದುಕೊಂಡು ಮೆಕ್ಯಾನಿಕ್‌ ಆತ್ಮಹತ್ಯೆ

ಬೆಂಗಳೂರು: ಕೆಎಸ್​​ಆರ್​ಟಿಸಿ ಬೆಳಗಾವಿ ಡಿಪೋ 1ರ ಮೆಕಾನಿಕ್​ ಬಸ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಮೆಕಾನಿಕ್ ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಕೇಶವ ಕಮಡೊಳಿ ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿಯಾಗಿದ್ದು, ಕೆಎಸ್​​ಆರ್​ಟಿಸಿ ಬಸ್​ ವಾಶಿಂಗ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೇಶವ್ ಅವರಿಗೆ ಬೆನ್ನು ನೋವಿದ್ದರೂ ಅಧಿಕಾರಿಗಳು ಪಂಚರ್​​ ಕೆಲಸಕ್ಕೆ ಬದಲಾಯಿದ್ದರು ಎನ್ನಲಾಗಿದೆ.ಕೇಶವ ಅವರ ಡ್ಯೂಟಿ ಬದಲಿಸದಂತೆ ಡಿಪೋ ಮ್ಯಾನೇಜರ್​​ ಲಿಂಗರಾಜ ಲಾಠಿ ಅವರು ಸಹಾಯಕ ಕಾರ್ಯ ಅಧೀಕ್ಷಕ ಅನಿಲ್​​​ ಬಾಂದೇಕರ್​ ಅವರಿಗೆ […]

ಬಸ್‌ನಲ್ಲೇ ನೇಣು ಬಿಗಿದುಕೊಂಡು ಮೆಕ್ಯಾನಿಕ್‌ ಆತ್ಮಹತ್ಯೆ Read More »

ಮೊಗಪೆ ಮನೆಯಲ್ಲಿ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಕೊರಗಜ್ಜ ದೈವದ ನೇಮೋತ್ಸವ

ಮೊಗಪೆ ಮನೆಯಲ್ಲಿ ಮಾ. 6 ಗುರುವಾರ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಆರ್ ಪಿ ಕ್ರಿಯೆಷನ್ ಅರ್ಪಿಸುವ ಕೇಪುಲ ಪ್ರಿಯೆ ತುಳು ಭಕ್ತಿ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಕಲ್ಲುರ್ಟಿ ಮತ್ತು ಶ್ರೀ ಕೊರಗಜ್ಜ ದೈವದ ನೇಮೋತ್ಸವಕ್ಕೆ ಭಕ್ತಾದಿಗಳು ಆಗಮಿಸಿ, ದೈವದೇವರ ಪ್ರಸಾದವನ್ನು ಸ್ವೀಕರಿಸಿದರು.

ಮೊಗಪೆ ಮನೆಯಲ್ಲಿ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಕೊರಗಜ್ಜ ದೈವದ ನೇಮೋತ್ಸವ Read More »

ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ : ನಳಿನ್ ಕುಮಾರ್ ಕಟೀಲ್‍

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದಿನಂತೆ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಮಂಡಿಸಿದ್ದಾರೆ. ರಾಜ್ಯದ  ಎಲ್ಲ  ಜನರ ಹಿತ ಕಾಯಬೇಕಾದ ಮುಖ್ಯಮಂತ್ರಿ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟ್ಯಾಂತರ ರೂ. ಘೋಷಿಸಿದ್ದಾರೆ ಎಂದು ಮಾಜಿ ಸಂಸದ ನಳಿನ್‍ ಕುಮಾರ್ ಕಟೀಲ್‍ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಸಾಲದ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು ಆತಂಕಕಾರಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿೃಸಲಾಗಿದೆ. ಅಡಕೆ ಬೆಳೆಗಾರರ ಸಮಸ್ಯೆಗೆ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ

ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ : ನಳಿನ್ ಕುಮಾರ್ ಕಟೀಲ್‍ Read More »

ಕರ್ನಾಟಕ ರಾಜ್ಯ ಬಜೆಟ್ – ಗ್ರಾಮ ಪಂಚಾಯತ್ ಸದಸ್ಯರಿಗೆ ಅನ್ಯಾಯ, ಕನ್ನಡಿಗರಿಗೆ ನಿರಾಶೆ

ಬೆಂಗಳೂರು: ಕರ್ನಾಟಕ ಸರ್ಕಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ಗ್ರಾಮೀಣ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗೆ ತೀವ್ರ ನಿರಾಸೆಯನ್ನುಂಟುಮಾಡಿದೆ. ಗ್ರಾಮ ಪಂಚಾಯತ್ ಸದಸ್ಯರ ಭತ್ಯೆ, ಪ್ರಯಾಣ ಭತ್ಯೆ , ದೂರವಾಣಿ ಭತ್ಯೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಯೋಜನೆಗಳೇ ಇಲ್ಲ. ನಕ್ಸಲ್ ಪ್ರಭಾವಿತ ಗ್ರಾಮಗಳಿಗೆ ಸಹಾಯ ಪ್ಯಾಕೇಜ್ ನೀಡುವ ಬದಲು ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ. ಈ ಬಜೆಟ್ ಕನ್ನಡಿಗರ ಅಭಿವೃದ್ಧಿಗೆ ಏನೂ ಕೊಟ್ಟಿಲ್ಲ. ಇದು

ಕರ್ನಾಟಕ ರಾಜ್ಯ ಬಜೆಟ್ – ಗ್ರಾಮ ಪಂಚಾಯತ್ ಸದಸ್ಯರಿಗೆ ಅನ್ಯಾಯ, ಕನ್ನಡಿಗರಿಗೆ ನಿರಾಶೆ Read More »

ಪುತ್ತೂರು ಸರಕಾರಿ ಮೆಡಿಕಲ್‍ ಕಾಲೇಜು ಕುರಿತು ಬಜೆಟ್‍ ಮಂಡಣೆಯಲ್ಲಿ ಸ್ಪಷ್ಟತೆಯಿಲ್ಲ : ಸಂಜೀವ ಮಠಂದೂರು 

ಪುತ್ತೂರು ಮಾರ್ಚ್ 07: ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದರೆ ಕಾಲೇಜು ಸ್ಥಾಪನೆ ಬಗ್ಗೆ ಸ್ಪಷ್ಟತೆ  ಇಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ಸರಕಾರಿ ಅಸ್ಪತ್ರೆಗೆ ಮೊದಲು ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್ ಗೆ ಉನ್ನತೀಕರಿಸಬೇಕು, ಆದರೆ ಬಜೆಟ್ ನಲ್ಲಿ ಈ ಪ್ರಸ್ತಾಪವನ್ನೇ ಮಾಡಿಲ್ಲ, ಸರಕಾರಿ ಮೆಡಿಕಲ್ ಕಾಲೇಜು ಉಲ್ಲೇಖ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ತೃಪ್ತಿಪಡಿಸಲು ಮಾಡಿದ

ಪುತ್ತೂರು ಸರಕಾರಿ ಮೆಡಿಕಲ್‍ ಕಾಲೇಜು ಕುರಿತು ಬಜೆಟ್‍ ಮಂಡಣೆಯಲ್ಲಿ ಸ್ಪಷ್ಟತೆಯಿಲ್ಲ : ಸಂಜೀವ ಮಠಂದೂರು  Read More »

ವಿಜ್ಞಾನ ದಿನಾಚರಣೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸಮಗ್ರ ಪ್ರಶಸ್ತಿ

ಪುತ್ತೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಲುವಾಗಿ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿಜ್ಞಾನ ಸಂಬಂಧಿತ ವಿಚಾರಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 12 ವಿದ್ಯಾರ್ಥಿಗಳ ತಂಡ ಭಾಗವಹಿಸಿ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವ ಸಲುವಾಗಿ ಆಯೋಜಿಸಲಾಗಿದ್ದ ಈ  ಸ್ಪರ್ಧೆಗಳ ಪೇಪರ್ ಪ್ರೆಸೆಂಟೇಷನ್ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ನಿಲಿಷ್ಕಾ.ಕೆ.,  8ನೇ ತರಗತಿ ವಿದ್ಯಾರ್ಥಿನಿ ಅವನಿ ತಂಡ

ವಿಜ್ಞಾನ ದಿನಾಚರಣೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸಮಗ್ರ ಪ್ರಶಸ್ತಿ Read More »

ಎರಡು ಬೈಕ್ ಗಳ ನಡುವೆ ಡಿಕ್ಕಿ | ನಾಲ್ವರ ದುರ್ಮರಣ

ಕಲಬುರಗಿ : ಎರಡು ಬೈಕ್‌ಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದು  ನಾಲ್ವರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ ಗ್ರಾಮದ ಬಳಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಸಿದ್ದು, ಸುರೇಶ್ ರೆಡ್ಡಿ, ಮಲ್ಲು ಪೂಜಾರಿ ಮತ್ತು ಪ್ರಕಾಶ್ ಪೂಜಾರಿ ಎನ್ನಲಾಗಿದೆ. ಸೇಡಂನಿಂದ ಆಬಾಳ್ ಕಡೆ ಹೊರಟಿದ್ದ ಒಂದು ಬೈಕ್​​ಗೆ ಎದುರಿಗೆ ಬಂದ ಮತ್ತೊಂದು ಬೈಕ್​​ ಡಿಕ್ಕಿ ಹೊಡೆದಿವೆ. ಘಟನಾ ಸ್ಥಳಕ್ಕೆ ಧಾವಿಸಿದ ಸೇಡಂ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡು ಬೈಕ್ ಗಳ ನಡುವೆ ಡಿಕ್ಕಿ | ನಾಲ್ವರ ದುರ್ಮರಣ Read More »

ಉಪ್ಪಿನಂಗಡಿ ವಳಾಲಿನಲ್ಲಿ ಅಕ್ರಮ ಮರಳು ಸಾಗಾಟ |  ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ ಮರಳು ಸಾಗುಸುತ್ತಿರುವ ಖದಿಮರು

ಉಪ್ಪಿನಂಗಡಿ : ಉಪ್ಪಿನಂಗಡಿಯ ವಳಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ ನದಿಯಿಂದ ಮರಳು ತೆಗೆಯುತ್ತಿದ್ದಾರೆ  ಎಂದು ತಿಳಿದು ಬಂದಿದೆ. ಹಿಟಾಚಿಯ ಮುಖೇನ ನದಿಯಿಂದ ಮರಳು ತೆಗೆಯುತ್ತಿದ್ದು, ಅಲ್ಲಿಯ ಸಾರ್ವಜನಿಕರು ಪ್ರಶ್ನೆಸಿದಾಗ ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಮರಳು ತೆಗೆಯುತ್ತಿರುವುದಾಗಿ ತಿಳಿಸಿದ್ದಾರೆ.   ಲೋಕೋಪಯೋಗಿ ಇಲಾಖೆ ಅಂತಹ ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಹಾಗೂ ನಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದಿದೆ. ಪ್ರತಿನಿತ್ಯ ಇಲ್ಲಿ ಲೋಡುಗಟ್ಟಲೆ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದ್ದು ಸರ್ಕಾರದ ಬೊಕ್ಕನಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.   ಪೊಲೀಸ್

ಉಪ್ಪಿನಂಗಡಿ ವಳಾಲಿನಲ್ಲಿ ಅಕ್ರಮ ಮರಳು ಸಾಗಾಟ |  ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ ಮರಳು ಸಾಗುಸುತ್ತಿರುವ ಖದಿಮರು Read More »

ಮಾ. 9 :  ಗ್ರಾಮ ದೈವ  ಶ್ರೀ ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ 

ಕುದ್ಮಾರು : ಗ್ರಾಮ ದೈವ  ಶ್ರೀ  ಶಿರಾಡಿ  ರಾಜನ್ ದೈವ ಹಾಗೂ ಸಪರಿವಾರ  ದೈವಗಳ  ನೇಮೋತ್ಸವವು  ಮಾ.  9 ಭಾನುವಾರದಂದು  ಕುದ್ಮಾರು  ಗ್ರಾಮದ  ಅನ್ಯಾಡಿಯಲ್ಲಿ  ಕಟ್ಟತ್ತಾರು ಕಟ್ಟೆ ಯಲ್ಲಿ ನಡೆಯಲಿದೆ. ನೇಮೋತ್ಸವದಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 7 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು. ರಾತ್ರಿ 8:30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು. ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ

ಮಾ. 9 :  ಗ್ರಾಮ ದೈವ  ಶ್ರೀ ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ  Read More »

ಯಮುನಾ ರಾಮಣ್ಣ ಗೌಡ ಹೇಮಳ ಅವರಿಗೆ ಶ್ರದ್ಧಾಂಜಲಿ

ಹೇಮಳ : ಇತ್ತೀಚೆಗೆ ನಿಧನರಾದ ಯಮುನಾ ರಾಮಣ್ಣ ಗೌಡ ಹೇಮಳ ಅವರ ವೈಕುಂಠ ಸಮಾರಾಧನೆ ಶುಕ್ರವಾರ (ಇಂದು) ಹೇಮಳದಲ್ಲಿರುವ ಮೃತರ ಮನೆಯಲ್ಲಿ ನಡೆಯಿತು. ಯಮುನಾ ರಾಮಣ್ಣ ಗೌಡ ಅವರು ಫೆ.19 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು, ಮಾ.1 ರಂದು ಅವರ ದೇಹಶುದ್ಧಿ ಕಾರ್ಯಕ್ರಮ ನಡೆದಿತ್ತು. ವೈಕುಂಠ ಸಮಾರಾಧಾನೆಗೆ ಬಾಲಕೃಷ್ಣ ಕೆ ಹೇಮಳ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಬಂಧುಗಳು, ಹಿತೈಷಿಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.  

ಯಮುನಾ ರಾಮಣ್ಣ ಗೌಡ ಹೇಮಳ ಅವರಿಗೆ ಶ್ರದ್ಧಾಂಜಲಿ Read More »

error: Content is protected !!
Scroll to Top