ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ ನಡೆದಿದೆ . ಮೃತಪಟ್ಟ ಮಹಿಳೆಯನ್ನು ರೇವತಿ (51) ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣು Read More »

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ತಗುಲಿದ ಬೆಂಕಿ

ಕಾಸರಗೋಡು: ಮನೆಯೊಂದಕ್ಕೆ ಬೆಂಕಿ ತಗುಲಿದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳದ ಶಾಫಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ. ಬೆಂಕಿ ತಗುಲಿದ ಹಿನ್ನಲೆ ಮನೆ ಅಪಾರ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಡುಗೆ ಕೋಣೆ ಸಂಪೂರ್ಣ ಅಗ್ನಿಗಾಹುತಿಯಾಗಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ತಗುಲಿದ ಬೆಂಕಿ Read More »

ಪ್ರಭು ಚರುಂಬುರಿ ಮಾಲಕ ನೇಣುಬಿಗಿದು ಆತ್ಮಹತ್ಯೆ

ಪುತ್ತೂರು: ಕೆಮ್ಮಾಯಿ ದಾರಂದಕುಕ್ಕು ನಿವಾಸಿ ಸುಧಾಕರ ಪ್ರಭು (42.ವ.) ಇಂದು ಬೆಳಿಗ್ಗೆ 11 ಗಂಟೆ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಯಲ್ಲಿ ಮುಂದಿನ ವಾರ ನೇಮೋತ್ಸವ ನಡೆಯಲಿದ್ದು, ಅದರ ಪೂರ್ವ ತಯಾರಿಯಲ್ಲಿ ದ್ದರು. ಆದರೆ ಇವತ್ತು  ಮನೆಯಲ್ಲಿ ಯಾರು ಇಲ್ಲಾದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುತ್ತೂರು ಆಸುಪಾಸಿನಲ್ಲಿ ಪ್ರಭು ಚರುಂಬುರಿ ಮೂಲಕ ಪುತ್ತೂರಿನ ಜನರ ಮನ ಗೆದ್ದಿದ್ದಾರೆ. ಇದೀಗ ಇವರ ಈ ದುಡುಕಿನ ನಿರ್ಧಾರ ಕುಟುಂಬದಲ್ಲಿ ಹಾಗೂ  ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಆತ್ಮಹತ್ಯೆಗೆ ಕಾರಣ

ಪ್ರಭು ಚರುಂಬುರಿ ಮಾಲಕ ನೇಣುಬಿಗಿದು ಆತ್ಮಹತ್ಯೆ Read More »

ವಿದ್ಯುತ್‍ ಕಂಬಕ್ಕೆ ಬೈಕ್‍ ಡಿಕ್ಕಿಯಾಗಿ ಯುವಕರಿಬ್ಬರ ದುರ್ಮರಣ

ಮಂಗಳೂರು:  ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರು ಸಾವನ್ನಪ್ಪಿರುವ ಘಟನೆ ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ನಡೆದಿದೆ. ಧಾರವಾಡದ ಕಲ್ಲೂರು ನಿವಾಸಿ ಆತ್ಮಾನಂದ ಅಂಬಿಗರ (27) ಹಾಗೂ ನವೀನ್ ಹೂಗಾರ (26) ಮೃತ ದುರ್ದೈವಿಗಳು. ಅತೀ ವೇಗವಾಗಿ ಬಂದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಆತ್ಮಾನಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನವೀನ್ ಹೂಗಾರ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‍ ಕಂಬಕ್ಕೆ ಬೈಕ್‍ ಡಿಕ್ಕಿಯಾಗಿ ಯುವಕರಿಬ್ಬರ ದುರ್ಮರಣ Read More »

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ

ಯೂನಿಟ್‌ಗೆ 36 ಪೈಸೆಯಂತೆ ಹೆಚ್ಚಿಸಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಬೆಂಗಳೂರು : ಈಗಾಗಲೇ ಎಲ್ಲ ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಸರಕಾರ ಮತ್ತೆ ವಿದ್ಯುತ್‌ ದರ ಏರಿಕೆಯ ಶಾಕ್‌ ಕೊಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹೆಚ್ಚಳದ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲು ಕೆಇಆರ್​ಸಿ ಮುಂದಾರುವುದರ ಪರಿಣಾಮವಾಗಿ

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ Read More »

ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಭೇಟಿ ನೀಡಿದ  ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು

ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಮರ್ದಾಳ ದಲ್ಲಿರುವ ಜೀವನ್ ಜ್ಯೋತಿ ವಿಶೇಷ  ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲಿಯ ವಿದ್ಯಾರ್ಥಿಗಳಿಗೆ ಮನರಂಜನ ಸ್ಪರ್ಧೆಗಳನ್ನು ನಡೆಸಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹುಮ್ಮಿಸಿ, ಲವಲವಿಕೆಯಿಂದ ಸ್ಪರ್ಧೆಗಳಲ್ಲಿ ತೊಡಗಿಕೊಂಡರು. ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಆರತಿ ಕೆ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರಾದ ಶೈಲಾ  ಅವರು ಸಂಸ್ಥೆಯ ಉದ್ದೇಶವನ್ನು  ಹಾಗೂ ವಿದ್ಯಾರ್ಥಿಗಳು ನ್ಯೂನತೆಯನ್ನು ಹೊಂದಿದ್ದರು

ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಭೇಟಿ ನೀಡಿದ  ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು Read More »

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿಯ ಸಮಾರೋಪ ಕಾಯ೯ಕ್ರಮ

ಪುತ್ತೂರು ತಾಲೂಕಿನ  ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ  ಟೈಲರಿಂಗ್ ಕ್ಲಾಸ್ ತರಬೇತಿ ನಡೆಸಿದ್ದು ಮಾ.13 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ಇವರು ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ವಿಠಲ್ ಪೂಜಾರಿ   ಮಾತನಾಡಿ, ತಾಯಿಯ ತ್ಯಾಗ, ಪ್ರೀತಿ, ಕರುಣೆ ಎಂದರೆ ಹೇಗೆ, ತಂದೆ ಮಕ್ಕಳಿಗೆ ತೋರಿಸುವ ಪ್ರೀತಿ ಮಮಕಾರ ಹೇಗೆ ಮಕ್ಕಳಿಗೆ ತಾವು ಕೇಳಿದಂತಹ ವಸ್ತುಗಳನ್ನು ನೇರವಾಗಿ ತೆಗೆದುಕೊಡುವ ಮೊದಲು ತಂದೆ-ತಾಯಿಯ

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿಯ ಸಮಾರೋಪ ಕಾಯ೯ಕ್ರಮ Read More »

ಮಂಡ್ಯದವರನ್ನು ಛತ್ರಿಗಳು ಎಂದು ಕರೆದು ಅವಮಾನಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಹೇಳಿಕೆಗೆ ಮಂಡ್ಯ ಜಿಲ್ಲೆಯಲ್ಲಿ ಭಾರಿ ಜನಾಕ್ರೋಶ ಮಂಡ್ಯ: ಮಂಡ್ಯದವರು ಛತ್ರಿಗಳು ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್‍ಗೆ ಅಧಿಕಾರ ಸಿಕ್ಕಿದೆ. 7ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು

ಮಂಡ್ಯದವರನ್ನು ಛತ್ರಿಗಳು ಎಂದು ಕರೆದು ಅವಮಾನಿಸಿದ ಡಿಕೆಶಿ Read More »

ಮೇರಠ್‌ನಲ್ಲೂ ನಡೆಯಿತು ಕಾರ್ಕಳದ ದೆಪ್ಪುತ್ತೆ ಮಾದರಿ ಕೊಲೆ ಕೃತ್ಯ

ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂಡು ಕತ್ತರಿಸಿ ಡ್ರಮ್‌ನಲ್ಲಿ ತುಂಬಿಸಿಟ್ಟ ಪತ್ನಿ ಕೋರ್ಟಿಗೆ ಕರೆತಂದಾಗ ವಕೀಲರು ಮಾಡಿದ್ದ ಮಾತ್ರ ಬೇರೆಯೇ ಕ್ರಮ ಲಖನೌ: ಕಾರ್ಕಳದ ಅಜೆಕಾರು ಸಮೀಪ ದೆಪ್ಪುತ್ತೆಯಲ್ಲಿ ಕಳೆದ ವರ್ಷ ಹೆಂಡತಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ವಿಷ ಹಾಕಿ ಕೊಂದ ಕೃತ್ಯದ ಮಾದರಿಯಲ್ಲೇ ಉತ್ತರ ಪ್ರದೇಶದ ಮೇರಠ್‌ನಲ್ಲಿ ಹೆಂಡತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು 15 ತುಂಡುಗಳಾಗಿ ಕತ್ತರಿಸಿ ಶವವನ್ನು ಕತ್ತರಿಸಿ ತುಂಡು ತುಂಡು ಮಾಡಿ ಪ್ಲಾಸ್ಟಿಕ್‌ ಡ್ರಮ್‌ಗೆ ಹಾಕಿ ಅದರ ಮೇಲೆ ಸಿಮೆಂಟ್‌

ಮೇರಠ್‌ನಲ್ಲೂ ನಡೆಯಿತು ಕಾರ್ಕಳದ ದೆಪ್ಪುತ್ತೆ ಮಾದರಿ ಕೊಲೆ ಕೃತ್ಯ Read More »

ಬಂಟ್ವಾಳ : ಜೂಜಾಟವಾಡುತ್ತಿದ್ದ ಇಬ್ಬರ ಬಂಧನ  

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲಿಸರು ಇಬ್ಬರನ್ನು ಬಂಧಿಸಿದ ಘಟನೆ ಬಿ.ಸಿ.ರೋಡು ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ. ಬಂಟ್ವಾಳ ಮೂಡ ಗ್ರಾಮದ ಕೈಕಂಬ ಎಂಬಲ್ಲಿ ಖಾಸಗಿ ಕಟ್ಟಡವೊಂದರ ಬಳಿಯಲ್ಲಿ ಆಟಕ್ಕೆ ತಯಾರು ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೋಲೀಸರು ಪ್ರಮುಖ ಆರೋಪಿಗಳಾದ ನಾವೂರ ನಿವಾಸಿ ಸುರೇಶ್ ಹಾಗೂ ಮಿತ್ತಬೈಲು ನಿವಾಸಿ ಭಾಸ್ಕರ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3.500 ರೂ ನಗದು ಹಾಗೂ ಆಟಕ್ಕೆ

ಬಂಟ್ವಾಳ : ಜೂಜಾಟವಾಡುತ್ತಿದ್ದ ಇಬ್ಬರ ಬಂಧನ   Read More »

error: Content is protected !!
Scroll to Top