ಮಂಗಳೂರು-ಮುಂಬಯಿ ಮಧ್ಯೆ ವಂದೇ ಭಾರತ್‌ ರೈಲು ಓಡಿಸಲು ಸಿದ್ಧತೆ

12 ತಾಸಿನಲ್ಲಿ ಮುಂಬಯಿಯಿಂದ ಮಂಗಳೂರು ತಲುಪಲಿರುವ ರೈಲು ಮಂಗಳೂರು: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರಿಗೆ ರೈಲ್ವೆ ಸಿಹಿಸುದ್ದಿ ನೀಡಿದೆ. ಭಾರಿ ಜನಮೆಚ್ಚುಗೆಗೆ ಪಾತ್ರವಾಗಿರುವ ವಂದೇ ಭಾರತ್ ರೈಲು ಸೇವೆ ಮಂಗಳೂರು-ಮುಂಬಯಿ ಮಧ್ಯೆ ಶುರುವಾಗಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಮುಂಬಯಿ-ಮಂಗಳೂರು ನಡುವಿನ ರೈಲು ಪ್ರಯಾಣಕ್ಕೆ 15-16 ತಾಸು ಹಿಡಿಯುತ್ತದೆ. ವಂದೇ ಭಾರತ್‌ ರೈಲು ಕೇವಲ 12 ತಾಸಿನಲ್ಲಿ ತಲುಪುತ್ತದೆ. ಹೀಗಾಗಿ ವಂದೇ ಭಾರತ್‌ನಿಂದ ಜನರ ಸಮಯ ಬಹಳಷ್ಟು ಉಳಿತಾಯವಾಗಲಿದೆ. ವಂದೇ ಭಾರತ್‌ ಪ್ರಯಾಣ ಆರಾಮದಾಯಕವೂ ಹೌದು. […]

ಮಂಗಳೂರು-ಮುಂಬಯಿ ಮಧ್ಯೆ ವಂದೇ ಭಾರತ್‌ ರೈಲು ಓಡಿಸಲು ಸಿದ್ಧತೆ Read More »

ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಕುಕ್ಕೆ ಆಡಳಿತ ಮಂಡಳಿಗೆ ಸೇರಿಸುವ ಯತ್ನ : ಜನರ ವಿರೋಧ

ರೌಡಿಶೀಟರ್‌ ಕಾಂಗ್ರೆಸ್‌ ಮುಖಂಡನ ಸೇರ್ಪಡೆಗೆ ಸಚಿವ ದಿನೇಶ್‌ ಗುಂಡೂರಾವ್‌ ಶಿಫಾರಸ್ಸು ಮಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ದೇವಸ್ಥಾನಗಳ ಪೈಕಿ ಆದಾಯದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಗೆ ಮಾಜಿ ರೌಡಿಶೀಟರ್‌ ಆಗಿರುವ ಕಾಂಗ್ರೆಸ್‌ ಮುಖಂಡರೊಬ್ಬರನ್ನು ಸೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಕಾಂಗ್ರೆಸ್‌ ಮುಖಂಡ ಹಿಂದೆ ನಕಲಿ ಚೆಕ್ ನೀಡಿ ಹಣ್ಣುಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚಿಸಿದ ಪ್ರಕರಣವಿದೆ. ಮಾಜಿ ರೌಡಿಶೀಟರ್ ಆಗಿರುವ

ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಕುಕ್ಕೆ ಆಡಳಿತ ಮಂಡಳಿಗೆ ಸೇರಿಸುವ ಯತ್ನ : ಜನರ ವಿರೋಧ Read More »

ಯಶಸ್ವಿಯಾಗಿ ಮುನ್ನಡೆಯುತ್ತಿರುವ “ಭಾವ ತೀರ ಯಾನ” ಸಿನೆಮಾ ಪ್ರದರ್ಶನ | ಇಂದು (ಮಾ.24) ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು: ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇಂದು ಮಾ.24ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಯಶಸ್ವಿಯಾಗಿ ಮುನ್ನಡೆಯುತ್ತಿರುವ “ಭಾವ ತೀರ ಯಾನ” ಸಿನೆಮಾ ಪ್ರದರ್ಶನ | ಇಂದು (ಮಾ.24) ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನ Read More »

ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡಬೇಕು : ಡಿ.ಬಿ.ಬಾಲಕೃಷ್ಣ

ಸುಬ್ರಹ್ಮಣ್ಯ: ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಹಾಗೂ ಇವರ ಪೂರ್ವಿಕರು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ ದೇವತಾ ಹಾಗೂ ಸೇವಾ ಕೈಂಕರ್ಯವನ್ನು ಪರಿಗಣಿಸಿ ಕೂಜುಗೋಡು ಕಟ್ಟೆಮನೆ ಕುಟುಬಂಸ್ಥರಿಗೆ ಹಾಗೂ ಮಲೆಕುಡಿಯ ಜನಾಂಗದವರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿಯಲ್ಲಿ ಸದಸ್ಯತ್ವ ಕಲ್ಪಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ. ಹಿಂದಿನಿಂದಲೂ ಯಾವುದೇ ಸರಕಾರವಿದ್ದಾಗಲೂ ಕೂಜುಗೋಡು ಕುಟುಂಬಸ್ಥರಿಗೆ ಸೇರಿದ ಒಬ್ಬರಿಗೆ ಹಾಗೂ ಮಲೆಕುಡಿಯ ಜನಾಂಗದ ಓರ್ವರಿಗೆ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವವನ್ನು ನೀಡುತ್ತಾ ಬಂದಿದೆ. ಅದರಂತೆ ಈ ಭಾರಿಯೂ

ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡಬೇಕು : ಡಿ.ಬಿ.ಬಾಲಕೃಷ್ಣ Read More »

ನಿಯಮ ರೂಪಿಸುವವರಿಗೆ ನಿಯಮದ ಪಾಠ ಮಾಡಿದ ಸಾಮಾನ್ಯ ಜನ…

ಪುತ್ತೂರು: ಸಾಮಾನ್ಯ ಜನ ಒಂದು ಮನೆ, ಮಳಿಗೆ ಕಟ್ಟಲು ಮುಂದಾದಲ್ಲಿ, ಸರಕಾರಕ್ಕೆ ಸಂಬಂಧಪಟ್ಟ  ಇಲಾಖೆಗಳು ಹಲವು ಕಾನೂನು, ನಿಯಮಗಳನ್ನು ಆತನ ಮುಂದೆ ಇಡುತ್ತೆ. ಆದರೆ ಸರಕಾರದ ಆಡಳಿತ ವ್ಯವಸ್ಥೆ ರಸ್ತೆಯೋ, ಚರಂಡಿಯೋ ಮಾಡುವ ಸಂದರ್ಭದಲ್ಲಿ ತಾನು ರೂಪಿಸಿದ ಕಾನೂನನ್ನೇ ಮುರಿಯೋದು ಸಾಮಾನ್ಯ. ಇಂಥಹುದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಡೆದಿದ್ದು, ನಾಗರಿಕರೇ ಇದೀಗ ನಗರಸಭೆ ಅಧಿಕಾರಿಗಳಿಗೆ ಕಾನೂನು ಪಾಲಿಸಿ ಕಾಮಗಾರಿ ನಡೆಸುವಂತೆ ಒತ್ತಡ ಹೇರಲಾರಂಭಿಸಿದ್ದಾರೆ. ಕಾಮಗಾರಿ ನಡೆದ ಬಳಿಕ ಕಳಪೆ, ಉಪಯೋಗಕ್ಕಿಲ್ಲದ್ದು ಎನ್ನುವ

ನಿಯಮ ರೂಪಿಸುವವರಿಗೆ ನಿಯಮದ ಪಾಠ ಮಾಡಿದ ಸಾಮಾನ್ಯ ಜನ… Read More »

ಅಕ್ಷಯ ಕಾಲೇಜು ಎನ್.ಎಸ್.ಎಸ್. ಸ್ವಯಂ ಸೇವಕಿ ವರ್ಷಿಣಿ.ಎಸ್  ಗೆ ರಾಜ್ಯ  ಮಟ್ಟದ ಯುವಜನೋತ್ಸವದಲ್ಲಿ ಪ್ರಶಸ್ತಿ

ಪುತ್ತೂರು: ಮೈಸೂರು ವಿಶ್ವವಿದ್ಯಾನಿಲಯ, ರಾಷ್ಟೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಮೈಸೂರು ಸರಸ್ವತಿಪುರಂ ಎನ್.ಎಸ್.ಎಸ್ ಭವನದಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕಿ ವರ್ಷಿಣಿ ಎಸ್. ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಿ ಬಹುಮಾನ ಪಡೆದುಕೊಂಡಿದ್ದಾರೆ. ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ, ಸಾಮೂಹಿಕ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ  ಹಾಗೂ ಕಿರುನಾಟಕ  ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಸಮಗ್ರ

ಅಕ್ಷಯ ಕಾಲೇಜು ಎನ್.ಎಸ್.ಎಸ್. ಸ್ವಯಂ ಸೇವಕಿ ವರ್ಷಿಣಿ.ಎಸ್  ಗೆ ರಾಜ್ಯ  ಮಟ್ಟದ ಯುವಜನೋತ್ಸವದಲ್ಲಿ ಪ್ರಶಸ್ತಿ Read More »

ಮುಸ್ಲಿಂ ಗುತ್ತಿಗೆ ಮೀಸಲಾತಿ : ಹೋರಾಟದಿಂದ ಹಿಂದೆ ಸರಿದ ಜೆಡಿಎಸ್‌

ಬಿಜೆಪಿ ಹೋರಾಟ ಬೆಂಬಲಿಸದಿರಲು ನಿರ್ಧಾರ ಬೆಂಗಳೂರು: ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಕಾಂಗ್ರೆಸ್‌ ಸರಕಾರದ ನಿರ್ಧಾರದ ವಿರುದ್ಧ ಬಿಜೆಪಿ ನಡೆಸುವ ಹೋರಾಟವನ್ನು ಬೆಂಬಲಿಸದಿರುವ ಅಚ್ಚರಿಯ ನಿರ್ಧಾರವನ್ನು ಮಿತ್ರಪಕ್ಷ ಜೆಡಿಎಸ್‌ ಕೈಗೊಂಡಿದೆ.ಶನಿವಾರ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಯಿತು. ಜೆಡಿಎಸ್ ನಾಯಕರು ತಮ್ಮ ಶಾಸಕರಿಗೆ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಹೋರಾಟದಲ್ಲಿ ತನ್ನ ಮೈತ್ರಿ ಪಾಲುದಾರ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಜೆಡಿಎಸ್ ತಿಳಿಸಿದೆ.ನಾವು ಪಕ್ಷದ ಸಿದ್ಧಾಂತ ಮತ್ತು ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.

ಮುಸ್ಲಿಂ ಗುತ್ತಿಗೆ ಮೀಸಲಾತಿ : ಹೋರಾಟದಿಂದ ಹಿಂದೆ ಸರಿದ ಜೆಡಿಎಸ್‌ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆ | ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯವಿರಬೇಕು. : ಬಿಷಪ್ ಪರಮ ಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಮಂಗಳೂರಿನ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೊಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟಿದ್ದು, ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು. ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಭಿಷಪ್ ಪರಮ ಪೂಜ್ಯ ಡಾ. ಪೀಟರ್ ಮಚಾದೋರವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರು  ವಿಮರ್ಶಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆಯ ಬಗ್ಗೆ ಒಲವು, ಸಮರ್ಪಕ ಸಂವಹನ ಹಾಗೂ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆ | ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯವಿರಬೇಕು. : ಬಿಷಪ್ ಪರಮ ಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ದಾನ Read More »

ಏ.11-12 : ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 21ನೇ ಪ್ರತಿಷ್ಠಾ ವಾರ್ಷಿಕೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 21 ನೇ ಪ್ರತಿಷ್ಠಾ ವಾರ್ಷಿಕೋತ್ಸವ ಏಪ್ರಿಲ್ 11 ಮತ್ತು 12 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮಾಜಿ ವ್ಯವಸ್ಥಾಪನ ಸದಸ್ಯ ಪದ್ಮನಾಭ ಅಳಿಕೆಮಜಲು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ. ಎಸ್ ವಿದ್ಯಾಧರ, ನಿಕಟಪೂರ್ವ ಅಧ್ಯಕ್ಷ ಡಿ. ಎಸ್ ಪ್ರದೀಪ್, ಗಿರೀಶ್, ದೇವಾಲಯದ ಅರ್ಚಕರಾದ ವಿಶ್ವಾಸ್ ಎಂ. ಭಟ್, ಉತ್ಸವ ಸಮಿತಿ ಅಧ್ಯಕ್ಷ ಕೆ. ಕೆ. ಸೀತಾರಾಮ,

ಏ.11-12 : ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 21ನೇ ಪ್ರತಿಷ್ಠಾ ವಾರ್ಷಿಕೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ : ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌

ಆತ್ಮಹತ್ಯೆ ಹಿಂದೆ ಪ್ರೇಯಸಿಯ ಕೈವಾಡವಿಲ್ಲ ಎಂದು ವರದಿ ಸಲ್ಲಿಸಿದ ಸಿಬಿಐ ಮುಂಬಯಿ: ಬಾಲಿವುಡ್‌ ಸೆಲೆಬ್ರಿಟಿಗಳ ಮ್ಯಾನೇಜರ್‌ ಆಗಿದ್ದ ಉಡುಪಿ ಮೂಲದ ದಿಶಾ ಸಾಲ್ಯಾನ್‌ ಸಾವಿನ ಪ್ರಕರಣ ಐದು ವರ್ಷಗಳ ಬಳಿಕ ಮರಳಿ ಮುನ್ನೆಲೆಗೆ ಬಂದಿರುವಾಗಲೇ ಇನ್ನೊಂದೆಡೆ ಈ ಕೇಸಿನ ಜೊತೆಗೆ ತಳುಕು ಹಾಕಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ನಟನ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌ ನೀಡಿದೆ.2020 ಜೂನ್‌ 14ರಂದು ಸುಶಾಂತ್‌ ಸಿಂಗ್‌ ರಜಪೂತ್‌ ಸಿಂಗ್‌ ತನ್ನ ಫ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದರು.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ : ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌ Read More »

error: Content is protected !!
Scroll to Top