ಬೆಕ್ಕುಗಳಿಗೆ ಹರಡುತ್ತಿದೆ ಮರಣಾಂತಿಕ ವೈರಸ್‌ ಸೋಂಕು : ಮುನ್ನೆಚ್ಚರಿಕೆ ವಹಿಸಲು ಸೂಚನೆ

ಕೆಲವೇ ಸೆಕೆಂಡುಗಳಲ್ಲಿ ಹರಡಿ ಬೆಕ್ಕುಗಳನ್ನು ಸಾಯಿಸುವ ವೈರಾಣು ಬೆಂಗಳೂರು: ಹಕ್ಕಿಜ್ವರದ ಹಾವಳಿಯ ಬೆನ್ನಿಗೆ ಈಗ ರಾಜ್ಯದ ಕೆಲವೆಡೆಗಳಲ್ಲಿ ಬೆಕ್ಕುಗಳಿಗೆ ವೈರಸ್‌ ಸೋಂಕು ತಗಲಿದ್ದು, ಬೆಕ್ಕುಗಳು ಹಠಾತ್‌ ಸಾವಿಗೀಡಾಗುತ್ತಿವೆ. ಬೆಕ್ಕುಗಳಿಗೆ ಬಂದಿರುವ ಮರಣಾಂತಿಕ ರೋಗಕ್ಕೆ ಎಫ್​ಪಿವಿ ವೈರಸ್ ಕಾರಣ ಎಂದು ಗುರುತಿಸಲಾಗಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಅಲ್ಲದೆ ರಾಜ್ಯದ ವಿವಿಧೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ […]

ಬೆಕ್ಕುಗಳಿಗೆ ಹರಡುತ್ತಿದೆ ಮರಣಾಂತಿಕ ವೈರಸ್‌ ಸೋಂಕು : ಮುನ್ನೆಚ್ಚರಿಕೆ ವಹಿಸಲು ಸೂಚನೆ Read More »

ಏಪ್ರಿಲ್ 11 ರಿಂದ 15 : ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ಒಕ್ಕಲಿಗ ಸೌಧ ಸಭಾಭವನದಲ್ಲಿ ‘ಪ್ರೇರಣಾ ಸಮ್ಮರ್ ಕ್ಯಾಂಪ್’

ಪುತ್ತೂರು: ಕೆನರಾ ಬ್ಯಾಂಕ್ ಬಳಿ ಮುಖ್ಯರಸ್ತೆಯಲ್ಲಿರುವ ಪ್ರಭು ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ‘ಪ್ರೇರಣಾ ಸಮ್ಮರ್ ಕ್ಯಾಂಪ್’ ಏಪ್ರಿಲ್ 11 ರಿಂದ 15 ರ ತನಕ ಪುತ್ತೂರು ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಒಕ್ಕಲಿಗ ಸೌಧ ಸಭಾಭವನದಲ್ಲಿ ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ‘ಪ್ರೇರಣಾ ಸಮ್ಮರ್ ಕ್ಯಾಂಪ್’ ನಲ್ಲಿ ವಿವಿಧ ಚಟುವಟಿಕೆಗಳಾದ ಒರಿಗಾಮಿ, ಸ್ಪೀಚ್ & ಆ್ಯಂಕರಿಂಗ್, ಆರ್ಟಿಸ್ಟಿಕ್ ಆರ್ಟ್, ಕಾಸ್ಟ್ ಆರ್ಟ್, ಫಿಂಗರ್ ಪಪ್ಪೆಟ್, ಫೇಸ್ ಮಾಸ್ಕ್, ಮಾರ್ಬಲ್ ಆರ್ಟ್

ಏಪ್ರಿಲ್ 11 ರಿಂದ 15 : ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ಒಕ್ಕಲಿಗ ಸೌಧ ಸಭಾಭವನದಲ್ಲಿ ‘ಪ್ರೇರಣಾ ಸಮ್ಮರ್ ಕ್ಯಾಂಪ್’ Read More »

ಶ್ರೀಶೈಲಂ ಸುರಂಗ ಕುಸಿತ : ಒಂದು ತಿಂಗಳಾದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ

ಇನ್ನೊಂದು ಶವಪತ್ತೆ; ಮೃತರ ಸಂಖ್ಯೆ 2ಕ್ಕೇರಿಕೆ, ಒಳಗೆ ಸಿಲುಕಿದ್ದಾರೆ ಇನ್ನೂ ಆರು ಕಾರ್ಮಿಕರು ಹೈದರಾಬಾದ್‌ : ತೆಲಂಗಾಣದ ನಾಗಕರ್ನೂಲ್‌ ಜಿಲ್ಲೆಯಲ್ಲಿ ಸಂಭವಿಸಿದ ಸುರಂಗ ಕುಸಿತದ ರಕ್ಷಣಾ ಕಾರ್ಯಾಚರಣೆ ಒಂದು ತಿಂಗಳಾದರೂ ಮುಗಿದಿಲ್ಲ. ನಿನ್ನೆ ಸುರಂಗದೊಳಗೆ ಇನ್ನೋರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ ಎರಡಕ್ಕೇರಿದೆ. ಇನ್ನೂ ಆರು ಮಂದಿ ಸುರಂಗದೊಳಗಿದ್ದು, ಅವರ ಸ್ಥಿತಿ ಏನಾಗಿದೆ ಎಂದು ಗೊತ್ತಾಗಿಲ್ಲ. ಮಾ.9ರಂದು ಗುರುಪ್ರೀತ್‌ ಸಿಂಗ್‌ ಎಂಬ ಕಾರ್ಮಿಕನ ಶವ ಪತ್ತೆಯಾಗಿತ್ತು. ನಿನ್ನೆ ಪತ್ತೆಯಾದ ಶವದ

ಶ್ರೀಶೈಲಂ ಸುರಂಗ ಕುಸಿತ : ಒಂದು ತಿಂಗಳಾದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ Read More »

ಐದನೇ ವಾರಕ್ಕೆ ಪಾದರ್ಪಣೆ ಮಾಡಿದ “ಭಾವ ತೀರ ಯಾನ’ ಸಿನಿಮಾ | ಇಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 5 ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇಂದು ಮಾ.25 ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಐದನೇ ವಾರಕ್ಕೆ ಪಾದರ್ಪಣೆ ಮಾಡಿದ “ಭಾವ ತೀರ ಯಾನ’ ಸಿನಿಮಾ | ಇಂದು ಬೆಳಿಗ್ಗೆ 10.30ಕ್ಕೆ ಹಾಗೂ ಸಂಜೆ 7.30 ಕ್ಕೆ ಚಿತ್ರ ಪ್ರದರ್ಶನ Read More »

ಡಿಕೆಶಿಗೀಗ ಸಂವಿಧಾನ ಹೇಳಿಕೆ ಕಂಟಕ : ಬೆನ್ನುಬೆನ್ನಿಗೆ ವಿವಾದಗಳು

ಹಾಗೇ ಹೇಳಿಯೇ ಇಲ್ಲ ಎಂದು ಪಾರಾಗಲು ಯತ್ನ ಬೆಂಗಳೂರು: ಹನಿಟ್ರ್ಯಾಪ್‌ ಪ್ರಕರಣದಲ್ಲಿ ಅನುಮಾನದ ನೋಟಗಳಿಗೆ ಗುರಿಯಾಗಿ ಮುಜುಗರ ಅನುಭವಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದರ ಬೆನ್ನಿಗೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿರುವ ಡಿ.ಕೆ.ಶಿವಕುಮಾರ್‌ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿ ಪಾರಾಗಲು ಯತ್ನಿಸಿದ್ದಾರೆ. ಸಂದರ್ಶನದಲ್ಲಿ ಶಿವಕುಮಾರ್‌ ನೀಡಿದ ಹೇಳಿಕೆ ಕಳೆದ ಲೋಕಸಭೆ ಚುನಾವಣೆಯಿಂದೀಚೆಗೆ ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌ಗೆ

ಡಿಕೆಶಿಗೀಗ ಸಂವಿಧಾನ ಹೇಳಿಕೆ ಕಂಟಕ : ಬೆನ್ನುಬೆನ್ನಿಗೆ ವಿವಾದಗಳು Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಇಂದು ತನಿಖಾ ವರದಿ ಸರಕಾರಕ್ಕೆ ಸಲ್ಲಿಕೆ

ಪ್ರೋಟೊಕಾಲ್‌ ದುರ್ಬಳಕೆ ಮಾಡಿ ಚಿನ್ನ ಕಳ್ಳ ಸಾಗಾಟ ಮಾಡಿದ ಕುರಿತು ತನಿಖೆ ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ಚಿನ್ನದೊಂದಿಗೆ ಡಿಆರ್​ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ಗೆ ನೀಡಿದ ಪ್ರೋಟೊಕಾಲ್‌ ಕುರಿತಾದ ತನಿಖಾ ವರದಿ ಇಂದು ಸರಕಾರದ ಕೈಸೇರಲಿದೆ. ಸರಕಾರ ಈ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರಿಗೆ ಆದೇಶಿಸಿತ್ತು. ಈಗ ವರದಿ ಸಿದ್ದವಾಗಿದ್ದು ಇಂದು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಇಂದು ತನಿಖಾ ವರದಿ ಸರಕಾರಕ್ಕೆ ಸಲ್ಲಿಕೆ Read More »

ಹೃದಯಾಘಾತದಿಂದ ಯುವಕ ಮೃತ್ಯು

ಪುತ್ತೂರು: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪೆರ್ನೆಯಲ್ಲಿ ಇಂದು ಸಂಜೆ ನಡೆದಿದೆ. ಪೆರ್ನೆ ನಿವಾಸಿ ವೃತ್ತಿಯಲ್ಲಿ ವೆಲ್ಡಿಂಗ್‍ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ (27) ಮೃತ ಯುವಕ. ಅವರು ಉತ್ತಮ ಕಬಡ್ಡಿ ಆಟಗಾರರೂ ಆಗಿದ್ದರು. ಮೃತರು ತಾಯಿ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಯುವಕ ಮೃತ್ಯು Read More »

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್‍ ಎಸ್‍.ಡಿ. ಆತ್ಮಹತ್ಯೆ

ಪುತ್ತೂರು: ತಾಲೂಕಿನ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ, ಸರ್ವೆ ಷಣ್ಮುಖ ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಜೇಶ್ ಎಸ್. .ಡಿ (45) ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ರಾಜೇಶ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್‍ ಎಸ್‍.ಡಿ. ಆತ್ಮಹತ್ಯೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಡ್ರೀಮ್ಸ್ 25” ಸಾಂಸ್ಕೃತಿಕ ಸ್ಪರ್ಧೆ | ಸಂಪ್ಯ ಅಕ್ಷಯ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಪುತ್ತೂರು: ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಮಾನವಿಕ ಸಂಘ ಆಯೋಜಿಸಿದ “ಡ್ರೀಮ್ಸ್ 25” ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂಪ್ಯ ಅಕ್ಷಯ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಫ್ಯಾಶನ್ ಶೋದಲ್ಲಿ ಪ್ರಥಮ, ಗಾಯನದಲ್ಲಿ ಪ್ರಥಮ, ಸಮೂಹ ನೃತ್ಯದಲ್ಲಿ ದ್ವಿತೀಯ, ಫೇಸ್ ಪೇಂಟಿಂಗ್ ನಲ್ಲಿ ದ್ವಿತೀಯ, ಮತ್ತು ಮೋಕ್ ಪ್ರೆಸ್ ನಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ಕಾಲೇಜಿನ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಡ್ರೀಮ್ಸ್ 25” ಸಾಂಸ್ಕೃತಿಕ ಸ್ಪರ್ಧೆ | ಸಂಪ್ಯ ಅಕ್ಷಯ ಕಾಲೇಜಿಗೆ ಸಮಗ್ರ ಪ್ರಶಸ್ತಿ Read More »

ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆ

ಕಡಬ: ಸಾರಣೆ ಕೆಲಸಕ್ಕೆಂದು ಹೋದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಕಡಬದಲ್ಲಿ ನಡೆದಿದೆ. ಈ ಕುರಿತಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಬಳ್ಳ ಗ್ರಾಮದ ಜೋಗಿ ಮನೆ ಚೆನ್ನಕೇಶವ ಜೋಗಿ (61) ಎಂದು ಪತ್ತೆಹಚ್ಚಲಾಗಿದೆ. ಮಾ.11 ರಂದು ತನ್ನ ಮನೆಯಿಂದ ಕೋಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋದವರು ತಿರುಗಿ ಬರಲಿಲ್ಲ. ಇವರ ಬಳಿ ಇದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರ ಹೋಗುವ ವೇಳೆ ಉದ್ದ ತೋಳಿನ ಹಸಿರು

ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆ Read More »

error: Content is protected !!
Scroll to Top