ಸರಕಾರಿ ನೌಕರರಿಗೆ ಇನ್ನು ಸೆಲ್ಫಿ ಕ್ಲಿಕ್‌ ಹಾಜರಾತಿ ವ್ಯವಸ್ಥೆ

ಎಐ ಆಧಾರಿತ ಹೊಸ ತಂತ್ರಜ್ಞಾನ ಅಳವಡಿಸಲು ಸಿದ್ಧತೆ ಬೆಂಗಳೂರು: ಸರಕಾರಿ ನೌಕರರು ತಮ್ಮ ಕಚೇರಿ ಆವರಣದಲ್ಲಿ ಮೊಬೈಲ್ ಫೋನ್‌ನಿಂದ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ತಮ್ಮ ಹಾಜರಾತಿಯನ್ನು ಖಚಿತಪಡಿಸುವ ಈ ಎಐ ಚಾಲಿತ ಹಾಜರಾತಿ ವ್ಯವಸ್ಥೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಸರ್ಕಾರಿ ಕಚೇರಿಯಲ್ಲಿ ಪರಿಚಯಿಸುವ ಸಿದ್ಧತೆ ನಡೆಯುತ್ತಿದೆ. ಸೆಲ್ಫಿ ತೆಗೆಯುವ ವೇಳೆ ಹಾಜರಾತಿಯನ್ನು ನೈಜ ಸಮಯದಲ್ಲಿ ಸೆರೆಹಿಡಿಯಲಾಗುತ್ತದೆ. ಈಗ ಇರುವ ಲೆಡ್ಜರ್‌ನಲ್ಲಿ ಸಹಿ ಮಾಡುವ ಅಥವಾ ಬಯೋಮೆಟ್ರಿಕ್ ಉಪಕರಣದ ಮೇಲೆ ಬೆರಳು ಇಡುವ ಮೂಲಕ […]

ಸರಕಾರಿ ನೌಕರರಿಗೆ ಇನ್ನು ಸೆಲ್ಫಿ ಕ್ಲಿಕ್‌ ಹಾಜರಾತಿ ವ್ಯವಸ್ಥೆ Read More »

ಯುವಕನ ಶವ ಕೆರೆಯಲ್ಲಿ ಪತ್ತೆ

ಪುತ್ತೂರು: ಯುವಕನೋರ್ವನ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಪುತ್ತೂರಿನ ರಾಗಿದಕುಮೇರು ಸಮೀಪದ ಅಂದ್ರಟ್ಟದ ಮರಕ್ಕೂರು ಎಂಬಲ್ಲಿ ನಡೆದಿದೆ. ಮರಕ್ಕೂರ್ ನಿವಾಸಿ ಕಿರಣ್‍ ನಾಯ್ಕ್ (29) ಎಂಬವರ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ,ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಯುವಕನ ಶವ ಕೆರೆಯಲ್ಲಿ ಪತ್ತೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಡ್ರೋನ್ ಹಾರಾಟಕ್ಕೆ ಅವಕಾಶವಿಲ್ಲ | ವರ್ಷಾವಧಿ ಜಾತ್ರೆಯ ಅಂಗವಾಗಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಯಾವುದೇ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಸುರಕ್ಷತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸ್ಟಾಲ್ ನವರಿಗೆ ಯಾವುದೇ ಕಾರಣ ವಿದ್ಯುತ್ ಸಂಪರ್ಕವಿಲ್ಲ. ದೇವಸ್ಥಾನದ ಆಸುಪಾಸಿನಲ್ಲಿ ಯಾವುದೇ ವಾಹನ ನಿಲುಗಡೆಗೂ ಅವಕಾಶ ಕೊಡುವಂತಿಲ್ಲ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ೧೦ ರಿಂದ ೨೦ ರ ತನಕ ನಡೆಯುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ದೇವಸ್ಥಾನದ ವಠಾರದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನ ಸಂದಣಿತ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಡ್ರೋನ್ ಹಾರಾಟಕ್ಕೆ ಅವಕಾಶವಿಲ್ಲ | ವರ್ಷಾವಧಿ ಜಾತ್ರೆಯ ಅಂಗವಾಗಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ Read More »

ಏಪ್ರಿಲ್‌ನಿಂದ ಟೋಲ್‌ ಸುಂಕ ಹೆಚ್ಚಳ

ಶೇ.5ರಷ್ಟು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಬೆಂಗಳೂರು : ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ವಾಹನ ಮಾಲೀಕರಿಗೆ ಈಗ ಟೋಲ್‌ ಸುಂಕ ಏರಿಕೆ ಬಿಸಿ ತಟ್ಟಲಿದೆ. ಏಪ್ರಿಲ್ 1ರಿಂದ ಕರ್ನಾಟಕಾದ್ಯಂತ ಟೋಲ್ ಸುಂಕ ಶೇ.3ರಿಂದ 5ರಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ

ಏಪ್ರಿಲ್‌ನಿಂದ ಟೋಲ್‌ ಸುಂಕ ಹೆಚ್ಚಳ Read More »

ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಕೋರ್ಟ್‌ ತಡೆ

ಸೋಷಿಯಲ್‌ ಮೀಡಿಯಾಗಳಲ್ಲಿರುವ ವೀಡಿಯೊಗಳನ್ನು ಡಿಲೀಟ್‌ ಮಾಡಲು ಆದೇಶ ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರ ವಿರುದ್ಧ ನಡೆಯುತ್ತಿರುವ ಅವಹೇಳನ ಮತ್ತು ಅಪಪ್ರಚಾರಕ್ಕೆ ನ್ಯಾಯಾಲಯ ತಡೆ ನೀಡಿದೆ. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಈ ಕುರಿತು ಜಾನ್ ಡೋ (ಅಶೋಕ ಕುಮಾರ್) ಆದೇಶ ನೀಡಿದೆ. ಜತೆಗೆ ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೊಗಳನ್ನು ಡಿಲೀಟ್‌ ಮಾಡುವಂತೆ ಸೂಚನೆ ನೀಡಿದೆ. ಇತ್ತೀಚೆಗೆ ಸೌಜನ್ಯ ಪ್ರಕರಣದ ವಿಚಾರವಾಗಿ ಧರ್ಮಸ್ಥಳ

ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಕೋರ್ಟ್‌ ತಡೆ Read More »

ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು 7 ಅಡಿ ಗುಂಡಿಯಲ್ಲಿ ಜೀವಂತ ಹೂತು ಹಾಕಿದ ಗಂಡ

ಮೂರು ತಿಂಗಳ ಬಳಿಕ ಬೆಳಕಿಗೆ ಬಂದ ಆಘಾತಕಾರಿ ಕೊಲೆ ಪ್ರಕರಣ ಚಂಡೀಗಢ : ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯೋಗ ಶಿಕ್ಷಕನನ್ನು ವ್ಯಕ್ತಿಯೊಬ್ಬ 7 ಅಡಿ ಗುಂಡಿ ಅಗೆದು ಜೀವಂತ ಹೂತು ಹಾಕಿದ ಘಟನೆಯೊಂದು ಹರ್ಯಾಣದ ಚರ್ಖಿ ದಾದ್ರಿ ಎಂಬಲ್ಲಿ ಮೂರು ತಿಂಗಳ ಬೆಳಕಿಗೆ ಬಂದಿದೆ. ರೋಹ್ಟಕ್‌ನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಯೋಗ ಉಪನ್ಯಾಸಕನಾಗಿದ್ದ ಜಗದೀಪ್‌ ಕೊಲೆಯಾದ ವ್ಯಕ್ತಿ. ಮಾ.24ರಂದು ಪೊಲೀಸರು ಅವನ ಶವವನ್ನು ಮೇಲೆತ್ತಿ ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.ಕಳೆದ ಡಿ.24ರಂದು ಜಗದೀಪ್‌ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ

ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯೋಗ ಶಿಕ್ಷಕನನ್ನು 7 ಅಡಿ ಗುಂಡಿಯಲ್ಲಿ ಜೀವಂತ ಹೂತು ಹಾಕಿದ ಗಂಡ Read More »

ಎರಡೂವರೆ ವರ್ಷದ ಮಗು ಮಲಗಿದಲ್ಲೇ ಮೃತ್ಯು

ಕಡಬ: ಮಲಗಿದ್ದ ಎರಡೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಪುತ್ರ ಎರಡೂವರೆ ವರ್ಷದ ರುದ್ರ ಪ್ರತಾಪ್ ಸಿಂಗ್ ಮೃತಪಟ್ಟ ಮಗು. ಈ ದಂಪತಿ ಕೊಣಾಜೆ ಮಾಲ ನಿವಾಸಿ ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಮಗುವನ್ನು ಎಬ್ಬಿಸಲೆಂದು ನೋಡುವಾಗ ಏಳದೇ ಇದ್ದುದರಿಂದ ತಕ್ಷಣವೇ ಕಡಬದ ಖಾಸಗಿ

ಎರಡೂವರೆ ವರ್ಷದ ಮಗು ಮಲಗಿದಲ್ಲೇ ಮೃತ್ಯು Read More »

ನರಿಮೊಗರಿನ ಹಿಂದುಳಿದ ವಿದ್ಯಾರ್ಥಿನಿ ನಿಲಯದಲ್ಲಿ ತಾಲೂಕು ಮಟ್ಟದ ಸಂಯುಕ್ತ ವಾರ್ಷಿಕೋತ್ಸವ

ಪುತ್ತೂರು: ತಾಲೂಕು ಮಟ್ಟದ  ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯಗಳ ಸಂಯುಕ್ತ ವಾರ್ಷಿಕೋತ್ಸವ ಹಾಸ್ಟೆಲ್ ನ ಒಳಾಂಗಣದಲ್ಲಿ ನಡೆಯಿತು. ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮಾತನಾಡಿ, ಸರ್ಕಾರ ಒದಗಿಸಿರುವ ಹಾಸ್ಟೆಲ್ ಸೌಲಭ್ಯವನ್ನು ಬಳಸಿ ಪ್ರಗತಿ ಹೊಂದಿದ ವಿದ್ಯಾರ್ಥಿನಿಯರು ಮುಂದಿನ ಪೀಳಿಗೆಯ ಮಕ್ಕಳಿಗೆ ಆಧಾರವಾಗುವ ಮೂಲಕ ಋಣ ಸಂದಾಯ ಮಾಡಬೇಕು ಎಂದು ಕರೆಯಿತ್ತರು. ಇತರ ಗಣ್ಯರೊಡಗೂಡಿ ಐದು ನಿಲಯಗಳ ಈ ಕೆಳಗಿನ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಅವರು ಸನ್ಮಾನಿಸಿದರು. ಪ್ರಥಮ ಸ್ಥಾನಿಗಳಾದ ನರಿಮೊಗರು ನಿಲಯದ

ನರಿಮೊಗರಿನ ಹಿಂದುಳಿದ ವಿದ್ಯಾರ್ಥಿನಿ ನಿಲಯದಲ್ಲಿ ತಾಲೂಕು ಮಟ್ಟದ ಸಂಯುಕ್ತ ವಾರ್ಷಿಕೋತ್ಸವ Read More »

ಬೊಲಿವಿಯಾದಲ್ಲಿ 3900 ಚದರ ಕಿಲೋ ಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ನಿತ್ಯಾನಂದ ಸ್ವಾಮಿ!

ಕರ್ನಾಟಕದಿಂದ ಓಡಿಹೋಗಿ ಕೈಲಾಸ ದೇಶ ಸ್ಥಾಪಿಸಿಕೊಂಡಿರುವ ನಿತ್ಯಾನಂದ ನವದೆಹಲಿ: ಭಾರತದಿಂದ ಓಡಿಹೋಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ಬಿಡದಿಯ ನಿತ್ಯಾನಂದ ಸ್ವಾಮಿಯ ವಿರುದ್ಧ ಸುಮಾರು 3,900 ಚದರ ಕಿಲೋಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಕೇಳಿಬಂದಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ ದೇಶದಲ್ಲಿ ನಿತ್ಯಾನಂದ ಸ್ವಾಮಿ ಮತ್ತು ಅವರ ಅನುಯಾಯಿಗಳು ಬುಡಕಟ್ಟು ಜನಾಂಗದವರ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಮಾಡಿದ್ದಾರೆ ಎನ್ನಲಾಗಿದೆ.ಬೊಲಿವಿಯಾದ ಅಮೆಜಾನ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಅಸ್ತಿತ್ವದಲ್ಲಿಲ್ಲದ ಕೈಲಾಸ ದೇಶ ವಂಚನೆ ಮಾಡಿರುವುದು

ಬೊಲಿವಿಯಾದಲ್ಲಿ 3900 ಚದರ ಕಿಲೋ ಮೀಟರ್‌ ಭೂಮಿ ಒತ್ತುವರಿ ಮಾಡಿಕೊಂಡ ನಿತ್ಯಾನಂದ ಸ್ವಾಮಿ! Read More »

ಅಲ್ಪಸಂಖ್ಯಾತರ ಓಲೈಕೆ ಮೂಲಕ ಓಟ್‍ ಬ್ಯಾಂಕ್‍ ಗಾಗಿ ಕಾಂಗ್ರೆಸ್‍ ನಿಂದ ಸಂವಿಧಾನ ಬದಲಾವಣೆಯ ನೀಚ ರಾಜಕಾರಣ : ಕಿಶೋರ್ ಕುಮಾರ್ ಪುತ್ತೂರು | ಡಿ.ಕೆ.ಶಿವಕುಮಾರ್ ವಿರುದ್ಧ ಬೃಹತ್‍ ಪ್ರತಿಭಟನೆ

ಪುತ್ತೂರು: ಕಾಂಗ್ರೆಸ್‍ ಆಡಳಿತಕ್ಕೆ ಬಂದ ಬಳಿಕ ಜನಸಾಮಾನ್ಯರು ಕ್ಲಿಷ್ಟಕರ ಜೀವನ ನಡೆಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಜನರ ಹಾದಿ ತಪ್ಪಿಸುತ್ತಿದ್ದಾರೆ. ಇದೀಗ ಬಾಬಾಸಾಹೇಬ್‍ ಅಂಬೇಡ್ಕರ್ ಬರೆದ ಸಂವಿಧಾನವನ್ನು ಮುಸಲ್ಮಾನರ ಓಲೈಕೆಗಾಗಿ ಬದಲಾವಣೆ ಮಾಡಲು ಹೊರಟು ಸಂವಿಧಾನಕ್ಕೆ ಅವಮಾನ ಮಾಡುವ ನೀಚ ರಾಜಕೀಯಕ್ಕಿಳಿದಿದ್ದಾರೆ ಡಿ.ಕೆ.ಶಿವಕುಮಾರ್ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದರು. ಅವರು ಮಂಗಳವಾರ ಸಂಜೆ ದರ್ಬೆ ವೃತ್ತದ ಬಳಿಕ ಪುತ್ತೂರು ಬಿಜೆಪಿ ವತಿಯಿಂದ ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸಲು ಹೊರಟ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನಡೆದ

ಅಲ್ಪಸಂಖ್ಯಾತರ ಓಲೈಕೆ ಮೂಲಕ ಓಟ್‍ ಬ್ಯಾಂಕ್‍ ಗಾಗಿ ಕಾಂಗ್ರೆಸ್‍ ನಿಂದ ಸಂವಿಧಾನ ಬದಲಾವಣೆಯ ನೀಚ ರಾಜಕಾರಣ : ಕಿಶೋರ್ ಕುಮಾರ್ ಪುತ್ತೂರು | ಡಿ.ಕೆ.ಶಿವಕುಮಾರ್ ವಿರುದ್ಧ ಬೃಹತ್‍ ಪ್ರತಿಭಟನೆ Read More »

error: Content is protected !!
Scroll to Top