ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ: ಇರಾನ್ ಸಂಚಿದೆಯೇ ‌ಎಂಬ ನೆಲೆಯಲ್ಲಿ ತನಿಖೆ

ಟೆಕ್ಸಾಸ್: ಕಳೆದ ಭಾನುವಾರ ಆಸ್ಟಿನ್‌ನಲ್ಲಿ ‌ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ‌ಸಹ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಟೆಕ್ಸಾಸ್ ವಿವಿಯ ವಿದ್ಯಾರ್ಥಿನಿ ‌ಸವಿತಾ ಷಣ್ಮುಗ ಸುಂದರಂ ಮೃತ ವಿದ್ಯಾರ್ಥಿನಿ.‌ ದಾಳಿ ಮಾಡಿದ ಬಂದೂಕುದಾರಿಯನ್ನು ಹತ್ಯೆ ಮಾಡಲಾಗಿದ್ದು, ಈ ದಾಳಿ ಸಂಭಾವ್ಯ ಭಯೋತ್ಪಾದಕ ದಾಳಿ ಎಂಬ ನೆಲೆಯಲ್ಲಿ ಎಫ್‌ಬಿಐ ತನಿಖೆ ಮಾಡುತ್ತಿದೆ. ಇರಾನ್ ಸಂಘರ್ಷ ಮತ್ತು ಈ ದಾಳಿಗೆ ಏನಾದರೂ ಸಂಪರ್ಕ ಇದೆಯೇ? ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಮೇ […]

ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ: ಇರಾನ್ ಸಂಚಿದೆಯೇ ‌ಎಂಬ ನೆಲೆಯಲ್ಲಿ ತನಿಖೆ Read More »

ಉದ್ಯೋಗ ನಿಮಿತ್ತ ಇರಾನಿಗೆ ತೆರಳಿದ್ದ ಯುವಕನ ಸುಳಿವಿಲ್ಲದೆ ಕಂಗಾಲಾದ ಕುಟುಂಬ

ಚಿಕ್ಕಮಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಉದ್ಯೋಗ ನಿಮಿತ್ತ ಇರಾನ್‌ಗೆ ತೆರಳಿದ್ದ ಮರ್ಚಂಟ್ ನೇವಿ ಉದ್ಯೋಗಿ ಕೊಪ್ಪ ತಾಲೂಕಿನ ನಿಶ್ಚಿತ್ ಕುಟುಂಬಸ್ಥರ ‌ಸಂಪರ್ಕಕ್ಕೆ ಸಿಗದೇ ಇದ್ದು, ಪೋಷಕರು ಕಂಗಾಲಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ನಿಶ್ಚಿತ್ ಇರಾನಿಗೆ ತೆರಳಿದ್ದರು. ಇದೀಗ ಅಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು, ನಿಶ್ಚಿತ್‌ನ ಸುರಕ್ಷತೆಯ ಬಗ್ಗೆ ಕುಟುಂಬ ವರ್ಗ ಆತಂಕ ವ್ಯಕ್ತಪಡಿಸಿರುವುದಾಗಿದೆ. ಕಳೆದ ಕೆಲ ದಿನಗಳಿಂದ ನಿಶ್ಚಿತ್ ಅವರ ಫೋನ್ ಸ್ವಿಚ್‌ಆಫ್ ಆಗಿದೆ. ಅವರ ಸ್ಥಿತಿಗತಿಗಳ ಬಗ್ಗೆ ಯಾವುದೇ ಮಾಹಿತಿ

ಉದ್ಯೋಗ ನಿಮಿತ್ತ ಇರಾನಿಗೆ ತೆರಳಿದ್ದ ಯುವಕನ ಸುಳಿವಿಲ್ಲದೆ ಕಂಗಾಲಾದ ಕುಟುಂಬ Read More »

ಪುತ್ತೂರು: ಪಿಸ್ತೂಲು ತೋರಿಸಿ ಬೆದರಿಸಿದ ಅಪರಿಚಿತ ವ್ಯಕ್ತಿ

ಪುತ್ತೂರು: ಬೈಕ್‌ನಲ್ಲಿ ಬಂದ ವ್ಯಕ್ತಿ ದರ್ಬೆ ಸಮೀಪ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ದೂರು ನೀಡಿದವರು. ಅವರು ದರ್ಬೆಯಲ್ಲಿ ಕಾರು ನಿಲ್ಲಿಸಿ ರಿಕ್ಷಾ ಚಾಲಕರ ಮಧ್ಯೆ ನಡೆದ ಮಾತಿನ ಚಕಮಕಿಯನ್ನು ಸಮಾಧಾನಿಸಿ ಹಿಂದಿರುಗಿ ಹೊರಡುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ವ್ಯಕ್ತಿ ಪಿಸ್ತೂಲ್ ತೋರಿಸಿ ಬೆದರಿಸಿದಾಗ ಹಕೀಂ ಮತ್ತು ಇತರರು ಸೇರಿ ಆತನನ್ನು ಹಿಡಿಯಲು ಹೋದಾಗ ವ್ಯಕ್ತಿ ಬೈಕ್‌

ಪುತ್ತೂರು: ಪಿಸ್ತೂಲು ತೋರಿಸಿ ಬೆದರಿಸಿದ ಅಪರಿಚಿತ ವ್ಯಕ್ತಿ Read More »

ಭೀಕರ ಅಪಘಾತ : ಐವರು ಸ್ಥಳದಲ್ಲೇ ಸಾವು

ಬೆಂಗಳೂರು: ಕಂಟೇನರ್‌ಗೆ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಬೆಂಗಳೂರಿನ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪ ಗಂಗಾವರಂ ಎಂಬಲ್ಲಿ ನಡೆದಿದೆ. ಕಾರು ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿತ್ತು. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಮೂವರು ಮಹಿಳೆಯರು ಎಂದು ತಿಳಿದುಬಂದಿದೆ. ಕಾರು ಅತಿಯಾದ ವೇಗದಲ್ಲಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಎಲ್ಲ ಐದು ಮಂದಿ ಸ್ಥಳದಲ್ಲೇ

ಭೀಕರ ಅಪಘಾತ : ಐವರು ಸ್ಥಳದಲ್ಲೇ ಸಾವು Read More »

18 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಪ್ರೇಮಿಗಳ ಬಂಧನ

ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಕೇರಳದ ಲಿವ್‌ ಇನ್‌ ರಿಲೇಷನ್‌ ಪ್ರೇಮಿಗಳು ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಲಿವ್-ಇನ್ ರಿಲೇಶನ್‌ನಲ್ಲಿದ್ದ ಕೇರಳ ಮೂಲದ ಅಶ್ವಿನ್ ಹಾಗೂ ಮುಬೀನಾ ಬಂಧಿತ ಆರೋಪಿಗಳು. ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೇ ನಂಟು ಡ್ರಗ್ಸ್‌ ಮಾರಾಟ ಜಾಲಕ್ಕೂ ಕರೆತಂದಿತ್ತು. ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ಸಹಜೀವನ ನಡೆಸುತ್ತಿದ್ದ ಅಶ್ವಿನ್‌ ಮತ್ತು ಮುಬೀನಾ ಸುಲಭವಾಗಿ

18 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಪ್ರೇಮಿಗಳ ಬಂಧನ Read More »

ಇನ್‌ಸ್ಟಾಗ್ರಾಂನಲ್ಲಿ ಖಮೇನಿ ಹತ್ಯೆ ಕುರಿತು ಪೋಸ್ಟ್‌ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ

ಅಂಗಡಿಗೆ ನುಗ್ಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ತಂಡ ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್​ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ಕಾರಣಕ್ಕೆ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ಚಂದ್ರಶೇಖರ ಎಂಬವರ ಮೇಲೆ ಐದಾರು ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ. ಚಂದ್ರಶೇಖರ ಖರ್ಜೂರ ವ್ಯಾಪಾರಿಯಾಗಿದ್ದು, ವ್ಯಾಪಾರ ಮಾಡುತ್ತಿದ್ದ ವೇಳೆ ಏಕಾಏಕಿ‌ ಬಂದ

ಇನ್‌ಸ್ಟಾಗ್ರಾಂನಲ್ಲಿ ಖಮೇನಿ ಹತ್ಯೆ ಕುರಿತು ಪೋಸ್ಟ್‌ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ Read More »

ಪುತ್ತೂರು : ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಯುವಕ ಸಾವು

ಪುತ್ತೂರು: ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಯುವಕ ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಸಂಭವಿಸಿದೆ. ಕುಂಬ್ರ ಶಾಲೆಯ ಬಳಿಯ ನಿವಾಸಿ ಭುವನ್‌ (33) ಮೃತಪಟ್ಟಿರುವ ಯುವಕ. ನಿಂತಿಕಲ್ಲಿನ ಬಾರ್‌ ಒಂದರಲ್ಲಿ ಉದ್ಯೋಗಿಯಾಗಿರುವ ಭುವನ್‌ ಮಂಗಳವಾರ ಕೆಲಸಕ್ಕೆ ರಜೆ ಹಾಕಿದ್ದರು. ಕೆಯ್ಯೂರು ಕಡೆಗೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದಾಗ ಅವರ ಬೈಕ್‌ ಅಪಘಾತಕ್ಕೀಡಾಗಿದೆ. ಬೈಕ್‌ ವೇಗವಾಗಿ ಬಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಭುವನ್‌ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು

ಪುತ್ತೂರು : ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಯುವಕ ಸಾವು Read More »

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಸ್ಥಳೀಯ ಮೀನುಗಾರರ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಉಡುಪಿ ಸಮೀಪ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ. ಮಲ್ಪೆಯ ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರು ಮೀನುಗಾರ ಮುಖಂಡನಿಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಇರಿದ ಆರೋಪಿಗಳನ್ನು

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ Read More »

ತೈಲ ಸಾಗಿಸುವ 700ಕ್ಕೂ ಅಧಿಕ ಹಡಗುಗಳು ಹೊರ್ಮುಜ್‌ ಜಲಸಂಧಿಯಲ್ಲಿ ಬಾಕಿ

ಪೂರೈಕೆ ವ್ಯತ್ಯಯ ; ಜಗತ್ತಿನಲ್ಲಿ ತೈಲಕ್ಕೆ ಹಾಹಾಕಾರ ಸಾಧ್ಯತೆ ಟೆಹ್ರಾನ್‌: ಯುದ್ಧ ತೀವ್ರಗೊಂಡಿರುವಂತೆಯೇ ಜಗತ್ತಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ತೈಲ ಪೂರೈಕೆಯಾಗುವ ಹೊರ್ಮುಜ್‌ ಜಲಸಂಧಿಯನ್ನು ಪ್ರತಿತಂತ್ರದ ಭಾಗವಾಗಿ ಇರಾನ್ ಮುಚ್ಚಿದೆ. ಇರಾನ್‌ನ ಈ ಕ್ರಮದಿಂದ ಭಾರತ ಸೇರಿ ಹಲವು ದೇಶಗಳಿಗೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತಯವಾಗಿದ್ದು, ಪೆಟ್ರೋಲ್, ಡೀಸೆಲ್ ಕೊರತೆ ಹಾಗೂ ಎಲ್‌ಪಿಜಿ ಗ್ಯಾಸ್‌ಗೂ ಬರಗಾಲ ಎದುರಾಗುವ ಆತಂಕ ಉಂಟಾಗಿದೆ. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯಕ್ಕಂತೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ತೈಲ ಸಾಗಿಸುವ 700ಕ್ಕೂ ಅಧಿಕ ಹಡಗುಗಳು ಹೊರ್ಮುಜ್‌ ಜಲಸಂಧಿಯಲ್ಲಿ ಬಾಕಿ Read More »

ಲಂಚ ಸ್ವೀಕಾರ : ಎಎಸ್‌ಐ, ಪಿಎಸ್‌ಐ ಲೋಕಾಯುಕ್ತ ಬಲೆಗೆ

ಬಿ ರಿಪೋರ್ಟ್‌ ಸಲ್ಲಿಸಲು 1 ಲ.ರೂ. ಕೇಳಿದ್ದ ಪೊಲೀಸರು ಬೆಂಗಳೂರು: ಪ್ರಕರಣವೊಂದರ ಬಿ ರಿಪೋರ್ಟ್ ಸಲ್ಲಿಕೆಗೆ 70 ಸಾವಿರ ಲಂಚ ಪಡೆದ ಪ್ರಕರಣದಲ್ಲಿ ಎಎಸ್‌ಐ ಮತ್ತು ಪಿಎಸ್‌ಐಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶ್ ಅವರನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ಬಂಧಸಿ ವಿಚಾರಣೆ ಮುಂದುವರಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮೋಟಲೂರು ಗ್ರಾಮದ ರಘು ಎಂಬವರ ಬಳಿ ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆಗಾಗಿ 1

ಲಂಚ ಸ್ವೀಕಾರ : ಎಎಸ್‌ಐ, ಪಿಎಸ್‌ಐ ಲೋಕಾಯುಕ್ತ ಬಲೆಗೆ Read More »

error: Content is protected !!
Scroll to Top