ನಾಳೆ ಏ.20 : ಪುತ್ತೂರು ಮುಳಿಯಕ್ಕೆ ರಮೇಶ್ ಅರವಿಂದ್

ಪುತ್ತೂರಿನ ಚಿನ್ನಾಭರಣಗಳ ಶೋರೂಮ್ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಇಂದು ಅನಾವರಣಗೊಳ್ಳಲು ಭಾರತದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಉದ್ಘಾಟನೆ ಮಾಡುವರು.  ನಾಳೆ ಬೆಳಿಗ್ಗೆ 9.30 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು, ಆನಂತರ ದೇವರ ದೀಪದೊಂದಿಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಶೋರೂಮ್ ಗೆ ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಶ್ರೀ ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ , ಕೋರ್ಟು ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ ಶೋರೂಮಿಗೆ ಕರೆತರಲಾಗುವುದು.

ನಾಳೆ ಏ.20 : ಪುತ್ತೂರು ಮುಳಿಯಕ್ಕೆ ರಮೇಶ್ ಅರವಿಂದ್ Read More »

59 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11 ಗಂಟೆಗೆ ಶೋ

ಸುಳ್ಯದ ಯುವ  ಸಂಗೀತ  ಹಾಗೂ  ಚಿತ್ರ  ನಿರ್ದೇಶಕ  ಮಯೂರ  ಅಂಬೆಕಲ್ಲು  ನಿರ್ಮಾಣದ “ಭಾವ  ತೀರ  ಯಾನ’  ಸಿನಿಮಾ  ಪ್ರೇಕ್ಷಕರ  ಮೆಚ್ಚುಗೆ  ಪಡೆದು   9ನೇ  ವಾರದಲ್ಲಿ  59  ನೇ  ದಿನಕ್ಕೆ ಯಶಸ್ವಿಯಾಗಿ  ಮುನ್ನಡೆಯುತ್ತಿದ್ದು  ಚಿತ್ರಕ್ಕೆ  ವ್ಯಾಪಕ  ಬೆಂಬಲ  ವ್ಯಕ್ತವಾಗುತ್ತಿದೆ. ನಾಳೆ  ಏ.20  ಭಾನುವಾರದಂದು  ಬೆಳಗ್ಗೆ  11:00  ಗಂಟೆಗೆ  ಚಿತ್ರ  ಪ್ರದರ್ಶನಗೊಳ್ಳಲಿದೆ.

59 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11 ಗಂಟೆಗೆ ಶೋ Read More »

ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಧ್ವಜಾವರೋಹಣದೊಂದಿಗೆ ಸಂಪನ್ನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಧ್ವಜಾವರೋಹಣದೊಂದಿಗೆ ಶನಿವಾರ ಬೆಳಿಗ್ಗೆ ಸಂಪನ್ನಗೊಂಡಿತು. ಶುಕ್ರವಾರ ಸಂಜೆ ಶ್ರೀ ದೇವರು ದೂರದ ವೀರಮಂಗಲಕ್ಕೆ ಅವಭೃತ ಸವಾರಿ ನಡೆಸಿ ಶನಿವಾರ ಮುಂಜಾನೆ ತಲುಪಿ ವೀರಮಂಗಲ ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ಮುಗಿಸಿದರು. ಬಳಿಕ ಸುಮಾರು 11 ಗಂಟೆಗೆ ಶ್ರೀ ದೇವರು ದೇವಸ್ಥಾನ ತಲುಪಿ ಬಳಿಕ ಗರ್ಭಗುಡಿ ಪ್ರವೇಶಿಸಿ ಪೂಜೆ ನಡೆದ ಬಳಿಕ ಸಹಸ್ರಾರು ಭಕ್ತಾದಿಗಳ ಜಯಘೋಷಗಳೊಂದಿಗೆ ಧ್ವಜಾವರೋಹಣ ನಡೆಯಿತು. ಇಂದು

ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಧ್ವಜಾವರೋಹಣದೊಂದಿಗೆ ಸಂಪನ್ನ Read More »

ಯಕ್ಷನಮನ  ಆಜೇರು ಪುಣಚ ಇದರ 25 ನೇ ವರ್ಷದ ಯಕ್ಷ ಸಂಭ್ರಮ

ಪುಣಚ : ಯಕ್ಷನಮನ  ಆಜೇರು ಪುಣಚ. ಇದರ 25 ನೇ ವರ್ಷದ ಯಕ್ಷ ಸಂಭ್ರಮ 25  ಕಾರ್ಯಕ್ರಮವನ್ನು ಶ್ರೀ ದುರ್ಗಾನಿಲಯದಲ್ಲಿ ನಡೆಯಿತು. ಶ್ರೀ ಈಶ್ವರ ನಾಯಕ್  ಇವರ ಮನೆಯಲ್ಲಿ  ಶ್ರೀ ಸತ್ಯ ನಾರಾಯಣ ಪೂಜೆಯ ಪ್ರಯುಕ್ತ  ಯಕ್ಷ ಸಂಭ್ರಮ 25  ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಮದ್ದಲೆ ವಾದಕರಾದ ನೇರೋಳು  ಗಣಪತಿ  ನಾಯಕ್,  ಕಾವ್ಯಶ್ರಿ ಗುರುಪ್ರಸಾದ್‍ ಆಜೇರು ಮತ್ತು  ರಾಮದಾಸ್ ಶೆಟ್ಟಿ  ದೇವಸ್ಯ ಇವರಿಗೆ ನಾಟ್ಯಚಾರ್ಯ ದಿ.ಮುದುಕುಂಜ ವಾಸುದೇವ ಪ್ರಭು ಇವರ ಸಂಸ್ಮರಣ ಅಂಗವಾಗಿ ಯಕ್ಷ ಸಂಜೀವ ಪ್ರಶಸ್ತಿಯನ್ನು

ಯಕ್ಷನಮನ  ಆಜೇರು ಪುಣಚ ಇದರ 25 ನೇ ವರ್ಷದ ಯಕ್ಷ ಸಂಭ್ರಮ Read More »

ರಿಕ್ಕಿ ರೈ ಮೇಲೆ ಫೈರಿಂಗ್‌ : ಮಲತಾಯಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ ರಿಕ್ಕಿ ರೈ ರಾಮನಗರ : ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯ ಅವರ ಮನೆ ಬಳಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಮನಗರ ತಾಲೂಕಿನ ಬಿಡದಿ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಘಟನೆ ವೇಳೆ ಚಾಲಕ ಬಸವರಾಜ್​​ ಕಾರು ಚಾಲನೆ

ರಿಕ್ಕಿ ರೈ ಮೇಲೆ ಫೈರಿಂಗ್‌ : ಮಲತಾಯಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬ ಆಚರಣೆ ಘಟಕದ ವತಿಯಿಂದ ಏ.17 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಅತಿಥಿಗಳು ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಗೈದರು.  ವಿದ್ಯಾರ್ಥಿಗಳು ಅಂಬೇಡ್ಕರ ಹಾಡುಗಳನ್ನು ಗೀತ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಅತಿಥಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ವಾತಿ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅವಭೃತ ಸ್ನಾನ ಸಂಪನ್ನ | ಶ್ರೀ ದೇವರೊಂದಿಗೆ ತೆರಳಿದ ಸಹಸ್ರಾರು ಭಕ್ತಾದಿಗಳು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ ಶನಿವಾರ ಮುಂಜಾನೆ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಕುಮಾರಧಾರ ನದಿಯಲ್ಲಿ ಶನಿವಾರ ಶುಕ್ರವಾರ ಮುಂಜಾನೆ ಅವಭೃತ ಸ್ನಾನ ಮುಗಿಸಿದರು. ಶುಕ್ರವಾರ ಸಂಜೆ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ರಕ್ತೇಶ್ವರಿ ದೈವಗಳೊಂದಿಗೆ ನುಡಿಗಟ್ಟು ನಡೆದು ಬಳಿಕ ರಥಬೀದಿಯಿಂದ ಅವಭೃತ ಸವಾರಿಗೆ ಹೊರಟರು. ಶ್ರೀ ದೇವರೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳಿದರು. ದಾರಿಯುದ್ದಕ್ಕೂ ಸುಮಾರು 54 ಕಟ್ಟೆಗಳಲ್ಲಿ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅವಭೃತ ಸ್ನಾನ ಸಂಪನ್ನ | ಶ್ರೀ ದೇವರೊಂದಿಗೆ ತೆರಳಿದ ಸಹಸ್ರಾರು ಭಕ್ತಾದಿಗಳು Read More »

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ಮುಖಂಡನ ಭೀಕರ ಹತ್ಯೆ

ಅಪಹರಿಸಿ ಮನಬಂದಂತೆ ಥಳಿಸಿ ಕೊಂದು ಹಾಕಿದ ದುಷ್ಕರ್ಮಿಗಳು ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ನಾಯಕನನ್ನು ಮತಾಂಧರು ಭೀಕರವಾಗಿ ಸಾಯಿಸಿದ್ದಾರೆ. ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್‌ನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದ ಭಾಬೇಶ್‌ ಚಂದ್ರ ಅವರನ್ನು ನಿನ್ನೆ ಭೀಕರವಾಗಿ ಕೊಲೆ ಮಾಡಲಾಗಿದೆ. ಭಾಬೇಶ್‌ ಚಂದ್ರ ಅವರನ್ನು ದಿನಾಜ್‌ಪುರದ ಬಳಿ ಅಪಹರಿಸಿ, ಮನಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಭಾಬೇಶ್‌ ಚಂದ್ರ ಅವರನ್ನು ಅಪಹರಣ ಮಾಡಿ ಬಿರಾಲ್‌ನಿಂದ ದಿನಾಜ್‌ಪುರ್‌ ಮಾರ್ಗವಾಗಿ ನರಾಬರಿ

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ಮುಖಂಡನ ಭೀಕರ ಹತ್ಯೆ Read More »

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಏ.17 ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಏ.18 ರಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು Read More »

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆಯಿತಾ ರಿಕ್ಕಿ ರೈ ಮೇಲೆ ಫೈರಿಂಗ್‌?

ಮಂಗಳೂರಿನ ವ್ಯಕ್ತಿಯೊಬ್ಬರ ಮೇಲೂ ಇದೆ ಅನುಮಾನದ ನೋಟ ರಾಮನಗರ : ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಈ ದಾಳಿಯಲ್ಲಿ ರಿಕ್ಕಿ ರೈ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಕ್ಕಿ ರೈ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬೆನ್ನಿಗೆ ರಿಕ್ಕಿ ರೈ ಮೇಲೆ ದಾಳಿಯಾಗಲು ಕಾರಣ ಏನು ಎನ್ನುವ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆಯಿತಾ ರಿಕ್ಕಿ ರೈ ಮೇಲೆ ಫೈರಿಂಗ್‌? Read More »

error: Content is protected !!
Scroll to Top