ಉದ್ಯಮಿ ಎಡಕ್ಕಾನ ರಾಜಾರಾಮ ಭಟ್‍ ದುಬೈಯಲ್ಲಿ ಹೃದಯಾಘಾತದಿಂದ ನಿಧನ

ಪುತ್ತೂರು: ಉದ್ಯಮಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್‍ ಕುಮಾರ್‍ ಪುತ್ತಿಲ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಎಡಕ್ಕಾನ ರಾಜಾರಾಮ ಭಟ್‍ ದುಬೈಯಲ್ಲಿ ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್ ರು ಎಡಕ್ಕಾನ ಟ್ರೇಡರ್ಸ್ ಎಂಬ ವ್ಯಾಪಾರ ಮಳಿಗೆಯನ್ನು ಹೊಂದಿದ್ದರಲ್ಲದೆ, ದುಬೈ ಮಸ್ಮತ್ ಗಳಲ್ಲಿ ಖರ್ಜೂರದ ವ್ಯಾಪಾರ ಕೂಡ ಹೊಂದಿದ್ದರು. ವ್ಯವಹಾರದ ನಿಮಿತ್ತ ಕೆಲದಿನಗಳ ಹಿಂದೆ ದುಬೈಗೆ ಹೋಗಿದ್ದ ಅವರು ಅಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಕಳೆದ […]

ಉದ್ಯಮಿ ಎಡಕ್ಕಾನ ರಾಜಾರಾಮ ಭಟ್‍ ದುಬೈಯಲ್ಲಿ ಹೃದಯಾಘಾತದಿಂದ ನಿಧನ Read More »

ಸುಹಾಸ್‌ ಶೆಟ್ಟಿಯಲ್ಲಿ ಹತ್ಯೆಯಲ್ಲಿ ಪೊಲೀಸರು ಭಾಗಿ : ಉಮಾನಾಥ್‌ ಕೋಟ್ಯಾನ್‌ ಗಂಭೀರ ಆರೋಪ

ಕೊಲೆಗಡುಕರಿಗೆ ಪೊಲೀಸರ ಪೂರ್ಣ ಸಹಕಾರ ಇತ್ತು ಎಂದ ಶಾಸಕ ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ. ಹೀಗಾಗಿ ಅವರು ನಡೆಸುವ ತನಿಖೆಯಲ್ಲಿ ನನಗೆ ವಿಶ್ವಾಸವಿಲ್ಲ. ಎನ್‌ಐಎ ತನಿಖೆಯಾದರೆ ಮಾತ್ರ ಪೂರ್ಣ ಸತ್ಯ ಹೊರಬರಬಹುದು ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ಕೊಲೆಗೆ, ಕೊಲೆಗಡುಕರಿಗೆ ಪೊಲೀಸರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅಪಾದಿಸಿದರು. ಕೊಲೆ ವ್ಯವಸ್ಥಿತ ರೀತಿಯಲ್ಲಿ ನಡೆದಿದೆ.

ಸುಹಾಸ್‌ ಶೆಟ್ಟಿಯಲ್ಲಿ ಹತ್ಯೆಯಲ್ಲಿ ಪೊಲೀಸರು ಭಾಗಿ : ಉಮಾನಾಥ್‌ ಕೋಟ್ಯಾನ್‌ ಗಂಭೀರ ಆರೋಪ Read More »

ಪುತ್ತೂರಿನ ಧರ್ಮಶಿಕ್ಷಣ ತರಗತಿಗಳಿಗೆ ಶೃಂಗೇರಿ ಜಗದ್ಗುರುಗಳಿಂದ ಚಾಲನೆ | ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎರಡು ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಕಾರ್ಯಕರ್ತರು

ಪುತ್ತೂರು: ಇಡಿಯ ದೇಶದಲ್ಲೇ ಪ್ರಪ್ರಥಮವಾಗಿ ಪುತ್ತೂರಿನಲ್ಲಿ ಜಾರಿಗೊಳಿಸಲು ಯೋಜಿಸಿರುವ ಹಿಂದೂ ಧರ್ಮ ಶಿಕ್ಷಣ ತರಗತಿಗಳಿಗೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಧಾರ್ಮಿಕ ಶಿಕ್ಷಣದ ಮಾರ್ಗದರ್ಶಕರೂ, ಪ್ರೇರಕರೂ ಆದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಧರ್ಮ ಶಿಕ್ಷಣ ತರಗತಿ – ಧರ್ಮಾಭ್ಯುದಯವನ್ನು  ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಸ್ವಾಮೀಜಿಗಳು, ಹಿಂದೂ ಧರ್ಮವೆಂಬುದು ಅನಾದಿ ಕಾಲದಿಂದಲೂ ಬಂದ ಸನಾತನ ಧರ್ಮ. ಎಷ್ಟೇ ಜನ ಈ ಧರ್ಮವನ್ನು ನಾಶಗೊಳಿಸುತ್ತೇವೆಂದು ಅಂದುಕೊಂಡರೂ ಅದು

ಪುತ್ತೂರಿನ ಧರ್ಮಶಿಕ್ಷಣ ತರಗತಿಗಳಿಗೆ ಶೃಂಗೇರಿ ಜಗದ್ಗುರುಗಳಿಂದ ಚಾಲನೆ | ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎರಡು ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಕಾರ್ಯಕರ್ತರು Read More »

ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬಂಟ್ವಾಳ : ಪಾಣೆಮಂಗಳೂರು ರೈಲ್ವೆ ಮೇಲ್ಸೇತುವೆಯ ಅಡಿಭಾಗದಲ್ಲಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ಸುಮಾರು 40-45 ವರ್ಷ ವಯಸ್ಸಿನ ಗಂಡಸಿನ ಮೃತದೇಹ ಗಂಡಸಿನ ಮೃತದೇಹ ಇದಾಗಿದೆ. ಈ ಬಗ್ಗೆ ತಲಪಾಡಿ ಪೊನ್ನೋಡಿ ನಿವಾಸಿ ಪ್ರಥಮ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳೂರಿನಲ್ಲಿ ಏರ್ ಕಂಡೀಷನ್ ಟೆಕ್ನಿಶಿಯನ್ ಆಗಿರುವ ಇವರು ಬುಧವಾರ ಕೆಲಸಕ್ಕೆ ರಜೆ ಇದ್ದುದರಿಂದ ಮಂಗಳವಾರ ಸಂಜೆ ವೇಳೆ ಬಿ ಮೂಡ ಗ್ರಾಮದ ಕೈಕುಂಜೆ ರೈಲ್ವೆ ಹಳಿಯ ಬ್ರಿಡ್ಜ್ ಮೇಲೆ ನಂದಾವರಕ್ಕೆ ನಡೆದುಕೊಂಡು

ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಬುಧವಾರ ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಯುದ್ಧ ಸಂಭವಿಸಿದರೆ ನಾಗರಿಕರನ್ನು ರಕ್ಷಿಸಲು ಸಿದ್ಧತೆ ಹೊಸದಿಲ್ಲಿ: ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯಗಳು ಬುಧವಾರ ಅಣಕು ರಕ್ಷಣಾ ಕವಾಯತುಗಳನ್ನು ನಡೆಸಲಿವೆ. ಯುದ್ಧ ಸಂಭವಿಸಿದರೆ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ರಕ್ಷಣಾ ಕವಾಯತು ನಡೆಸಲಾಗುತ್ತಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಪಾಕಿಸ್ಥಾನದ ಉಗ್ರರು ಗುಂಡಿಕ್ಕಿ ಸಾಯಿಸಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ ಕೇಂದ್ರದಿಂದ ರಕ್ಷಣಾ ಕವಾಯತು ನಡೆಸಲು ಸೂಚನೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ಮೇ 7ರಂದು ಅಣಕು ರಕ್ಷಣಾ ಕವಾಯತುಗಳನ್ನು

ಬುಧವಾರ ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಕೇಂದ್ರ ಸೂಚನೆ Read More »

ಪ್ರಚೋದನಕಾರಿ ಪೋಸ್ಟ್‌ : ಪುತ್ತೂರಿನ ಯುವಕನ ವಿರುದ್ಧ ಕೇಸ್‌

ಸುಹಾಸ್‌ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ವಾಟ್ಸಾಪ್‌ ಗ್ರೂಪ್‌ನಲ್ಲಿ ಪೋಸ್ಟ್‌ ಮಂಗಳೂರು: ಬಜ್ಪೆ ಸಮೀಪ ಕಿನ್ನಿಪದವು ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್‌ನಲ್ಲಿ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಪೋಸ್ಟ್ ಮಾಡಿದ ಪುತ್ತೂರಿನ ಯುವಕನ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತೂರಿನ ಮನೀಷ್ ಎಂಬಾತ ವಾಟ್ಸಾಪ್ ಗ್ರೂಪ್‌ನಲ್ಲಿ ಮಹೇಶ್ ಎಸ್. ಎಂಬ ಹೆಸರಿನಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ. ಆತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ. ಮನೀಷ್

ಪ್ರಚೋದನಕಾರಿ ಪೋಸ್ಟ್‌ : ಪುತ್ತೂರಿನ ಯುವಕನ ವಿರುದ್ಧ ಕೇಸ್‌ Read More »

ಮದ್ಯಪ್ರಿಯರಿಗೆ ಕಹಿ ಸುದ್ದಿ: ಮತ್ತೆ ಏರಿಕೆಯಾಗಲಿದೆ ಬೆಲೆ

ಎಲ್ಲ ರೀತಿಯ ಮದ್ಯದ ಬೆಲೆ ಹೆಚ್ಚಿಸಲು ಅಬಕಾರಿ ಇಲಾಖೆ ತೀರ್ಮಾನ ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಆಗಲಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ದರ ಹೆಚ್ಚಳ ಮಾಡಿದೆ. ಇದೀಗ ಮತ್ತೆ ಮೂರನೇ ಬಾರಿ ಮದ್ಯ ದರ ಹೆಚ್ಚಳವಾಗಲಿದ್ದು, ಈ ವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. 2024-25ನೇ ಸಾಲಿನಲ್ಲಿ ಸರ್ಕಾರ ಅಬಕಾರಿ ಇಲಾಖೆಗೆ 38,600 ಕೋಟಿ ರೂ. ಕಂದಾಯ ಸಂಗ್ರಹಿಸುವ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ

ಮದ್ಯಪ್ರಿಯರಿಗೆ ಕಹಿ ಸುದ್ದಿ: ಮತ್ತೆ ಏರಿಕೆಯಾಗಲಿದೆ ಬೆಲೆ Read More »

ದ.ಕ.ಜಿಲ್ಲೆಯಲ್ಲಿ ನೀರ ಸೆಲೆಗಳ ರಕ್ಷಣೆಗಾಗಿ ಪರಿಸರ ಪ್ರೇಮಿಗಳಿಂದ ಮಾಹಿತಿ, ಜಾಗೃತಿ, ಅನುಷ್ಠಾನದ ಯೋಜನೆಗೆ ಚಾಲನೆ

ಪುತ್ತೂರು: ನಮ್ಮ ನೀರ ಸೆಲೆ ರಕ್ಷಿಸೋಣ ಮತ್ತು ಮಣ್ಣು ನಮ್ಮ ಆತ್ಮ ಎಂಬ ಪರಿಕಲ್ಪನೆಯಲ್ಲಿ ಪುತ್ತೂರಿನ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಪರಿಸರ ಪ್ರೇಮಿಗಳಿಂದ ಮಾಹಿತಿ, ಜಾಗೃತಿ ಅನುಷ್ಠಾನದ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಯೋಜನೆಯ ರೂವಾರಿ ಮತ್ತು ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ ಮತ್ತುಯೋಜನೆಯ ಸಲಹೆಗಾರ ನಿವೃತ್ತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನೀರ ಸೆಲೆಗಳ ಅಧ್ಯಯ, ತ್ಯಾಜ್ಯ ವಿಲೇವಾರಿ ಜಾಗೃತಿ,

ದ.ಕ.ಜಿಲ್ಲೆಯಲ್ಲಿ ನೀರ ಸೆಲೆಗಳ ರಕ್ಷಣೆಗಾಗಿ ಪರಿಸರ ಪ್ರೇಮಿಗಳಿಂದ ಮಾಹಿತಿ, ಜಾಗೃತಿ, ಅನುಷ್ಠಾನದ ಯೋಜನೆಗೆ ಚಾಲನೆ Read More »

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ವ್ಯತ್ಯಯ | ಆಸ್ಪತ್ರೆಗೆ ದಾಖಲು

ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ತಕ್ಷಣ ಉಪ್ಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಓವರ್ ಅಸಿಡಿಟಿಯಿಂದ ಬಳಲುತ್ತಿದ್ದ ಅವರನ್ನು ಹತ್ತಿರದ ಸ್ಪರ್ಶ್ ಆಸ್ಪತ್ರೆಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೇರಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಯುಐ ಸಿನಿಮಾ ಶೂಟಿಂಗ್‍  ವೇಳೆ ಇದೇ ರೀತಿ ಆಗಿತ್ತು. ಸದ್ಯ ಉಪ್ಪಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಅಭಿಮಾನಿಗಳು ಗಾಬರಿಪಡುವ ಅವಶ್ಯಕತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ವ್ಯತ್ಯಯ | ಆಸ್ಪತ್ರೆಗೆ ದಾಖಲು Read More »

ಐಪಿಎಲ್‌ನಲ್ಲಿ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ | ವೈಭವ್ ಆಟದ ಬಗ್ಗೆ ಮೋದಿ ಏನಂದ್ರು?

ಬೆಂಗಳೂರು : ಸಾಧಿಸುವ ಛಲವಿದ್ದಲ್ಲಿ ಎಂತಹ ಸಂಧಿಗ್ಧ ಸ್ಥಿತಿ ಎದುರಾದರು ಸಾಧಿಸಿಯೇ ಸಾಧಿಸುತ್ತಾರೆ. ಅಂತದ್ದೇ ಒಂದುಸಾಧನೆಯನ್ನು 14ವರ್ಷದ ಯುವಕ ಮಾಡಿದ್ದಾನೆ.  ಐಪಿಎಲ್‌ನಲ್ಲಿ ಅತಿ ವೇಗ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಇವತ್ತು ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವರ ಆಕ್ರಮಣಾಕಾರಿ ಬ್ಯಾಟಿಂಗ್, ಬೌಂಡರಿ, ಸಿಕ್ಸರ್‌ ಶೈಲಿಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಆಟಗಾರ ವೈಭವ್ ಸೂರ್ಯವಂಶಿ ಶತಕ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಯನ್ನು ಗುರುತಿಸಿದ

ಐಪಿಎಲ್‌ನಲ್ಲಿ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ | ವೈಭವ್ ಆಟದ ಬಗ್ಗೆ ಮೋದಿ ಏನಂದ್ರು? Read More »

error: Content is protected !!
Scroll to Top