ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ )  ವಿಟ್ಲ ತಾಲೂಕಿನ  ಅಳಿಕೆ ವಲಯದಿಂದ   ಮಕ್ಕಳಿಗೆ ಉಚಿತ ಪುಸ್ತಕ  ವಿತರಣೆ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ )  ವಿಟ್ಲ ತಾಲೂಕಿನ  ಅಳಿಕೆ ವಲಯದ   ಅಳಿಕೆ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯಲ್ಲಿ  ಗ್ರಾಮದ ಮಕ್ಕಳಿಗೆ ಉಚಿತ ಪುಸ್ತಕ  ವಿತರಣೆ ಕಾರ್ಯಕ್ರಮ ನಡೆಯಿತು. ಒಕ್ಕೂಟದ  ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿಯವರ ನೇತೃತ್ವದಲ್ಲಿ ಉಚಿತ ಪುಸ್ತಕವನ್ನು ಮಕ್ಕಳಿಗೆ   ವಿತರಿಸಲಾಯಿತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಒಕ್ಕೂಟದ  ಅಧ್ಯಕ್ಷರಾದ  ರವೀಶ್ ರವರು ವಹಿಸಿದರು. ಕಾರ್ಯಕ್ರಮದಲ್ಲಿ  ಅಳಿಕೆ ಪಂಚಾಯತ್ ಅಧ್ಯಕ್ಷರಾದ  ಪದ್ಮನಾಭ ಪೂಜಾರಿ ಹಾಗೂ ಶಾಲಾ ಮುಖೋಪಾಧ್ಯಾಯ  ಈಶ್ವರ್ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್  (ರಿ )  ವಿಟ್ಲ ತಾಲೂಕಿನ  ಅಳಿಕೆ ವಲಯದಿಂದ   ಮಕ್ಕಳಿಗೆ ಉಚಿತ ಪುಸ್ತಕ  ವಿತರಣೆ Read More »

ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ  ಟೈಟಲ್ ಪೋಸ್ಟರ್  ಬಿಡುಗಡೆ

ಬೆಳ್ತಂಗಡಿ : ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ  ಟೈಟಲ್ ಪೋಸ್ಟರ್  ಮೇ. 25 ಭಾನುವಾರ ಬಿಡುಗಡೆಯಾಗಿದೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಕೆ ವಿಟ್ಲ ಇವರು  ಮೋಕೆದ ತಿರ್ಲ್ ಕಿರು ಸಸ್ಪೆನ್ಸ್ ಲವ್ ಸ್ಟೋರಿಯ ಟೈಟಲ್ ಬಿಡುಗಡೆ ಮಾಡಿದ್ದಾರೆ.  ಹಾಗೆಯೆ ಮೋಕೆದ ತಿರ್ಲ್ [True love (Fake love) =? ಎಂಬ ಕುತೂಹಲಕಾರಿಯಾದ ಸಿನಿಮಾ ಇದಾಗಿದೆ. ಈ ಸಸ್ಪೆನ್ಸ್ ತುಳು ಲವ್ ಸ್ಟೋರಿಯ ಟ್ರೈಲರ್ ಅತಿ ಶೀಘ್ರದಲ್ಲಿ

ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ  ಟೈಟಲ್ ಪೋಸ್ಟರ್  ಬಿಡುಗಡೆ Read More »

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ | ಹಲವರಿಗೆ ಗಾಯ

ಪುತ್ತೂರು : ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾದ ಘಟನೆ ಮಾಣಿ ಕಲ್ಲಡ್ಕ ರಸ್ತೆಯ ಸಮುದ್ರ ಹೋಟೆಲ್ ಬಳಿ ನಡೆದಿದೆ. ಬಸ್‌ ಪಲ್ಟಿಯಾದ ಪರಿಣಾಮ ಹಲವರಿಗೆ ಗಾಯಗಳಾಗಿವೆ. ಈ ಬಸ್ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿತ್ತು ಎನ್ನಲಾಗಿದೆ. ಬೆಳಗಿನಿಂದಲೇ ಬಾರಿ ಮಳೆ ಸುರಿಯುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದೆ. ಇದರಿಂದ ಬಸ್ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ | ಹಲವರಿಗೆ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸತ್ತಿಕಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಘಟನೆ ಪರಿಣಾಮ ಕಾರಿಗೆ ಹಾನಿಯಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ | ಚಾಲಕ ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ : ನಿಡಿಗಲ್ ಸೇತುವೆಯ ಸಮೀಪದಲ್ಲಿರುವ ದಯಲ್ ಬಾಗ್ ಕ್ರಾಸ್ ಬಳಿ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಇಂದು (ಮೇ. 26) ಮುಂಜಾನೆ ನಡೆದಿದೆ. ಚಾಲಕ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಚಾಲಕನಿಗೆ  ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ | ಚಾಲಕ ಪ್ರಾಣಾಪಾಯದಿಂದ ಪಾರು Read More »

ಹೆದ್ದಾರಿಯಲ್ಲಿ ಅಸಭ್ಯವಾಗಿ ವರ್ತಿಸಿದವ ಸೆರೆ

ನಡುರಸ್ತೆಯಲ್ಲೇ ಮಾಡಬಾರದ್ದನ್ನೆಲ್ಲ ಮಾಡಿದ್ದ ಲಜ್ಜೆಗೇಡಿ ಭೋಪಾಲ: ಹೆದ್ದಾರಿ ಮಧ್ಯೆಯೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಧ್ಯಪ್ರದೇಶದ ಮಂಡಸೌರ್‌ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಬಂದು ಮಹಿಳೆ ಜೊತೆ ರಾಸಲೀಲೆ ನಡೆಸುತ್ತಿರುವ ಧಕಡ್‌ನ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದರು. ಧಕಡ್‌ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಯ ಎಂಟನೇ ಲೇನ್‌ನಲ್ಲಿ ಕಾರು ನಿಲ್ಲಿಸಿ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದು ಸಾಲದು ಎಂಬಂತೆ ಬಳಿಕ ಕಾರಿನಿಂದ

ಹೆದ್ದಾರಿಯಲ್ಲಿ ಅಸಭ್ಯವಾಗಿ ವರ್ತಿಸಿದವ ಸೆರೆ Read More »

ಘಾಟಿ ರಸ್ತೆಯಲ್ಲಿ ಭೂ ಕುಸಿತ ಆತಂಕ : ವಾಹನ ಸವಾರರಿಗೆ ಎಚ್ಚರಿಕೆಯಿಂದಿರಲು ಸೂಚನೆ

ಚಾರ್ಮಾಡಿ, ಶಿರಾಡಿ ಘಾಟಿಗಳಲ್ಲಿ ಅಲ್ಲಲ್ಲಿ ಗುಡ್ಡೆ ಕುಸಿದು ಸಂಚಾರಕ್ಕೆ ಅಡಚಣೆ ಮಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದ್ದು, ಮಂಗಳೂರನ್ನು ಬೆಂಗಳೂರಿಗೆ ಸಂಪರ್ಕಿಸುವ ಚಾರ್ಮಾಡಿ ಮತ್ತು ಶಿರಾಡಿ ಘಾಟಡಿಯಲ್ಲಿ ಈ ವರ್ಷವೂ ಭೂಕುಸಿತದ ಭೀತಿ ಎದುರಾಗಿದೆ. ಈ ವರ್ಷ ಮುಂಗಾರಿನ ಮೊದಲ ಮಳೆಗೆ ಹತ್ತಾರು ಕಡೆ ಭೂಕುಸಿತಗಳು ಸಂಭವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಸೋಮವಾರ ಚಾರ್ಮಾಡಿ ಘಾಟಿಯ ಬಿದಿರುತಳ ಮತ್ತು ಅಲೆಕಾನ್‌ ಮಧ್ಯೆ ಭೂಕುಸಿತವಾಗಿ ಹಲವು ತಾಸು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಈ ಭಾಗದಲ್ಲಿ

ಘಾಟಿ ರಸ್ತೆಯಲ್ಲಿ ಭೂ ಕುಸಿತ ಆತಂಕ : ವಾಹನ ಸವಾರರಿಗೆ ಎಚ್ಚರಿಕೆಯಿಂದಿರಲು ಸೂಚನೆ Read More »

ಪುತ್ತೂರಿನಲ್ಲಿ ವಿಜೃಂಭಿಸಿದ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ಆಶ್ರಯದಲ್ಲಿ, ಪುತ್ತೂರು ಘಟಕದ ಆತಿಥ್ಯದಲ್ಲಿ ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಹಕಾರದೊಂದಿಗೆ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ ಸುದಾನ ವಸತಿಯುತ ಶಾಲಾ ಆವರಣದಲ್ಲಿ ಭಾನುವಾರ ನಡೆಯಿತು. ಬೆಳಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್‍ ಬಿತ್ತಿಲ್‍ನ ಯಜಮಾನ ಶ್ರೀಧರ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಡೋಲು ಬಾರಿಸುವ ಮೂಲಕ ಡೆನ್ನಾನ ಡೆನ್ನನ ಸ್ಪರ್ಧಾ ಕಾರ್ಯಕ್ರಮವನ್ನು ಸಂಜೀವ ಪೂಜಾರಿ ಉದ್ಘಾಟಿಸಿದರು.

ಪುತ್ತೂರಿನಲ್ಲಿ ವಿಜೃಂಭಿಸಿದ ಯುವ ಪ್ರತಿಭಾನ್ವೇಷಣಾ ಸ್ಪರ್ಧಾ ಕಾರ್ಯಕ್ರಮ ‘ಡೆನ್ನಾನ ಡೆನ್ನನ’ Read More »

ಜೂ.1ರಿಂದ ವಿಧಾನಸೌಧಕ್ಕೆ ಗೈಡೆಡ್‌ ಟೂರ್‌ ಸೌಲಭ್ಯ

ಸಾರ್ವಜನಿಕರಿಗೆ ವಿಧಾನಸೌಧದ ಒಳಗಿನ ಸೊಬಗು ವೀಕ್ಷಿಸಲು ಅವಕಾಶ ನೀಡುವ ಪ್ರವಾಸ ಬೆಂಗಳೂರು: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾನಸೌಧದ ಸಭಾಂಗಣದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಜೂ.1ರಿಂದ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ ನೀಡಲಿದೆ. ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಏರ್ಪಡಿಸಲಾಗುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಇದಕ್ಕೆ ಸಮಯ ಹಾಗೂ ಶುಲ್ಕ ನಿಗದಿ ಮಾಡಲಾಗಿದೆ. ಈ ನಿಮಿತ್ತ

ಜೂ.1ರಿಂದ ವಿಧಾನಸೌಧಕ್ಕೆ ಗೈಡೆಡ್‌ ಟೂರ್‌ ಸೌಲಭ್ಯ Read More »

ಭಾರೀ ಮಳೆ ಹಿನ್ನಲೆಯಲ್ಲಿ ಇಂದು ಅಂಗನವಾಡಿಗಳಿಗೆ ರಜೆ ಘೋಷಣೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಇಂದು( ಮೇ 26) ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂಗಾರು ಆರಂಭದಲ್ಲೇ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ ಹಾನಿಯುಂಟು ಮಾಡಿದೆ. ಈ ಹಿನ್ನಲೆಯಲ್ಲಿ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದ್ದು, ದ.ಕ.ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನಲೆಯಲ್ಲಿ ಇಂದು ಅಂಗನವಾಡಿಗಳಿಗೆ ರಜೆ ಘೋಷಣೆ Read More »

error: Content is protected !!
Scroll to Top