ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ

ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಭಾರತದ ಜೊತೆ ಆಡದಿರಲು ನಿರ್ಧಾರ ಇಸ್ಲಾಮಾಬಾದ್‌ : ಮುಂಬರುವ ಶನಿವಾರದಿಂದ ಪ್ರಾರಂಭವಾಗಲಿರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15ರಂದು ಭಾರತ–ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ. ಪಾಕಿಸ್ತಾನದ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು […]

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ Read More »

ಸುಮಂತ್‌ ನಿಗೂಢ ಸಾವಿನ ಪ್ರಕರಣ : ವದಂತಿ ಹರಡಿದರೆ ಕಠಿಣ ಕ್ರಮ

ಆರೋಪಿಗಳ ಕುರಿತು ಊಹಾಪೋಹ ಹರಡದಂತೆ ಎಚ್ಚರಿಕೆ ನೀಡಿದ ಎಸ್‌ಪಿ ಬೆಳ್ತಂಗಡಿ: ಇಲ್ಲಿನ ಕಳಿಯದಲ್ಲಿ ನಡೆದ ಶಾಲಾ ಬಾಲಕ ಸುಮಂತ್ ಕೊಲೆ ಪ್ರಕರಣದ ಬಗ್ಗೆ ನಡೆದ ತನಿಖೆಯಲ್ಲಿ ಈವರೆಗೆ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿ ಬಂದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕೆಲವರು ಆರೋಪಿಗಳ ಬಗ್ಗೆ ಊಹಾಪೋಹಗಳನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜ.14ರಂದು ಬೆಳ್ತಂಗಡಿ ಪೊಲೀಸ್

ಸುಮಂತ್‌ ನಿಗೂಢ ಸಾವಿನ ಪ್ರಕರಣ : ವದಂತಿ ಹರಡಿದರೆ ಕಠಿಣ ಕ್ರಮ Read More »

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 8 ವರ್ಷ ಜೈಲು

ಕಳೆದ ವರ್ಷ ಬೆಳ್ತಂಗಡಿಯಲ್ಲಿ ಸಂಭವಿಸಿದ ಪ್ರಕರಣ ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬೆಳ್ತಂಗಡಿಯ ಶಂಕರ ಗೌಡ (60) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೊ ನ್ಯಾಯಾಲಯ 8 ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಶಂಕರ ಗೌಡ ತನಗೆ ಪರಿಚಯವಿದ್ದ ಬಾಲಕಿಯ ಮನೆಗೆ ತೆರಳಿ ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 8 ವರ್ಷ ಜೈಲು Read More »

ಸ್ಕೂಟಿಗೆ ಬಸ್‌ ಡಿಕ್ಕಿ : ಸಹಸವಾರೆ ಸ್ಥಳದಲ್ಲೇ ಸಾವು

ಯುವತಿಯ ಮೇಲೆ ಹರಿದು ಹೋದ ಬಸ್ಸಿನ ಚಕ್ರ ಮಂಗಳೂರು : ನಗರದ ನಂತೂರಿನಲ್ಲಿಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸಹಸವಾರೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಲ್ಲಾಳ್‌ಬಾಗ್ ನಿವಾಸಿ ದೀಪ್ತಿ (26) ಮೃತ ದುರ್ದೈವಿ. ದ್ವಿಚಕ್ರ ವಾಹನ ಸವಾರ ಕಿಶೋರ್ (32) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟಿ ಬಲ್ಲಾಳ್‌ಬಾಗ್ ಕಡೆಯಿಂದ ವಾಮಂಜೂರು ಕಡೆಗೆ ತೆರಳುತ್ತಿದ್ದ ವೇಳೆ ನಂತೂರು ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸಹಸವಾರೆ ದೀಪ್ತಿ

ಸ್ಕೂಟಿಗೆ ಬಸ್‌ ಡಿಕ್ಕಿ : ಸಹಸವಾರೆ ಸ್ಥಳದಲ್ಲೇ ಸಾವು Read More »

ಸರ್ವಿಸ್‌ ಸೆಂಟರ್‌ನಲ್ಲಿ ಭೀಕರ ಅಗ್ನಿ ಅವಘಡ : 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು

ವಿಜಯಪುರ: ನಗರದ ಹೊರವಲಯದಲ್ಲಿರುವ ಸರ್ವಿಸ್‌ ಸೆಂಟರ್‌ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. ವಿಜಯಪುರ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಹಣಮಂತ ಕನಮಡಿ ಎಂಬವರಿಗೆ ಸೇರಿದ ಎಚ್‌ಎಂಕೆ ಕಾರ್ ಸರ್ವಿಸ್‌ ಸೆಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಿಪೇರಿ ಹಾಗೂ ಸರ್ವಿಸ್‌ಗಾಗಿ ಬಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ

ಸರ್ವಿಸ್‌ ಸೆಂಟರ್‌ನಲ್ಲಿ ಭೀಕರ ಅಗ್ನಿ ಅವಘಡ : 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು Read More »

ಉಡುಪಿ ಮೂಲದ ಯುವಕನಿಗೆ ಒಲಿದ 45 ಕೋ. ರೂ. ಲಾಟರಿ

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಯುವಕ ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್ ಬಹುಮಾನವನ್ನು ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಅನಿವಾಸಿ ಭಾರತೀಯ ಶಂತನು ಶೆಟ್ಟಿಗಾರ್ ಈ ಲಾಟರಿ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಇವರು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ‘ಸರಣಿ 283’ರ ಈ ಬೃಹತ್ ಮೊತ್ತ ಒಲಿದಿದೆ. ಇದು

ಉಡುಪಿ ಮೂಲದ ಯುವಕನಿಗೆ ಒಲಿದ 45 ಕೋ. ರೂ. ಲಾಟರಿ Read More »

ಗ್ರಾಹಕನ ಸೋಗಿನಲ್ಲಿ ಚಿನ್ನ ಕದ್ದವ ಸೆರೆ

ಬಂಟ್ವಾಳ : ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಚಿನ್ನದ ಅಂಗಡಿಯೊಂದರಿಂದ ಒಂದು ವಾರದ ಹಿಂದೆ ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದ ಸರ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಟ್ವಾಳ ತಾಲೂಕಿನ ಬಡಗ ಕಜೆಕಾರು ಗ್ರಾಮದ ನಿವಾಸಿ ರಮೇಶ್ (42) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 1.25 ಲಕ್ಷ ರೂಪಾಯಿ ಮೌಲ್ಯದ 9 ಗ್ರಾಂ ತೂಕದ ಚಿನ್ನದ ಸರ ಮತ್ತು 33,000 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗ್ರಾಹಕನ ಸೋಗಿನಲ್ಲಿ ಚಿನ್ನ ಕದ್ದವ ಸೆರೆ Read More »

ಕೇಸರಿ ಧ್ವಜ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಕ್ಕೆ ತಾಯಿ-ಮಗನ ಮೇಲೆ ಹಲ್ಲೆ

ಮನೆಗೆ ನುಗ್ಗಿ ತಾಯಿ-ಮಗನನ್ನು ಯದ್ವಾತದ್ವಾ ಥಳಿಸಿದ ಯುವಕರ ಗುಂಪು ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಧ್ವಜದ ಬಗ್ಗೆ ಪೋಟೋ ಹಾಕಿದ ತಾಯಿ, ಮಗನನ್ನು ಮನೆಗೆ ನುಗ್ಗಿ ಥಳಿಸಿದ ಘಟನೆ ಥಳಿಸಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪುಟಪಾಕ್ ಎಂಬ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯದಿಂದಾಗಿ ಅಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದೆ. ಗ್ರಾಮದಲ್ಲಿ ಶಿವ ಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ಈ ಕೇಸರಿ ಧ್ವಜಗಳ ಫೋಟೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌

ಕೇಸರಿ ಧ್ವಜ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಕ್ಕೆ ತಾಯಿ-ಮಗನ ಮೇಲೆ ಹಲ್ಲೆ Read More »

ಒಂಬತ್ತನೇ ಮಹಡಿಯಿಂದ ಜಿಗಿದು ಮೂವರು ಹದಿಹರೆಯದ ಸಹೋದರಿಯರು ಆತ್ಮಹತ್ಯೆ

ಗೇಮಿಂಗ್‌ app ವ್ಯಸನದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಲಖನೌ : ಮೂವರು ಹದಿಹರೆಯದ ಸಹೋದರಿಯರು ವಸತಿ ಸಂಕೀರ್ಣದ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ನಗರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಈ ಬಾಲಕಿಯರು ಕೊರಿಯಾ ಮೂಲದ ಗೇಮ್‌ appನ ವ್ಯಸನಿಗಳಾಗಿದ್ದರು. ಅವರ ಆತ್ಮಹತ್ಯೆಗೆ ಇದೇ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಮ್ಮಿ, ಪಾಪಾ ಸಾರಿ ಎಂದು ಡೆತ್‌ನೋಟ್‌ ಬರೆದಿಟ್ಟು ಮೂವರು ಸಹೋದರಿಯರು ಏಕಕಾಲದಲ್ಲಿ ತಮ್ಮ ಮನೆಯಿದ್ದ ವಸತಿ ಸಂಕೀರ್ಣದ

ಒಂಬತ್ತನೇ ಮಹಡಿಯಿಂದ ಜಿಗಿದು ಮೂವರು ಹದಿಹರೆಯದ ಸಹೋದರಿಯರು ಆತ್ಮಹತ್ಯೆ Read More »

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ರಸ್ತೆ ಮಧ್ಯೆ ಪಾನಮತ್ತ ವಿದ್ಯಾರ್ಥಿಗಳ ಡಾನ್ಸ್‌

ಪಟಾಕಿ ಸಿಡಿಸಿ ಹುಚ್ಚಾಟ ನಡೆಸಿದ ಕೇರಳದ ವಿದ್ಯಾರ್ಥಿಗಳು ಮಂಗಳೂರು: ಕೇರಳದಿಂದ ಉಡುಪಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಗುಂಪೊಂದು ಹೆಜಮಾಡಿ ಟೋಲ್ ಬಳಿ ಪುಂಡಾಟ ನಡೆಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಎರಡು ಬಸ್ಸುಗಳಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಟೋಲ್‌ಗೇಟ್ ಬಳಿ ಬಸ್ ನಿಲ್ಲಿಸಿ ಮದ್ಯ ಸೇವಿಸಿ, ರಸ್ತೆಯ ಮಧ್ಯದಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ. ಇವರ ಈ ಕಿರಿಕ್ ಮತ್ತು ಪುಂಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಪ್ರವಾಸಕ್ಕೆ ಬಂದಿದ್ದ

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ರಸ್ತೆ ಮಧ್ಯೆ ಪಾನಮತ್ತ ವಿದ್ಯಾರ್ಥಿಗಳ ಡಾನ್ಸ್‌ Read More »

error: Content is protected !!
Scroll to Top