ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ

ಶಿವಮೊಗ್ಗ: ಕಾಂತಾರ-1 ಚಿತ್ರತಂಡಕ್ಕೆ ಇನ್ನೊಂದು ಅವಘಡ ಎದುರಾದ ಕುರಿತು ವರದಿಯಾಗಿದೆ. ನಿನ್ನೆ ರಾತ್ರಿ ತೀರ್ಥಹಳ್ಳಿ ಸಮೀಪ ಶೂಟಿಂಗ್‌ ನಡೆಯುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಬೋಟ್‌ನಲ್ಲಿ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿಯವರೂ ಇದ್ದರು ಎನ್ನಲಾಗಿದೆ. ಕಾಂತಾರ-1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ […]

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ Read More »

ಮಂಗಳೂರು : ಅವಾಂತರ ಸೃಷ್ಟಿಸಿದ ಮಳೆ; ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಒಂದು ಬದಿ ಸಂಚಾರ ಸ್ಥಗಿತ ಮಂಗಳೂರು : ಕರಾವಳಿಯಾದ್ಯಾಂತ ನಿನ್ನೆ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲಿ ಕೃತಕ ನೆರೆ ನೀರು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಪಂಪ್‌ವೆಲ್‌ನಲ್ಲಿ ಆಳೆತ್ತರಕ್ಕೆ ನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಬೇಕಾಯಿತು. ಸುಮಾರು ಒಂದೂವರೆ ತಾಸು ರಿಕ್ಷಾ ಮತ್ತಿತರ ವಾಹನಗಳ ಸಂಚಾರವನ್ನು ಸ್ಥಗಿತವಾಗಿತ್ತು. ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಮಂಗಳೂರು‌ ಹೊರವಲಯದ ವಾಮಂಜೂರು ಬಳಿಯ ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ

ಮಂಗಳೂರು : ಅವಾಂತರ ಸೃಷ್ಟಿಸಿದ ಮಳೆ; ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ಕೊಡುಗೆ | ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ.ಕೆ.ವಿ ರೇಣುಕಾಪ್ರಸಾದ್ ಮತ್ತು ಕುಟುಂಬದವರು ಬೆಳ್ಳಿ ರಥವನ್ನು ಕೊಡುಗೆಯಾಗಿ ನೀಡಲಿದ್ದು, ಇದರ ಪೂರ್ವಭಾವಿಯಾಗಿ ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ ಶನಿವಾರ (ಇಂದು) ನಡೆಯಿತು. ದೇವಾಲಯದಲ್ಲಿ ಶಾಸ್ರೋಕ್ತ ವಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿದ ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಆಯ್ಯಪ್ಪ ಸುತಗುಂಡಿ ಮತ್ತಿತರರು ಅನುಮತಿ ಪತ್ರವನ್ನು ಹಸ್ತಾಂತರಿಸಿದರು. ನಂತರ ವೀಳ ನೀಡಿಕೆ ನಡೆಯಿತು. ಈ ಸಂದರ್ಭದಲ್ಲಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ಕೊಡುಗೆ | ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ Read More »

ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ತನಿಖೆ ಕೈಗೆತ್ತಿಕೊಂಡ ಎನ್‍ ಐಎ ತಂಡ ಮಂಗಳೂರಿಗೆ

ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎನ್‌ಐಎ ಅಧಿಕಾರಿಗಳ ತಂಡ ಮಂಗಳೂರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಡಿಎಸ್ಪಿ ಪವನ್ ಕುಮಾರ್ ನೇತೃತ್ವದ ಎನ್‌ಐಎ ತಂಡ ನಡೆಸುತ್ತಿದೆ. ಅದರಂತೆ ಇಂದು ಬೆಂಗಳೂರಿನಿಂದ ಆಗಮಿಸಿದ ತಂಡ ಮಂಗಳೂರು ಸಿಸಿಬಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿವೆ.

ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ತನಿಖೆ ಕೈಗೆತ್ತಿಕೊಂಡ ಎನ್‍ ಐಎ ತಂಡ ಮಂಗಳೂರಿಗೆ Read More »

ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ | ಮುಖ್ಯಮಂತ್ರಿಯಾಗಿ ಶಿವಶನ್ಮಯಿ, ಉಪ ಮುಖ್ಯಮಂತ್ರಿಯಾಗಿ ಖದೀಜತ್ ರಿಝಾ

ಪುತ್ತೂರು: ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಮಂತ್ರಿಮಂಡಲ ಮಕ್ಕಳ ಚುನಾವಣೆ ಮೂಲಕ ನಡೆದು ಮುಖ್ಯಮಂತ್ರಿಯಾಗಿ ಶಿವಶನ್ಮಯಿ ಮತ್ತು ಉಪ ಮುಖ್ಯಮಂತ್ರಿಯಾಗಿ ಖದಿಜತ್ ರಿಝಾ ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ಯಶ್ವಿತ್, ಉಪಮಂತ್ರಿಯಾಗಿ ನಿಖಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಶ್ರೀದೇವಿ, ಉಪಮಂತ್ರಿಯಾಗಿ ವರ್ಷಾ, ಸ್ವಚ್ಛತಾ ಮಂತ್ರಿಯಾಗಿ ಅಶ್ವಿನಿ, ಉಪಮಂತ್ರಿಯಾಗಿ ರುಸೈನಾ, ಆರೋಗ್ಯ ಮಂತ್ರಿಯಾಗಿ ತನುಶ್ರೀ ಉಪಮಂತ್ರಿಯಾಗಿ ಲಕ್ಷಿತಾ, ಶಿಕ್ಷಣ ಮಂತ್ರಿಯಾಗಿ ಅಬ್ಝಲ್, ಉಪಮಂತ್ರಿಯಾಗಿ ಚಿಂತನ, ನೀರಾವರಿ ಮಂತ್ರಿಯಾಗಿ ನಮೃತ್, ಉಪಮಂತ್ರಿಯಾಗಿ ನಿಖಿಲ್,ಆಹಾರ ಮಂತ್ರಿಯಾಗಿ ಶಾಶ್ವತ್, ಉಪಮಂತ್ರಿಯಾಗಿ

ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ | ಮುಖ್ಯಮಂತ್ರಿಯಾಗಿ ಶಿವಶನ್ಮಯಿ, ಉಪ ಮುಖ್ಯಮಂತ್ರಿಯಾಗಿ ಖದೀಜತ್ ರಿಝಾ Read More »

ಅಕ್ಷಯ ಕೆರಿಯರ್ ಅಕಾಡೆಮಿಯ “ಡಿಪ್ಲೊಮ ಇನ್ ಏವಿಯೇಷನ್” ​​ಶಾರ್ಟ್ ಟಾರ್ಮ್ ಕೋರ್ಸ್ ನ ಹೊಸ ಬ್ಯಾಚ್ ಪ್ರಾರಂಭ

ಪುತ್ತೂರು: ಅಕ್ಷಯ ಕೆರಿಯರ್ ಅಕಾಡೆಮಿ ಮತ್ತು  ಕೆರಿಯರ್ ಡೆಸ್ಟಿನಿ ಮಂಗಳೂರು ಸಹಯೋಗದಲ್ಲಿ ಪುತ್ತೂರಿನಲ್ಲಿ ಜೂನ್ 12 ರಂದು ದರ್ಬೆ ಆರಾದ್ಯ ಆರ್ಕೇಡ್‌ನಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್ ಏವಿಯೇಷನ್ ​​ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ನ ಮೊದಲ ಬ್ಯಾಚ್ ಪ್ರಾರಂಭವಾಯಿತು. ಹೊಸ ವಿದ್ಯಾರ್ಥಿಗಳನ್ನು ಹೂಗಳನ್ನು ನೀಡಿ ಸ್ವಾಗತಿಸಲಾಯಿತು ಅಕ್ಷಯ ಕಾಲೇಜು ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಭವಿಷ್ಯವನ್ನು ಉತ್ತಮ  ರೂಪಿಸಲು ಏವಿಯೇಷನ್ ​​ಕೋರ್ಸ್ ತುಂಬಾ ಒಳ್ಳೆಯದು ಮತ್ತು ವಾಯುಯಾನದಲ್ಲಿ ಉತ್ತಮ ವೃತ್ತಿಜೀವನವನ್ನು ನಿರ್ಮಿಸಲು ನಾವು ಉತ್ತಮ ಸೇವೆಯನ್ನು ಒದಗಿಸುತ್ತೇವೆ

ಅಕ್ಷಯ ಕೆರಿಯರ್ ಅಕಾಡೆಮಿಯ “ಡಿಪ್ಲೊಮ ಇನ್ ಏವಿಯೇಷನ್” ​​ಶಾರ್ಟ್ ಟಾರ್ಮ್ ಕೋರ್ಸ್ ನ ಹೊಸ ಬ್ಯಾಚ್ ಪ್ರಾರಂಭ Read More »

SSLC ವಿದ್ಯಾರ್ಥಿಗಳಿಗೆ ಪರೀಕ್ಷೆ – 3

ಪುತ್ತೂರು: SSLC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅವಕಾಶವನ್ನು ತಪ್ಪಿಸಿಕೊಂಡ ಆಶಾವಾದಿ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇನ್ನೊಂದು ಅವಕಾಶವನ್ನು ನೀಡಿದೆ.  ಯಾವಾಗ ಪರೀಕ್ಷೆ? ಮಂಡಳಿಯ ಅಧ್ಯಕ್ಷರ ಪ್ರಕಟನೆಯನ್ವಯ ದಿನಾಂಕ 05.07.2025ರಿಂದ 12.07.2025ರವರೆಗೆ SSLC ಪರೀಕ್ಷೆ – 3 ನಡೆಯಲಿದೆ. ವೇಳಾಪಟ್ಟಿ ಎಲ್ಲಿ ಸಿಗುತ್ತದೆ? ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ www.kseab.karnataka.gov.in ಜಾಲತಾಣದಲ್ಲಿ ಪರೀಕ್ಷಾ ವೇಳಾಪಟ್ಟಿ ಲಭ್ಯವಿದೆ. ಶುಭಾಶಯಗಳು ಪರೀಕ್ಷೆ – 3ಕ್ಕೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ

SSLC ವಿದ್ಯಾರ್ಥಿಗಳಿಗೆ ಪರೀಕ್ಷೆ – 3 Read More »

ಇಸ್ರೇಲ್‌ ಮೇಲೆ ಇರಾನ್‌ ಪ್ರತಿಕಾರದ ದಾಳಿ : ಹೆಚ್ಚಿದ ಯುದ್ಧದ ಆತಂಕ

ಇರಾನ್‌ನ ಸೇನಾಧಿಕಾರಿಗಳು, ವಿಜ್ಞಾನಿಗಳು ಸೇರಿ 76 ಮಂದಿ ಸಾವು ಜೆರುಸೆಲಂ: ಇರಾನ್‌ ಮೇಲೆ ಇಸ್ರೇಲ್ ಶುಕ್ರವಾರ ನಸುಕಿನ ಹೊತ್ತು ದಾಳಿ ಮಾಡಿದ ಬಳಿಕ ಮಧ್ಯಪೂರ್ವದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ದಾಳಿಗೆ ಪ್ರತಿಕಾರವಾಗಿ ಇಂದು ನಸುಕಿನ ಹೊತ್ತು ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿಗಳ ಮಳೆಗರೆದಿದ್ದು, ಇದರ ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇರಾನ್‌ ಪ್ರತಿಕಾರದ ಪಣತೊಟ್ಟಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ಜಗತ್ತಿನಾದ್ಯಂತ ಇರುವ ತನ್ನ ದೂತವಾಸಗಳನ್ನು ಹಾಗೂ ಇತರ ರಾಜತಾಂತ್ರಿಕ ಸಂಸ್ಥಾಪನೆಗಳನ್ನು ಮುಚ್ಚಿದೆ. ಜಗತ್ತಿನೆಲ್ಲೆಡೆ ಇರುವ ಯೆಹೂದಿಗಳಿಗೆ ಯೆಹೂದಿ ಎಂದು

ಇಸ್ರೇಲ್‌ ಮೇಲೆ ಇರಾನ್‌ ಪ್ರತಿಕಾರದ ದಾಳಿ : ಹೆಚ್ಚಿದ ಯುದ್ಧದ ಆತಂಕ Read More »

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕ ಮೃತ್ಯು

ಮಂಗಳೂರು: ನಗರದ ಯೆಯ್ಯಾಡಿಯ ಬಾ‌ರ್ ಒಂದರಲ್ಲಿ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ (32) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಜೂ,6 ರಂದು ಎರಡು ಗುಂಪುಗಳ ಮಧ್ಯೆ ಜಗಳ ಉಂಟಾಗಿ ವೇಳೆಗೆ ಚೂರಿ ಇರಿತವಾಗಿತ್ತು. ಆರೋಪಿಗಳು ಮೃತಪಟ್ಟ ಯುವಕ ಕೌಶಿಕ್ ಪರಿಚಿತರೇ ಆಗಿದ್ದರು. ಒಂದು ತಿಂಗಳ ಹಿಂದೆ ಇವರ ನಡುವೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಚಾರದಲ್ಲಿ ಜೂನ್ 6ರಂದು ಯೆಯ್ಯಾಡಿಯ ಬಾರ್‌ನಲ್ಲಿದ್ದಾಗ ಪರಸ್ಪರ ಬೈದಾಡಿಕೊಂಡಿದ್ದರು. ಇದೇ ವೇಳೆ ಬಿಜೈ ನಿವಾಸಿಗಳಾದ ಬ್ರಿಜೇಶ್ ಮತ್ತು ಗಣೇಶ್

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕ ಮೃತ್ಯು Read More »

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

ಮಧ್ಯರಾತ್ರಿ ಹಟ್ಟಿಯಲ್ಲಿದ್ದ ಹಸುವಿಗೆ ಹಿಂಸೆ ಬೆಂಗಳೂರು: ಬೆಂಗಳೂರು ಬಳಿಕ ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಕುಳಗೇರಿ ಕ್ರಾಸ್‌ ಬಳಿ ಮನೆಯ ಹಟ್ಟಿಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ದುರುಳರು ವಿಕೃತಿ ಮೆರೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬವರು ಸಾಕಿರುವ ಹಸುವಿನ ಕೆಚ್ಚಲನ್ನು ದುರುಳರು ಶುಕ್ರವಾರ ಕತ್ತರಿಸಿದ್ದಾರೆ. ಮಧ್ಯರಾತ್ರಿ ಹಸುವಿಗೆ ಮೇವು ಹಾಕಿ ಮನೆಯವರು ತೆರಳಿದ್ದಾರೆ. ಬಳಿಕ ಈ ಕೃತ್ಯ ಎಸಗಿದ್ದಾರೆ. ಹಸುವಿನ ಕೆಚ್ಚಲಿನಿಂದ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು Read More »

error: Content is protected !!
Scroll to Top